Blog number 1267. ಸಾಕುಪ್ರಾಣಿಯಾಗಿ ಬಿಳಿ ಇಲಿ ಸಾಕುವ ವಿಚಾರ ಅನೇಕರಿಗೆ ತಿಳಿದಿಲ್ಲ, ಬಿಳಿ ಇಲಿ ಸಾಕಿದರೆ ಬೇರೆ ಇಲಿ ಬರುವುದಿಲ್ಲ, ವೈಟ್ ಮೌಸ್ ಎನ್ನುವ ಬುದ್ಧಿವಂತ ಇಲಿಗಳು ಮಾಲಿಕರ ಜೊತೆ ಬೇಗ ಹೊಂದಿಕೊಳ್ಳುತ್ತದೆ, ಬೆಂಗಳೂರು ಮೈಸೂರಿನಲ್ಲಿ ಬಿಳಿ ಇಲಿ ಸಾಕುವವರಿದ್ದಾರೆ.
#ಮೈಸೂರು_ಬೆಂಗಳೂರಲ್ಲಿ_ಮಾತ್ರವಲ್ಲ_ವಿಶ್ವದಾದ್ಯಂತ_ಇಲಿ_ಸಾಕುಪ್ರಾಣಿ.
#ಈ_ಬಗ್ಗೆ_ಬಹಳ_ಹಿಂದೆ_ಬರೆದ_ಲೇಖನ_ಕಳೆದು_ಹೋಗಿದೆ.
#ಇವತ್ತು_ಆಕೃತಿಕನ್ನಡದಲ್ಲಿ_ಇವತ್ತಿನ_ಲೇಖನ_ಇಲಿ_ಪ್ರಬೇದದ_ಬಗ್ಗೆ_ಓದಿ_ನೆನಪಾಯಿತು.
#ಬಿಳಿ_ಇಲಿ_ಸಾಕಿದರೆ_ಬೇರೆ_ಇಲಿ_ಬರುವುದಿಲ್ಲ.
ಇವತ್ತು ಶಾಲಿನಿ ಹೂಲಿ ಪ್ರದೀಪರ #ಆಕೃತಿ_ಕನ್ನಡದಲ್ಲಿ ಒಂದು ಇಲಿಗಳ ಪ್ರಬೇದದ ಬಗ್ಗೆ #ಶಕುಂತಲಾಶ್ರೀಧರ್ ಅವರ ಅನುಭವದ ಕಥನ ಪ್ರಕಟವಾಗಿತ್ತು ಅದನ್ನು ಓದಿದಾಗಲೇ ಸುಮಾರು 20 ವರ್ಷದ ಹಿಂದೆ ರೈಲಿನ ಸಹ ಪ್ರಯಾಣಿಕರಿಂದ ತಿಳಿದ ಬಿಳಿ ಇಲಿ ಸಾಕು ಪ್ರಾಣಿಯ ವೃತ್ತಾಂತ ನೆನಪಾಯಿತು.
2010ರಲ್ಲಿ ನನ್ನ ಲ್ಯಾಪ್ ಟಾಪ್ ನಲ್ಲಿ ಪೇಸ್ ಬುಕ್ ನಲ್ಲಿ ಬರೆದ ಲೇಖನ ಹುಡುಕಿದೆ ಆದರೆ ಸಿಗಲಿಲ್ಲ ಆಗ ಬ್ಲಾಗ್ ಇರಲಿಲ್ಲ.
ಒಮ್ಮೆ ಬೆಂಗಳೂರಿಂದ ರೈಲಿನಲ್ಲಿ ಬರುವಾಗ ಪರಿಚಯವಾದ ಮೈಸೂರಿನ ಸಹ ಪ್ರಯಾಣಿಕರು ತುಮಕೂರಿನ ಮಗಳ ಮನೆಗೆ ಪ್ರಯಾಣಿಸುತ್ತಿದ್ದರು, ತಮ್ಮ ಜೊತೆ ಒಯ್ಯುತ್ತಿದ್ದ ಎರೆಡು ಬಿಳಿ ಇಲಿಗೆ ಕಾಳುಗಳನ್ನು ಕೊಡುವುದು ನೋಡಿ ಆಶ್ಚರ್ಯದಿಂದ ಕೇಳಿದಾಗಲೇ ಗೊತ್ತಾಗಿದ್ದು ಅದು ಅವರು ಸಾಕುತ್ತಿರುವ ಸಾಕು ಪ್ರಾಣಿ ಬಿಳಿ ಇಲಿಗಳು.
