Blog number 1225. ಇತಿಹಾಸ ಪ್ರಸಿದ್ಧ ಕೆಳದಿ ರಾಜವಂಶಸ್ಥರ ಕುಲದೇವತೆ ಸಾಗರದ ಮಾರಿಕಾಂಭಾ ಚರಿತ್ರೆ, ಸಾಗರ ಪಟ್ಟಣ ನಿಮಾ೯ತೃ ಕೆಳದಿ ರಾಜ ವೆಂಕಟಪ್ಪ ನಾಯಕರ ಹೆಸರು ಚಿರಸ್ಥಾಯಿಗೊಳಿಸುವ ಕೆಲಸ ಆಗಬೇಕಾಗಿದೆ.
#ಸಾಗರ_ಪಟ್ಟಣ_ನಿರ್ಮಿಸಿದ_ಕೆಳದಿ_ರಾಜ_ವೆಂಕಟಪ್ಪನಾಯಕರಿಂದ_ಆರಾದಿಸಲ್ಪಟ್ಟಿತ್ತು.
#ರಾಜ_ವೆಂಕಟಪ್ಪನಾಯಕ_ಯುದ್ಧಕ್ಕೆ_ಹೋಗುವಾಗ_ಕುಲದೇವತೆ_ಆಗಿ_ಸ್ವೀಕರಿಸುತ್ತಾರೆ.
#ಯುದ್ದ_ಗೆದ್ದು_ಬಂದಾಗ_ಊರ_ಹೊರಗಿದ್ದ_ದೇವಿಯ_ಹೆಜ್ಜೆ_ಗುರುತು_ಊರ_ಒಳಗೆ_ತಂದು_ಪ್ರತಿಷ್ಟಾಪಿಸಿದರು.
#ಈ_ದೇವಾಲಯ_1950ರಲ್ಲಿ_ಪುನಃ_ಊರ_ಹೊರಗೆ_ಸ್ಥಳಾಂತರಿಸುವ_ಪ್ರಯತ್ನ_ಪ್ಲೇಗ್_ರೋಗ_ಹರಡಿದ್ದರಿಂದ_ಕೈಬಿಡಲಾಯಿತು.
#ಸಾಗರದ_ಕುಲುಮೆ_ಪಾಪಣ್ಣ_1960ರಲ್ಲಿ_ಎಂಟು_ಸಾವಿರ_ರೂಪಾಯಿ_ವೆಚ್ಚದಲ್ಲಿ_ದೇವಾಲಯ_ಸ್ವರೂಪ_ನೀಡಿದರು.
#ಗುಡಿಗಾರ_ಜಡೆಮ೦ಜಪ್ಪರಿಂದ_1989ರಿಂದ_ಶಾಶ್ವತ_ಮರದ_ವಿಗ್ರಹ_ಕೆತ್ತಿಸಲಾಯಿತು.
#ಶಿವಮೊಗ್ಗದ_ಪ್ರಖ್ಯಾತ_ಶಿಲ್ಪಿ_ಕಾಶೀನಾಥರಿಂದ_72ಸಾವಿರ_ವೆಚ್ಚದಲ್ಲಿ_ನೂತನ_ಗೋಪುರ_ನಿಮಾ೯ಣವಾಯಿತು.
#ಪ್ರಮುಖರಾದ_ನೀಲಪ್ಪ_ಬೋಜಪ್ಪ_ಲಿಂಗಪ್ಪ_ಪುತ್ತೂರಾಯರು_ಜಿ_ಆರ್_ಜಿ_ನಗರ್_ಮುಂತಾದವರು
#ಹೊರತಾಲ್ಲೂಕಿನ_ದಾನಿಗಳಿಂದಲೂ_ದೇಣಿಗೆ_ಸಂಗ್ರಹಿಸಿದ್ದರು.
#ಉತ್ತರಕನ್ನಡ_ಜಿಲ್ಲೆಯ_ಸಿರ್ಸಿ_ಶಿವಮೊಗ್ಗ_ಜಿಲ್ಲೆಯ_ಸಾಗರದ_ಮಾರಿಕಾಂಭಾ_ಜಾತ್ರೆಗಳು_ರಾಜ್ಯದಲ್ಲೇ_ದೊಡ್ಡ_ಜಾತ್ರೆ.
ಜಾತ್ರೆಯಿ೦ದ ಜಾತ್ರೆಗೆ ಸಾಗರದ ಇತಿಹಾಸ ಪ್ರಸಿದ್ಧ ಮಾರಿಕಾಂಬಾ ಜಾತ್ರೆಗೆ ಸೇರುವ ಜನಸ್ತೋಮ ಮತ್ತು ಜಾತ್ರಾ ಸಮಿತಿಯ ಆದಾಯ ದುಪ್ಪಟ್ಟು ಮಾಡುವ ಪರಿ ನೋಡಿದರೆ ಮುಂದಿನ ದಿನಗಳಲ್ಲಿ ಇದು ಇನ್ನೂ ದೊಡ್ಡ ಮಟ್ಟದ ಜಾತ್ರೆ ಆಗುವುದು ನಿಸ್ಸಂಶಯ.
