ಶಿವಮೊಗ್ಗ ಜಿಲ್ಲಾ ಜೆಡಿಎಸ್ ಪಕ್ಷ ಸಂಘಟನೆ ಉತ್ತುಂಗಕ್ಕೆ ತಲುಪಿಸಿದ ಎಂ.ಶ್ರೀಕಾಂತ್ ಗೆ ವಿದಾನ ಪರಿಷತ್ ಗೆ ನಾಮಕರಣ ಮಾಡಬೇಕೆಂಬ ಒತ್ತಾಯ ಈಡೇರಲು ವಿಳಂಬಕ್ಕೆ ಕಾರಣ ಏನು?
ನಿನ್ನೆ ಸಿಗಂದೂರು ದೇವಾಲಯಕ್ಕೆ ಹೋಗಿ ಬರುವಾಗ ಶ್ರೀಕಾಂತ್ ನನ್ನ ಕಚೇರಿಗೆ ಬಂದಿದ್ದರು.
ನಾನು ಇಷ್ಟ ಪಡುವ ರಾಜಕಾರಣಿಗಳಲ್ಲಿ ಶ್ರೀಕಾಂತ್ ಗೆ ಅಗ್ರಸ್ಥಾನ ಯಾಕೆಂದರೆ ಅವರಲ್ಲಿರುವ ತಾಳ್ಮೆ, ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಕಟ್ಟಿ ಬೆಳೆಸಿದ ಶ್ರಮ ಇವರದ್ದು ಒ0ದು ಹಂತದಲ್ಲಿ ಮೂವರು ಶಾಸಕರು, ಜಿಲ್ಲಾ ಪಂಚಾಯತ್, ನಗರಸಭೆ ವಿವಿದ ತಾಲ್ಲೂಕ್ ಪಂಚಾಯತ್ಗಳಲ್ಲಿ ಅಧಿಕಾರ ಹೊಂದಿತ್ತು.
ನಂತರ ಇವರನ್ನು ಬದಿಗೆ ಉದ್ದೇಶ ಪೂರ್ವಕವಾಗಿ ಬದಿಗೆ ಸರಿಸಿದರು ಇದಕ್ಕೂ ಇವರು ಬೇಸರಿಸದೆ ದೇವೇಗೌಡರ ಮತ್ತು ಕುಮಾರ ಸ್ವಾಮಿಗೆ ನಿಷ್ಟಾವಂತರಾಗಿ ಸುಮ್ಮನೆ ಉಳಿದರು.
ಜೆಡಿಎಸ್ ಸಕಾ೯ರ ಇದ್ದಾಗ ಇವರನ್ನ ವಿದಾನ ಪರಿಷತ್ ಗೆ ನಾಮಕರಣ ಮಾಡಿದ್ದರೆ ಇವತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ತುಂಬಾ ಸಹಾಯ ಆಗುತ್ತಿತ್ತು ಆದರೆ ಕುಮಾರಸ್ವಾಮಿಯವರು ಈ ಬಗ್ಗೆ ಯೋಚಿಸದೇ ಇದ್ದದ್ದು ವಿಷಾದನೀಯ.
2010ರಲ್ಲಿ ನಾನು ಮತ್ತು ಸಾಗರದ ಕೆ.ಎಲ್.ಮಂಜುನಾಥ್ ದೇವೇಗೌಡರು ಶಿವಮೊಗ್ಗದಲ್ಲಿ ಶ್ರೀಕಾಂತರ ಮನೇಲಿ ತಂಗಿದ್ದಾಗ ಶ್ರೀಕಾಂತರ ಸಂಘಟನಾ ಶಕ್ತಿ ಬಗ್ಗೆ ಮತ್ತು ಇವರನ್ನು ವಿದಾನ ಪರಿಷತ್ ಗೆ ನಾಮಕರಣ ಮಾಡಿದರೆ ಇನ್ನೂ ಹೆಚ್ಚಿನ ಶಕ್ತಿ ಜಿಲ್ಲೆಗೆ ಕೊಟ್ಟಂತಾಗುತ್ತದೆ ನಾವು ಮನವಿ ಮಾಡಿದ್ದೆವು ಆಗ ದೊಡ್ಡ ಗೌಡರು ಶ್ರೀಕಾಂತ್ ಗೆ ಖಂಡಿತಾ ಎಂ ಎಲ್ ಸಿ ಮಾಡುವುದಾಗಿ ಭರವಸೆ ನೀಡಿದ್ದು ಈ ವರೆಗೂ ಈಡೇರಲಿಲ್ಲ.
ಈಗ ಭದ್ರಾವತಿ ಮಾಜಿ ಶಾಸಕರಾದ ಅಪ್ಪಾಜಿ ಗೌಡರು ಇಹಲೋಕ ತ್ಯಜಿಸಿದ್ದಾರೆ, ಸೊರಬದ ಮಾಜಿ ಶಾಸಕರಾದ ಮದು ಬಂಗಾರಪ್ಪ ಜೆಡಿಎಸ್ ತ್ಯಜಿಸಿದ್ದಾರೆ ಮುಂದೆ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕ್ ಪಂಚಾಯತ್ ಚುನಾವಣೆ ಇದೆ, ಜಿಲ್ಲಾ ಅಧ್ಯಕ್ಷರು ರಾಜಿನಾಮೆ ನೀಡಿದ್ದಾರೆ.
ಈ ಸಂದಭ೯ದಲ್ಲಿ ಶ್ರೀಕಾಂತ್ ರ ನಡೆ ಏನು ಅಂತ ಕುತೂಹಲ ಇತ್ತು ಕೇಳಿದೆ ಅದಕ್ಕೆ ಅವರ ಉತ್ತರ "ಅರುಣ್ ಪ್ರಸಾದ್ ನಾನು ಜೆಡಿಎಸ್ ಬಿಟ್ಟು ಎಲ್ಲಿ ಹೋಗಲಿ" ಅಂದರು.
ಮುಂದಿನ ದಿನದಲ್ಲಿ ಸಂಘಟನಾ ಚತುರರಾದ ಶ್ರೀಕಾಂತ್ ಗೆ ಉನ್ನತ ಸ್ಥಾನಮಾನ ಯಶಸ್ಸು ಸಿಗಲಿ ಎಂದು ಹಾರೈಸಿದೆ.
Comments
Post a Comment