ಅವರ ಪತ್ನಿ ಇಹಲೋಕ ತ್ಯಜಿಸಿದ್ದರಿಂದ ಒಂಟಿ ಜೀವನ ಅವರದ್ದು ಮಗಳ ಮನೆಗೆ ಹೋಗುವಾಗಲೂ ಈ ಬಿಳಿ ಇಲಿಗಳನ್ನು ತೆಗೆದು ಕೊಂಡು ಹೋಗುತ್ತಿದ್ದಾರೆ.
ಆದರೆ ನನಗೆ ಅಲ್ಲಿ ತನಕ ಗೊತ್ತಿದ್ದಿದ್ದ ಸಾಕು ಪ್ರಾಣಿಗಳೆಂದರೆ ನಾಯಿ - ಬೆಕ್ಕು - ಗಿಳಿ-ಪಾರಿವಾಳ ಆದರೆ ಇಲಿಯೂ ಸಾಕು ಪ್ರಾಣಿ ಅಂತ ಗೊತ್ತಾಗಿದ್ದು ಅವತ್ತೇ ...
ನಂತರ ಮೈಸೂರು ಬೆಂಗಳೂರಿನ ಕೆಲ ಮನೆಗಳಲ್ಲಿ ಬಿಳಿ ಇಲಿ ಸಾಕುವವರನ್ನು ನೋಡಿದ್ದೆ, ಅದರ ಹೆಸರು ಹಿಡಿದು ಕರೆದಾಗ ಮಾಲಿಕನ ಹತ್ತಿರ ಓಡಿ ಬರುವ, ಕಾಳು ಸ್ವೀಕರಿಸುವ ಬಿಳಿ ಇಲಿಗಳನ್ನು ನೋಡಿದ್ದೇನೆ.
ಈ ಬಿಳಿ ಇಲಿಗಳು ಇದ್ದಲ್ಲಿ ಬೇರೆ ಇಲಿಗಳು ಬರುವುದಿಲ್ಲವಂತೆ, ಸ್ಟಚ್ಚವಾಗಿ ಬೆಕ್ಕಿನಂತೆ ಇರುವ ಚಿಕ್ಕ ಗಾತ್ರದ ಬಿಳಿ ಇಲಿಗಳು ಸಾಕುವುದು ತುಂಬಾ ಸುಲಭ.
ಈ ಬಿಳಿ ಇಲಿಗಳು ದಿನದ 75% ಭಾಗ ನಿದ್ದೆಯಲ್ಲಿದ್ದು 25% ಭಾಗ ಮಾತ್ರ ಎಚ್ಚರ ಇರುತ್ತದೆ, ವೈಜ್ಞಾನಿಕವಾಗಿ ಬಿಳಿ ಇಲಿಗಳು ದೃಷ್ಟಿ ದೋಷ ಹೊಂದಿರುತ್ತದೆ ಎಂಬುದು ಸಂಶೋದನೆಯಿಂದ ಸಾಬೀತಾಗಿದೆ ಅಂತೆ.
ವಾಸನೆ, ಸ್ಪರ್ಷ ಮತ್ತು ಶ್ರವಣ ಅವಲಂಬಿಸಿರುವ ಈ ಬಿಳಿ ಇಲಿಗಳಿಗೆ ವೈಟ್ ಮೌಸ್ ಎಂಬ ಹೆಸರಲ್ಲಿ ಕರೆಯುತ್ತಾರೆ, ವೈಜ್ಞಾನಿಕವಾಗಿ ಇದರ ಹೆಸರು ಆಲ್ಬಿನೋ ರಾಟ್ ಇದನ್ನು ಅನೇಕ ಔಷದಗಳ ಬಳಕೆಯಲ್ಲಿ ಸಂಶೋದನೆಯನ್ನು ಇವುಗಳ ಮೇಲೆ ಮಾಡುತ್ತಾರೆ.
ಈ ಇಲಿಗಳ ಬಗ್ಗೆ 1553 ರಲ್ಲಿ ಮೊದಲ ವೈಜ್ಞಾನಿಕ ವಿವರ ಪ್ರಕಟಿಸಿದವರು ಸ್ಟಿಸ್ ನೈಸರ್ಗಿಕವಾದಿ ಕಾನ್ರಾಡ್ ಗೆಸ್ನರ್, ಬಿಳಿ ಇಲಿ ಕಾಡಲ್ಲಿದ್ದರೆ ಅದರ ಬಣ್ಣ ಮತ್ತು ದೃಷ್ಟಿ ದೋಷದಿಂದ ಬೇರೆ ಪ್ರಾಣಿಗಳಿಂದ ಸುಲಭವಾಗಿ ಅಕ್ರಮಣಗಳಕ್ಕೆ ಒಳಗಾಗುತ್ತವೆ.
