Blog number 1239. ಸಾಗರದ ಖ್ಯಾತ ಉದ್ಯಮಿ ಟಿಪ್ ಟಾಪ್ ಇಬ್ರಾಹಿಂ ಸಾಹೇಬರು 50 ವರ್ಷದ ಹಿಂದೆ ಆನಂದಪುರಂ ವಿಲೇಜ್ ಪಂಚಾಯತ್ ಅಧ್ಯಕ್ಷರಾಗಿದ್ದರು ಆಗ ಅವರು ಆಚಾಪುರದಿಂದ ಗೆದ್ದು ಬಂದಿದ್ದರು ಆಗ ನಮ್ಮ ತಂದೆ ಇಡೀ ಪಂಚಾಯತ್‌ನಲ್ಲಿ ಅತ್ಯಂತ ಹೆಚ್ಚು ಮತದ ದಾಖಲೆಯಲ್ಲಿ ಯಡೇಹಳ್ಳಿ - ತಾವರೇಹಳ್ಳಿ ಕ್ಷೇತ್ರದಿಂದ ಮತ್ತು ಸೈಕಲ್ ಶಾಪ್ ಸಿರಿಲಣ್ಣ ಆನಂದಪುರಂ ಕ್ಷೇತ್ರದಿಂದ ಗೆದ್ದಿದ್ದರು.
ಸಾಗರದ ಟಿಪ್ ಟಾಪ್ ಗ್ರೂಪ್ ಎಂದ ತಕ್ಷಣ ನೆನಪಿಗೆ ಬರುವುದು ಟಿಪ್ ಟಾಪ್ ಇಬ್ರಾಹಿಂ ಸಾಹೇಬರು.
ಆನಂದಪುರಂ ವಿಲೇಜ್ ಪಂಚಾಯತ್ ಉಪಾಧ್ಯಕ್ಷರಾಗಿದ್ದರು.
ಈಗ ಆನಂದಪುರಂ - ಯಡೇಹಳ್ಳಿ - ಆಚಾಪುರ ಪ್ರತ್ಯೇಕ ಗ್ರಾಮ ಪಂಚಾಯತ್
ಆಚಾಪುರ ಕ್ಷೇತ್ರದಿಂದ ಟಿಪ್ ಟಾಪ್ ಇಬ್ರಾಹಿಂ ಸಾಹೇಬರು ಆಯ್ಕೆ ಆಗಿದ್ದರು.
ಒಮ್ಮೆ ಸಾಗರದ ಮುನ್ಸಿಪ್ ಕೋಟ್೯ಲ್ಲಿ ಕೇಸ್ ಒಂದರ ಹಿಯರಿಂಗ್ ಗೆ ಹೋಗಿ ನಿಂತಿದ್ದೆ ಯಾರೋ ಬಂದು ನನ್ನ ಎರಡೂ ಕಣ್ಣು ಹಿಂದಿನಿಂದ ಮುಚ್ಚಿದರು ಇದು ಪರಿಚಿತರ ಕುಶಾಲಿನ ಕೆಲಸ ಅ೦ತ ಅವರ ಕೈ ಬಿಡಿಸಿ ನೋಡಿದರೆ ಇಬ್ರಾಹಿO ಸಾಹೇಬರು ! ಅಲ್ಲಿ ನೆರೆದಿದ್ದ ವಕೀಲರಿಗೆ ಅರುಣ್ ಪ್ರಸಾದ್ ತಂದೆ ಕೃಷ್ಣಪ್ಪ ನಾನು ತುಂಬಾ ಗೆಳೆಯರು ಎಂದರು.
ಟಿಪ್ ಟಾಪ್ ಇಬ್ರಾಹಿಂ ಸಾಹೇಬರು ಮತ್ತು ಅವರ ಸಹೋದರರು 70 ರ ದಶಕದಲ್ಲಿ ಆನಂದಪುರಂ ನಲ್ಲಿ ಯಶಸ್ವಿ ಉದ್ದಿಮೆದಾರರಾಗಿದ್ದರು ಆಗ ಆನಂದಪುರಂ ವಿಲೇಜ್ ಪಂಚಾಯಿತ್ ಗೆ ಯಡೇಹಳ್ಳಿ, ಆಚಾಪುರ ಸೇರಿತ್ತು ಈಗ ಇವೆಲ್ಲ ಇದೇ ಹೆಸರಿನ ಪ್ರತ್ಯೇಕ ಗ್ರಾಮ ಪಂಚಾಯತ್ ಗಳಾಗಿದೆ, ಆ ಸಂದಭ೯ದಲ್ಲಿ ಟಿಪ್ ಟಾಪ್ ಇಬ್ರಾಹಿಂ ಸಾಹೇಬರು ಆಚಾಪುರದಿಂದ, ನಮ್ಮ ತಂದೆ ಯಡೇಹಳ್ಳಿಯಿಂದ ವಿಲೇಜ್ ಪಂಚಾಯತ್ ಸದಸ್ಯರಾಗಿ ಆಯ್ಕೆ ಆಗಿದ್ದರು.
ಖ್ಯಾತ PWD ಗುತ್ತಿಗೆದಾರರಾಗಿದ್ದ ತಿರುಮಲಾಚಾರ್ ಅಧ್ಯಕ್ಷರಾಗಿ, ಟಿಪ್ ಟಾಪ್ ಇಬ್ರಾಹಿಂ ಸಾಹೇಬರು ಉಪಾಧ್ಯಕ್ಷರಾಗಿದ್ದಾಗ ಆಗಿನ ಶಾಸಕರಾಗಿದ್ದ ಎಲ್.ಟಿ. ತಿಮ್ಮಪ್ಪ ಹೆಗ್ಗಡೆ, ಮುರುಘಾ ರಾಜೆಂದ್ರ ಮಠದ ಸ್ವಾಮಿಗಳು, ನಮ್ಮ ತಂದೆ ಮತ್ತು ಆಗಿನ ಪಂಚಾಯತ್ ಸದಸ್ಯರಾದ ಸಿರಿಲ್ ಡಿಕಾಸ್ಟಾ, ಕರುಣಾಕರನ್, ಶ್ರೀಮತಿ ಶಾಂತಮ್ಮ ಇದ್ದಾರೆ, ಉಳಿದವರು ಗೊತ್ತಾಗುತ್ತಿಲ್ಲ, ಈ ಪೋಟೋದಲ್ಲಿರುವ ನನ್ನ ತಂದೆ, ಸದಸ್ಯ ಕರುಣಾಕರ್, ಅಧ್ಯಕ್ಷರಾದ ತಿರುಮಲಾಚಾರ್, ಶ್ರೀಮತಿ ಶಾಂತಮ್ಮಈಗಿಲ್ಲ.
ಹಳೆಯ ಪೋಟೊ ಸಂಗ್ರಹದಲ್ಲಿ ಸಿಕ್ಕಿದ ಈ ಕಪ್ಪು ಬಿಳಪು ಚಿತ್ರ 45 ವಷ೯ದ ಇತಿಹಾಸ ಹೇಳುತ್ತಿದೆ.
Comments
Post a Comment