Blog number 1231. ಸಾಗರದ ರವೀಂದ್ರ ಪುಸ್ತಕಾಲಯ ಪ್ರಕಾಶನದ ಯಲ್ಲಣ್ಣ ಅಪ್ಪಾರಾವ್ ದಂತಿ ಅವರ 85ನೇ ಹುಟ್ಟು ಹಬ್ಬ ಮತ್ತು 50 ನೇ ವಿವಾಹ ವಾರ್ಷಿಕೋತ್ಸವದ ಆಚರಣೆ ಸಂದರ್ಭದಲ್ಲಿ ಅವರ ಆತ್ಮೀಯ ವಲಯದವರು ಪ್ರಕಟಿಸಿರುವ ಅಭಿನಂದನಾ ಗ್ರಂಥ ಬುಕ್ ಬ್ರಹ್ಮ
#ಬುಕ್_ಬ್ರಹ್ಮ_ಇದು_ದಂತಕಥೆಯಲ್ಲ_ದಂತಿ_ಕಥೆ
#ಮಾವೆಂಸ_ಪ್ರಸಾದ್_ಡಾ_ಕೆ_ಪ್ರಭಾಕರ್_ಸಂಪಾದಕತ್ವದಲ್ಲಿ
#ನನಗೆ_ಪ್ರೀತಿಯಿಂದ_ಅಂಚೆಯಲ್ಲಿ_ಕಳಿಸಿದ್ದಾರೆ_ದಂತಿ.
ಸಾಗರದ ರವೀಂದ್ರ ಪುಸ್ತಕಾಲಯದ ಸಂಸ್ಥಾಕರಾದ ಯಲ್ಲಣ್ಣ ಅಪ್ಪಾ ರಾವ್ ದಂತಿ ಕನ್ನಡದ ಪ್ರಖ್ಯಾತ ಸಾಹಿತಿಗಳ ಕಾದಂಬರಿಗಳ ಪ್ರಕಟಿಸಿದವರು.
ಇವರು ಪ್ರಕಟಿಸಿದ ದ್ವೀಪಾ, ಹುಲಿಯ ಹಾಲಿನ ಮೇವು, ಎಡಕಲ್ಲು ಗುಡ್ಡದ ಮೇಲೆ, ಕಾಡಿನ ಬೆಂಕಿ,ಗಿರಿ ಕನ್ಯೆ, ಬಯಲು ದಾರಿ ಸಿನಿಮಾ ಆಗಿ ಸೂಪರ್ ಹಿಟ್ ಆಗಿರುವುದು ಒಂದು ದಂತಕಥೆಯೇ ಆಗಿದೆ.
ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದಾಗ ಸಾಗರದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾಯ೯ಪಾಲಕ ಇಂಜಿನಿಯರ್ ಕಛೇರಿಗೆ ಕಾರ್ಯ ನಿಮಿತ್ತ ಹೋದಾಗೆಲ್ಲ ಆ ಕಛೇರಿಯಲ್ಲಿ ಉದ್ಯೋಗಿಗಳಾಗಿದ್ದ ಅಕ್ಕ ಪಕ್ಕದ ಟೇಬಲ್ ಗಳಲ್ಲಿ ನಾ.ಡಿಸೋಜ ಮತ್ತು ದಂತಿ ಕುಳಿತಿರುತ್ತಿದ್ದರು.
ಸಾಗರದ ಸಾಹಿತಿ ವಿಲಿಯಂ ಬರೆದ ಬದುಕು - ಭರವಸೆ ಎಂಬ ವ್ಯಕ್ತಿ ಚಿತ್ರಗಳು ಎಂಬ ಪುಸ್ತಕದಲ್ಲಿ #ಗ್ರ೦ಥ_ಗೆಳೆಯ_ದಂತಿ ಎಂಬ ಅಧ್ಯಾಯ ದಂತಿಯವರ ಪರಿಚಯ ಸಾದನೆಯನ್ನು 2007ರಲ್ಲಿ ಪ್ರಕಟಿಸಿದ್ದಾರೆ.
85ನೇ ಹುಟ್ಟುಹಬ್ಬ ಮತ್ತು 50 ನೆ ವಿವಾಹವಾಷಿ೯ಕೋತ್ಸವದ ಸಂದರ್ಭದಲ್ಲಿ ಅವರ ಆತ್ಮೀಯ ಬಳಗದವರು ಸೇರಿ 248 ಪುಟಗಳ 400 ರೂಪಾಯಿಗಳ ಮುಖ ಬೆಲೆಯ ಸುಂದರವಾಗಿ ಮುದ್ರಿಸಿದ ಅಭಿನಂದನಾ ಗ್ರಂಥ #ಬುಕ್_ಬ್ರಹ್ಮ ಸಾಗರದ ಚಾಮರಾಜಪೇಟೆಯ ಅನಿತಾ ಪ್ರಕಾಶನದಿಂದ ಪ್ರಕಟಿಸಿದ್ದಾರೆ.
ಅಂಚೆಯ ಮೂಲಕ ದಂತಿಯವರು ಕಳಿಸಿದ ಪುಸ್ತಕ ತಲುಪಿತು ನಂತರ ಅವರಿಗೆ ಪೋನು ಮಾಡಿ ಅಭಿನಂದಿಸಿ ಪ್ರತಿ ಬಾರಿ ಅವರು ಪುಸ್ತಕ ಕಳಿಸಿದಾಗಲೆಲ್ಲ ಕೇಳುವಂತೆ ಈ ಪುಸ್ತಕದ ಹಣ ಎಷ್ಟು ಯಾವ ಖಾತೆಗೆ ಜಮಾ ಮಾಡಲಿ ಅಂದಾಗ ದಂತಿಯವರು "ಹಣ ಬೇಡ, ಪ್ರೀತಿಯಿಂದ ಕಳಿಸಿದ್ದೇನೆ ಓದಿ ಪ್ರತಿಕ್ರಿಯಿಸಿ" ಅಂದರು.
ದಂತಿಯವರ ಬಗ್ಗೆ ನಾನು ಬರೆದ ಲೇಖನದ ಲಿಂಕ್ ಇಲ್ಲಿ ಕ್ಲಿಕ್ ಮಾಡಿ ಓದಬಹುದು https://arunprasadhombuja.blogspot.com/2021/09/blog-post_20.html
Comments
Post a Comment