Blog number 1244.NEXT IS BEST ಎಂಬ ಆಂಗ್ಲ ಗಾದೆ ಮತ್ತು ಕನ್ನಡದ ಅಕ್ಕಿ ತಿನ್ನುವವನು ಹೋದರೆ ತೌಡು ತಿನ್ನುವವನು ಬರುತ್ತಾನೆ ಎಂಬ ಗಾದೆಗಳ ತರ್ಕ.
#ಅಕ್ಕಿ_ತಿನ್ನೋನು_ಹೋದರೆ_ತೌಡು_ತಿನ್ನೋನು_ಬರ್ತಾನೆ_ಎಂಬ_ಕನ್ನಡ_ಗಾದೆ
#ಬದಲಾವಣೆಗೆ_ಹೆದರದ_ಬದಲಾಯಿಸಲು_ದೈರ್ಯ_ಮಾಡದಂತ_ಈ_ಗಾಧೆಗಳು
#ಅತ್ಯುತ್ತಮಗುಣಮಟ್ಟದ_ಬ್ಲಾಕ್_ಪಿನಾಲ್_ಪ್ಲೋರ್_ಕ್ಲೀನರ್_ಬ್ಲೀಚಿಂಗ್_ಪೌಡರ್_ಹೊಸ_ಸರಬರಾಜುದಾರರು.
ವ್ಯವಹಾರದಲ್ಲಿ ಪ್ರತಿನಿತ್ಯವೂ ಹೊಸ ತನ ಬದಲಾವಣೆ ಸಹಜ ಇದರ ಮಧ್ಯೆ ದಿಡೀರ್ ಆಗಿ ಕೈ ಕೊಟ್ಟು ಹೋಗುವ ಕೆಲಸಗಾರರು, ಸರಬರಾಜುದಾರರು, ಗ್ರಾಹಕರುಗಳಿಂದ ಆ ಕ್ಷಣದಲ್ಲಿ ಪಿಚ್ಚೆನ್ನಿಸುತ್ತದೆ, ನೆನಪಿನ ಸುರುಳಿ ಹಿಂದಕ್ಕೆ ತಿರುಗಿಸಿ ಛೇ ಹೀಗೇಕೆ ಆಯಿತು? ನನ್ನದು ತಪ್ಪಾಯಿತಾ? ಅಂತೆಲ್ಲ ಯೋಚಿಸಿದರೆ ಖಂಡಿತಾ ನನ್ನ ತಪ್ಪು ಪೈಸೆ ಅಷ್ಟು ಇಲ್ಲ... ನನ್ನಿಂದ ಓಡಿ ಹೋದವ ಅನೇಕ ರೀತಿ ಸಹಾಯ ಸೌಲಭ್ಯ ಲಾಭ ಪಡೆದವನೇ... ಮತ್ಯಾಕೆ ಬಿಟ್ಟು ಹೋದ? ಗೊತ್ತಿಲ್ಲ.
ಕಷ್ಟದ ದಿನಗಳಲ್ಲಿ ಇದ್ದವ ಬಿಟ್ಟು ಹೋದ ಯಾಕೆ? ಅಥವ ಲಾಭ ಇದ್ದಾಗ ಇದ್ದವನು, ಕಷ್ಟ ಬಂದಾಗ ಹೋದನೇಕೆ?. ಇಷ್ಟು ವರ್ಷ ಲಾಭ ಪಡೆದವ ಇವತ್ಯಾಕೆ ರಿಜಿಡ್ ಆಗಿ ದೂರಾದಾ?... ಅವನ ಮಗಳ ಮದುವೆಗೆ ಸಹಾಯ ಪಡೆದಿದ್ದ..ಅವನಿಗೆ ಕಾಯಿಲೆ ಆದಾಗ .... ಕಷ್ಟ ಆದಾಗ .....ಅವನ ಜೊತೆ ನಾನಿರಲಿಲ್ಲವೆ? ನನ್ನ ಸಹಾಯ ಸಹಕಾರ ಆತನಿಗೆ ನೆನಪಿಲ್ಲಾವಾ?...
ಹೀಗೆಲ್ಲ ಎಲ್ಲರೂ ಅವರವರ ಜೀವನದಲ್ಲಿ ಪ್ರಶ್ನೆ ಮಾಡಿಕೊಳ್ಳುವುದು ಇದ್ದೆ ಇದೆ, jealous ನಿಂದ ದೂರ ಆಗುವ, ನಿರೀಕ್ಷಿಸಿದ ಲಾಭವಿಲ್ಲದಾಗ ಅಥವ ಹಡಗು ಮುಳುಗುವ ಮೊದಲೇ ಸಮುದ್ರಕ್ಕೆ ಹಾರುವ ಇಲಿ ಹೆಗ್ಗಣಗಳ ಕಥೆ -ನೀತಿ ಕತೆಗಳೂ ಇದೆ.
