Blog number 1273. ಸಾಗರದ ಪುಣ್ಯ ಕ್ಷೇತ್ರ ಶ್ರೀ ಶ್ರೀಧರ ದತ್ತಮಂದಿರದಲ್ಲಿ ನಡೆದ ವಿಶೇಷ ಮಹಾ ರುದ್ರಯಾಗದ ಗೌರವಾಧ್ಯಕ್ಷ ಟಿ.ವಿ. ಪಾಂಡುರಂಗ ಅವರೊಂದಿಗೆ.
https://youtu.be/Emz3jWVMC_o
#ಪಾಂಡಣ್ಣರ_ಗೌರವಾಧ್ಯಕ್ಷತೆಯಲ್ಲಿ_ಸಾಂಗವಾಗಿ_ನಡೆದ_ಮಹಾರುದ್ರ_ಯಾಗ
#ಶ್ರೀಶ್ರೀಧರ_ದತ್ತ_ಮಂದಿರ_ಅಗ್ರಹಾರ_ಸಾಗರದಲ್ಲಿ
#ಇದೇ_ಪೆಬ್ರುವರಿ_24ರಿಂದ_26ರವರೆಗೆ_ನಡೆಯಿತು
#ಮಹಾರುದ್ರಯಾಗ_ಇದೇ_ಮೊದಲು_ಸಾಗರ_ತಾಲ್ಲುಕಿನಲ್ಲಿ_ನಡೆದದ್ದು_ಎನ್ನುತ್ತಾರೆ.
#ಈ_ದತ್ತಮಂದಿರದಲ್ಲಿ_1950ರಲ್ಲಿ_ಶ್ರೀಧರ_ಸ್ಟಾಮಿಗಳ_ಪ್ರವಚನದಲ್ಲಿ
#ಶಿವಮೊಗ್ಗದ_ಪಿ_ಪುಟ್ಟಯ್ಯ_ನಿತ್ಯ_ಭಾಗವಹಿಸಿದ್ದ_ನೆನಪು.
#ಸಾಗರದ_ಮುನ್ಸಿಪಾಲಿಟಿ_ಪ್ರಥಮ_ಅಧ್ಯಕ್ಷರಾದ_ಖ್ಯಾತ_ವಕೀಲ
#ಮೃತ್ಯುಂಜಯಬಾಪಟ್_ದತ್ತಮಂದಿರ_ಕಮಿಟಿ_ದಮ೯ದರ್ಶಿಯಾಗಿದ್ದರು.
#ಮಹಾರುದ್ರಯಾಗದ_ಆಮಂತ್ರಣ_ಪತ್ರ_ವಿಶೇಷವಾಗಿ_ಮುದ್ರಿಸಲಾಗಿದೆ.
ಟಿ.ವಿ.ಪಾಂಡುರಂಗ ದೈವಭಕ್ತರು ಅವರನ್ನು ಜನ ಪಾಂಡಣ್ಣ ಎಂದೇ ಪ್ರೀತಿಯಿ೦ದ ಕರೆಯುತ್ತಾರೆ ಅವರು ಸುಮಾರು 15 ವರ್ಷದಿಂದ ನಮ್ಮ ಊರಿನ ಶ್ರೀವರ ಸಿದ್ಧಿವಿನಾಯಕ ದೇವಾಲಯದಲ್ಲಿ ಅಂಗಾರಕ ಸಂಕಷ್ಟಹರ ಚತುರ್ಥಿಯಂದು ಚಂದ್ರದರ್ಶನದ ನಂತರದ ಅನ್ನ ಸಂತರ್ಪಣೆ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ ಕನಿಷ್ಟ 500 ಗರಿಷ್ಟ 1500 ಭಕ್ತರು ಆ ದಿನ ಪ್ರಸಾದ ಸೇವಿಸುತ್ತಾರೆ.
