#ಜನವಾರ್ತೆ_ನಾಗರಾಜ್_ಅಪಘಾತದಿಂದ_ವಿದಿವಶ.
#ಶಿವಮೊಗ್ಗದ_ಮೊದಲ_ಅಂತರ್_ಜಿಲ್ಲಾ_ನಾಲ್ಕು_ಪುಟಗಳ_ದಿನಪತ್ರಿಕೆ_ಪ್ರಾರಂಬಿಸಿದವರು.
#ಸ್ವಂತ_ಆಫ್_ಸೆಟ್_ಮುದ್ರಣದ_ಪತ್ರಿಕೆ_ಜನವಾರ್ತೆ
#ಕನಸುಗಾರ_ಉದ್ಯಮಿಯನ್ನು_ದಾರಿತಪ್ಪಿಸಿದ_ಜಿಲ್ಲೆಯ_ರಾಜಕಾರಣಿಗಳು
#ಆಶ್ರಯ_ಹಗರಣದಲ್ಲಿ_ಬಲಿಪಶು
#ಕೊನೆಯವರೆಗೂ_ಇವರೊಂದಿಗೆ_ಉಳಿದವರು_SPಶೇಷಾದ್ರಿ
#ದುರಂತ_ಕಥಾ_ನಾಯಕ_ಜಿ_ಎಸ್_ನಾಗರಾಜ್
#ಯಶಸ್ಸಿಗೆ_ಹಲವು_ಅಪ್ಪಂದಿರು_ಇರುತ್ತಾರೆ_ಸೋಲು_ಅನಾಥ_ಎಂಬ_ಗಾದೆ_ಸುಳ್ಳಲ್ಲ.
1995ರಲ್ಲಿ ಶಿವಮೊಗ್ಗದಿಂದ ಜಿ.ಎಸ್.ನಾಗರಾಜ್ ಸಂಪಾದಕತ್ವದಲ್ಲಿ ಪ್ರಾರಂಬಿಸಿದ #ಜನವಾರ್ತೆ ಪತ್ರಿಕೆ ಆ ಕಾಲದಲ್ಲಿ ಅನೇಕ ಪ್ರಥಮಗಳ ದಾಖಲೆ ಮಾಡಿತ್ತು.
ಡೆಮ್ಮಿಸೈಜಿನ (ಪ್ರಜಾವಾಣಿ ಸೈಜಿನಲ್ಲಿ) ನಾಲ್ಕು ಪುಟದ ಶಿವಮೊಗ್ಗ ಜಿಲ್ಲೆಯ ಮೊದಲ ದಿನ ಪತ್ರಿಕೆ ಜನವಾರ್ತೆ, ಸ್ವಂತದ್ದಾದ ಬೃಹತ್ ಆಫ್ ಸೆಟ್ ಮುದ್ರಣ ಯಂತ್ರ ಹೊಂದಿದ ಮೊದಲ ಸ್ಥಳಿಯ ದಿನ ಪತ್ರಿಕೆ ಮತ್ತು ಶಿವಮೊಗ್ಗ - ದಾವಣಗೆರೆ (ಆಗ ಚಿತ್ರದುರ್ಗ ಜಿಲ್ಲೆಯಲ್ಲಿತ್ತು) - ಚಿಕ್ಕಮಗಳೂರು - ಹಾಸನ ಜಿಲ್ಲೆಗಳಿಗೆ ಪ್ರಸಾರಣ ಹೊಂದಿದ್ದ ಮೊದಲ ಅಂತರ್ ಜಿಲ್ಲಾ ಪತ್ರಿಕೆ.
1995-2000 ಇಸವಿ ಅವಧಿಯಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನನಗೆ ಜನವಾರ್ತೆ ಪತ್ರಿಕೆ ನನ್ನ ಹೋರಾಟ, ಪತ್ರಿಕಾ ಹೇಳಿಕೆಗಳ ಪ್ರಕಟನೆ ಮುಖಾಂತರ ಹೆಚ್ಚಿನ ಸಹಾಯ ಮಾಡಲು ಜಿ.ಎಸ್.ನಾಗರಾಜ್ ಕಾರಣರಾಗಿದ್ದರು.
