#ಸ್ವಾತಂತ್ರ_ನಂತರದ_ಮೊದಲ_ವಿಲೇಜ್_ಅಕೌಂಟೆಂಟ್_ಮತ್ತು_ಆನಂದಪುರದ_ವಿಲೇಜ್_ಪಂಚಾಯತ್_ಕಾಯ೯ನಿವ೯ಹಿಸಿದವರು.
ಆನಂದಪುರದ ಅಧಿಕೃತ ಮಾಹಿತಿ ಹೇಳುವವರು ಈ ರಂಗನಾಥ ಭಟ್ಟರು ಮತ್ತು ಬೋಜ್ ರಾಜ್ ಮಾಸ್ತರ್ (ಬೋಜರಾಜ್ ಅಯ್ಯಂಗಾರರು) ಮಾತ್ರ, ಬೋಜ್ ರಾಜ್ ಆಯಂಗಾರರ ಮತ್ತು ರಂಗನಾಥ ಭಟ್ಟರ ಕುಟುಂಬ ಪ್ರಸಿದ್ಧ ಭೂ ಮಾಲಿಕರಾದ ರಾಮಕೃಷ್ಣ ಅಯ್ಯಂಗಾರ್ (ಮಂತ್ರಿ ಬದರಿನಾರಾಯಣ ಅಯ್ಯಂಗಾರ್ ರ ತಂದೆ) ಆನಂದಪುರಕ್ಕೆ ಬರುವ ಮೊದಲೇ ಇವರ ಅಜ್ಜಂದಿರದ್ದು ಮೂರು ತಲೆಮಾರು ಕಳೆದಿತ್ತಂತೆ.
ನನಗೆ ಬಾರೀ ಕಷ್ಟದಿಂದ ಆನಂದಪುರದ ವಿಲೇಜ್ ಪಂಚಾಯಿತಿ ಕಟ್ಟಡದಲ್ಲೇ ಆನಂದಪುರದ ಶ್ರೀಮತಿ ಕೆರಿಯಮ್ಮ ನಡೆಸುತ್ತಿದ್ದ ನಸ೯ರಿ ಶಾಲೆಗೆ ಸೇರಿಸಿದಾಗ (ಒಂದೆರೆಡು ದಿನದಲ್ಲೇ ಬಿಟ್ಟುಬಿಟ್ಟೆ 1968 ರಲ್ಲಿ) ರಂಗನಾಥ ಭಟ್ಟರು ಬಿಳಿ ಶಟ್೯ ಮತ್ತು ಬಿಳಿ ಪಂಚೆಯಲ್ಲಿ ವಿಲೇಜ್ ಪಂಚಾಯಿತಿ ಅಧಿಕಾರಿ ಮತ್ತು ರೆವಿನ್ಯೂ ಇಲಾಖೆ ವಿಲೇಜ್ ಅಕೌಂಟೆಂಟ್ ಆಗಿದ್ದರು, ಆಗ ವಿಲೇಜ್ ಪಂಚಾಯತ್ ಛೇಮ೯ನ್ ಬದರೀನಾರಾಯಣ್ ಆಯ್ಯಂಗಾರರ ಅಣ್ಣ ವೆಂಕಟಚಲ ಅಯ್ಯಂಗಾರರು. (ಆಗ ರೆವಿನ್ಯೂ ಇಲಾಖೆಯ ಅಡಿಯಲ್ಲಿ ವಿಲೇಜ್ ಪಂಚಾಯಿತಿ ಇತ್ತು ಈಗ ಪ್ರತ್ಯೇಕ ಪಂಚಾಯತ್ ಇಲಾಖೆ ಆಗಿದೆ.)
