Skip to main content

ಒಂದು ಜಿಲ್ಲೆ ಒಂದು ಬೆಳೆ, ಕೇ೦ದ್ರ ಸರ್ಕಾರದ ಆತ್ಮ ನಿರ್ಬರ್ ಯೋಜನೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ಅನಾನಸ್ ಬೆಳೆ ನಿಗದಿ ಮಾಡಿದೆ.

#ಒಂದು_ಜಿಲ್ಲೆ_ಒಂದು_ಬೆಳೆ_ಏನಿದು?

#ಈ_ಯೋಜನೆಯಲ್ಲಿ_ಶಿವಮೊಗ್ಗದ್ದು_ಅನಾನಸ್ 

#ಅನಾನಸ್_ಹಣ್ಣು_ಮತ್ತು_ಸಂಸ್ಕರಣೆ.

#ಬನವಾಸಿ_ರೋಪ್_ಸಾಹೇಬರು_ಮಾವಿನಗುಂಡಿ_ಐನಕೈ_ಅಶೋಕಹೆಗ್ಗಡೆ_ಮತ್ತಿಕೊಪ್ಪ_ಜಾನ್_ಪಾಸ್_ಜಯಪ್ರಕಾಶ್_ಹೆಗ್ಗಡೆ_ಅಗ್ರಗಣ್ಯರು.

  ಪ್ರದಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮ ನಿರ್ಬರ್ ಯೋಜನೆಯಲ್ಲಿ ದೇಶದ ಸುಮಾರು 728 ಜಿಲ್ಲೆಗಳಲ್ಲಿ ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಲ್ಲಿ ಶೇಕಡಾ 35% ಸಹಾಯಧನ ಪ್ರೋತ್ಸಾಹದಲ್ಲಿ ಒ0ದೊಂದು ಬೆಳೆಯನ್ನು ಬೆಳೆಸಿ ಸಂಸ್ಕರಿಸಿ ಮಾರಾಟಕ್ಕೆ ಯೋಜನೆ ರೂಪಿಸಿದೆ.
  ಇದರಲ್ಲಿ ಶಿವಮೊಗ್ಗ ಜಿಲ್ಲೆಗೆ ಅನಾನಸ್ ಬೆಳೆ ನಿಗದಿ ಮಾಡಿದೆ,ಈಗ ಪ್ರಗತಿ ಪರ ಕೃಷಿ ಮಿತ್ರ ನಾಗೇಂದ್ರ ಸಾಗರ್ ದಂಪತಿಗಳಿಗೆ ಕೃಷಿ ಇಲಾಖೆ ಆಸಕ್ತ ಸ್ವಯಂ ಉದ್ಯಮಿಗಳಿಗೆ ಅನಾನಸ್ ಹಣ್ಣು ಸಂಸ್ಕರಣ ಮತ್ತು ಮಾರಾಟ ತರಬೇತಿ ಹಾಗೂ ಇದಕ್ಕೆ ಬೇಕಾದ ಬ್ಯಾಂಕ್ ಸಾಲ ಯೋಜನೆ ಮಂಜೂರಾತಿಗೆ ತಯಾರು ಮಾಡುವ ಜವಾಬ್ದಾರಿ ನೀಡಿದೆ.
 ಮೊನ್ನೆ ಮೊದಲ ತರಬೇತಿಗೆ 70 ಮಹಿಳೆಯರೇ ಭಾಗವಹಿದ್ದರೆಂದು ಅವರು FB ಪೋಸ್ಟ್ ಮಾಡಿದ್ದಾರೆ.
 ಖುಷ್ಕಿ ಜಮೀನಲ್ಲಿ ಕಡಿಮೆ ನೀರಿನಲ್ಲಿ ಉಷ್ಣ ಪ್ರದೇಶದಲ್ಲಿ ಬೆಳೆಯುವ ಈ ಅನಾನಸ್ ಮೂಲ ದಕ್ಷಿಣ ಅಮೇರಿಕಾ, ಇದು ಭಾರತಕ್ಕೆ ಪೋರ್ಚುಗೀಸರಿಂದ 1548 ರಲ್ಲಿ ಅವರು ಇಂಡೋನೇಷಿಯದಿಂದ ತಂದ ಬಗ್ಗೆ ಮಾಹಿತಿ ಇದೆ.
   ಇದಕ್ಕೂ ಹಿಂದೆ ಕ್ರಿಸ್ತ ಪೂರ್ವದಲ್ಲಿ BC 322 - 185 ರಲ್ಲಿ ಮೌಯ೯ ಮತ್ತು ಚಂದ್ರ ಗುಪ್ತಾ ಕಾಲದಲ್ಲಿ ಈ ಹಣ್ಣಿನ ಉಲ್ಲೇಖ Ancient indian history and culture ನಲ್ಲಿದೆ ಎಂಬ ಮಾಹಿತಿಯೂ ಇದೆ.