ತುಂಬಾ ದಿನಗಳ ನಂತರ ನನ್ನ ಆಫೀಸಿಗೆ ಪಾಂಡಣ್ಣ ಇವತ್ತು ಬಂದಿದ್ದರು ಇದೇ ಫೆಬ್ರುವರಿ 24 ರಿಂದ 26 ರವರೆಗೆ ಸಾಗರದ ಅಗ್ರಹಾರದ ಶ್ರೀ ಶ್ರೀಧರ ದತ್ತಮಂದಿರದಲ್ಲಿ ನಡೆದ ಮಹಾರುದ್ರಯಾಗದ ಗೌರವಾಧ್ಯಕ್ಷರಾಗಿ ತಮ್ಮ ಜವಾಬ್ದಾರಿ ಯಶಸ್ವಿಯಾಗಿ ನಡೆಸಿದ ಬಗ್ಗೆ ಅವರ ಹತ್ತಿರ ಕೇಳುವುದೂ ಇತ್ತು.
ಸಾಗರದ ದತ್ತಮಂದಿರದ ಕ್ಷೇತ್ರ ಮಹಾತ್ಮೆ ಮತ್ತು ಸ್ಥಳ ಪುರಾಣಗಳು ಅನೇಕ. ಅಲ್ಲಿ ವರದಳ್ಳಿಯ ಶ್ರೀಧರ ಸ್ವಾಮಿಗಳು ತಪಸ್ಸು ಮಾಡಿದ್ದರು, 1950ರಲ್ಲಿ ನಿತ್ಯ ಶ್ರೀಧರ ಸ್ವಾಮಿಗಳ ಪ್ರವಚನ ನಡೆಯುತ್ತಿತ್ತು ಆಗ ಸಾಗರದಲ್ಲಿ 8ನೇ ತರಗತಿ ಓದುತ್ತಿದ್ದ ಶಿವಮೊಗ್ಗದ ಪ್ರಕೃತಿ ಮುದ್ರಣಾಲಯದ ಪಿ. ಪುಟ್ಟಯ್ಯ ಈ ಪ್ರವಚನ ಕೇಳಲು ಹೋಗುತ್ತಿದ್ದ ನೆನಪುಗಳು ಹೇಳುತ್ತಿದ್ದರು.
ಈ ಜಾಗದಲ್ಲೇ ಮಹಾರುದ್ರಯಾಗ ನಡೆದಿದೆ, ಈ ಯಾಗದ ಆಮಂತ್ರಣ ಪತ್ರ ವಿಶೇಷ ಮಾಹಿತಿಗಳ ಜೊತೆ ಮುದ್ರಿಸಲಾಗಿದೆ, ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕರು ಸಾಗರ ಪಟ್ಟಣ ನಿರ್ಮಿಸಿದ ದಾಖಲೆಗಳಿರುವ ಶಿವ ತತ್ವ ರತ್ನಾಕರ ಮತ್ತು ಕೆಳದಿ ನೃಪವಿಜಯದ ಉಲ್ಲೇಖ, ದತ್ತಮಂದಿರದ ಸ್ಥಳ ಪುರಾಣ, ಆಗಿನ ದಾನಿಗಳು, ಶ್ರೀಧರ ಸ್ವಾಮಿಗಳ ಭಾಗವಹಿಸುವಿಕೆ, ಈಗ ನೆರವೇರಿದ ಮಹಾರುದ್ರಯಾಗದ ಬಗ್ಗೆ, ಇದರ ನೇತೃತ್ವ ವಹಿಸಿದವರು, ದಾನಿಗಳು, ಸಭಾ ಕಾಯ೯ಕ್ರಮ ಇತ್ಯಾದಿಗಳ 20 ಪುಟಗಳ ಕೈಪಿಡಿ ರೂಪದ ಆಮಂತ್ರಣ ಪತ್ರ ಇದು.
