#VEGITABLE_DOSA
ರೆಸಿಪಿ: ಒಂದೂವರೆ ಕಪ್ ದೋಸೆ ಅಕ್ಕಿ, ಅದ೯ ಕಪ್ ಸೀಮೆ ಅಕ್ಕಿ, ಎರೆಡು ಟೀ ಚಮಚ ಮೆಂತೆ, ಒಂದು ಟೇಬಲ್ ಸ್ಪೂನ್ ಕಡಲೆಬೇಳೆ ಮತ್ತು ಟೇಬಲ್ ಸ್ಪೂನ್ ಉದ್ದಿನ ಬೇಳೆ ರಾತ್ರಿ ನೀರಿನಲ್ಲಿ ನೆನೆಸಿ ಇಡುವುದು.
ಬೆಳಿಗ್ಗೆ ಅದ೯ ಕಪ್ ತೆಳು ಅವಲಕ್ಕಿ ತೊಳೆದು ಅಧ೯ ಕಪ್ ಮೊಸರಲ್ಲಿ ನೆನೆಸಿ ಇಡುವುದು ನಂತರ ರಾತ್ರಿ ನೆನೆಸಿದ ಅಕ್ಕಿ ಮತ್ತಿತರ ಪದಾಥ೯ ಜೊತೆಗೆ ದೋಸೆ ಹಿಟ್ಟು ರುಬ್ಬಿ ರುಚಿಗೆ ಉಪ್ಪು ಬೆರೆಸಿ ಅರ್ಧ ಗಂಟೆ ಇಡುವುದು.
ದೋಸೆ ತವಾದ ಮೇಲೆ ದೋಸೆ ಹಿಟ್ಟು ಎರೆದು ಅದರ ಮೇಲೆ ಕ್ಯಾರೆಟ್ ತುರಿ, ಈರಳ್ಳಿ ಮತ್ತು ಹಸಿ ಮೆಣಸು ಉದುರಿಸಿ ಬೆಣ್ಣೆ ಹಾಕಿ ಮುಚ್ಚುವುದು ನಂತರ ದೋಸೆ ಮಗುಚಿ ಬೇಯಿಸಿ ಚಟ್ನಿ, ತುಪ್ಪದ ಜೊತೆಗೆ ಸವಿಯಿರಿ.
ಕ್ಯಾರೆಟ್, ಹಸಿ ಮೆಣಸು ಕಲರ್ ಕಾಂಬಿನೇಷನ್ ನೀಡುತ್ತದೆ ಇದು ಇವತ್ತಿನ ನನ್ನ ಉಪಹಾರ ಕೋಥಾಸ್ ಪಿಲ್ಟರ್ ಕಾಫಿ ಜೊತೆಗೆ.
Comments
Post a Comment