  ಅನಾನಸ್ ಎಂದರೆ (Nanas) ಉತ್ಕೃಷ್ಟ ಹಣ್ಣು (Excellent Fruit) ಇದನ್ನು 1555 ರಲ್ಲಿ ಫ್ರೆಂಚ್ ಪಾದ್ರಿ ದಾಖಲಿಸಿದ್ದಾರೆ ನಂತರ ಇದಕ್ಕೆ ಅನಾನಸ್ ಹೆಸರು ಬರಲು ಕಾರಣ 17ನೇ ಶತಮಾನದಲ್ಲಿ ಯುರೋಪಿಗೆ ಈ ಹಣ್ಣು ಪರಿಚಯ ಆದಾಗ ಅಲ್ಲಿನ ಪೈನ್ ಮರದ ಕೋನ್ ಆಕೃತಿಯಲ್ಲಿ ಈ ಹಣ್ಣು ಹೋಲುತ್ತಿದ್ದರಿಂದ ಪೈನ್ - ಆಫಲ್ ನಂತರ ಪೈನಾಪಲ್ ಆಗಿದೆ ಅನ್ನುತ್ತದೆ ಮಾಹಿತಿ.
  ಹವಾಯಿ ದೇಶ ಅನಾನಸ್ ಅತಿ ಹೆಚ್ಚು ಬೆಳೆದು ಅಮೇರಿಕಾಕ್ಕೆ ರಪ್ತು ಮಾಡುತ್ತದೆ, 2016ರ ನಂತರ ಕೋಸ್ಟರೀಕಾ, ಬ್ರಿಜಿಲ್ ಮತ್ತು ಪಿಲಿಪೈನ್ಸ್ ಅತಿ ದೊಡ್ಡ ಪ್ರಮಾಣದ ರಪ್ತು ದೇಶವಾಗಿದೆ ಇದರಲ್ಲಿ ಅಗ್ರಸ್ಥಾನ ಈಗ ಕೋಸ್ಟರೀಕಾ ದೇಶದ್ದು.
  ಅಮೇರಿಕಾದಲ್ಲಿ ಪಿಜ್ಜಾದ ಮೇಲೆ ಅನಾನಸ್ ಸ್ಲೈಸ್ ಹಾಕಿದ ಪ್ರಯೋಗ ಅತ್ಯಂತ ಜನಪ್ರಿಯ ಆಗಿ ಈಗ ಪೈನಾಪಲ್ ಪಿಜ್ಜಾ ವಿಶ್ವದಾದ್ಯಂತ ಜನಪ್ರಿಯ ಆಗಿದೆ.
  ಭಾರತದಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ, ಕರ್ನಾಟಕ, ಮೇಘಾಲಯ, ಮಣಿಪುರ, ಅರುಣಾಚಲ ಪ್ರದೇಶ, ಕೇರಳ ಮತ್ತು ಬಿಹಾರದಲ್ಲಿ ಈ ಬೆಳೆ ಬೆಳೆಯುತ್ತಿದ್ದಾರೆ.
  ಕೆರೆಬಿಯನ್ ದ್ವೀಪದಲ್ಲಿ ಅನಾನಸ್ ನ ಅನೇಕ ವಿದದ ಪಾನೀಯ ಆಹಾರಗಳಲ್ಲಿ ಅನಾನಸ್ ಅಗ್ರ ಸ್ಥಾನ ಪಡೆದಿದೆ ಮತ್ತು ಅನಾನಸ್ ರುಚಿ ವಿಶ್ವ ವಿಖ್ಯಾತ ಮಾಡಿದ ದೇಶವಿದು.
