Blog number 1264. ಆನಂದಪುರಂನ ಮಾರಿಕಾಂಬಾ ಜಾತ್ರೆ 28- ಫೆಬ್ರುವರಿ 2023ರಿಂದ 6- ಮಾರ್ಚ್ -2023. ಹಿಂದಿನ ಜಾತ್ರೆ 11- ಮಾರ್ಚ್ -2023ರಲ್ಲಿ ಅದ್ದೂರಿಯಾಗಿ ಪ್ರಾರಂಭವಾಗಿ ಕೊರಾನಾದಿ0ದ ಜಾತ್ರೆಯೇ ರದ್ದಾಗಿತ್ತು.
https://youtu.be/SWSw2bNVRx0
#ಆನಂದಪುರ0_ಜಾತ್ರೆ
#ದಿನಾಂಕ_27_ಪೆಬ್ರುವರಿಯಿಂದ_6_ಮಾರ್ಚ್_2023ರ_ವರೆಗೆ
#ಆಹ್ವಾನ_ಪತ್ರಿಕೆ_ನೀಡಲು_ಜಾತ್ರಾಸಮಿತಿ_ಅಧ್ಯಕ್ಷ_ಬಸವರಾಜ್
#ಕಾರ್ಯದರ್ಶಿ_ಉಮೇಶ್_ಮತ್ತು_ಪದಾಧಿಕಾರಿಗಳು_ಬಂದಿದ್ದರು.
#ಕಳೆದ_2020ರ_ಜಾತ್ರೆಯಲ್ಲಿ_ಅದ್ದೂರಿ_ಆಗಿ_ನಡೆಯುತ್ತಿದ್ದಾಗ_ರಾಷ್ಟ್ರೀಯ_ಹೆದ್ದಾರಿ_4_ಗಂಟೆ_ಬಂದ್_ಆಗಿದ್ದು.
#ಅದರ_ಮರುದಿನವೇ_ಜಿಲ್ಲಾಡಳಿತ_ಕೊರಾನಾದಿಂದ_ಜಾತ್ರೆ_ರದ್ದು_ಮಾಡಿದ್ದು.
#ನಂತರ_ಜನತಾಕರ್ಪ್ಯೂ_ಲಾಕ್_ಡೌನ್_ಜಾರಿ_ಆಯಿತು
#ಅಮ್ಯೂಸ್_ಮೆಂಟ್_ಹಾಕಿದವರೆಲ್ಲ_ಲಾಕ್_ಡೌನ್_ನಿಂದ_ಊರಿಗೆ_ತಲುಪಲಾಗದೆ_ಕೂಲಿ_ಕೆಲಸಕ್ಕೆ
#ಈ_ವರ್ಷದ_ಜಾತ್ರೆಯಲ್ಲಿ_ಬುದವಾರ_1_ಮಾರ್ಚ್_2023ರಂದು_ಆನಂದಪುರಂನ_ದಾಸಕೊಪ್ಪ_ವೃತ್ತದಿಂದ_ಯಡೇಹಳ್ಳಿ_ವೃತ್ತದವರೆಗೆ
#ವಾಹನ_ನಿಲುಗಡೆ_ನಿಷೇದಕ್ಕೆ_ವಿನಂತಿಸಿದ್ದೇನೆ.
ಇವತ್ತು ಆನಂದಪುರಂ ಮಾರಿ ಜಾತ್ರಾ ಸಮಿತಿ ಅಧ್ಯಕ್ಷರಾದ ಬಸವರಾಜ್ ಮತ್ತು ಕಾರ್ಯದರ್ಶಿ ಉಮೇಶ್ ಜಾತ್ರಾ ಆಹ್ವಾನ ನೀಡಲು ಬಂದಿದ್ದರು.
