Skip to main content

Blog number 1274. ಎರೆಡು ಬಾರಿ ನನ್ನಿಂದ ಲಾಭ ಪಡೆದವರೇ ಹಾಕಿದ ಚೆಕ್ ಕೇಸುಗಳು... ಕೊಟ್ಟ ತೊಂದರೆಗಳು ಮರೆಯುವುದಾದರೂ ಹೇಗೆ?

ಎರೆಡು ಚೆಕ್ ಕೇಸಿನಲ್ಲಿ ಸಿಕ್ಕಿ ಬಿಳಿಸಿದ ವಂಚಕರ ಬಲೆಯಲ್ಲಿ ನನ್ನ ಪರದಾಟ, ಲಾಭ ಪಡೆದವರಿಂದಲೇ ಮೋಸ.
    
  ಖಾಲಿಚೆಕ್ ನಿಂದ ಬಡ್ಡಿ ವ್ಯವಹಾರದವರ ಅಪರಾ ತಪರಾ ವಸೂಲಿ ಸಾಲಗಾರರ ಆತ್ಮಹತ್ಯಗೆ ಪ್ರೇರಣೆ.

 
ಇವತ್ತಿನ (1- ಮಾರ್ಚ್ -2020 )  ವಿಜಯಕನಾ೯ಟಕದ ನಮ್ಮ ಶಿವಮೊಗ್ಗ ಪುರವಣಿಯಲ್ಲಿ ತೀಥ೯ಹಳ್ಳಿಯ ರಾಘವೇoದ್ರ ಮೇಗರವಳ್ಳಿ "ಖಾಲಿ ಚೆಕ್ ನೀಡಿ ಕಂಗಾಲಾದ ಸಾಲಗಾರ" ಎಂಬ ಅತ್ಯುತ್ತಮ ಲೇಖನ ಪ್ರಕಟಿಸಿದ್ದಾರೆ.

 ಜೊತೆಗೆ ಜಿಲ್ಲಾ ರಕ್ಷಣಾಧಿಕಾರಿಗಳ ಅಭಿಪ್ರಾಯ ಬಡ್ಡಿ ವ್ಯವಹಾರಸ್ಥರು ಕಿರುಕುಳ ನೀಡಿದರೆ ಸಮೀಪ ಠಾಣೆಗೆ ದೂರು ನೀಡಿದರೆ ತಕ್ಷಣ ಕಾನೂನು ಕ್ರಮ ಜರುಗಿಸುವ ಅಭಯ ಬಾಕ್ಸ್ ವರದಿ ಆಗಿದೆ.
  
   ದಿನ ಬಡ್ಡಿ, ಮೀಟರ್ ಬಡ್ಡಿ ಮಾಫಿಯಾ ಎಲ್ಲಾ ಊರಲ್ಲೂ ಇದೆ, ಮೊನ್ನೆ ಮೊನ್ನೆ ಗೆಳೆಯರಾದ ಗೇರುಬೀಸಿನ ದೇವರಾಜ ಆಚಾರ್ ತಾನು ವಿಷ ಕುಡಿಯುವ ಸಂದಭ೯ ಬಂದಿದೆ ಅಂದಾಗ ಅವರ ಕಷ್ಟ ಪರಿಹಾರಕ್ಕೆ ಮಾಗ೯ ತೋರಿಸಿದೆವು.
   ಆದರೆ ಸಾಲ ಕೊಟ್ಟವ ಶಿಕಾರಿಪುರದ ಪೋಲಿಸರು ಅವರ ರಬ್ಬರ್ ತೋಟ ಖರೀದಿ ಅಗ್ರೀಮೆ೦ಟ್ ಕೂಡ (ಸಾಲ ವಸೂಲಿಗೆ ಆದಾರವಾಗಿ) ಮಾಡಿಸಿಕೊಂಡಿದ್ದರು.