ಈಗಿನ ಸಾಗರ ಪಟ್ಟಣವನ್ನು ತನ್ನ ಅಜ್ಜ ಕೆಳದಿ ರಾಜ ಸದಾಶಿವ ನಾಯಕರ ಸ್ಮರಣಾರ್ಥವಾಗಿ ನಿರ್ಮಿಸಿದವರು ಕೆಳದಿ ರಾಜ ವೆಂಕಟಪ್ಪ ನಾಯಕರು (1582-1629) ಆಗ ಅವರು ಈ ಪಟ್ಟಣಕ್ಕೆ ಸದಾಶಿವ ಸಾಗರ ಎಂದೇ ನಾಮಕರಣ ಮಾಡಿದ್ದರು.
ಈಗ 450 ವರ್ಷಗಳಲ್ಲಿ ಸದಾಶಿವ ಮರೆತು ಸಾಗರ ಅನ್ನುವುದು ಚಾಲ್ತಿಯಲ್ಲಿದೆ.
ಆಗ ದೇವಿಯ ಜೋಡು ಹೆಜ್ಜೆ ಗುರುತಿನ ಶಿಲಾ ವಿಗ್ರಹ ಊರ ಹೊರಗೆ ಸಣ್ಣ ಗುಡಿಯಲ್ಲಿ ನಿರ್ಮಿಸಲ್ಪಟ್ಟಿತ್ತು ಯುದ್ದಕ್ಕೆ ಹೋಗುವ ಸಂದರ್ಭ ಬಂದಾಗ ರಾಜ ವೆಂಕಟಪ್ಪ ನಾಯಕರು ಈ ದೇವಿಯನ್ನು ಕುಲದೇವತೆಯಾಗಿ ಸ್ವೀಕರಿಸಿ ಯುದ್ದದ ಗೆಲುವಿಗೆ ಪ್ರಾರ್ಥಿಸುತ್ತಾರೆ.
ಯುದ್ದದಲ್ಲಿ ಗೆದ್ದು ಬಂದಾಗ ಊರ ಹೊರಗಿನ ದೇವಿಯ ಹೆಜ್ಜೆ ಗುರುತಿನ ಶಿಲಾ ವಿಗ್ರಹಗಳನ್ನು ಈಗಿನ ಸ್ಥಳವಾದ ಪಟ್ಟಣದ ಮಧ್ಯಬಾಗದ ಮೂರು ರಸ್ತೆ ಸೇರುವ ಜಾಗದಲ್ಲಿ ರಾಜ ವೆಂಕಟಪ್ಪ ನಾಯಕರು ಸ್ಥಾಪಿಸುತ್ತಾರೆ.
ಸಣ್ಣ ಕಲ್ಲಿನ ಗುಡಿ ಆಗಿದ್ದ ಈ ದೇವಿ ದೇವಾಲಯ 1950 ರಲ್ಲಿ ಸಾಗರದ ಪುರ ಪ್ರಮುಖರು ಸೇರಿ ಪುನಃ ಊರ ಹೊರಗೆ ದೇವಿ ದೇವಸ್ಥಾನ ಸ್ಥಳಾಂತರಿಸುವ ಯೋಚನೆ ಮಾಡುವಾಗಲೇ ಪ್ಲೇಗ್ ರೋಗ ಉಲ್ಬಣಿಸಿದ್ದರಿಂದ ಈ ಯೋಜನೆ ಕೈಬಿಡಲಾಯಿತು.
1960 ರಲ್ಲಿ ಸಾಗರದ ಕುಲುಮೆ ಪಾಪಣ್ಣ ಎಂಬುವವರು 8 ಸಾವಿರ ರೂಪಾಯಿ ವೆಚ್ಚದಲ್ಲಿ 8 ಸ್ಥಂಭಗಳ ಮೇಲೆ ಛಾವಣಿ ನಿರ್ಮಿಸಿ ಮೊದಲ ಭಾರಿಗೆ ದೇವಾಲಯದ ರೂಪ ಕೊಟ್ಟರು.