  ಒಂದು ಎಕರೆ ಪ್ರದೇಶದಲ್ಲಿ ಅನಾನಸ್ ಕನಿಷ್ಟ 10 ಟನ್ ಹಣ್ಣು ನೀಡುತ್ತದೆ, ಒ0ದರಿಂದ ಒಂದೂವರೆ ಲಕ್ಷ ವೆಚ್ಚದಲ್ಲಿ ಕನಿಷ್ಟ 2.5 ಲಕ್ಷದಿಂದ 4 ಲಕ್ಷದವರೆಗೆ (ಖರೀದಿ ಬೆಲೆ ಆದಾರದಲ್ಲಿ) ಆದಾಯ ಇರುವುದರಿಂದ ರಾಜ್ಯದಲ್ಲಿ ಮೊದಲ ಭಾರಿಗೆ ಸಿರ್ಸಿ ಭಾಗದ ಬನವಾಸಿ ಪ್ರದೇಶದಲ್ಲಿ ಬನವಾಸಿ ರೋಪ್ ಸಾಹೇಬರು ದೊಡ್ಡ ಮಟ್ಟದಲ್ಲಿ ಇದನ್ನು ಬೆಳೆದು ಉತ್ತರ ಭಾರತದಲ್ಲಿ ಮಾರಾಟ ಮಾಡಲು ಪ್ರಾರಂಬಿಸಿದ್ದರು ಇವರಿಂದ ಪ್ರೇರಣೆ ಪಡೆದ ಅನೇಕ ರೈತರು ಈ ಬೆಳೆ ಬೆಳೆಯಲು ಪ್ರಾರಂಬಿಸಿದಾಗ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಯವರು ಬನವಾಸಿಯಲ್ಲಿ ತೋಟಗಾರಿಕಾ ಇಲಾಖೆಯಿಂದ ಅನಾನಸ್ ಹಣ್ಣು ಸಂಸ್ಕರಣ ನಿರ್ಮಾಣ ಮಾಡಿದ್ದರು ಆದರೆ ಸರ್ಕಾರದ ಎಲ್ಲಾ ಯೋಜನೆ ಹಳ್ಳ ಹಿಡಿದಂತೆ ಈ ಘಟಕ ಕೂಡ ಮೂಲೆಗೆ ಬಿತ್ತು ನಂತರ ಈ ಘಟಕ ಹರಾಜಿನಲ್ಲಿ ರೋಪ್ ಸಾಹೇಬರೆ ಪಡೆದರು ಮತ್ತು ರಾಜ್ಯದ ದಾರವಾಡ ಕೃಷಿ ವಿಶ್ವವಿದ್ಯಾಲಯ ರೋಪ್ ಸಾಹೇಬರಿಗೆ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಅವರದ್ದೇ ಇನ್ನೊಂದು ಅನಾನಸ್ ಹಣ್ಣು ಸಂಸ್ಕರಣಾ ಘಟಕವೂ ಬನವಾಸಿಯಲ್ಲಿದ್ದು ಸಂಸ್ಕರಿಸಿದ ಅನಾನಸ್ ಕಾಯಿ ಕ್ಯಾನಿಂಗ್ ಮಾಡಿ ರಪ್ತು ಮಾಡುತ್ತಾರೆ ಮತ್ತು ಹಣ್ಣುಗಳನ್ನು ದೆಹಲಿ ಪಂಜಾಬಿಗೆ ಕಳಿಸುತ್ತಾರೆ.
  ಪಂಜಾಬ್, ಹರಿಯಾಣ ಮತ್ತು ದೆಹಲಿಯಲ್ಲಿ ದೊಡ್ಡ ದೊಡ್ಡ ವಿವಾಹಗಳಲ್ಲಿ ಈ ಹಣ್ಣಿನ ರಸ ಮತ್ತು ಹಣ್ಣಿನ ಸ್ಪೈಸ್ ಮೇಲೆ ಚೀಸ್ ಹಾಕಿ ನೀಡಲು (welcome drink) ಬಾರೀ ಬೇಡಿಕೆ ಇದೆ.
   ನಮ್ಮ ಜಿಲ್ಲೆಯಲ್ಲಿ 70 ರ ದಶಕದಲ್ಲಿ ಸಾಗರ ತಾಲ್ಲೂಕಿನ ಹೆಗೋಡು ಸಮೀಪದ ಮತ್ತಿಕೊಪ್ಪದ ಹರನಾಥ ರಾಯರ ದಾಯಾದಿಗಳಾದ ಮತ್ತಿಕೊಪ್ಪದ ಜಯಪ್ರಕಾಶ ಹೆಗ್ಗಡೆ ಜಾನ್ - ಪಾಸ್ ಹೆಸರಿನಲ್ಲಿ ಅನಾನಸ್ ತಾಜಾ ಹಣ್ಣಿನ ರಸ ಮಾರುಕಟ್ಟೆಗೆ ಬಿಟ್ಟಿದ್ದರು, ಅನಾನಸ್ ಬೆಳೆಯಲು ಆ ಕಾಲದಲ್ಲಿ ಸುಮಾರು ನೂರು ಎಕರೆ ಜಮೀನು ಸರ್ಕಾರ ಇವರಿಗೆ ಮಂಜೂರು ಮಾಡಿದ್ದು ಆ ಕಾಲದಲ್ಲಿ ಅನಾನಸ್ ಬೆಳೆಗೆ ಪ್ರೋತ್ಸಾಹಿಸಲು ಆ ಕಾಲದ ಸರ್ಕಾರ ತಾಳಿದ್ದ ಒಂದು ಉದಾಹರಣೆ.