  ಸಾಗರದ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಜಮೀನು ಪಹಣಿಯಲ್ಲಿ ಸಾಲ ಕೊಟ್ಟವರ ಹೆಸರು ನಮೂದಾಗಿತ್ತು.
    ಸಾಲ ಪಡೆದವರಿಂದ ನಾಕಾರು ಖಾಲಿ ಚೆಕ್ ಬೇರೆ ಪಡೆದು ಅದನ್ನು ಬೇರೆ ಬೇರೆಯವರ ಹೆಸರಲ್ಲಿ ಕಲೆಕ್ಷನ್ ಗೆ ಹಾಕಿ ಬೌನ್ಸ್ ಮಾಡಿ ಹತ್ತಾರು ಲಕ್ಷಕ್ಕೆ ಕೇಸ್ ಬೇರೆ ಹಾಕಿಸಿದ್ದರು ಇದಕ್ಕೆ ಬುದ್ಧಿವಂತ ಪ್ರಗತಿ ಪರ ಎನ್ನುವ ವಕೀಲರ ವಕಾಲತ್ತು ಬೇರೆ.
  ನಂತರ ಗೇರುಬೀಸಿನ ದೇವರಾಜ ಆಚಾರರ ಅದ೯ ಜಮೀನು (ಒಂದೂವರೆ ಎಕರೆ ರಬ್ಬರ್ ತೋಟ) ಭದ್ರಾವತಿಯ ರಬ್ಬರ್ ಟ್ಯಾಪರ್ ನಾಗೇಶರಿಗೆ ಕ್ರಯಕ್ಕೆ ಮಾರಾಟ ಮಾಡಿಸಿ ಈ ಸಾಲಗಾರರ ಪಾಶದಿಂದ ಪರಿಹರಿಸಲಾಯಿತು,ಸರಿಯಾದ ಸಮಯದಲ್ಲಿ ಗೇರುಬೀಸಿನ ದೇವರಾಜ ಆಚಾರ್ ಗೆ ಸಲಹೆ ಸಹಾಯ ಸಿಕ್ಕಿದ್ದರಿಂದ ಜೀವ ಉಳಿಯಿತು, ಕೈತಪ್ಪಿದ್ದ ಆಸ್ತಿಯ ಆದ೯ ಬಾಗ ಉಳಿಯಿತು.
  1992ರಲ್ಲಿ ಶಿವಮೊಗ್ಗದ ಜಿಲ್ಲಾಧಿಕಾರಿ ಆಗಿದ್ದ ವಿಜಯಕುಮಾರ್ ಗ್ರಾಮಾಂತರ ಪ್ರದೇಶದಲ್ಲಿ ಸಾವ೯ಜನಿಕರಿಗೆ ಬಸ್ ಸೇವೆ ಒದಗಿಸಲು ಗ್ರಾಮಾಂತರ ಸಾರಿಗೆ ಎಂಬ ಯೋಜನೆ ಜಾರಿ ತಂದಿದ್ದರು, ಆಯಾ ತಾಲ್ಲೂಕಿನಲ್ಲಿ ಬಸ್ ಸಂಪಕ೯ ಇಲ್ಲದ ಮಾಗ೯ ಗುರುತಿಸಿ ಆಸಕ್ತರಿಗೆ ಪಮಿ೯ಟ್ ಸರಳವಾಗಿ ಮಂಜೂರು ಮಾಡುತ್ತಿದ್ದರು.
  ಹೊಸ ನಗರ ತಾಲ್ಲೂಕಿನ ಬೆಳ್ಳೂರು - ರಿಪ್ಪನ್ ಪೇಟೆ -ಆನಂದಪುರ- ಸಾಗರ ಮಾಗ೯ದ ಪಮಿ೯ಟ್ ನಾನು ಪಡೆದಿದ್ದೆ.
