#ಗಾಂಧಿಜೀ ವಿರುದ್ಧ ಕೆಲ ಸಂಘಟನೆಗಳು ಅಪಸ್ವರ ಎತ್ತುತ್ತಿದ್ದಾರೆ ಈ ಸಂದಭ೯ದಲ್ಲಿ ಅರವಿಂದ ಚೊಕ್ಕಾಡಿ ಸಂಗ್ರಹಿಸಿದ ಗಾಂಧಿ - ಮೌಲ್ಯಗಳ ನಡುವಿನ ಮೌನ ಗಾಂಧೀಜಿಯವರ ಬಗ್ಗೆ ಸಂಕ್ಷಿಪ್ತವಾಗಿ ಹೆಚ್ಚು ತಿಳಿಯುವಂತ ಪುಸ್ತಕ #
*ದಾಸ್ಯದ ವಿರುದ್ಧದ ಹೋರಾಟಕ್ಕಾಗಿ ಬ್ರಿಟೀಷರಿಗೆ ವಿರೋದಿ.
* ದಲಿತೋದ್ದಾರ ಕಾಯ೯ಕ್ಕಾಗಿ ಮೇಲು ಜಾತಿಯ ಹಿಂದೂಗಳಿಗೆ ವಿರೋದಿ.
* ರಾಮ ಕೃಷ್ಣ ಎಂಬಿತ್ಯಾದಿ ಮೇಲು ಜಾತಿಯವರು ಮೇಲು ಜಾತಿಯವರು ಆರಾದಿಸುವ ದೇವರುಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳ ಕಾರಣಕ್ಕಾಗಿ ಕೆಳ ಜಾತಿಗಳ ಸುಶಿಕ್ಷಿತರಿಗೆ ವಿರೋದಿ.
*ಗೋಹತ್ಯಾ ನಿಶೇಧದ0ತಾ ಆಲೋಚನೆಗಳು, ಹಿಂದೂ ದಮ೯ದ ಮೇಲಿನ ಶ್ರದ್ದೆಗಳಿಗಾಗಿ ಮುಸ್ಲಿಮರಿಗೆ ವಿರೋದಿ ಅಂತ ಪ್ರಸ್ತಾವನೆಯಲ್ಲಿ ಅರವಿಂದರು ಸರಿಯಾಗಿ ಪ್ರಸ್ತಾವಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ 36ನೆ ಕಾಂಗ್ರೇಸ್ ಅಧಿವೇಶನದಲ್ಲಿ 12 ವಷ೯ದ ಬಾಲೆ ಆಗಿದ್ದ ಗಂಗೂಬಾಯಿ ಹಾನಗಲ್ "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಎಂಬ ಪ್ರಾಥ೯ನೆ ಗಾಂದೀಜಿಯವರಿಂದ ಪ್ರಶಂಸಲ್ಪಟ್ಟಿದ್ದು.
ಮOಗಳೂರಿನಲ್ಲಿ ಗಾಂಧಿ ದೇವಸ್ಥಾನ ನಿಮಾ೯ಣ ಆಗಿರುವುದು, ನಾಟಿ ವೈದ್ಯದ ಬಗ್ಗೆ ನಂಬಿಕೆ ಇದೆಲ್ಲ ಲೇಖನ ಈ ಪ್ರಸ್ತಕದಲ್ಲಿದೆ.
ದೇಶಕ್ಕೆ ಸ್ವಾತಂತ್ರ ಬಂದರೆ ಅದು ಜನಸಾಮನ್ಯರ ಶ್ರಮದ ಫಲವಾಗಿ ಬರಲಿದೆಯೆ ಹೊರತು ದೊಡ್ಡ ಮನುಷ್ಯರ ಬಾಷಣಗಳಿ೦ದಾಗಿ ಅಲ್ಲ ಎಂದು ಗಾಂಧಿ ಹೇಳಿದ ಕಟು ಸತ್ಯ, 1931ರಲ್ಲಿ ಲಂಡನ್ನಲ್ಲಿ ಖ್ಯಾತ ನಟ ಚಾಲಿ೯ ಚಾಪ್ಲಿನ್ ಭೇಟಿ.
"ಐತಿಹಾಸಿಕ ಏಸು ಕ್ರಿಸ್ತನ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾಳೆ ಯಾರಾದರೂ ಇತಿಹಾಸಕಾರರು ಏಸು ಕ್ರಿಸ್ತ ಇರಲಿಲ್ಲ, ಬೆಟ್ಟದ ಉಪದೇಶಗಳು ಲೇಖಕನ ಕಲ್ಪನೆ ಎಂದು ಸಾಬೀತು ಮಾಡಿದರೂ ನನ್ನ ಮಟ್ಟಿಗೆ ಬೆಟ್ಟದ ಉಪದೇಶದ ಏಸು ಕ್ರಿಸ್ತ ಸತ್ಯವೇ ಆಗಿರುತ್ತಾನೆ " ಎಂಬ ಅದ್ಯಾಯ ಇವತ್ತು ಗಾಂಧಿ ವಿರೋದಿಸುವವರಿಗೆ ಗಾಂಧಿ ಸಂದೇಶ ಕೂಡ.
Comments
Post a Comment