ದೂರದ ಉತ್ತರ ಭಾರತಿಂದ ಬಂದು ದಾರವಾಡದಲ್ಲಿ ಪ್ರಾರಂಬಿಸಿದ ಎಮ್ಮೆ ಹಾಲಿನ ಬಾಬು ಸಿಂಗ್ ಠಾಕೂರ್ ಪೇಡಾ ಪ್ರಸಿದ್ಧ ನಗರಗಳಲ್ಲಿ ಬ್ರಾಂಚ್ ಹೊಂದಿದೆ, ಜಿಯೋಗ್ರಾಪಿಕಲ್ ಇಂಡಿಕೇಷನ್ ಕೂಡ ಪಡೆದಿದೆ, ಆಹಾರ ಉದ್ಯಮದಲ್ಲಿ ಇವರ ಯಶೋಗಾಥೆ ಅನೇಕರಿಗೆ ಪ್ರೇರಣೆ
#ದಾರವಾಡದ_ಪೇಡಾ
#ಬಾಬುಸಿಂಗ್_ಥಾಕೂರ್_ಪೇಡಾ
#ಜಿಯೋಗ್ರಾಪಿಕಲ್_ಇಂಡಿಕೇಷನ್_ಟ್ಯಾಗ್_ನಂಬರ್_80
#ಉತ್ತರಪ್ರದೇಶದ_ಈ_ಕುಟುಂಬದ_ಯಶೋಗಾಥೆ.
75 ನೇ ಸ್ವಾತಂತ್ರ್ಯೋತ್ಸವಕ್ಕೆ ನಮ್ಮ ಸಂಸ್ಥೆಯ ಎಲ್ಲರಿಗೂ ದಾರವಾಡದ ಪ್ರಖ್ಯಾತ ಬಾಬು ಸಿಂಗ್ ಥಾಕೂರ್ ಪೇಡಾ ನೀಡುವ ವ್ಯವಸ್ಥೆ ಮಾಡಿದ್ದೆ.
ದಾರವಾಡದ ಗೌಳಿಗರು ಸಾಕುವ ಎಮ್ಮೆ ಹಾಲು ಸಕ್ಕರೆ ಜೊತೆಗೆ ಅವರದ್ದೇ ಆದ ಕುಟುಂಬದ ವಿದಾನದಲ್ಲಿ ತಯಾರಿಸುವ ದಾರವಾಡದ ಪೇಡಾಕ್ಕೆ ಜೀಯೋಗ್ರಾಪಿಕಲ್ ಇಂಡಿಕೇಷನ್ ಟ್ಯಾಗ್ ದೊರೆತಿದೆ ಅಂದರೆ ಅರ್ಥವಾದೀತು ದಾರವಾಡ ಪೇಡದ ಪ್ರಖ್ಯಾತಿ.
19 ನೇ ಶತಮಾನದ ಶುರುವಿನಲ್ಲಿ ದೂರದ ಉತ್ತರ ಪ್ರದೇಶದ ಉನ್ನೋ ಪ್ರಾಂತ್ರ್ಯದಿಂದ ವಲಸೆ ಬಂದ ರಾಮ ರತನ್ ಸಿಂಗ್ ಠಾಕೂರ್ ಪ್ರಾರಂಬಿಸಿದ ಈ ಪೇಡಾ ಪ್ರಾರಂಭದಲ್ಲಿ ಸ್ಥಳಿಯ ಜನರಿಗಾಗಿ ಮಾತ್ರ ತಯಾರಿಸುತ್ತಿದ್ದರಂತೆ ಇವರ ಮೊಮ್ಮಗ ಬಾಬು ಸಿಂಗ್ ಠಾಕೂರ್ ಅಜ್ಜನ ಉದ್ದಿಮೆಯನ್ನು ವಿಸ್ತರಿಸುತ್ತಾರೆ ಇವರ ಲೈನ್ ಬಜಾರ್ ಸ್ಟೋರ್ ನಲ್ಲಿ ಮಾರಾಟ ಮಾಡುತ್ತಿದ್ದರಿಂದ ಸ್ಥಳಿಯರು ಲೈನ್ ಬಜಾರ್ ಪೇಡಾ ಅಂತಲೇ ಬಾಬು ಸಿಂಗ್ ಠಾಕೂರ್ ಪೇಡಾಕ್ಕೆ ಕರೆಯುತ್ತಾರೆ (ಮಿಶ್ರಾ ಎಂಬ ಕಂಪನಿ ಪೇಡಾ ಕೂಡ ಮಾರುಕಟ್ಟೆಯಲ್ಲಿದೆ).
