#ಸ್ಥೂಲಕಾಯ_ನಿವಾರಣೆಗೆ_ಈ_ತಿಂಗಳು_ಸದ್ಬಳಕೆ
#ಮಹಾರಾಷ್ಟ್ರದಲ್ಲಿ_ಇವತ್ತು_ಗಟಾರಿ_ಅಮಾವಾಸ್ಯೆ_ಸೆಲಬರೇಷನ್.
ಆಷಾಡ ಮಾಸ ಮುಗಿದ ಮೇಲೆ ಒ0ದು ತಿಂಗಳ ಶ್ರಾವಣ ಮಾಸದಲ್ಲಿ ಹೆಚ್ಚಿನ ನಮ್ಮಂತಹ ಶೂದ್ರರು ಮದ್ಯ-ಮಾಂಸ ತ್ಯಜಿಸುತ್ತಾರೆ, ಹಾಗಾಗಿಯೇ ಆಷಾಡ ಮಾಸ ಮುಗಿಯುವ ಮುನ್ನ ದಿನದ ಅಮಾವಸ್ಯೆ ಬೀಮನ ಅಮಾವಾಸ್ಯೆ ಆದರೂ ಅದಕ್ಕೆ ಮರಾಠಿಯಲ್ಲಿ ಗಟಾರಿ ಅಮಾವಸ್ಯೆ ಎಂಬ ತಮಾಷೆ ಹೆಸರು ಯಾಕೆ ಬಂದಿದೆ ಅಂದರೆ, ಮಧ್ಯ-ಮಾಂಸ ಬಳಸಲು ಕೊನೆಯ ದಿನ ಇದು.
ಶ್ರಾವಣದಿಂದ ಚೌತಿ ತನಕ, ಕೆಲವರ ಮನೆಯಲ್ಲಿ ಕಾರ್ತಿಕದ ತನಕ ಇವುಗಳ ನಿಷೇದ ಇರುವುದರಿಂದ ಕೊನೆಯ ದಿನ ಹೆಚ್ಚು ಸೆಲಬರೇಷನ್ ಮಾಡಿ ಚರಂಡಿಗೆ ಬೀಳುತ್ತಿದ್ದರಿಂದ ಈ ಹೆಸರು ಬಂದಿದೆ, ಮಹಾರಾಷ್ಟ್ರದಲ್ಲಿ ಗಟಾರಿ ಅಮಾವಾಸ್ಯೆ ಸ್ಪೆಷಲ್ ಸೆಲಬರೇಷನ್ ಅಂತಲೇ ಇವತ್ತು ಕೆಲವು ಬಾರ್ ಗಳಲ್ಲಿ ಬೋರ್ಡ್ ಹಾಕಿರುತ್ತಾರೆ.
ಧಾರ್ಮಿಕ ನಂಬಿಕೆಯ ಈ ಶ್ರಾವಣ ಮಾಸ ನಮ್ಮ ದೇಹ ನಿರ್ವಿಷ(Detox) ಮಾಡಲು, ತೂಕ ಇಳಿಸಲು ತುಂಬಾ ಅನುಕೂಲಕರವಾದ ಮಾಸ ಆಗಿದೆ.
ನನ್ನ ಅನುಭವದಲ್ಲಿ ಹೇಳುವುದಾದರೆ ನಾನು ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಕಾಫಿ ಟೀ ಕೂಡ ಕುಡಿಯುವುದಿಲ್ಲ.
ಕಳೆದ 20 ತಿಂಗಳಿಂದ ರಾತ್ರಿ ಊಟ ಸಂಪೂರ್ಣ ತ್ಯಜಿಸಿ, ನಿತ್ಯ ಮನೆ ಅಂಗಳದಲ್ಲಿ ಒಂದು ಗಂಟೆ ವಾಕಿಂಗ್, ಸಿದ್ಧ ಸಮಾದಿ ಯೋಗ ಸಂಸ್ಥೆಯಲ್ಲಿ 2008ರಲ್ಲಿ ಪಡೆದ ತರಬೇತಿಯ ಯೋಗ, ಪ್ರಾಣಯಾಮ ಮತ್ತು ದ್ಯಾನದಿಂದ 135 ಕೇಜಿ ತೂಕದಿಂದ 109 - 110 ಕೇಜಿಗೆ ಇಳಿದಿದ್ದೆ, ಈ ವರ್ಷದ ಮಾವಿನ ಹಣ್ಣಿನ ಸೀಸನ್ ನಂತರ ತಕ್ಷಣ ನಿರಂತರವಾಗಿ ಶುರುವಾದ ಮಳೆಯಿಂದ ವಾಕಿಂಗ್ ಕಡಿಮೆ ಆಗಿ ತೂಕ ನಿದಾನವಾಗಿ 113 ಕ್ಕೆ ಬಂದಿದೆ.
ಹಾಗಾಗಿ ಈ ಶ್ರಾವಣ ಮಾಸದಲ್ಲಿ ವಾಕಿಂಗ್ ಕೆಲ ಬದಲಾವಣೆ ಮಾಡಲಿದ್ದೇನೆ ಬೆಳಿಗ್ಗೆ 30 ನಿಮಿಷ ಮತ್ತು ಸಂಜೆ 30 ನಿಮಿಷ ಅಂತ ಇಬ್ಬಾಗ ಮಾಡಿದ್ದೇನೆ ಇದರಲ್ಲಿ 15 ನಿಮಿಷ ಬ್ರಿಸ್ಕ್ ವಾಕ್, ಇನ್ನು ನಿತ್ಯ ಆಹಾರದಲ್ಲಿ ಸಿದ್ದ ಸಮಾದಿ ಯೋಗದ ಹಸಿ ತರಕಾರಿ, ಮೊಳಕೆ ಕಾಳುಗಳ ಸಲಾಡ್, ತರಕಾರಿ ಸೂಪ್, ಶೇಂಗಾ ಹಾಲು ಬಳಸಲಿದ್ದೇನೆ.
ಮೌನ ವೃತವೂ ಪ್ರಾರಂಬಿಸಬೇಕೆಂದಿದ್ದೇನೆ, ಪ್ರತಿನಿತ್ಯ ಮೂಗಿಗೆ ಕ್ಷೀರಾ ಬಲದ 3 ಹನಿ ಬಿಡುವ ಚಿಕಿತ್ಸೆ ಕೂಡ ಮಾಡಲಿದ್ದೇನೆ ಇದು ಆರೋಗ್ಯ ವದ೯ನೆಗೆ ತೂಕ ಇಳಿಸಲು ಪರಿಣಾಮಕಾರಿಯಾದದ್ದು.
ಶ್ರಾವಣ ಮಾಸ ಸಂಪೂರ್ಣ ಆದ ಮೇಲೆ ನನ್ನ ಪ್ರಯೋಗದ ಫಲಿತಾಂಶ ತಮಗೆ ನೀಡುತ್ತೇನೆ, ಆಸಕ್ತರು ಕೂಡ ಈ ಪ್ರಯೋಗ ನಿಮ್ಮ ಮನೆಯಲ್ಲೇ ನಾಳೆಯಿಂದ ಪ್ರಾರಂಬಿಸಲು ಯೋಚಿಸಬಾರದೇಕೆ ?
Comments
Post a Comment