#ಹೆಗ್ಗೋಡಿನ_ಪ್ರತಿಷ್ಟಿತ_ಕಾಕಲ್_ಗುಂಪಿನಿಂದ_TSS_ಪ್ರಾಂಚೈಸಿ_ಆಗಿ_ಸೂಪರ್_ಮಾಕೆ೯ಟ್.
#ಬಹು_ಜನರ_ಅಪೇಕ್ಷೆಯ_TSS_ಸೂಪರ್_ಮಾಕೆ೯ಟ್_ಯಶಸ್ವಿ_ಆಗಲು_ಶುಭಹಾರೈಕೆಗಳು.
1923 ರಲ್ಲಿ ಸಿರ್ಸಿಯಲ್ಲಿ ಸಹಕಾರಿ ಸಂಸ್ಥೆಯಾಗಿ ದಿ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿ ಪ್ರಾರಂಭವಾಗಿ ಈಗ ವಾರ್ಷಿಕವಾಗಿ ಹತ್ತಿರ ಹತ್ತಿರ ಒಂದು ಸಾವಿರ ಕೋಟಿ ಟರ್ನ್ಒವರ್ ಇದೆ.
ಅಡಿಕೆ ಖರೀದಿ, ಪರಿಕ್ಷಕರಣೆ, ಮಾರಾಟದ ಜೊತೆ ಕಲ್ಯಾಣ ಮಂಟಪ, ಲಾಡ್ಜ್, ಹೋಟೆಲ್, ಆಸ್ಪತ್ರೆ, ಪ್ರಾಥಮಿಕ ಶಾಲೆ, ಜನೌಷದಿ ಕೇಂದ್ರ, ಅಡಿಕೆ ಖರೀದಿ ಕೇಂದ್ರ, ಕೃಷಿ ಉಪಕರಣಗಳ ಸೂಪರ್ ಮಾಕೆ೯ಟ್, ದಿನಬಳಕೆ ವಸ್ತುಗಳ ಸೂಪರ್ ಮಾರ್ಕೆಟ್, ಈ ವರ್ಷದಿಂದ ಶುಂಠಿ ಖರೀದಿಸಿ ಒಣ ಶುಂಠಿ ಮಾಡುವವರೆಗೆ ಈ ಸಂಸ್ಥೆ ಬೃಹದಾಕಾರವಾಗಿ ಬೆಳೆದಿದೆ.
ಈ ಸಂಸ್ಥೆ ತನ್ನ ಎಲ್ಲಾ ವ್ಯವಹಾರಗಳನ್ನು ಪಾರದರ್ಶಕ - ಪ್ರಾಮಾಣಿಕವಾಗಿ ನಿರಂತರವಾಗಿ ನಡೆಸಿಕೊಂಡು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ TSS ಹೆಸರಿನ ಬ್ರಾಂಡ್ ವ್ಯಾಲ್ಯೂ ಅಪರಂಜಿ ಆಗಿ ಕಾಪಾಡಿಕೊಂಡಿದೆ.
ಹೆಗ್ಗೋಡಿನಂತ ಹಳ್ಳಿಯಲ್ಲಿ ಕಾಕಲ್ ಉಪ್ಪಿನಕಾಯಿ, ಕಾಕಲ್ ಪೆಟ್ರೋಲ್ ಬಂಕ್ ಗಳನ್ನು ಸ್ಥಾಪಿಸಿರುವ ಆ ಬಾಗದ ಶೈಕ್ಷಣಿಕ ಸಂಸ್ಥೆಗೆ ದೊಡ್ಡ ಮಟ್ಟದ ದಾನದ ಸಹಾಯ ಮಾಡಿದ ಸಾಹಸಿ ಸಹೃದಯರಾದ ಕಾಕಾಲ್ ಕುಟುಂಬದ ಸಹೋದರರು ದಿನಾಂಕ 12- ಆಗಸ್ಟ್ -2021ರ ಗುರುವಾರದಿಂದ TSS ಸಹಯೋಗದ ( Franchise) ಕಾಕಲ್ ಟಿ ಎಸ್ ಎಸ್ ಸೂಪರ್ ಮಾಕೆ೯ಟ್ ಪ್ರಾರಂಬಿಸಲಿದ್ದಾರೆ.
ಕೆ.ಅರುಣ್ ಪ್ರಸಾದ್
www.hombujaresidency.com
Comments
Post a Comment