ಆ ಕಾಲದಲ್ಲಿ ಸವಳಂಗ ರಸ್ತೆಯ ರೈಲ್ವೇ ಗೇಟ್ ದಾಟಿದ ನಂತರ ದೊಡ್ಡ ಬಯಲ ಮದ್ಯದಲ್ಲಿ ಬೃಹತ್ ಕಪ್ಪು ಗಾಜಿನ ಕಟ್ಟಡ ಅಲ್ಲಿ ಸಂಚರಿಸುವವರ ಕಣ್ಣು ಕುಕ್ಕುತ್ತಿತ್ತು ಅದೇ ಜನವಾರ್ತೆ ದಿನಪತ್ರಿಕೆ ಕಛೇರಿ ಮತ್ತು ಮುದ್ರಣಾಲಯ ಅಲ್ಲಿ ಮೊದಲ ಮಹಡಿ ಏರಿ ಹೋಗಿ ಎಡಕ್ಕೆ ಇರುವ ಬೃಹತ್ ಬಾಗಿಲ ಹಿಂದೆ ಹವಾ ನಿಯಂತ್ರಣ ಕೊಠಡಿಯ ವಿಶಾಲವಾದ ಟೇಬಲ್ ಹಿಂದೆ ಐಶಾರಾಮಿ ಖುಚಿ೯ಯಲ್ಲಿ ಗಡ್ಡದಾರಿ ಸುಂದರ ನಗುಮುಖದ ನಾಗರಾಜ್ ಇರುತ್ತಿದ್ದರು.
ಬಂದವರಿಗೆಲ್ಲ ತಣ್ಣನೆಯ ಕೋಕಾ ಕೋಲಾದ ಸ್ವಾಗತ ಪೇಯವೂ ಇರುತ್ತಿತ್ತು,ಅನೇಕ ಬಾರಿ ನಾನು ಮಾಜಿ ಮಂತ್ರಿಗಳಾಗಿದ್ದ ವಿಶ್ವನಾಥರನ್ನು ಇವರ ಚೇಂಬರ್ ನಲ್ಲೇ ಬೇಟಿ ಮಾಡಿದ್ದೆ,ಅಂತಹ ಒಂದು ಸಂದರ್ಭದಲ್ಲಿ ವಿಶ್ವನಾಥರನ್ನು ನಾನು ಕೇಳಿದ್ದೆ ಸಾಮೂಹಿಕ ಮದುವೆಯಲ್ಲಿ ಅವರ ಪುತ್ರಿ ವಿವಾಹ ಮಾಡಿದ ಬಗ್ಗೆ ಅದಕ್ಕೆ ಅವರು ನೀಡಿದ ಕಾರಣ ನನಗೆ ಅವರ ಬಗ್ಗೆ ಹೆಚ್ಚಿನ ಸದಭಿಪ್ರಾಯ ಮೂಡಲು ಕಾರಣವಾಗಿತ್ತು.
ಶಿವಮೊಗ್ಗದ ಸಂಪನ್ನ ರಾಜಕಾರಣಿಗಳಾಗಿರುವ S.P.ಶೇಷಾದ್ರಿ ಅವತ್ತಿಂದ ಇವತ್ತಿನವರೆವಿಗೂ ಇವರ ಜೊತೆ ಎಲ್ಲಾ ಕಷ್ಟದಲ್ಲಿ ಬಾಗಿಯಾಗಿ ಉಳಿದಿದ್ದಾರೆ,ಆಗೆಲ್ಲ ಇವರ ಜನವಾರ್ತೆ ಪತ್ರಿಕಾ ಕಛೇರಿಗೆ ಹೋದಾಗ ಅಲ್ಲಿ ಶೇಷಾದ್ರಿ ಮತ್ತು ಬಟ್ಟೆಮಲ್ಲಪ್ಪದ ಕ್ರಷರ್ ರಾಜಶೇಖರಗೌಡರು ಸದಾ ಇರುತ್ತಿದ್ದರು.