ರಲ್ಲಿ 72 ಸಾವಿರ ವಿನಿಯೋಗಿಸಿ ಶಿವಮೊಗ್ಗದ ಶಿಲ್ಪಿ ಕಾಶೀನಾಥರಿಂದ ನೂತನ ರಥ ಆಕೃತಿಯ ಬೃಹತ್ ಗೋಪುರದ ಸಾಗರದ ಮಾರಿಕಾಂಭಾದೇವಾಲಯ ನಿರ್ಮಾಣವಾಗಿದೆ ಈ ಸಂದರ್ಭದಲ್ಲಿ ಹಿರಿಯರಾದ S. K. ನೀಲಪ್ಪನವರು, ಮಡಿವಾಳ ಸಮಾಜದ ಬೋಜಪ್ಪನವರು, ಕುರುಬರ ಸಮಾಜದ ಲಿಂಗಪ್ಪನವರು, ಉಧ್ಯಮಿ ಪುತ್ತೂರಾಯರು,ಹೋರಾಟಗಾರ ಜಿ.ಆರ್.ಜಿ.ನಗರ್ ಮುಂತಾದವರ ಸೇವೆ ಅವಿಸ್ಮರಣಿಯ ಈ ಗೋಪುರ ನಿರ್ಮಾಣಕ್ಕೆ ಹೊರ ತಾಲ್ಲೂಕುಗಳ ದಾನಿಗಳಿಂದಲೂ ದೇಣಿಗೆ ಸಂಗ್ರಹಿಸಲಾಗಿತ್ತು.
1989 ರಲ್ಲಿ ಪ್ರತಿ ಜಾತ್ರೆಗೆ ಹೊಸದಾಗಿ ಮರದಿಂದ ದೇವಿ ವಿಗ್ರಹ ನಿರ್ಮಿಸುವ ಪದ್ಧತಿ ಬದಲಾಯಿಸಿ ಖಾಯಂ ಮರದ ಮರು ಜೋಡಿಸುವ 14 ಅಡಿ ಎತ್ತರದ ಸುಂದರ ವಿಗ್ರಹವನ್ನು ಆಗಿನ ಪ್ರಖ್ಯಾತ ಗುಡಿಗಾರರಾದ ಜಡೆ ಅಣ್ಣಪ್ಪ ಗುಡಿಗಾರರಿಂದ ನಿರ್ಮಿಸಲಾಗಿದ್ದು 33 ವರ್ಷದಿಂದ (2023ರ ಜಾತ್ರೆಗೆ) ಪ್ರತಿ ಜಾತ್ರೆಗೆ ಬಳಸಲಾಗುತ್ತಿದೆ.
1949 ರಲ್ಲಿ ಒಂದು ದಿನದ ಮಾರಿಕಾಂಬಾ ಜಾತ್ರೆ ನಂತರ 3 ದಿನದ ಜಾತ್ರೆ, ನಂತರ 5 ದಿನದ ಜಾತ್ರೆ, 7 ದಿನದ ಜಾತ್ರೆ ಆಗಿ ಈಗ 9 ದಿನದ ಜಾತ್ರೆಯಾಗಿದೆ.
ಕೆಳದಿ ರಾಜವಂಶದ ಕುಲದೇವತೆ ಆಗಿದ್ದ ಸಾಗರದ ಮಾರಿಕಾಂಬಾ ದೇವಿಯ ಚರಿತ್ರೆ ಇದಾಗಿದೆ.
ಸಾಗರ ಪಟ್ಟಣದ ನಿರ್ಮಾತೃ, ರಾಜವಂಶದ ಕುಲದೇವತೆಯಾಗಿ ಮಾರಿಕಾಂಬಾ ದೇವಿ ಸ್ವೀಕರಿಸಿ ಯುದ್ದದಲ್ಲಿ ಗೆದ್ದು ಬಂದು ಊರ ಹೊರಗಿನ ದೇವಿಯ ಶಿಲಾ ಪಾದುಕೆಗಳ ಗುಡಿ ಸಾಗರದ ಈಗಿನ ಮೂರು ರಸ್ತೆ ಸೇರುವ ಪಟ್ಟಣದ ಕೇಂದ್ರ ಸ್ಥಾನದಲ್ಲಿ ಸ್ಥಾಪಿಸಿದ ಕೆಳದಿ ರಾಜ ವೆಂಕಟಪ್ಪ ನಾಯಕರು ಮಾತ್ರ ಮರೆತೇ ಹೋಗಿರುವುದು ವಿಪರ್ಯಾಸವೇ ಸರಿ, ಕೆಳದಿ ರಾಜ ವೆಂಕಟಪ್ಪ ನಾಯಕರ ಸ್ಮರಣೆಯ ಸ್ಮಾರಕವನ್ನು ಮಾರಿಕಾಂಬಾ ಸಮಿತಿ ನಿರ್ಮಿಸಿ ಅವರ ನೆನಪು ಸ್ಮರಣೀಯ ಮಾಡಬಹುದಾಗಿದೆ.
Comments
Post a Comment