  1970 ರಲ್ಲಿ ಜೋಗ್ ಜಲಪಾತದ ಪಕ್ಕದ ಊರಾದ ಮಾವಿನಗುಂಡಿಯಲ್ಲಿ (ಸಿದ್ದಾಪುರ ತಾಲ್ಲೂಕ್ ) ಲೇಖಕರಾದ ಮಾವಿನಗುಂಡಿ ಅಶೋಕ ಹೆಗ್ಗಡೆಯವರ ಮನೆತನದ ಐನಕೈ ಹೆಸರಲ್ಲಿ ಪ್ರಾರಂಬಿಸಿದ್ದ ಅನಾನಸ್ ಸಿರಪ್ ಮತ್ತು ಜಾಮ್ ಒಂದು ಕಾಲದಲ್ಲಿ ಸುಪ್ರಸಿದ್ಧ ಆಗಿತ್ತು,ಇದೇ ಹೆಸರಲ್ಲಿ ಜ್ಯೂಸ್ ಸೆಂಟರ್ ಮತ್ತು ರಿಟೈಲ್ ಸ್ಟಾಲ್ ಒಂದು ಮಾವಿನಗುಂಡಿ ಊರಲ್ಲಿ ಬಹಳ ವರ್ಷ ಇತ್ತು.
  100 ಗ್ರಾಂ ಅನಾನಸ್ ನಲ್ಲಿ 60 ಕ್ಯಾಲೋರಿಗಳಿದ್ದು, ಜೀರೋ ಕೊಲೆಸ್ಟ್ರಾಲ್ ಇರುವ, ವಿಟಮಿನ್ ಅತ್ಯಂತ ಹೆಚ್ಚು (15%) ಇರುವುದರಿಂದ ಇದು ಉತ್ಕೃಷ್ಟ ಹಣ್ಣು.
  ನಮ್ಮ ದೇಶದ ಅಗರ್ತಾಲ ರಾಜ್ಯ ಅನಾನಸ್ ಹಣ್ಣು ತನ್ನ ರಾಜ್ಯದ ಹಣ್ಣಾಗಿ ಘೋಷಿಸಿದೆ.
    ಈಗ ಕೇಂದ್ರ ಸರ್ಕಾರ ಅನಾನಸ್ ಶಿವಮೊಗ್ಗ ಜಿಲ್ಲಾ ಬೆಳೆ ಎಂದು ಘೋಷಿಸಿದ್ದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಅನಾನಸ್ ಹಣ್ಣಿನ ತಾಜಾ ರಸ, ಜಾಂ ಗಳ ಜೊತೆ ಅನಾನಸ್ ಡ್ರೈ ಪ್ರೂಟ್ ಮುಂತಾದ್ದೆಲ್ಲ ತಯಾರಿಸಿ ಸ್ಥಳಿಯವಾಗಿ ಮಾರುಕಟ್ಟೆಯಲ್ಲಿ ಮಾರಾಟ ಪ್ರಾರಂಬಿಸಿ ಮುಂದಿನ ದಿನದಲ್ಲಿ ಹೊರ ಜಿಲ್ಲೆ, ಹೊರ ರಾಜ್ಯ ಮತ್ತು ಹೊರ ದೇಶಕ್ಕೂ ರಪ್ತು ಮಾಡುವ ಮೂಲಕ ಈ ಯೋಜನೆ ಸದ್ಬಳಕೆ ಮಾಡಿಕೊಳ್ಳಬಹುದು ಮತ್ತು ಸ್ವಯ೦ ಉದ್ಯೋಗ ಕಂಡುಕೊಂಡು ಅನೇಕರಿಗೆ ಉದ್ಯೋಗ ಕೂಡ ನೀಡಬಹುದಾಗಿದೆ.
   ಈ ಬಗ್ಗೆ ಹೆಚ್ಚಿನ ಮಾಹಿತಿ - ತರಬೇತಿ -ಸಾಲ ಸೌಲಭ್ಯಕ್ಕಾಗಿ ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಮತ್ತು  ಕೃಷಿ ತಜ್ಞ ಸಾಗರದ ನಾಗೇಂದ್ರ ಸಾಗರ್ ದಂಪತಿಗಳಿಂದ ಪಡೆಯಬಹುದು.
  ನಾಗೇಂದ್ರ ಸಾಗರ್ ಸಂಪರ್ಕ ಸಂಖ್ಯೆ 9449501613/8147299353.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...