Blog number 1234. ಜಾತ್ರಾ ಪ್ರದರ್ಶನದ ಮುಖ್ಯ ಆಕರ್ಷಣೆ ಜೈ೦ಟ್ ವೀಲ್ ಎಂಬ ವಿದ್ಯುತ್ ಚಾಲಿತ ತೊಟ್ಟಿಲುಗಳ ಪ್ರವೇಶ ಧರ ಕೇವಲ 50 ರೂಪಾಯಿಗೆ ನಿಗಧಿ ಮಾಡಿಸಿದ ಸಾಗರದ ಶಾಸಕ ಹರತಾಳು ಹಾಲಪ್ಪ
#ಜಾತ್ರೆಗಳಲ್ಲಿ_ಇರಲೇಬೇಕಾದ_ಜೈಂಟ್_ವೀಲ್_ತೊಟ್ಟಿಲು.
#ವಿಶ್ವದ_ಅತ್ಯಂತ_ಎತ್ತರದ_ಜೈಂಟ್_ವೀಲ್_ಐನ್_ದುಬೈನಲ್ಲಿದೆ.
#ಹದಿನೇಳನೆ_ಶತಮಾನದಲ್ಲಿ_ಬಲ್ಗೇರಿಯಾದಿಂದ_ಭಾರತಕ್ಕೆ_ಪರಿಚಯವಾದ_ಸಂತೋಷದ_ಚಕ್ರ
#ಇಟಲಿ_ಪ್ರವಾಸಿ_ಪಿಯೋತ್ರ_ಡಲ್ಲಾವಿಲ್ಲೆ_ಪತ್ರದಲ್ಲಿ_ಕಾನ್ಸಟೆಂಟಿನೋಪಲಲ್ಲಿ
#ರಂಜಾನ್_ಹಬ್ಬದಲ್ಲಿ_ಇಂತಹ_ವೀಲ್_ಹತ್ತಿದ್ದ_ಉಲ್ಲೇಖವಿದೆ
ಕನ್ನಡದಲ್ಲಿ ತಿರುಗುಣಿ ತೊಟ್ಟಿಲು ಅನ್ನುವ ಎಲ್ಲಾ ಜಾತ್ರೆ - ಪ್ರದರ್ಶನಗಳಲ್ಲಿ ಮುಖ್ಯ ಆಕರ್ಷಣೆ ಆಗಿರುವ ಇಂಗ್ಲೀಷ್‌ನಲ್ಲಿ ಜೈ೦ಟ್ ವೀಲ್ (ಬ್ಬಹತ್ ಗಾತ್ರದ ಚಕ್ರದ ತೊಟ್ಟಿಲು) ಹಿಂದಿಯಲ್ಲಿ ಜೂಲ, ಅಮೇರಿಕಾದಲ್ಲಿ ಪೆರಿಸ್ ವೀಲ್ 1893ರಲ್ಲಿ ಅಮೇರಿಕಾದ ಚಿಕಾಗೋದಲ್ಲಿ ನಡೆದ ಕೊಲ೦ಬಿಯಾ ಪ್ರದರ್ಶನದಲ್ಲಿ ಜಾಜ್೯ ವಾಷಿಂಗ್ಟನ್ ಗೇಲ್ ಪೆಲಿಸ್ ಜೂನಿಯರ್ ಪ್ರಥಮ ಬಾರಿಗೆ ನಿರ್ಮಿಸಿ ಬಳಸಿದರು.
ಇದಕ್ಕೂ ಮೊದಲು ಇದು ಮಾನವ ದೈಹಿಕ ಶಕ್ತಿಯಿಂದ ತಿರುಗಿಸುವ ಮರದ ಸಣ್ಣ ತೊಟ್ಟಿಲುಗಳು ಇದಕ್ಕೆ ಸಂತೋಷದ ಚಕ್ರ (Happy wheel) ಅನ್ನುವ ಹೆಸರು 17ನೇ ಶತಮಾನದಲ್ಲಿ ಬಲ್ಗೇರಿಯದಿಂದ ಭಾರತಕ್ಕೆ ಬಂತು ಎಂಬ ಉಲ್ಲೇಖಗಳಿದೆ.
ಇಟಲಿಯ ಪ್ರವಾಸಿ ಪಿಯೋತ್ರ ಡಲ್ಲಾವಿಲ್ಲೆ ತನ್ನ ಪ್ರವಾಸಿ ಪತ್ರದಲ್ಲಿ ರಂಜಾನ್ ಹಬ್ಬದಲ್ಲಿ ಕಾನ್ಸ್ಟೆಂಟಿನೋಪಲ್ ನಲ್ಲಿ ಇಂತಹ ಚಕ್ರದಲ್ಲಿ ಕುಳಿತ ಅವರ ಅನುಭವ ಬರೆದ ದಾಖಲೆ ಇದೆ.