ದಾರವಾಡದಲ್ಲಿ ಇವರ ಪೇಡಾ ತಯಾರಿಗಾಗಿ ದೊಡ್ಡ ಪ್ರಮಾಣದ ಎಮ್ಮೆ ಹಾಲು ಪೂರೈಸಲಿಕ್ಕಾಗಿ ಗೌಳಿಗರು ಹೆಚ್ಚು ಹೆಚ್ಚು ಎಮ್ಮೆ ಸಾಕಿದ್ದಾರೆ.
ಇವತ್ತು ದೇಶದ ಪ್ರಮುಖ ನಗರಗಳಲ್ಲಿ ಬಾಬು ಸಿಂಗ್ ಠಾಕೂರ್ ಪೇಡಾದ ಮಾರಾಟ ಮಳಿಗೆ ಪ್ರಾರಂಭ ಆಗಿದೆ, ರುಚಿ - ಶುಚಿಯಲ್ಲಿ ರಾಜಿ ಇಲ್ಲ, ಇವರ ತಯಾರಿಕಾ ಘಟಕ ಕೂಡ ಮನುಷ್ಯನ ಕೈ ಬೆರಳು ನೇರ ತಾಕದಂತೆ ಸುರಕ್ಷಿತವಾಗಿ ಆರೋಗ್ಯಕರ ವಾತಾವರಣದಲ್ಲಿ ತಯಾರಾಗಿ ಅತ್ಯುತ್ತಮವಾಗಿ ಪ್ಯಾಕ್ ಮಾಡಿ ಗ್ರಾಹಕರಿಗೆ ನೀಡುತ್ತಾರೆ.
ಮಲೆನಾಡಿನಲ್ಲೂ ಅನೇಕ ಪಾರಂಪರ್ಯವಾದ ಸಿಹಿ ತಿನಿಸು ಕೂಡ ಇದೆ, ಕೆಲವರು ತಯಾರಿಸಿ ಮಾರಾಟ ಪ್ರಾರಂಬಿಸುತ್ತಾರೆ ಒಂದೆರೆಡು ವರ್ಷದಲ್ಲಿ ಖ್ಯಾತಿ ಪಡೆದ ಮೇಲೆ ಕಮರ್ಷಿಯಲ್ ಪ್ರೊಡಕ್ಷನ್ ನಲ್ಲಿ ರುಚಿ - ಶುಚಿ- ಗುಣಮಟ್ಟದ ಪ್ಯಾಕಿಂಗ್ ಮಾಡದೆ ಮಾರುಕಟ್ಟೆಯಿಂದ ದೂರ ಆಗುತ್ತಾರೆ ಕೇಳಿದರೆ ಬೇರೇನೋ ಕಥೆ ಹೇಳುತ್ತಾರೆ.
ದಾರವಾಡದ ಬಾಬು ಸಿಂಗ್ ಠಾಕೂರ್ ಕುಟುಂಬದ ಈ ಯಶೋಗಾಥೆ,ಜಿಯೋಗ್ರಾಪಿಕಲ್ ಇಂಡಿಕೇಷನ್ ಟ್ಯಾಗ್ ಪಡೆದ ಅವರ ಪೇಡಾ, ದೊಡ್ಡ ಪಟ್ಟಣಗಳಲ್ಲಿ ಅವರ ಬ್ರಾಂಚ್ ಗಳು ಮತ್ತು ಸ್ಥಳಿಯ ಗೌಳಿಗರಿಗೆ ಎಮ್ಮೆ ಸಾಕಾಣಿಕೆ ಕಾರಣಗಳು ಮಲೆನಾಡ ನವ ಉದ್ಯಮಿಗಳಿಗೆ ಪ್ರೇರಣೆ ಆಗಲಿ ಎ೦ದು ಹಾರೈಸುತ್ತೇನೆ.
Comments
Post a Comment