1996 ರಲ್ಲಿ ಆನಂದಪುರಂನಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಮಾಜಿ ಮುಖ್ಯಮಂತ್ರಿ ಬಂಗಾರಪ್ಪರಿಂದ ಉದ್ಫಾಟಿಸುವ ಕಾರ್ಯಕ್ರಮ ನಿಗದಿ ಮಾಡಿದ್ದೆ ಆ ಕಾರ್ಯಕ್ರಮದಲ್ಲಿ ನಾಗರಾಜ್ ರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದೆ ಸಂಜೆ ಉದ್ಘಾಟನಾ ಸಮಾರಂಭದ ನಂತರ ರಾತ್ರಿ ಊಟ ಯಡೇಹಳ್ಳಿಯ ಪ್ರವಾಸಿ ಮಂದಿರದಲ್ಲಿ ವ್ಯವಸ್ಥೆ ಮಾಡಿದ್ದೆ ಅಲ್ಲಿ ಬಂಗಾರಪ್ಪ ಮತ್ತು ನಾಗರಾಜ್ ಒಟ್ಟಿಗೆ ಬೋಜನ ಸ್ವೀಕರಿಸಿದ್ದರು.
ನಾಗರಾಜ್ ಉದ್ಯಮ ಲೋಕದಲ್ಲಿ ದೊಡ್ಡ ಕನಸು ಕಂಡವರು ಅದಕ್ಕೆ ತಕ್ಕಂತೆ ಅವರ ಹತ್ತಿರ ಮೂಲ ಬಂಡವಾಳ ಇತ್ತು, ಶಿವಮೊಗ್ಗದ ಪ್ರೈಮ್ ಲೊಕೇಷನ್ ನಲ್ಲಿ ಜಮೀನುಗಳಿತ್ತು ಆದರೆ ಅವರ ಜೀವನದಲ್ಲಿನ ಅವರ ಕನಸಿನ ಉದ್ಯಮದ ಹಾದಿ ತಪ್ಪಿಸಿದವರು ಜಿಲ್ಲೆಯ ರಾಜಕಾರಣಿಗಳು ಆಗ ನಡೆದದ್ದೇ ರಾಜ್ಯದ ದೊಡ್ಡ ಅವ್ಯವಹಾರದ ಆಶ್ರಯ ಹಗರಣ.
ಸರ್ಕಾರದ ಹಣ ನಾಗರಾಜ್ ಸಂಸ್ಥೆ ಹೆಸರಿಗೆ ಅಡ್ವಾನ್ಸ್ ಆಗಿ ಬಿಡುಗಡೆ ಮಾಡಿಸಿ ಅದನ್ನು ರಾಜಕಾರಣಿಗಳು ಜಮೀನು ಖರೀದಿಗೆ ಬಳಸಿಕೊಂಡು ನಾಗರಾಜ್ ರನ್ನು ಬಲಿ ಪಶು ಮಾಡಿದರು.
ನಂತರ ನಾಗರಾಜ್ ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬೃಹತ್ ಗೋದಾಮುಗಳ ನಿರ್ಮಿಸಿದರು ಅದನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ ಬಾಡಿಗೆ ನೀಡಿದರು.
ಶಿವಮೊಗ್ಗ ಜಿಲ್ಲೆಯ ಮೆಕ್ಕೆಜೋಳವನ್ನು ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸಿ ಅದನ್ನು ಈ ಗೋದಾಮಿನಲ್ಲಿ ದಾಸ್ತಾನು ಮಾಡಲು ಇವರ ಗೋದಾಮುಗಳು ಬಾಡಿಗೆಗೆ ಪಡೆಯಿತು.
