ಇವರು ನಿನ್ನೆ ತಡ ರಾತ್ರಿ ನಮ್ಮ ಊರಿನ ವರಸಿದ್ಧಿವಿನಾಯಕ ಸ್ವಾಮಿ ಜಾತ್ರೆ ಮುಗಿಸಿ ಮನೆಗೆ ಬಂದು ಕುಳಿತಿದ್ದಾಗ ಬಂದರು, ಸುಮಾರು 19 ವಷ೯ ಆಗಿತ್ತು ನನ್ನ ಇವರ ಬೇಟಿ ಆಗದೆ.
ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನನ್ನ ಭಾಗದಲ್ಲಿನ ಉತ್ಸಾಹಿ ಮತ್ತು ಪ್ರಾಮಾಣಿಕ ಕೃಷಿ ಸೇವಕರಾಗಿ ಜನಾನುರಾಗಿಗಳಾಗಿದ್ದರು, ರೈತ ಸ್ನೇಹಿ ಆಗಿದ್ದ ಇವರಂತವರನ್ನ ನಾನು ಈ ವರೆಗೆ ನೋಡಿಲ್ಲ, ಈಗೆಲ್ಲ ಕೃಷಿ ಸೇವಕರು ಯಾರೂ ಅಂತಲೇ ನನಗೆ ಗೊತ್ತಿಲ್ಲ.
ಆನಂದಪುರಂ ನ ಆ ದಿನಗಳಲ್ಲಿ ನಾವೆಲ್ಲ ಯುವಕರು ಹಮ್ಮಿಕೊಳ್ಳುತ್ತಿದ್ದ ಯುವಜನ ಮೇಳ, ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪದೆ೯, ಮೋದಿ ಡಾಕ್ಟರ್ರ ಕಣ್ಣು ಚಿಕಿತ್ಸಾ ಶಿಭಿರಗಳ ಯಶಸ್ವಿಗೊಳಿಸುವಲ್ಲಿ ತೆರೆ ಮರೆಯಲ್ಲಿ ಈ ದಮ೯ ಕುಮಾರರ ಶ್ರಮ ಇರುತ್ತಿತ್ತು.
ನನಗೆ ಇವರ ತಮ್ಮ ಶಿವಮೊಗ್ಗದ ವಕೀಲರಾದ ಜಿ.ನಾಗೇಶನ್ ಹಳೆ ಗೆಳೆಯರು ನಂತರ ಇವರ ಗೆಳೆತನ.
ಈಗ ತೀಥ೯ಳ್ಳಿಯಲ್ಲಿ ನೌಕರಿ, ಮನೆ ಮತ್ತು ಅಡಿಕೆ ತೋಟ ಮಾಡಿಕೊಂಡಿರುವುದಾಗಿ ಹೇಳಿದರು, ಇವರ ಅಣ್ಣ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಮಂಜುನಾಥ ಗೌಡರು ಜಿಲ್ಲಾ ಜೆಡಿಎಸ್ ಅಧ್ಯಕ್ಷರು, ತೀಥ೯ಹಳ್ಳಿಯ ರಾಜಕಾರಣದಲ್ಲಿ ಮಂಜುನಾಥ ಗೌಡರು, ಕಿಮ್ಮನೆ ಮತ್ತು ಆರಗ ಜ್ಞಾನೇಂದ್ರ ಪರಸ್ಪರ ರಾಜಕೀಯ ಕೆಸರೆರಾಚಾಟ ನಡೆದಿದ್ದರು ಎಲ್ಲರ ಜೊತೆ ದಮ೯ ಕುಮಾರರದ್ದು ಪ್ರೀತಿ ವಿಶ್ವಾಸದ ದಮ೯ಕಾರಣ.
ಮೊನ್ನೆ ಇವರ ಮಗಳ ನಿಶ್ಚಿತಾಥ೯ಕ್ಕೆ ಮೂರು ಮುಖಂಡರು ಹಾಜರಿದ್ದರಂತೆ.
ಸಹೋದರ ಮಂಜುನಾಥ ಗೌಡರಿಗೆ ಹೇಳಿ ದಿವ೦ಗತ ಶಾಂತವೇರಿ ಗೋಪಾಲಗೌಡರ 4 ಕಂಚಿನ ಪ್ರತಿಮೆ ಮಾಡಿಸಿ ಗೋಪಾಲಗೌಡರನ್ನ ಮೊದಲ ಚುನಾವಣೆಯಲ್ಲಿ ಸಾಗರ ವಿದಾನ ಸಭಾ ಕ್ಷೇತ್ರದಿಂದ ಸಾಗರದಿಂದ ಆಯ್ಕೆ ಆಗಿದ್ದಕ್ಕೆ ಸಾಗರದಲ್ಲಿ, ಮುಂದೆ ಶಾಸಕರಾಗಿ ಆಯ್ಕೆ ಆದ ತೀಥ೯ಹಳ್ಳಿ ಮತ್ತು ಅವರ ಪ್ರಭಾವ ಕಾಯ೯ ಕ್ಷೇತ್ರಗಳಾಗಿದ್ದ ಸೊರಬ ಮತ್ತು ಹೊಸ ನಗರದಲ್ಲಿ ನಿಮಿ೯ಸಲು ಹೇಳಿ ಅಂದೆ.
ಗೋಪಾಲಗೌಡರ ಮೊದಲ ಆತ್ಮಚರಿತ್ರೆ "ಜೀವಂತ ಜ್ವಾಲೆ" ಬರೆದದ್ದು ಸಮಾಜವಾದಿ ಸಾಹಿತಿ ಕೋಣಂದೂರು ವೆಂಕಪ್ಪ ಗೌಡರ ಅದರ ಬಿಡುಗಡೆಯ ಜವಾಬ್ದಾರಿ ವಹಿಸಿದ್ದು ಆಗಿನ ಯುವ ಮುಖಂಡ ಕಿಮ್ಮನೆ ರತ್ನಾಕರ್, ಆನೆ ಮೇಲೆ ಪ್ರಸ್ತಕ ಮೆರವಣಿಗೆ ಮಾಡಿಸಿದ್ದರು ಅಂತ ವೆಂಕಪ್ಪ ಗೌಡರು ನೆನಪಿಸಿ ಕೊಳ್ಳುತ್ತಿದ್ದನ್ನ ನೆನಪಿಸಿದೆ.
ಸಕಾ೯ರಿ ಸೇವೆಯಲ್ಲಿ ಇರುವುದರಿಂದ ಮಿತ್ರ ದಮ೯ ಕುಮಾರ್ ಏನೂ ಪ್ರತಿಕ್ರಿಯಿಸಲಿಲ್ಲ ತೀಥ೯ಳ್ಳಿಯಲ್ಲಿ ಇವರಿಗೆ ರಾಜಕಾರಣ ದಮ೯ ಸಂಕಟ ಕೂಡ.
ಬಹಳ ವಷ೯ದ ನಂತರ ಆತ್ಮೀಯ ಗೆಳೆಯರ ಬೇಟಿ ಮೂರು ದಿನದ ಜಾತ್ರೆ ಆಯಾಸವನ್ನೆ ಮರೆಸಿಬಿಟ್ಟಿತು.
Comments
Post a Comment