Blog number 1256. ಶಿವಮೊಗ್ಗದ ಸೋಗಾನೆಯಲ್ಲಿ ಯಡೂರಪ್ಪನವರ ಸತತ ಪ್ರಯತ್ನದಿಂದ ನಿರ್ಮಾಣವಾಗಿ ದಿನಾಂಕ 27-ಪೆಬ್ರವರಿ -2023 ಸೋಮವಾರ ಪ್ರದಾನಿ ನರೇಂದ್ರ ಮೋದಿ ಉದ್ಘಾಟಿಸಲಿರುವ ಕುವೆಂಪು ವಿಮಾನ ನಿಲ್ದಾಣ ಶಿವಮೊಗ್ಗ.
#ಇದರ_ಸಂಪೂರ್ಣ_ಕ್ರೆಡಿಟ್_ಯಡೂರಪ್ಪನವರದ್ದೆ
#ಕಾಮಗಾರಿ_ನಿರ್ವಹಿಸಿದ_ಸಂಸ್ಥೆ_ತೀರ್ಥಹಳ್ಳಿ_ಷರೀಪ್_ಸಾಹೇಬರದ್ದು,
#ಕನ್ನಡಕ್ಕೆ_ಮೊದಲ_ಜ್ಞಾನಪೀಠ_ಪ್ರಶಸ್ತಿ_ತಂದ_ಕವಿ_ಕುವೆಂಪು_ಹೆಸರಿನ_ವಿಮಾನ_ನಿಲ್ದಾಣ
#ತಮ್ಮ_ಹೆಸರಿನ_ನಾಮಕರಣ_ನಯವಾಗಿ_ನಿರಾಕರಿಸಿ_ಕುವೆಂಪು_ಹೆಸರು_ಸೂಚಿಸಿದ_ಯಡೂರಪ್ಪ
#ರಾಷ್ಟ್ರಪತಿಗಳು_ಕೊಯಮತ್ತೂರು_ಪ್ರವಾಸಕ್ಕೆ_ಬಳಸಿದ್ದ_ಬೋಯಿಂಗ್_737_ಇವತ್ತು_ಶಿವಮೊಗ್ಗದಲ್ಲಿಳಿದ_ಮೊದಲ_ವಿಮಾನ.
#ಪೆಬ್ರುವರಿ_27_ಸೋಮವಾರ_ಪ್ರದಾನಿ_ಮೋದಿ_ಉದ್ಘಾಟಿಸಲಿದ್ದಾರೆ.
#ಆಕಾಶದಿಂದ_ಕಮಲದ_ಆಕಾರದಲ್ಲಿ_ಕಾಣುವ_ವಿಮಾನ_ನಿಲ್ದಾಣ.
#ಯಡೂರಪ್ಪರ_ಸಾದನೆ_ತ್ಯಾಗಕ್ಕೆ_ಬದಲಾಗಿ_ಅವರ_ಹೆಸರು_ಸೂಕ್ತ_ಸ್ಥಳಕ್ಕೆ_ನಾಮಕರಣ_ಮಾಡಲೇ_ಬೇಕು
https://youtu.be/aqp5vMnoE9w
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವಾದರೆ ಮದ್ಯ ಕರ್ನಾಟಕದ ಶಿವಮೊಗ್ಗ - ಚಿಕ್ಕಮಗಳೂರು - ದಾವಣಗೆರೆ - ಚಿತ್ರದುರ್ಗ - ಹಾಸನ ಜಿಲ್ಲೆಗಳಿಗೆ ಸುಲಭ ಸಂಪರ್ಕವಾಗುವುದರಿಂದ ಈ ಜಿಲ್ಲೆಗಳಿಗೆ ಅನೇಕ ಉದ್ಯಮಗಳು ಬರಲಿದೆ ಇದರಿಂದ ಉದ್ಯೋಗ ಸೃಷ್ಟಿ ಆಗಲಿದೆ ಈ ಬಾಗದಲ್ಲಿ ವ್ಯಾಪಾರ- ಕೈಗಾರಿಕೆ - ಪ್ರವಾಸೋದ್ಯಮದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಾಧ್ಯವಾಗಲಿದೆ.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣದ ಕನಸು ಕಂಡವರು ಯಡೂರಪ್ಪನವರು, 20 -ಜೂನ್ - 2008ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಯಡೂರಪ್ಪ ಉಪ ಮುಖ್ಯಮಂತ್ರಿ ಆಗಿದ್ದಾಗ ಶಿವಮೊಗ್ಗ ವಿಮಾನ ನಿಲ್ದಾಣದ ಅಡಿಪಾಯ ಹಾಕಿದ್ದರು.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ತಜ್ಞರ ತಂಡ ಶಿವಮೊಗ್ಗದ ಸೋಗಾನೆ ಮತ್ತು ಅಯನೂರು ಬಳಿಯ ನಾಗರಬಾವಿ ಪ್ರದೇಶವನ್ನು ಪರಿಶೀಲಿಸಿ ಅಂತಿಮವಾಗಿ ಸೋಗಾನೆಯನ್ನು 4- ಏಪ್ರಿಲ್ -2006 ರಂದು ಅಂತಿಮಗೊಳಿಸಿತ್ತು.