ಪ್ರತಿ ವರ್ಷದಂತೆ ಆನಂದಪುರದ ಇತಿಹಾಸ ಪ್ರಸಿದ್ದಿ ಪಡೆದ ರಂಗನಾಥ ದೇವಾಲಯದ ಜಾತ್ರಾ ಆಹ್ವಾನ ನೀಡಲು ಮೊನ್ನೆ ನನ್ನ ಮನೆಗೆ ರಂಗನಾಥ ಭಟ್ಟರು ಬಂದಾಗಲೂ ಸುಮಾರು 52 ವರ್ಷದ ಹಿಂದಿನ೦ತೆ ಬಿಳಿ ಶರ್ಟ್ ಪಂಚೆಯಲ್ಲೇ ಇದ್ದರು.
ಇವರ ಕಿರಿಯ ಸಹೋದರ ಕೆ.ವಿ.ಸುರೇಶ್ ಶಿವಮೊಗ್ಗದಲ್ಲಿ ಇದ್ದಾರೆ ಈಗಲೂ ನನಗೆ ಆನಂದಪುರದ ಮಾಹಿತಿಗೆ ಸಹಕರಿಸುತ್ತಾರೆ, ಇನ್ನೊಬ್ಬ ಸಹೋದರರ ಮಗ ಈಗ ಮಣಿಪಾಲ ಸಂಸ್ಥೆಯ ಕೀಲು ಮೂಳೆ ವಿಭಾಗದ ಮುಖ್ಯಸ್ಥರಾಗಿರುವ ಡಾ.ಅನಿಲ್ ಭಟ್ ದೇಶದಲ್ಲೇ ಕೆಲವೇ ಕೆಲವು ಪ್ರಸಿದ್ಧ ವೈದ್ಯರಲ್ಲಿ ಒಬ್ಬರು. (Orthopedic Head of the Dept)
ಯಾರಿಗೂ ತೊಂದರೆ ಕೊಡದ, ಕೈಲಾದ ಸಹಾಯ ಮಾಡುತ್ತಾ ಸಾತ್ವಿಕರಾಗಿ, ದೈವಭಕ್ತರಾಗಿ ಈಗ ನಿವೃತ್ತ ಜೀವನ ನಡೆಸುತ್ತಿರುವ ರಂಗನಾಥ ಭಟ್ಟರು ಆ ಕಾಲದಲ್ಲಿ ಜಿಲ್ಲಾಧಿಕಾರಿಗಳಾದವರಿಂದ ಪ್ರಶಂಸೆಗೊಳಪಟ್ಟ ಸಕಾ೯ರದ ನಿಯತ್ತಿನ ಸೇವಕರಾದವರು, ಆ ಕಾಲದ ರಾಜ್ಯದ ವಿದ್ಯಾ ಮಂತ್ರಿ, ಲೋಕಸಭಾ ಸದಸ್ಯರಾಗಿದ್ದ ಬದರಿನಾರಾಯಣ ಅಯ್ಯಂಗಾರರು ಆನಂದಪುರದ ಅಭಿವೃದ್ದಿ ಮತ್ತಿತರ ಕಾರಣಕ್ಕೆ ರಂಗನಾಥ ಭಟ್ಟರ ಹತ್ತಿರ ಚಚಿ೯ಸುತ್ತಿದ್ದರಂತ ನಮ್ಮ ತಂದೆ ಹೇಳುತ್ತಿದ್ದ ನೆನಪು.
ದೂರದ ದಾರವಾಡ ಸೀಮೆಯ ಕೋಳಿವಾಡದಿಂದ ತೀಥ೯ಹಳ್ಳಿ ಬೊಮ್ಮರಸ ಅಗ್ರಹಾರದವರೆಗೆ ವಲಸೆ ಬಂದು ನಂತರ ಆನಂದಪುರದಲ್ಲಿ ನೆಲೆನಿಂತ ಇವರ ಕುಟುಂಬ ಈಗ ನಾನ್ನೂರು ವರ್ಷದ ನಂತರ ಇವರ ಮಕ್ಕಳ ಕುಟುಂಬ ಈ ಕಾಲದಲ್ಲಿ ಉದ್ಯೋಗ ಜೀವನಕ್ಕಾಗಿ ಬೇರೆ ಕಡೆ ನೆಲೆ ಕಂಡುಕೊಳ್ಳುತ್ತಾ ಇದೆ.
Comments
Post a Comment