Blog number 1211. ಭಾರತ್ ಜೋಡೋ ಯಾತ್ರೆ ಪೂಣ೯ 3750 ಕಿ.ಮಿ. ಸಾಗಿದ ಶಿವಮೊಗ್ಗದ ಏಕೈಕ ದೇಶ ಯಾತ್ರಿ ಡಾಕ್ಟರ್ ಸುಶೃತ್ ತೀರ್ಥಹಳ್ಳಿಯ ಯಡೂರಿನ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಕೀಲ ದಿವ೦ಗತ ಹಿರಿಯಣ್ಣ ಗೌಡರ ಅಣ್ಣ ಮೈಸೂರಿನ ಗೋಪಾಲಗೌಡ ಶಾಂತವೇರಿ ಮೆಮೋರಿಯಲ್ ಹಾಸ್ಪಿಟಲ್ ಡಾ. ವಿಷ್ಣುಮೂರ್ತಿ ಅವರ ಪುತ್ರ
https://youtu.be/8rRmhdXVK9E
#ಶಿವಮೊಗ್ಗದ_ಏಕೈಕ_ಭಾರತ್_ಯಾತ್ರಿ
#ರಾಜ್ಯದ_ಆರು_ಕನ್ನಡಿಗರಲ್ಲಿ_ಒಬ್ಬರು.
#ತೀರ್ಥಹಳ್ಳಿಯ_ಯಡೂರು_ಮೂಲದ_ಡಾಕ್ಟರ್_ಸುಶೃತ್
#ಅಮೇರಿಕಾದ_ಯುವ_ನ್ಯೂರಾಲಿಜಿಸ್ಟ್_ಡಾಕ್ಟರ್.
#ಇವರು_ತೀರ್ಥಹಳ್ಳಿಯ_ಜಿಲ್ಲಾಪಂಚಾಯಿತಿ_ಸದಸ್ಯರಾಗಿದ್ದ_ಹಿರಿಯಣ್ಣಗೌಡರ_ಅಣ್ಣನ_ಮಗ.
#ಡಾಕ್ಟರ್_ವಿಷ್ಣುಮೂರ್ತಿ_ಮೈಸೂರಿನಲ್ಲಿ_ಗೋಪಾಲಗೌಡ_ಶಾಂತವೇರಿ_ಸ್ಮಾರಕ_ಆಸ್ಪತ್ರೆ_ನಿರ್ಮಿಸಿದ್ದಾರೆ.
ಮೈಸೂರಿನಲ್ಲಿ ನಾನು ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ ಮತ್ತು ಸಮಾಜವಾದಿ ಲೇಖಕ ಕೋಣಂದೂರು ವೆಂಕಪ್ಪ ಗೌಡರ ಜೊತೆ ಡಾಕ್ಟರ್ ವಿಷ್ಣು ಮೂತಿ೯ ಅವರನ್ನು ಅವರ ಗೋಪಾಲಗೌಡ ಶಾಂತವೇರಿ ಸ್ಮಾರಕ ಆಸ್ಪತ್ರೆಯಲ್ಲಿ ಬೇಟಿ ಮಾಡಿದ್ದೆ.
ನಮ್ಮ ಜಿಲ್ಲೆಯ ತೀರ್ಥಹಳ್ಳಿಯ ಯಡೂರು ಮೂಲದ ಇವರು ಮೈಸೂರಿನಲ್ಲಿ ಶಾಂತವೇರಿ ಗೋಪಾಲಗೌಡರ ಹೆಸರಿನ ಆಸ್ಪತ್ರೆ ಮಾಡಿರುವುದು ನನಗೆ ಹೆಮ್ಮೆ ಅನ್ನಿಸಿತ್ತು ಆಗ ಅವರು (2001) ಶಾಂತವೇರಿ ಗೋಪಾಲಗೌಡರ ಹೆಸರಲ್ಲಿ ವೈದ್ಯಕೀಯ ಕಾಲೇಜ್ ಪ್ರಾರಂಬಿಸುವ ಅವರ ಕನಸು ಹೇಳಿದ್ದರು.
ಡಾಕ್ಟರ್ ವಿಷ್ಣು ಮೂರ್ತಿ ಅವರ ತಮ್ಮ ಶಿವಮೊಗ್ಗದಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದ ಯಡೂರಿನ ಹಿರಿಯಣ್ಣ ಗೌಡರು 1995 - 2000 ನನ್ನ ಜೊತೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು ಈಗ ಇವರಿಬ್ಬರೂ ಇಲ್ಲ.
ಡಾಕ್ಟರ್ ವಿಷ್ಣು ಮೂರ್ತಿ ಅವರ ಪುತ್ರ ಡಾಕ್ಟರ್ ಸುಶೃತ ಅಮೇರಿಕಾದಲ್ಲಿ ನ್ಯೂರೋಲೋಜಿಸ್ಟ್ ಆಗಿದ್ದವರು ಈಗ ಮೈಸೂರಲ್ಲಿ ತಮ್ಮ ತಂದೆಯ ಆಸ್ಟತ್ರೆ ನೋಡಿಕೊಳ್ಳುತ್ತಿದ್ದಾರೆ.
ಇವರು ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ 3750 ಕಿ.ಮಿ. ನಡೆದ ದೇಶ ಯಾತ್ರಿ, ಕರ್ನಾಟಕದಿಂದ ಆರು ಜನ ಮಾತ್ರ ಈ ಯಾತ್ರೆ ಮಾಡಿದ ದೇಶ ಯಾತ್ರಿಗಳು.
ಶಿವಮೊಗ್ಗ ಜಿಲ್ಲೆಯಿ೦ದ ಏಕೈಕ ಭಾರತ ಜೋಡೋ ಯಾತ್ರೆ 3750 ಕಿ.ಮಿ. ಪೂರ್ಣ ಮಾಡಿದ ತೀರ್ಥಹಳ್ಳಿ ಯಡೂರು ಮೂಲದ ಡಾಕ್ಟರ್ ಸುಶೃತ ಮೈಸೂರಿನ ಗೋಪಾಲಗೌಡ ಶಾಂತವೇರಿ ಮೆಮೋರಿಯಲ್ ಆಸ್ಪತ್ರೆಯ ಡಾ.ವಿಷ್ಣುಮೂರ್ತಿ ಪುತ್ರ ಮತ್ತು ನನ್ನ ಜಿಲ್ಲಾ ಪಂಚಾಯತ್ ಸಹ ಸದಸ್ಯರಾಗಿದ್ದ ವಕೀಲರು ಆಗಿದ್ದ ಹಿರಿಯಣ್ಣ ಗೌಡರ ಪುತ್ರ ಎಂಬುದು ಹೆಮ್ಮೆಯ ಸಂಗತಿ.
Comments
Post a Comment