  ಈ ಮಾಗ೯ದಲ್ಲಿ ಪಾಲುದಾರನೊವ೯ನ ಜೊತೆ ಮಾಡಿಕೊಂಡು ಪ್ರಶಾಂತ್ ಎಂಬ ಬಸ್ ಬಿಟ್ಟಿದ್ದೆ ಆದರೆ ಅನುಭವ ಇರುವ ಇನ್ನೊವ೯ನನ್ನ ಪಾಲುದಾರನಾಗಲು ವಿನಂತಿಸಿದೆವು.
   ಆತಿ ಚಾಲು ಆದ ಆತ ಬಂಡವಾಳ ಇಲ್ಲದೆ ಪಾಲುದಾರನಾಗಿ ಸಹಾಯ ನೀಡಲು ಮುಂದೆ ಬಂದ, ನಾವೊ ಅನನಭವಿಗಳು, ಹಿಂದೂ ಮುಂದು ಯೋಚಿಸದೆ ಸೇರಿಸಿಕೊಂಡೆವು.
   ನಂತರ ಆತನ ಸಂಬಂದಿಗಳೆ ನನ್ನ ಬಸ್ಸಿನ ನೌಕರರು ಆದರು, ಹೆಚ್ಚಿನ ದಿನಂಪ್ರತಿ ಲಾಭ ಆತ ಮಾಡುತ್ತಿದ್ದ. ವಾಷಿ೯ಕ ಲೆಕ್ಕಾಚಾರದಲ್ಲೂ ಅವನಿಗೆ ಸರಿ ಪಾಲು ನೀಡಿದೆವು.
   ನಂತರ ನಮಗೆ ಅವನ ಕಪಿ ಮುಷ್ಟಿಯಿ೦ದ ಹೊರಬರಲು ಬಸ್ ಅನಿವಾಯ೯ವಾಗಿ ಮಾರಾಟ ಮಾಡಿದೆವು.
    ಪ್ರತಿ ದಿನ ನೂರು ರೂಪಾಯಿಯಂತೆ ಲೈನ್ ಬಾಡಿಗೆ 3 ವಷ೯ ಆತನೆ ಪಡೆದ ನಮಗೆ ಕೊಡಲೇ ಇಲ್ಲ ಸುಮಾರು ಒಂದು ಲಕ್ಷ ರೂಪಾಯಿ.
   ನಮಗೆ ಬೇರೆ ಅಕ್ಕಿ ಗಿರಣಿ, ತಂಪು ಪಾನಿಯದ ಉದ್ದಿಮೆಯಲ್ಲಿ ಲಾಭ ಇದ್ದಿದ್ದರಿಂದ ಈ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ, ಆಗಲೇ ಆತ ನನ್ನ ಗಮನಕ್ಕೆ ತರದೆ ನನ್ನ ಸಹೋದರನ  4 ಖಾಲಿ ಚೆಕ್ ಯಾವಾಗಲೋ ಟೈರ್ ತರಲು ಅಂತ ಪಡೆದಿದ್ದು ವಾಪಾಸ್ ನೀಡದೆ ಬಚ್ಚಿಟ್ಟುಕೊ೦ಡು ಅದನ್ನ 50 ಸಾವಿರ ಅಂತ ಬರೆದು ಬೌನ್ಸ್ ಮಾಡಿಸಿ ಕೇಸು ಹಾಕಿಸಿ ವಸೂಲಿಯು ಮಾಡಿಸಿಬಿಟ್ಟ.
   ಬಂಡವಾಳ ಇಲ್ಲದೆ ನಮ್ಮಿ೦ದ ಲಾಭವೂ ತಿ೦ದು, ಅವನ ಇಡೀ ಕುಟುಂಬ ಉದ್ಯೋಗವು ಪಡೆದು, 3 ವಷ೯ ಲೈನ್ ಬಾಡಿಗೆ ನನಗೆ ಬರಬೇಕಾಗಿದ್ದ ಒಂದು ಲಕ್ಷ ಹಣವೂ ತಿಂದು,ಚೆಕ್ ಕೇಸ್ ಹಾಕಿ 50 ಸಾವಿರ ಪೀಕಿಸಿದ ಅವನ ಬುದ್ದಿವಂತಿಗೆ  ಮೋಸ ಎನ್ನುವುದಾದರೂ ಹೇಗೆ?.