ಈ ಮೆಕ್ಕೆಜೋಳ ಖರೀದಿ ಮಾಡಿದ ವಿದೇಶಿ ಕಂಪನಿಗಳ ಹಡುಗಿಗೆ ಮಂಗಳೂರು ಬಂದರಿಗೆ ಟ್ರಾನ್ಸ್ ಪೋರ್ಟೆಶನ್ ಮಾಡಲು ನಾಗರಾಜ್ ನೂರಾರು ಲಾರಿ ತಂದರು, ಆಗ ಈ ದಾಸ್ತಾನು ಟ್ರಾನ್ಸ್‌ಪೋರ್ಟಿಶನ್ ದಂದೆ ದೊಡ್ಡ ಮಟ್ಟದಲ್ಲಿ ನಡೆಯಿತು.
ಆದರೆ ಇಲ್ಲೂ ಅವರ ಅದೃಷ್ಟ ಕೈಕೊಟ್ಟಿತು,ನಾಗರಾಜ್ ಅವರಿಗೆ ಶಿವಮೊಗ್ಗ ಡಿಸಿಸಿ ಬ್ಯಾಂಕಿನಲ್ಲಿ ಸಾಲ ಸುಮಾರು 40 ಕೋಟಿ ಅಷ್ಟಿರಬಹುದು ಖಾಸಾಗಿಯಾಗಿಯೂ 7 ರಿಂದ 8 ಕೋಟಿ ಇರಬಹುದು ಆದರೆ ಅದರ ಎರಡರಷ್ಟು ಮೌಲ್ಯದ ಅವರ ಆಸ್ತಿ ಇದೆ ಅದನ್ನು ಸರಿಪಡಿಸಿ ಅವರ ಕನಸಾಗಿದ್ದ ಸುರಕ್ಷಾ ವೇರ್ ಹೌಸ್ ಕಾರ್ಪೋರೇಷನ್ ಮಾಡಬೇಕೆಂಬ ಯೋಜನೆ ಅವರಲ್ಲಿತ್ತು.
ಮೊನ್ನೆ ಬೆಂಗಳೂರಿಂದ ಇನ್ನೋವ ಕಾರಿನಲ್ಲಿ ಪತ್ನಿ ಜೊತೆ ಶಿವಮೊಗ್ಗಕ್ಕೆ ಬರುವಾಗ ಅರಸಿಕೆರೆಯಲ್ಲಿ ಡ್ರೈವರ್ ಅಚಾತುರ್ಯದಿಂದ ಬ್ಯಾರಿಕೇಡ್ ಗೆ ಆಕ್ಸಿಡೆಂಟ್ ಆಗಿ ನಾಗರಾಜ್ ಗೆ ತೀವ್ರ ಸ್ವರೂಪದ ಪೆಟ್ಟುಗಳಾಗಿತ್ತು.
ಬೆಂಗಳೂರಿನಲ್ಲಿ ಚಿಕಿತ್ಸೆಗೂ ಚೇತರಿಸಿಕೊಳ್ಳಲಿಲ್ಲ ಇವತ್ತು ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ, ಅವರ ಆತ್ಮಕ್ಕೆ ಸದ್ಗತಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ.
ಯಶಸ್ಸಿಗೆ ಹಲವು ಅಪ್ಪ೦ದಿರು ಇರುತ್ತಾರೆ ಆದರೆ ಸೋಲು ಮಾತ್ರ ಅನಾಥ ಎಂಬ ಗಾದೆ ಜನ ವಾರ್ತೆ ನಾಗರಾಜ್ ಜೀವನದಲ್ಲಿ ಸುಳ್ಳಾಗಲಿಲ್ಲ, ಅವರಲ್ಲಿನ ಮಹತ್ವಾಕಾಂಕ್ಷೆ ದೊಡ್ಡ ಕಾಪೋ೯ರೇಟ್ ಉದ್ಯಮಿ ಮಾಡುತ್ತದೆಂಬ ನನ್ನ ನಿರೀಕ್ಷೆ ಹುಸಿ ಆಯಿತು.
ಅವರಿಂದ ಲಾಭ ಪಡೆದವರೆಲ್ಲ ಹಿಂದಿನಿಂದ ಅವರನ್ನು ಹೀಗಳೆಯುತ್ತಿದ್ದರು,ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ G.S. ನಾಗರಾಜ್ ಇನ್ನು ನೆನಪು ಮಾತ್ರ.
Comments
Post a Comment