ಆದರೆ ಶಿವಮೊಗ್ಗ ವಿಮಾನ ನಿಲ್ದಾಣದ ಯೋಜನೆ ಅನೇಕ ಕಾರಣಗಳಿಂದ ಕಾರ್ಯಾರಂಭ ಸಾಧ್ಯವಾಗಲಿಲ್ಲ ಯಡೂರಪ್ಪನವರು ಮುಖ್ಯಮಂತ್ರಿ ಆದರೂ ಯೋಜನೆ ಕಾರ್ಯಾಗತವಾಗಲಿಲ್ಲ.
ನಂತರ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದರೂ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಅದರ ನಂತರದ ಜೆಡಿಸ್ - ಕಾಂಗ್ರೇಸ್ ಸಮ್ಮಿಶ್ರ ಸರ್ಕಾರ ರಚನೆ ಆಗಿ ಕುಮಾರಸ್ವಾಮಿ ಮುಖ್ಯಮಂತ್ರಿ ಆದರೂ ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ಟೇಕಾಪ್ ಆಗಲೇ ಇಲ್ಲ.
ಈ ಸಮ್ಮಿಶ್ರ ಸರ್ಕಾರ ಬೀಳಿಸಿ ಮುಖ್ಯಮಂತ್ರಿ ಆದ ಯಡೂರಪ್ಪ 15- ಜೂನ್ -2020 ರಂದು ಎರಡನೆ ಬಾರಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಿದರು.
ವಿಮಾನ ನಿಲ್ದಾಣದ ಕಟ್ಟಡ - ರನ್ ವೇ - ಕಂಪೌಂಡ್ ಕಾಮಗಾರಿ ನಿವ೯ಹಿಸಿದವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಇಬ್ರಾಹಿಂ ಷರೀಪರ ಪ್ರಖ್ಯಾತ ನಿರ್ಮಾಣ ಸಂಸ್ಥೆ ನ್ಯಾಷನಲ್ ಕನ್ಸ್ಟ್ರಕ್ಷನ್ ಕಂಪನಿ.
ಸೋಗಾನೆಯಲ್ಲಿ 775 ಎಕರೆ ಪ್ರದೇಶದಲ್ಲಿ 449 ಕೋಟಿ ವೆಚ್ಚದಲ್ಲಿ 3200 ಮೀಟರ್ ಉದ್ದದ 45 ಮೀಟರ್ ಅಗಲದ ರನ್ ವೇಯಲ್ಲಿ ಬೋಯಿಂಗ್ 737 ಮತ್ತು ಏರ್ ಬಸ್ A320 ಯ೦ತ ವಿಮಾನ ಏರಿಳಿಯುತ್ತದೆ.
ಸಾಗರ ತಾಲ್ಲೂಕಿನ ಆನಂದಪುರಂ ಸಮೀಪದ ಇರುವಕ್ಕಿಯಲ್ಲಿ ಪ್ರಾರಂಬಿಸಿರುವ ಕೃಷಿ ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ 777 ಎಕರೆ ಭೂಮಿ ಮತ್ತು 180 ಕೋಟಿ ಅನುದಾನ ನೀಡಿದ್ದನ್ನು ಹೋಲಿಸಿದರೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನೀಡಿದ ಜಮೀನು ಹಣ ಹೆಚ್ಚೇನಲ್ಲ.