   ಅವತ್ತೇ ತೀಮಾ೯ನ ಮಾಡಿದೆ ಖಾಲಿ ಚೆಕ್ ಕೊಡಬಾರದೆಂದು.
    ಆದರೆ ಮತ್ತೊಮ್ಮೆ ಚೆಕ್ ಕೇಸಿನಲ್ಲಿ ಸಿಕ್ಕಿಬಿದ್ದೆ ... ನನ್ನ ತಂದೆ ತಾಯಿ ಹೆಸರಲ್ಲಿ ಕಲ್ಯಾಣ ಮಂಟಪ ಕಟ್ಟುವ ಕಾಮಗಾರಿಯನ್ನು ಸಾಗರ ಸಮೀಪದ ಹಳೇ ಇಕ್ಕೇರಿಯ ತುಂಬಾ ನಯ ವಿನಯದ ಮಾತುಗಾರ ಮೇಸ್ತ್ರಿ ಒಬ್ಬನಿಗೆ ನೀಡಿದ್ದೆ ಆತ ಈ ಬಸ್ಸಿನ ಪಾಲುದಾರ ವಂಚಕನ ಸಂಬಂದಿ ಅಂತ ಗೊತ್ತಿರಲಿಲ್ಲ.
   ಕಲ್ಯಾಣ ಮಂಟಪ ಉದ್ಘಾಟನೆ ದಿನ ಇವನಿಗೆ ಬಂಗಾರದ ಉಂಗುರ, ರೇಷ್ಮೆ ಶಾಲು, ಪಂಚೆಯ ಸನ್ಮಾನ ಮುರುಘಾ ಮಠದ ಸ್ವಾಮಿಗಳಿಂದ ಮಾಡಿಸಿದ್ದೆ ಅವನ ಎಲ್ಲಾ ಸಿಬ್ಬಂದಿಗೆ ಹೊಸ ಬಟ್ಟೆಗಳನ್ನು ನೀಡಿದ್ದೆ ಅದರ ಮರುದಿನ ಸಾಗರದ ಕಾರ್ಪೋರೇಷನ್ ಬ್ಯಾಂಕ್ ನಿಂದ ಅವನಿಗೆ ಕೊಡಬೇಕಾಗಿದ್ದ ಹಣ ಚೆಕ್ ಮೂಲಕವೇ ಪಾವತಿ ಮಾಡಿದ್ದೆ.
   ಒಂದು ವರ್ಷದ ನಂತರ ಸಾಗರ ತಾಲ್ಲೂಕಿನ ಅವರ ಕಟ್ಟಡ ಕಾರ್ಮಿಕರ ಸಂಘಕ್ಕೆ ನನ್ನಿಂದ ಹಣ ಬಂದಿಲ್ಲ ಕೇಳಿದರೆ ಹಲ್ಲೆ ಮಾಡಲು ಬರುತ್ತಾರೆಂದು ಅರ್ಜಿ ನೀಡಿದ್ದ.
   ನಂತರ ನಡೆದ ಪಂಚಾಯಿತಿಯಲ್ಲಿ ಎಲ್ಲಾ ದಾಖಲೆ ಬಿಲ್ಲು, ಹಣ ಪಾವತಿ ರಶೀದಿ,ಚೆಕ್ ಮೂಲಕ ಪಾವತಿಸಿ ವೋಚರ್ ಸಹಿ ಪಡೆದಿದ್ದರಿಂದ ನಾನು ಬಚಾವ್ ಆದೆ.
