ನೋಡಿ ಇದು ಎಲ್ಲಾ ರಾಜಕೀಯ ಪಕ್ಷಗಳ ಆಚರಣೆ ಅವರಿಗೂ ಗೊತ್ತು ಬಂದವರೆಲ್ಲ ಕಾಯ೯ಕತ೯ರಲ್ಲ ಮತದಾರರಲ್ಲ ಅಂತ, ಸಭಿಕರು ಕಡಿಮೆ ಆದರೆ ಪ್ಲಾಪ್ ಶೋ ಅಂತ ಮೀಡಿಯಾದವರು ಬರೀತಾರೆ ಅವರು ಬಿಡಿ ಪೋಲಿಸ್ ಇಲಾಖೆ ಆಡಳಿತ ಪಕ್ಷದ ಸಭೆಯಲ್ಲಿ ಸೇರಿಸಿರುವ ಜನರನ್ನ ಕೆಲವು ಸಾವಿರ ಹೆಚ್ಚು ಮಾಡಿ ವರದಿ ಮಾಡುತ್ತಾರೆ, ಜನಪರ ಹೋರಾಟದಲ್ಲಿ ನಾಕಾರು ಸಾವಿರ ಸೇರಿದರೆ ನಾಕಾರು ನೂರು ಅOತ ವರದಿ ಇಂತ ಕೆಲಸಕ್ಕೆ ಬಾರದ ವರದಿಗಳನ್ನ ಓದಿ ಮತದಾರ ಬದಲಾಗುವುದಿಲ್ಲ ಆದರೆ ಜನ ಬಲ ಇಲ್ಲ ಅನ್ನೋ ಅಪವಾದ ಸ್ವಪಕ್ಷದವರಿ೦ದ ಮುಖ್ಯಮಂತ್ರಿ ಆಗೋ ಅಭ್ಯಥಿ೯ ತಪ್ಪಿಸಿಕೊಳ್ಳಬೇಕು, ಇದಕ್ಕೆಲ್ಲ ಖಚು೯ ಮಾಡೋ ಹಣ ಕ್ಯಾ೦ಡಿಡೇಟ್ ರೇಸ್ನಲ್ಲಿ ಇರೋರಿOದ ವಸೂಲಿ ಮಾಡುತ್ತಾರೆ.ಗೆದ್ದವರು ಇದರ ನೂರು ಸಾವಿರ ಪಟ್ಟು ಜನರಿ೦ದ ವಸೂಲಿ ಮಾಡಿ ಸರಿ ಮಾಡಿಕೊಳ್ಳುತ್ತಾರೆ ಇದು ನಮ್ಮ ಭಾರತ ದೇಶದ ಚುನಾವಣೆ ಎಂಬ ಅಣಕ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment