#ರಾಷ್ಟಪತಿಗಳ_ವಿಶಿಷ್ಟ_ಸೇವಾಪದಕಕ್ಕೆ_ಬಾಜನರಾದ_ಅರುಣ್_ಚಕ್ರವರ್ತಿ.
#ಸಾಗರದಲ್ಲಿ_ಎ_ಎಸ್_ಪಿ_ಆಗಿ_ಶಿವಮೊಗ್ಗ_ಎಸ್_ಪಿ_ಆಗಿದ್ದರು.
ಇವತ್ತು ರಾಜ್ಯದ 21 ಪೋಲಿಸರಿಗೆ ರಾಷ್ಟ್ರಪತಿ ಪದಕ ಘೋಷಣೆ ಆಗಿದೆ ಇದರಲ್ಲಿ ಇಬ್ಬರಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ದೊರೆತಿದೆ ಅದರಲ್ಲಿ ಒಬ್ಬರು ನನ್ನ ಪ್ರೀತಿಯ ಪೋಲಿಸ್ ಅಧಿಕಾರಿಗಳಾ ಆಂತರಿಕ ಭದ್ರತಾ ಇಲಾಖೆಯ ಎ.ಡಿ.ಜಿ.ಪಿ. #ಅರುಣ್_ಜೇಜಿ_ಚಕ್ರವರ್ತಿಗಳು.
ಬಹು ಸೂಕ್ಷ್ಮ ಸ್ವಭಾವದ, ತಮ್ಮ ಭಾವನೆಗಳನ್ನು ಹೊರಗೆ ತೋರಿಸಿಕೊಳ್ಳದ, ಖಡಕ್ ಅಧಿಕಾರಿ ಇವರು. 1990 ರಲ್ಲಿ ಕಸ್ಟಮ್ ಇನ್ಸ್ಪೆಕ್ಟರ್ ಆಗಿ ನಂತರ 1995ರಲ್ಲಿ ಐಪಿಎಸ್ ಗೆ ಆಯ್ಕೆ ಆಗಿ ಮೊದಲಿಗೆ ಸಾಗರ ತಾಲ್ಲೂಕಿನಲ್ಲಿ ASP ಆಗಿ ಬಂದವರು, ಸಾಂಗ್ಲಿಯಾನರೂ ಕೂಡ ತಮ್ಮ ಸೇವಾ ವೃತ್ತಿ ಸಾಗರದಿಂದಲೇ ಪ್ರಾರಂಬಿಸಿ ಶಿವಮೊಗ್ಗ ರಕ್ಷಣಾಧಿಕಾರಿ ಆಗಿದ್ದವರು ಅವರಿಗೂ ಅರುಣ್ ಚಕ್ರವರ್ತಿಯವರಿಗೂ ಅನೇಕ ಸ್ವಾಮ್ಯವಿದೆ.
ಆ ಕಾಲದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ನಲ್ಲಿ ಸಾಗರ ತಾಲ್ಲೂಕಿನ ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಅರುಣ್ ಚಕ್ರವರ್ತಿಯವರ ಒಡನಾಟ ನನಗೆ ಅವರ ಬಗ್ಗೆ ಸದಭಿಪ್ರಾಯ ಮತ್ತು ಗೌರವಕ್ಕೆ ಕಾರಣವಾಗಿತ್ತು.
ನಂತರ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿದರು, ಯುಗೋಸ್ಲೋವಿಯಾದಲ್ಲಿ ಯು.ಎನ್. ಪೀಸ್ ಕೀಪಿಂಗ್ ಪೋರ್ಸ್ ನಲ್ಲಿನ ಇವರ ಅತ್ಯುತ್ತಮ ಸೇವೆಗಾಗಿ 2003 ರ ಯುನೈಟೆಡ್ ನೇಷನ್ ಪದಕ ಪಡೆದವರು.
Comments
Post a Comment