ಭಾಗ - 54, ಆನಂದಪುರಂ ಇತಿಹಾಸ, ಆನಂದಪುರಂ ಜನತ ಸಂರಕ್ಷಿಸಿಕೊಳ್ಳಬೇಕಾದ 10 ನೇ ಶತಮಾನದ ಶಾಸನಗಳು, ಅಂತರಾಸಿಪುರ, ಆನಂದೂರು ಮತ್ತು ಔಷದಪುರ ಎನ್ನುವುದು ಆನಂದಪುರಂನ ಮೂಲ ಹೆಸರುಗಳು.
#ಆನಂದಪುರಂ_ಇತಿಹಾಸ.
#ಕ್ರಿಸ್ತ_ಶಕ_ಹತ್ತನೇ_ಶತಮಾನದ_ದಾಖಲೆಯ_ಶಾಸನ_ಸಂರಕ್ಷಿಸ_ಬೇಕು.
#ಕೆಳದಿ_ರಾಜ_ವೆಂಕಟಪ್ಪ_ನಾಯಕರು_ಆನಂದಪುರಂ_ನಾಮಕರಣ_ಮಾಡುವ_ಮೊದಲಿನ_ಹೆಸರುಗಳು
#ಅಂತರಾಸಿಪುರ_ಆನಂದೂರು_ಔಷದಪುರ_ಎಂಬ_ಹೆಸರಿತ್ತು.
#ಎಲ್ಲಾ_ಊರಿಗೂ_ಇತಿಹಾಸ_ಇರುತ್ತದೆ_ಆದರೆ_ಆನಂದಪುರಂನಷ್ಟು_ಪುರಾತನ_ದಾಖಲೆ_ಇರುವ_ಊರು_ಕಡಿಮೆ.
ಈಗಿನ ಹುಂಚದ ಹೊಂಬುಜದಲ್ಲಿರುವ ಪಂಚ ಬಸದಿಯ ಶಾಸನದಲ್ಲಿ #ಆನಂದೂರು ಎಂದು ಈಗಿನ ಆನಂದಪುರಂ ಪ್ರದೇಶದ ಉಲ್ಲೇಖ ಇದೆ.
ಆನಂದಪುರಂನಿಂದ ಶಿವಮೊಗ ಮಾರ್ಗದಲ್ಲಿ ರಾಷ್ಟ್ರಿಯ ಹೆದ್ದಾರಿ 206 ರಲ್ಲಿ ಆಚಾಪುರಕ್ಕಿಂತ ಹಿಂದೆ ಎಡಬಾಗದಲ್ಲಿರುವ ಬೃಹತ್ ಶಿಲಾ ಶಾಸನ ಮುಂದಿನ ಪೀಳಿಗೆಗಾಗಿ ಈಗಲೇ ಸಂರಕ್ಷಿಸಿಕೊಳ್ಳಬೇಕಾಗಿದೆ ಇದು ಆನಂದಪುರಂ ಇತಿಹಾಸವನ್ನು ಕ್ರಿಸ್ತ ಶಕ 10 ನೇ ಶತಮಾನಕ್ಕೆ ಒಯ್ಯುವ ಅತ್ಯಂತ ಪುರಾತನ ದಾಖಲೆ ಕೂಡ.
ಕ್ರಿ.ಶ. 25- ಏಪ್ರಿಲ್ -1042 ರಲ್ಲಿ ಬನವಾಸಿ ನಾಡಿನ ರಾಜ್ಯಪಾಲ ಬಿಜ್ಜಳನ ಸಾಮಂತ ಗೋರರಸನು ಅಂದಾಸುರದಲ್ಲಿ ನಿರ್ಮಿಸಿದ ಗೋನೇಶ್ವರ ಮತ್ತು ಸೂಯ೯ ಮಾತಾ೯೦ಡೇಶ್ವರ ದೇವಾಲಯ ನಿರ್ಮಾಣದಲ್ಲಿ ಇಟ್ಟಿಗೆ ಶಿಲೆಯ ಕಾಮಗಾರಿ ನಿರ್ವಹಿಸಿದ ಚಿಕ್ಕ ಎಂಬ ಕುಶಲ ಕರ್ಮಿಗೆ ಭೂದಾನ ಮಾಡಿದ ಶಾಸನ ಇದು.
ಈ ಶಾಸನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದ್ದು ವಾಹನ ಸಂಚಾರ ದಟ್ಟಣೆಯಿಂದ ಯಾವುದೇ ಅವಘಡ ಸಂಭವಿಸಿದರೆ ಈ ಪ್ರಾಚಿನ ಶಾಸನ ಕಳೆದುಕೊಳ್ಳುವ ಅಪಾಯ ಇದೆ.
ಇದೇ ರೀತಿ ಆಚಾಪುರದ ತೀರ್ಥದಲ್ಲಿರುವ ಶಾಸನ ಕ್ರಿ.ಶ. 25- ಡಿಸೆಂಬರ್ -1079ರದ್ದು ಇದು ಕಲ್ಯಾಣಿ ಚಾಲುಕ್ಯ ರಾಜ ಇಮ್ಮುಡಿ ಜಯಸಿಂಹನ ಸಾಮಂತ ಮಾಚರಾಜನ ಶಾಸನ ಆಗಿದೆ ಆಚಾಪುರದ ಹಿಂದಿನ ಹೆಸರು ಮಾಚರಾಜಪುರ ಆಗಿತ್ತು, ಈ ಶಾಸನದಲ್ಲಿ ಮಾಚರಾಜನು ಮಾಚೇಶ್ವರ ಎಂಬ ಶಿವಲಿಂಗ ಪ್ರತಿಷ್ಟಾಪಿಸಿ ದಾನ ನೀಡಿದ ಉಲ್ಲೇಖವಿದೆ.
1902 ರಲ್ಲಿ ಪ್ರಕಟವಾಗಿರುವ ಎಪಿಗ್ರಾಫಿಯ ಕರ್ನಾಟಕದಲ್ಲಿ ಆನಂದಪುರಂ ಹೋಬಳಿಯಲ್ಲಿ ದೊರೆತಿರುವ 36 ಶಾಸನಗಳು ಮತ್ತು 2 ತಾಮ್ರ ಶಾಸನದ ಸಂಪೂರ್ಣ ವಿವರ ಇದೆ ದಾಖಲಾಗದ ಇನ್ನೂ ಅನೇಕ ಶಾಸನಗಳು ಇತ್ತೀಚೆಗೆ ಕಂಡು ಬಂದಿದ್ದು ಅವುಗಳ ಸ೦ಶೋದನೆ ಆಗಬೇಕಾಗಿದೆ.
ನಾಳೆ ಮುಂದಿನ ಭಾಗ - 55.
Comments
Post a Comment