 ಕಾಮಗಾರಿ ಸಮಯ ಆತ ಸುಳ್ಳು ಬಿಲ್ ನೀಡಿ ಸಿಕ್ಕಿಬಿದ್ದದ್ದು ಆಗಾಗಲೇ ಸರಿಪಡಿಸಿಕೊಂಡ ಎಲ್ಲಾ ವಿಚಾರಗಳು ಪಂಚಾಯಿತಿ ದಾರರ ಎದರು ಜಗಜ್ಜಾಹಿರವಾಯಿತು.
  ಪಂಚಾಯತದಾರರು ಅವನಿಗೆ ಛೀಮಾರಿ ಹಾಕಿದರು ಉಳಿದ ಬಾಕಿ ಕೆಲಸದ 25 ಸಾವಿರ ಮತ್ತು ಅವರ ಸಂಘದವರ ವಿನಂತಿಯಂತೆ 50 ಸಾವಿರ ಸೇರಿಸಿ 25 ಸಾವಿರದ ಮೂರು ಚೆಕ್ ನೀಡಿದ್ದೆ ಮತ್ತು ಚೆಕ್ ಕಲೆಕ್ಷನ್ ಗೆ ಹಾಕಬಾರದು ಮೂರು ತಿಂಗಳ ನಂತರ ಒಂದೊಂದೆ ಚೆಕ್ ನೀಡಿ ನಗದು ಪಡೆಯುವ ಷರತ್ತಿನ ಮೇಲೆ.
  ಈ ಪಂಚಾಯಿ ಮಾಡಿ ಹೆಚ್ಚಿನ ಹಣ ನನ್ನಿಂದ ವಸೂಲಿ ಮಾಡುವ ಅವನ ಪ್ರಯತ್ನ ವಿಫಲವಾಗಿ ಅವಮಾನವಾಯಿತು ಅಷ್ಟೇ ಅಲ್ಲ ಆತ ಸಾಗರ ಪೇಟೆಯಲ್ಲಿ ಸರ್ಕಾರಿ ನೌಕರರ ಅನೇಕ ಮನೆ ನಿರ್ಮಾಣದಲ್ಲಿ ಈ ರೀತಿ ಬ್ಲಾಕ್ ಮೇಲ್ ಮಾಡಿ ಹೆಚ್ಚು ಹಣ ಪಡೆದ ಕಲಾವಿದ ಮೇಸ್ತ್ರಿ ಎಂಬುದು ಬಂದ ಪಂಚಾಯತದಾರರಿಗೆ ಗೊತ್ತಿದ್ದ ವಿಷಯವೇ ಆಗಿತ್ತು.
  ಆತ ನಾನು ನೀಡಿದ್ದ 75 ಸಾವಿರ ರೂಪಾಯಿಗಳ ಮೂರು ಮರುದಿನವೇ ಕಲೆಕ್ಷನ್ ಗೆ ಹಾಕಿ ಬೌನ್ಸ್ ಮಾಡಿಸಿ ಸಾಗರದ ನ್ಯಾಯಾಲಯದಲ್ಲಿ ಕೇಸ್ ಹಾಕಿಸಿ ಬಿಟ್ಟ ಅಷ್ಟೆ ಅಲ್ಲ ಅವನ ಮಗಳು ಅದೇ ನ್ಯಾಯಾಲಯದಲ್ಲಿ ಜ್ಯೂನಿಯರ್ ವಕೀಲೆಯಾಗಿ ಸೇರಿದ್ದಳು ಅವಳು ನನ್ನನ್ನು ಈ ಚೆಕ್ ಕೇಸಿನಲ್ಲಿ
ಜೈಲಿಗೆ ಕಳಿಸುವುದಾಗಿ ಹೇಳಿಕೊಂಡು ಓಡಾಡುತ್ತಿದ್ದಳು.