ಈ ಮಹಾರುದ್ರಯಾಗದಲ್ಲಿ 200ಕ್ಕೂ ಹೆಚ್ಚಿನ ಋತ್ವಿಜರು ಭಾಗವಹಿಸಿದ್ದರಂತೆ, ಸುಮಾರು 12 ಸಾವಿರ ಜನರಿಗೆ ಎರೆಡು ದಿನದಲ್ಲಿ ಅನ್ನ ಸಂತರ್ಪಣೆ ಆಯಿತಂತೆ, 1000 ತೆಂಗಿನ ಕಾಯಿ, 100 ಕೆಜಿ ತುಪ್ಪ 100 ಕೆಜಿ ಅಕ್ಕಿ, 1200 ಕೆಜಿ ಬತ್ತ, 200 ಕೆಜಿ ಕರಿ ಎಳ್ಳು, 200 ಪಂಚೆ, 50ಕೆಜಿ ಅಡಿಕೆ,2000 ಕೆಜಿ ಹೋಮದ ಕಟ್ಟಿಗೆ ಜೊತೆ ವಿವಿದ ಹಣ್ಣು - ಹೂವು - ವೀಳ್ಯದೆಲೆ - ಬಾಳೆ ಹಣ್ಣುಗಳನ್ನು ಯಾಗಕ್ಕೆ ಸಮರ್ಪಿಸಲಾಗಿದೆ.
ಸುಮಾರು 35 ಲಕ್ಷ ವೆಚ್ಚದಲ್ಲಿ ದಾನಿಗಳ ಸಹಾಯ - ಸಹಕಾರದಲ್ಲಿ ಸಾಗರದ ಅನೇಕ ಮಹನೀಯರ ಶ್ರಮ ಮತ್ತು ಮೇಲ್ವಿಚಾರಣೆಯಲ್ಲಿ ಈ ಅಭೂತಪೂರ್ವಕವಾದ ಮಹಾರುದ್ರಯಾಗ ಭಕ್ತಿ ಪೂರ್ವಕವಾಗಿ ನಡೆದಿದೆ ಇದು ಹಣ ಮಾತ್ರ ಸಂಗ್ರಹಣೆಯಿಂದ ಅಷ್ಟು ಸುಲಭವಾಗಿ ನಡೆಯಲು ಸಾಧ್ಯವಿಲ್ಲ ಇದಕ್ಕೆ ಬೇಕಾದ ದೊಡ್ಡ ಸಂಖ್ಯೆಯ ಯೋಗ್ಯ ಋತ್ವಿಜರನ್ನು ಕರೆತರುವುದು ಈ ಕಾಲದಲ್ಲಿ ತುಂಬಾ ಕಷ್ಟ.
ಸಾಗರ ತಾಲ್ಲೂಕಿನಲ್ಲಿ ಇಂತಹ ದೊಡ್ಡದಾದ ಯಾಗ ನಡೆಸಲು ಕಾರಣರಾದ ಸರ್ವರಿಗೂ ಅಭಿನಂದಿಸುತ್ತಾ ಈ ಸಮಿತಿಯ ಗೌರವಾಧ್ಯಕ್ಷರಾಗಿದ್ದ ಪಾಂಡಣ್ಣರನ್ನು ನಮ್ಮ ಊರಿನ ಶ್ರೀ ವರಸಿದ್ದಿ ವಿನಾಯಕ ದೇವರ ಪೋಟೋ ನೀಡಿ ಮುಂದಿನ ದಿನಗಳಲ್ಲಿ ಅವರಿಂದ ಇನ್ನೂ ದೊಡ್ಡ ದೊಡ್ಡ ದಾಮಿ೯ಕ ಸೇವೆಗಳು ನೆರವೇರಲಿ ಎಂದು ಹಾರೈಸಿದೆ.
ಈ ಮಹಾರುದ್ರಯಾಗದ ಬಗ್ಗೆ ಪಾಂಡಣ್ಣನವರು ಮಾತಾಡಿದ ವಿಡಿಯೋ ಇಲ್ಲಿದೆ.
Comments
Post a Comment