ವಿದ್ಯುತ್ ಚಾಲಿತ ಸುದಾರಣೆಯ ರಾಕ್ಷಸ ಗಾತ್ರದ ಜೈಂಟ್ ವೀಲ್ ಗಳ ಈ ಕಾಲದಲ್ಲಿ ವಿಶ್ವದ ಅತ್ಯಂತ ಎತ್ತರದ ಜೈಂಟ್ ವೀಲ್ 853 ಅಡಿ ಎತ್ತರದ್ದು (260 ಮೀಟರ್) ಐನ್ ದುಬೈಯಲ್ಲಿದೆ.
ಭಾರತದಲ್ಲಿ ಬಿಹಾರದ ನಲಂದಾ, ಜೋದ್ ಪುರ, ಅಹಮದಾಬಾದ್ ನಲ್ಲಿ 40 ಸೀಟಿನ ವಿದ್ಯುತ್ ಚಾಲಿತ ಜಾಯಿಂಟ್ ವೀಲ್ ತಯಾರಿಸಿ 7 ರಿಂದ 8 ಲಕ್ಷಕ್ಕೆ ಮಾರಾಟ ಮಾಡುವ ಅನೇಕ ಸಂಸ್ಥೆಗಳು ಇದೆ.
ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಜೈಂಟ್ ವೀಲ್ ಜೊತೆಗೆ ಅನೇಕ ಮನೋರಂಜನೆಯ ಪ್ರದರ್ಶನಗಳು ಬರುತ್ತವೆ ಈ ಬಾರಿ ಅವುಗಳ ಪ್ರವೇಶ ಧರ ಕೇವಲ 50 ರೂಪಾಯಿಗೆ ನಿಗದಿ ಮಾಡಿರುವುದರಿಂದ ಅನುಕೂಲವಾಗಿದೆ.
ಮೂರು ವರ್ಷಗಳಿಗೂಮ್ಮೆ ನಡೆಯುವ ಮಾರಿಕಾಂಬಾ ಜಾತ್ರೆಯಲ್ಲಿ ಸಾಗರ ಪಟ್ಟಣ ವಾಸಿಗಳ ಮಕ್ಕಳು ನಿತ್ಯ ಜಾತ್ರೆಯ ಅಮ್ಯೂಸ್‌ಮೆಂಟ್ ಗೆ ಹೋಗಿ ಇಂತಹ ಮನೋರಂಜನೆಯಲ್ಲಿ ಭಾಗವಹಿಸುತ್ತಾರೆ ಪ್ರತಿ ಕುಟುಂಬ ಕಡಿಮೆ ಅಂದರೂ 8 ರಿಂದ 10 ಸಾವಿರ ವ್ಯಯಿಸುತ್ತದೆ.
ಪ್ರವೇಶದ ಧರ 50 ರೂಪಾಯಿಗೆ ಸೀಮಿತಗೊಳಿಸುವ ಪ್ರಯತ್ನ ಸ್ಥಳಿಯ ಶಾಸಕ ಹರತಾಳು ಹಾಲಪ್ಪನವರದ್ದೆಂದು ಇದಕ್ಕೆ ಸಾಗರ ಮಾರಿಕಾಂಬಾ ಸಮಿತಿ ಕೂಡ ಸಹಕರಿಸಿರುವುದು ಶ್ಲಾಘನೀಯವಾಗಿದೆ ಇದರಿಂದ ಸಾಗರ ಪಟ್ಟಣ ವಾಸಿಗಳ ಜೊತೆ ಗ್ರಾಮೀಣ ಪ್ರದೇಶದ ಜಾತ್ರಾ ವೀಕ್ಷಕರಿಗೂ ಕಡಿಮೆ ಬಜೆಟ್ ನಲ್ಲಿ ತಮ್ಮ ಮಕ್ಕಳಿಗೆ ಈ ಪ್ಯಾಂಟಸಿ ಜಗಮಗ ಜಗತ್ತು ತೋರಿಸಲು ಸುಲಭ ಸಾಧ್ಯವಾಗಿದೆ ಎಲ್ಲಾ ಊರುಗಳಲ್ಲೂ ಹರತಾಳು ಹಾಲಪ್ಪರ ಈ ಪಾರ್ಮೂಲಾ ಜಾತ್ರಾ ಪ್ರದರ್ಶನಗಳಲ್ಲಿ ಆಯಾ ಶಾಸಕರು ಅಳವಡಿಸಿಕೊಳ್ಳಬೇಕು.
Comments
Post a Comment