 ಇದೇ ಮೇಸ್ತ್ರಿ ಮಗಳು ಹೃದಯ ಸಂಬಂದಿ ತೊ೦ದರೆಯಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸೇರಿದ್ದಾಗ ನಾನು ಹೋಗಿ ಹತ್ತು ಸಾವಿರ ರೂಪಾಯಿ ಹಣ ಸಹಾಯ ಮಾಡಿದ್ದೆ, ಅವಳು ವಕೀಲಿಕೆ ಓದಿ ಈಗ ನನಗೆ ಈ ರೀತಿ ತೊಂದರೆ ನೀಡಲು ಮುಂದೆ ಬಂದಿದ್ದಳು.
  ನಂತರ ಸಾಗರದ ನನ್ನ ವಕೀಲರಾದ S N. ಮ೦ಜುನಾಥ್ ಮತ್ತು ಮೇಸ್ತ್ರಿಯ ವಕೀಲರಾದ ಈಶ್ವರ ನಾಯಕರು ಸೌಹಾರ್ದವಾಗಿ ಬಗೆಹರಿಸಿಕೊಟ್ಟರು.
 ಹೀಗೆ ನಾನೇ ಎರಡು ಬಾರಿ ಚೆಕ್ ಲೆಖ್ಖಾಚಾರದಲ್ಲಿ ಮುಗ್ಗರಿಸಿದ್ದೆ.
  ಈ ಅನುಭವವನ್ನು ನನ್ನ ಸಣ್ಣ ಕಥಾ ಸಂಕಲನ ಬಿಲಾಲಿ ಬಿಲ್ಲಿ ಅಭ್ಯಂಜನದಲ್ಲಿ ಬೇಳೂರು ಸುಬ್ಬಣ್ಣ ಭಟ್ಟರ ಕಥೆಯಲ್ಲಿ ಸೇರಿಸಿ ಜೀವಮಾನ ಪೂತಿ೯ ನನ್ನ ನೆನಪಿನಲ್ಲಿರುವ೦ತೆ ಮಾಡಿದ್ದೇನೆ.
  ಮೊಸಗಾರರಿಗೆ ಇನ್ನೊಬ್ಬರ ಹಣ ಆಸ್ತಿ ಹೊಡೆದುಕೊಳ್ಳಲು ಚೆಕ್ ಬೌನ್ಸ್ ಕೇಸುಗಳ ದುರುಪಯೋಗವೇ ಈಗ ಹೆಚ್ಚು ಆದರೆ ಈಗೆಲ್ಲ ಇಂತಹ ತೊಂದರೆ ಆದವರಿಗೆ ಫೋಲಿಸರಿOದ ರಕ್ಷಣೆ ಸಿಗುವುದು ದೊಡ್ಡ ಉಪಕಾರ ಮತ್ತು ಪರಿಹಾರ.
  ಈ ರೀತಿ ತೊಂದರೆಗೆ ಒಳಪಡುವವರು ನಿಭ೯ಯದಿ೦ದ ಪೋಲಿಸರಿಗೆ ದೂರು ನೀಡಲು ಮುಂದಾಗಬೇಕು ಇದರ ಜೊತೆಗೆ ಈ RBI ಹೊಸ ನೀತಿ ಒಂದನ್ನು ಜಾರಿ ಮಾಡಿದೆ ಅದೇನೆಂದರೆ 50 ಸಾವಿರಕ್ಕಿಂತ ಹೆಚ್ಚಿನ ಚೆಕ್ ಬ್ಯಾಂಕಿಗೆ ಕಲೆಕ್ಷನ್ ಹಾಕಿದಾಗಲೇ ಬ್ಯಾಂಕಿನಿಂದ ಇನ್ನೊಮ್ಮೆ ಕನ್ಪರ್ಮೇಶನ್ ಕೇಳುವ ಮೂಲಕ ಇಂತಹ ಸುಳ್ಳು ಚೆಕ್ ಕೇಸ್ ತಡೆಯುವ ಪ್ರಯತ್ನ ನಡೆದಿದೆ.
https://m.rbi.org.in//scripts/NotificationUser.aspx?Id=11969

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...