ಜಗತ್ತಿನಲ್ಲಿ 56 ಜಾತಿ ಪ್ರಬೇದದ ಇಲಿಗಳಿದೆ, ಸಣ್ಣ ಸಸ್ತನಿಗಳಾದ ಇಲಿಗಳು ಪಳಗಿಸಿದರೆ ಅವು ಅತ್ಯಂತ ಸ್ನೇಹ ಜೀವಿ ಅಂತ 19ನೇ ಶತಮಾನದ ಅಂತ್ಯದಿಂದ ಇಲಿ ಸಾಕಲು ಪ್ರಾರಂಭ ಆಯಿತಂತೆ.
ಈ ಬಿಳಿ ಇಲಿಗಳ ಆಯಸ್ಸು 2 ವರ್ಷದಿಂದ 5 ವರ್ಷ ಅವದಿಯಂತೆ.
ಬಿಳಿ ಇಲಿಗಳು ಜಪಾನಿನ 7 ಅದೃಷ್ಟ ದೇವತೆಯಲ್ಲಿ ಒಂದು, ಭಾರತದಲ್ಲಿ ರಾಜಸ್ಥಾನದ ಬಿಕನೇರ್ ನ ಕಣಿ೯ ಮಾತಾ ದೇವಾಲಯದಲ್ಲಿ 25 ಸಾವಿರಕ್ಕೂ ಹೆಚ್ಚಿನ ಇಲಿಗಳು ಭಕ್ತರಿಂದ ಪೂಜಿಸುತ್ತಿದೆ ಅಲ್ಲಿ ಬಿಳಿ ಇಲಿ ದರ್ಶನವಾದರೆ ಅದೃಷ್ಟ ಎ೦ಬ ನಂಬಿಕೆ ಇದೆ.
ಖ್ಯಾತ ಲೇಖಕಿ ಬೀಟ್ರಿಕ್ಟ್ ಪಾಟರ್ ಅವಳ ಬಾಲ್ಯದ ಮುದ್ದಿನ ಇಲಿ ಸ್ಯಾಮಿಗೆ ತಮ್ಮ ಕಥೆ "ದಿ ಟೇಲ್ ಆಪ್ ಸ್ಯಾಮ್ಯೂಯಲ್ ವಿಸ್ಕಾರ್ಸ್" ಅಪಿ೯ಸಿದ್ದಾರೆ.
ದೆಹಲಿಯ ಗೊರೆಗಾಂವ್ ನಲ್ಲಿ ಒಂದು ಜೊತೆ ಬಿಳಿ ಇಲಿ ಜೋಡಿಗೆ 766 ರೂಪಾಯಿ ಅಂತ ಅಮೇಜಾನಿನಲ್ಲಿದೆ, ಸಾಕುಪ್ರಾಣಿ ಇಲಿಯ ಆಹಾರ ಕೆ.ಜಿ.ಗೆ 328 ರೂಪಾಯಿ ಇದೆ ಅಷ್ಟೇ ಅಲ್ಲ ಈ ಬಿಳಿ ಇಲಿಗಳನ್ನ ಸಾಕುವವರಿಗಾಗಿ ಅವುಗಳ ಆಟಿಕೆ, ಏಣಿ, ಮನೆ ಇತ್ಯಾದಿಗಳು ಕೂಡ ಖರೀದಿಗೆ ಇದೆ.
ಬಿಳಿ ಇಲಿಗಳು ಬುದ್ದಿವಂತ ಇಲಿಗಳು, ಮಾಲಿಕನ ಜೊತೆ ಬೇಗ ಹೊಂದಿಕೊಳ್ಳುತ್ತದೆ, ಇವುಗಳು ಸಾಕುವುದು ಸುಲಭ, ಕಡಿಮೆ ವಾಸನೆ ಮತ್ತು ಮಾಲಿಕರಿಗೆ ಕಚ್ಚುವುದು ಕೂಡ ಅಪರೂಪ.
1961 ರಲ್ಲಿ ಪ್ರೆಂಚ್ ಬಾಹ್ಯಾಕಾಶ ಸಂಶೋದನೆಯಲ್ಲಿ ಬಿಳಿ ಇಲಿ ಅಂತರಿಕ್ಷ ಯಾತ್ರೆ ಮುಗಿಸಿ ಯಶಸ್ವಿಯಾಗಿ ವಾಪಾಸು ಬಂದಿದೆ.
ಬಿಳಿ ಇಲಿ ಸಾಕು ಪ್ರಾಣಿಯಾಗಿ ಸಾಕುವ ವಿಚಾರವೇ ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ.
Comments
Post a Comment