ನಾನಂತೂ ಆಂಗ್ಲ ಭಾಷೆಯ ಗಾದೆ ನೆಕ್ಸ್ಟ್ ಇಸ್ ಬೆಸ್ಟ್ (Next is best) ಅಳವಡಿಸಿಕೊಂಡಿದ್ದೇನೆ, ಬಂದವರಿಗೆ ಸ್ವಾಗತ - ಹೋದವರಿಗೆ ವಿಧಾಯ, ಅನೇಕ ಸಂದರ್ಭದಲ್ಲಿ Next is Best ಎನ್ನುವುದು ಸಾಬೀತಾಗಿದೆ ಈ ಪಾಮೂ೯ಲ ಎಲ್ಲಾ ವ್ಯವಹಾರಸ್ಥರಿಗೂ ಸೂಕ್ತವಾದದ್ದೆ ಕಳೆದು ಹೋದದ್ದನ್ನು ಚಿಂತಿಸದೆ ನಮ್ಮ ನಮ್ಮ ವ್ಯವಹಾರಗಳನ್ನು ಮುಂದುವರಿಸಲು ಸಹಕಾರಿ.
ಇದರ ಮಧ್ಯದಲ್ಲಿ ಕನ್ನಡದ ಇನ್ನೊಂದು ಗಾದೆ ಸ್ವಲ್ಪ ತಲೆ ಕೆಡಿಸುತ್ತದೆ ಅದೇನೆಂದರೆ "ಅಕ್ಕಿ ತಿನ್ನೋನು ಹೋದರೆ ತೌಡು ತಿನ್ನೋನು ಬರುತ್ತಾನೆ" ಈ ಗಾದೆ ಪ್ರಕಾರ ಈಗಿನವನು ಹೋದರೆ ಮುಂದೆ ಬರುವವನು ಓಡಿ ಹೋದವನಿಗಿಂತ ಕರಾಬು ಮನುಷ್ಯ ಅಂತ, ಬಹುಶಃ ಇದ್ದಿದರಲ್ಲೇ ಯಥಾಸ್ಥಿತಿ ಕಾಪಾಡುವಂತೆ ಗಾದೆ ಇದು ಇರಬಹುದೇನೋ...
ಸುಮಾರು 12 ವರ್ಷದಿಂದ ಶಿವಮೊಗ್ಗದಿಂದ ಪಿನಾಲ್ ಮತ್ತು ಬ್ಲೀಚಿಂಗ್ ಸರಬರಾಜು ಮಾಡುವ ಒಬ್ಬರಿದ್ದರು ಪ್ರತಿ ತಿಂಗಳು ನಮ್ಮ ಬೇಡಿಕೆಗೆ ಅನುಗುಣವಾಗಿ ಲಾಡ್ಜ್, ರೆಸ್ಟೋರೆಂಟ್, ಕಲ್ಯಾಣ ಮಂಟಪ ಮತ್ತು ಮನೆಗೆ ಅಂತ ಆತನಿಂದ 12 ವರ್ಷದಲ್ಲಿ ಹತ್ತಿರ ಹತ್ತಿರ ಎಂಟು ಲಕ್ಷಕ್ಕೂ ಮಿಕ್ಕಿದ ಖರೀದಿ ಮಾಡಿದ್ದೆ ಆದರೆ ಕಳೆದ ಎರೆಡು ವರ್ಷದಲ್ಲಿ ಆತನಿಗೇನೋ ದುರಾಸೆ, ಕಳಪೆ ಮಾಲು ಸರಬರಾಜು ಶುರುಮಾಡಿದ್ದ ಮತ್ತು ಶಿವಮೊಗ್ಗದ ಮಾಜಿ ಶಾಸಕರು ಗೆದ್ದಾಗ ಅವರಿಂದ ಲಾಭ ಪಡೆದಿದ್ದ ಅವರು ನನಗೆ ಮಿತ್ರರು ಮತ್ತು ನನಗೆ ಅನೇಕ ಸಂದರ್ಭದಲ್ಲಿ ಅವರು ಪ್ರಭಾವ ಬೀರಿ ಸಹಾಯ ಮಾಡಿದವರು, ಅವರಿಂದ ಉಪಕಾರ ಪಡೆದೂ ಅವರನ್ನು ಪ್ರಸನ್ನ ಖಾನ್ ಅಂತ ನಿಂದಿಸುವುದು ನನಗೆ ಆತನ ಬಗ್ಗೆ ಅಸಹನೆ ಮೂಡಿಸಿತ್ತು.
