#ಭಾಗ_1.
https://youtu.be/sXs_jc79lng
#ಚಿಕ್ಕಮಗಳೂರು_ಜಿಲ್ಲೆಯಿಂದ_ಮೂಡಿಬಂದ_ಉದಯೋನ್ಮುಖ_ಸಾಹಿತಿ
#ರಾಜೇಶ್ವರಿತೇಜಸ್ವಿ_ಇವರ_ಪುಸ್ತಕ_ಮೆಚ್ಚಿ_ಪ್ರೋತ್ಸಾಹಿಸಿದ್ದರು.
#ಪೇಸ್_ಬುಕ್_ಜಗತ್ತಿನಲ್ಲಿ_ಸಿಕ್ಕ_ಮಿತಬಾಷಿ_ಗೆಳೆಯ
#ಇವರ_ನಾಲ್ಕು_ಪುಸ್ತಕಗಳು_ಪ್ರಸಿದ್ದಿ_ಪಡೆದಿದೆ
#ಕಾಡುಹಾದಿಯಜಾಡುಹತ್ತಿ_ಕಾಟೀಹರದತೀರ_ಪ್ಯಾರಾಸ್ಯೆಟ್_ನಾನುನೀವುಜೊತೆಗಿ೦ದಷ್ಟು
#ಶನಿವಾರ_ನನ್ನ_ಕಛೇರಿಯಲ್ಲಿ_ಕುಶಲೋಪರಿ
ಮೊನ್ನೆ ಶನಿವಾರ ದಿನಾಂಕ 18- ಪೆಬ್ರುವರಿ-2023ರ ಮಧ್ಯಾಹ್ನ ಚಿಕ್ಕಮಗಳೂರಿನ ಉದಯೋನ್ಮುಖ ಸಾಹಿತಿ ಕಾರ್ತಿಕಾದಿತ್ಯ ಬೆಳಗೋಡು ಅವರು ಪೋನಾಯಿಸಿ ನನ್ನ ಲಾಡ್ಜ್ ಎದುರಿನಿಂದ ಸಿಗಂದೂರು ಹೋಗುವ ದಾರಿಯಲ್ಲಿರುವುದಾಗಿ ತಿಳಿಸಿದಾಗ ಅವರನ್ನು ಆಹ್ವಾನಿಸಿದೆ.
ಈಗಾಗಲೇ ಇವರು ಬರೆದು ಪ್ರಕಟಿಸಿರುವ ನಾಲ್ಕು ಪುಸ್ತಕಗಳು "ನಾನು ನೀವು ಜೊತೆಗೊಂದಿಷ್ಟು" -"ಕಾಡು ಹಾದಿಯ ಜಾಡು ಹತ್ತಿ" - "ಕಾಟೇಹರದ ತಿರುವು" - "ಪ್ಯಾರಾ ಸೈಟ್" ಪುಸ್ತಕ ಇವರ ಕೆಂಜಳಿಲು ಪ್ರಕಾಶನದಿಂದ ಕಾನ್ ಕ್ಲೇವ್ ಪಬ್ಲಿಷರ್ ರಿಂದ ಪ್ರಕಟಗೊಂಡು ರಾಜ್ಯದಾದ್ಯಂತ ಸಾಹಿತ್ಯ ಆಸಕ್ತರ ಮನ ಸೆಳೆದಿದೆ.
ಕೃಷಿ- UPVC ಗ್ಲಾಸ್ ವಿಂಡೋ ಉದ್ಯಮ - ಬರವಣಿಗೆ - ಶಾಲೆಗಳಲ್ಲಿ ಪರಿಸರ ಜಾಗೃತಿ ಅಭಿಯಾನ - ಪರಿಸರ ವಿಕೋಪಗಳಾದಾಗ ರೆಸ್ಕ್ಯೂಟಿಂಗಳಲ್ಲಿ ಸೇವೆ ಇತ್ಯಾದಿ ಸದಾ ಚಟುವಟಿಕೆಯಲ್ಲಿರುವ ಇವರು ಈಗ ತಮ್ಮ ಉದ್ಯಮಕ್ಕಾಗಿ ಮೂಡಿಗೆರೆಯ ಬೆಳಗೋಡು ಎಂಬ ಹಳ್ಳಿ ತೊರೆದು ತಾಯಿಯ ಜೊತೆ ಚಿಕ್ಕಮಗಳೂರಲ್ಲಿ ನೆಲೆಸಿದ್ದಾರೆ.
ಮೂಡಿಗೆರೆಯಲ್ಲಿ ಇವರ ಜಮೀನಿನಲ್ಲಿ ಆನೆ ಹಾವಳಿ, ಅಡಿಕೆ ರೋಗಗಳಿಂದ ಕೃಷಿ ಆದಾಯವೂ ಕ್ಷೀಣಿಸಿದೆ ಅಂತೆ.
ಇವರ ಹೆಸರು ಕಾರ್ತಿಕ್ ಗೌಡ ಬೆಳಗೋಡು ಅಂತ ಇವರ ಗೆಳೆಯ ಇವರಿಗೆ ಕಾರ್ತಿಕಾಧಿತ್ಯ ಬೆಳಗೋಡು ಎಂಬ ಕಾವ್ಯನಾಮ ಇಟ್ಟಿದ್ದೇ ಈಗ ಎಲ್ಲೆಡೆ ಇವರು ಕಾರ್ತಿಕಾದಿತ್ಯ ಬೆಳಗೋಡು ಎಂದೇ ಪ್ರಸಿದ್ಧರಾಗಿದ್ದಾರೆ.
ಪೂರ್ಣಚಂದ್ರ ತೇಜಸ್ವಿಯವರ ನೇರ ಸಂಪರ್ಕ ಮಾಡಲಾಗದ ಆ ಕಾಲದ ಮೂಡಿಗೆರೆಯ ವಿದ್ಯಾರ್ಥಿ ಆಗಿದ್ದ ಕಾರ್ತಿಕಾದಿತ್ಯ ಅವರು ತೇಜಸ್ವಿ ಬಗ್ಗೆ ಹೇಳಿದ ನೆನಪಿನ ಮಾತುಗಳು ಈ ವಿಡಿಯೋದಲ್ಲಿದೆ.
ಇವರ ಎಲ್ಲಾ ಪುಸ್ತಕಗಳು ಆನ್ ಲೈನ್ ನಲ್ಲಿ ಲಭ್ಯವಿದೆ
Kannada Loka
086604 04034
https://g.co/kgs/y92DsW
ಇವರ ವಾಟ್ಸಪ್ ಸಂಪರ್ಕ ಸಂಖ್ಯೆ 9008840043.
Comments
Post a Comment