ಈ ವಿಮಾನ ನಿಲ್ದಾಣದ ಕಟ್ಟಡದ ವಿನ್ಯಾಸ ಆಕಾಶದಿಂದ ನೋಡಿದರೆ ರಾಷ್ರೀಯ ಪುಷ್ಪ ಕಮಲದ (ಭಾರತೀಯ ಜನತಾ ಪಕ್ಷದ ಚಿಹ್ನೆ ಕೂಡ ಕಮಲ) ಆಕೃತಿಯಲ್ಲಿದೆ.
ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗಿ ಇದೇ 27-ಪೆಬ್ರುವರಿ-2023 ಸೋಮವಾರ ದೇಶದ ಪ್ರದಾನಿಯಿಂದ ಉದ್ಘಾಟನೆ ಆಗಲಿರುವ ಈ ವಿಮಾನ ನಿಲ್ದಾಣ ನಿರ್ಮಾಣ ಯಡೂರಪ್ಪರ ಸತತ ಪ್ರಯತ್ನದ ಫಲವಾದ್ದರಿಂದ ಅವರ ಹೆಸರು ನಾಮಕರಣಕ್ಕೆ ರಾಜ್ಯ ಸರ್ಕಾರದ ಸಂಪುಟ ಸಭೆ ತೀರ್ಮಾನಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿತ್ತು.
ಆದರೆ ಸ್ಟತಃ ಯಡೂರಪ್ಪನವರೇ ಕುವೆಂಪು ಹೆಸರು ಸೂಚಿಸಿದ್ದರಿಂದ ಶಿವಮೊಗ್ಗ ವಿಮಾನ ನಿಲ್ದಾಣ #ಕುವೆಂಪು_ವಿಮಾನ_ನಿಲ್ದಾಣವಾಗಿದೆ.
ಇವತ್ತು 21- ಪೆಬ್ರುವರಿ-2023ರ ಮಂಗಳವಾರ ಮಧ್ಯಾಹ್ನ ಪ್ರಯೋಗಾರ್ಥವಾಗಿ ಮೊದಲ ವಿಮಾನ ಬೋಯಿಂಗ್ 737 ಇಳಿಯಿತು ಮತ್ತು ಪುನಃ ದೆಹಲಿಗೆ ಹಾರಿತು ಶಿವರಾತ್ರಿಯಂದು ರಾಷ್ಟ್ರಪತಿಯವರನ್ನು ಕೊಯಮುತ್ತೂರಿನ ಸದ್ಗುರು ಜಗ್ಗಿ ವಾಸುದೇವರ ಆದಿಯೋಗಿ ಆಶ್ರಮಕ್ಕೆ ಕರೆದೊಯ್ದ ವಿಮಾನವೇ ಇದು.
ಶಿವಮೊಗ್ಗದ ವಿಮಾನ ನಿಲ್ದಾಣದ ಉದ್ಘಾಟನೆಗೆ ಒಂದು ವರ್ಷದ ಮೊದಲೇ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಘಟನೆ, ತನ್ನ ಹೆಸರನ್ನು ನಯವಾಗಿ ನಿರಾಕರಿಸಿ ಕವಿ ಕುವೆಂಪು ಹೆಸರು ಸೂಚಿಸಿದ ಯಡೂರಪ್ಪ ರಾಜಕಾರಣದಲ್ಲಿ ದುರಂತ ನಾಯಕರಾಗಿ-ತ್ಯಾಗಮಯರಾಗಿ ಇತಿಹಾಸದಲ್ಲಿ ಸೇರಿ ಹೋಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಜನ ಸದಾ ಸ್ಮರಿಸುವಂತಾ ಕೆಲಸ ನಿರ್ವಹಿಸಿದ ಯಡೂರಪ್ಪರ ನೆನಪು ಸರ್ವಕಾಲಿಕವಾಗಿ ಉಳಿಯುತ್ತದೆ.
ಹಾಗಂತ ಯಡೂರಪ್ಪನವರ ನೆನಪು ಚಿರಂತನವಾಗಿ ಉಳಿಯುವಂತೆ #ಯಡೂರಪ್ಪನವರ ಹೆಸರು ಸೂಕ್ತವಾದ ಸ್ಥಳಕ್ಕೆ ನಾಮಕರಣ ಮಾಡಲೇ ಬೇಕಾಗಿದೆ.
Comments
Post a Comment