ಮೊನ್ನೆ ಅವರು ತಂದ ಪಿನಾಲ್ ಬ್ಲೀಚಿಂಗ್ ಪೌಡರ್ ಗಳು ಪುನಃ ಕಳಪೆ ಆಗಿತ್ತು ಇದನ್ನು ನನ್ನ ಸಿಬ್ಬಂದಿಗಳು ಆತನ ಜೊತೆಗಾರರ ಗಮನಕ್ಕೆ ತಂದರು ಅವರೂ ಕೂಡ ತಮ್ಮ ಈ ಉತ್ಪನ್ನ ಸರಿ ಇಲ್ಲ ಎಂದು ಒಪ್ಪಿಕೊಂಡಿದ್ದಾರೆ ಇದರಿಂದ ಸರಬರಾಜುದಾರ ಅವಮಾನದಿಂದ ಕುಣಿಯಲು ಶುರು ಮಾಡಿದ್ದಾನೆ ಈ ಗಲಾಟೆಯಿಂದ ನನಗೂ ಈತನ ವ್ಯವಹಾರಿಕಾ ಸಂಬಂದ ಮುಂದುವರಿಸಲು ಇಷ್ಟ ಇರಲಿಲ್ಲ ಆದ್ದರಿಂದ ಈತನ ಪಿನಾಯಿಲ್ ಬ್ಲೀಚಿಂಗ್ ವ್ಯವಹಾರದ ಸಂಬಂದ ಅಂತ್ಯಗೊಳಿಸಿದೆ.
ಈಗ ಎಲ್ಲರೂ ಪಿನಾಲ್ ಮತ್ತು ಪ್ಲೋರ್ ಕ್ಲೀನರ್ ಒಂದೇ ಅಂತ ಬಾವಿಸಿದ್ದಾರೆ ಆದರೆ ಪಿನಾಲ್ ಮಾತ್ರ ನಂಜುನಿರೋದಕ ಸೊಂಕಿಗೆ ಕಾರಣವಾಗುವ ಸೂಕ್ಷ್ಮಾಣು ಜೀವಿ ನಾಶ ಮಾಡಲು 1843 ರಲ್ಲಿ ಕಲ್ಲಿದ್ದಲು ಟಾರ್ ನಿಂದ ಬ್ಲಾಕ್ ಪಿನಾಲ್ ಉತ್ಪಾದಿಸಲು ಪ್ರಾರಂಭ ಮಾಡಿದ್ದು ಪ್ರೆಂಚ್ ರಸಾಯನ ತಜ್ಞ ಚಾರ್ಲ್ಸ್ ಗೆಹಾರ್ಡ್ ಪಿನಾಲ್ ಇವರಿಂದಾಗಿ ಇದಕ್ಕೆ ಪಿನಾಲ್ ಎಂಬ ಹೆಸರು ಬ್ಲಾಕ್ ಪಿನಾಲ್ 5 ಲೀಟರ್ ಕ್ಯಾನ್ ಗೆ 350 ರೂಪಾಯಿ, ಬ್ಲಾಕ್ ಪಿನಾಲ್ ಇಲ್ಲದೆ ನಿಮ್ಮ ಸಂಸ್ಥೆಯ ಶೌಚಾಲಯಗಳು ನಂಜುನಿರೋದಕವಾಗಲು ಸಾಧ್ಯವೇ ಇಲ್ಲ.
ಡಿ ಅಡೋರೆಂಟ್ ಮಿಶ್ರ ದ್ರವ ವೈಟ್ ಪಿನಾಲ್ ಎಂಬ ಪ್ಲೋರ್ ಕ್ಲೀನರ್ ತಯಾರಿಸಲು ಬೇಕಾದ ಕಂಪೌಂಡ್ ಮತ್ತು ಡಿ ಅಡೋರೆಂಟ್ ಗಳು ಶಿವಮೊಗ್ಗದ ರಾಜ್ ಕೆಮಿಕಲ್ಸ್ ನಲ್ಲಿ ಲಭ್ಯವಿದೆ ಅದನ್ನು ತಂದು ನಾವೇ ಪ್ಲೋರ್ ಕ್ಲೀನರ್ ತಯಾರಿಸಿಕೊಳ್ಳುತ್ತೇವೆ ಇವರಲ್ಲಿ ಅತ್ಯುತ್ತಮ ಗುಣಮಟ್ಟದ ಬ್ಲೀಚಿಂಗ್ ಪೌಡರ್ ಕೂಡ ಇವರಲ್ಲಿ ಸಿಗುತ್ತದೆ ಇವರ ಸಂಪರ್ಕ ಸಂಖ್ಯೆ 8050015059.
ಅರ್ಧ ಬೆಲೆಯಲ್ಲಿ ಗುಣಮಟ್ಟದ ಪಿನಾಲ್ / ಬ್ಲೀಚಿಂಗ್ ಸರಬರಾಜು ಮಾಡುವ ಹೊಸಬರು ಸಿಕ್ಕಿದ್ದಾರೆ ಆದ್ದರಿಂದ NEXT IS BEST ಎಂಬುದು ಸತ್ಯವೇ ಅಂತ ಸಾಬೀತಾಗಿದೆ.
Comments
Post a Comment