ಕಳಿದ ಮಾರಿಕಾಂಬಾ ಜಾತ್ರೆ 11-ಮಾರ್ಚ್ -2020ರಂದು ಆನಂದಪುರಂ ಇತಿಹಾಸದಲ್ಲೇ ಅತ್ಯಂತ ಅದ್ದೂರಿಯಾಗಿ ನಡೆಯಿತು ಆಗ ಅಧ್ಯಕ್ಷರಾಗಿದ್ದವರು ಆನಂದಪುರಂನ ಟಿಂಬರ್ ಉದ್ಯಮಿ ಚಂದ್ರಹಾಸ್ ಶೇಟ್ ಅವರ ಜೊತೆ ಇದ್ದವರೆ ಈ ಬಸವರಾಜ್ ಮತ್ತು ಉಮೇಶ್.
ಆನಂದಪುರಂ ಮಾರಿಕಾಂಬಾ ಜಾತ್ರೆಗೆ ಶಿಸ್ತಿನ ಅಡಿಪಾಯ ಹಾಕಿದವರು ಊರಿನ ಗೌರವಾನ್ವಿತ ಹಿರಿಯ ಶಿಕ್ಷಕರಾದ ಬೋಜ್ ರಾಜ್ ಅಯ್ಯಂಗಾರ್ ಅವರ ಪ್ರೇರಣೆಯಿಂದಲೇ ಈಗಿನ ಬೃಹತ್ ಮಾರಿಕಾಂಬಾ ದೇವಾಲಯ ನಿರ್ಮಾಣಕ್ಕೆ ಕಾರಣವಾಗಿದೆ.
ಕಳೆದ 2020 ರಲ್ಲಿ ನಡೆದ ಜಾತ್ರೆ ಆನಂದಪುರಂ ಇತಿಹಾಸದಲ್ಲೇ ಅದ್ದೂರಿ ಜಾತ್ರೆ ಆಗಿ ಪ್ರಾರಂಭ ಆಯಿತು ನಿರೀಕ್ಷೆಗೆ ಮೀರಿದ ಜನ ಸಾಗರ ಹರಿದು ಬಂದಿತ್ತು ಇದರಿಂದ ಜಾತ್ರೆಯ ಎರಡನೆ ದಿನ ಬುಧವಾರ ಆನಂದಪುರಂನಲ್ಲಿನ ರಾಷ್ಟ್ರೀಯ ಹೆದ್ದಾರಿ ರೋಡ್ ಬ್ಲಾಕ್ ಆಗಿದ್ದು ಸರಿಯಾಗಲು ಸುಮಾರು 4 ಗಂಟೆ ಕಾಲ ಬೇಕಾಯಿತು ಇದರಿಂದ ಇಡೀ ಜಾತ್ರೆಯೇ ಅವ್ಯವಸ್ಥೆಯ ಕಪ್ಪು ಚುಕ್ಕೆ ಆಯಿತು ಅಂತ ಜನ ಯೋಚಿಸುವಾಗಲೇ ಅದರ ಮರುದಿನವೇ ಜಿಲ್ಲಾಡಳಿತ ಜಾತ್ರೆಯನ್ನೇ ರದ್ದು ಮಾಡಿ ಆದೇಶ ಹೊರಟಿಸಿತು ಕಾರಣ ಕೊರಾನಾ.
https://arunprasadhombuja.blogspot.com/2022/03/blog-post_11.html?m=1
ನಂತರ ಜನತಾ ಕರ್ಪ್ಯೂ - ಲಾಕ್ ಡೌನ್ ಗಳು ಆಗಿ ಅಮ್ಯೂಸ್ಮೆಂಟ್ ಹಾಕಿದ್ದ ಅನೇಕರು ಊರಿಗೆ ಹೋಗಲಾಗದೇ ಆನಂದಪುರಂನಲ್ಲಿ ಉಳಿದರು ಅವರ ಜೀವನವೂ ಕಷ್ಟವಾಯಿತು.
ಇದೆಲ್ಲಾ ಇವತ್ತು ಮಾತಾಡುತ್ತಾ ಈ ವರ್ಷದ ಜಾತ್ರೆ ಕಳೆದ ಜಾತ್ರೆಗಿಂತ ಅದ್ದೂರಿ ಆಗುತ್ತಿರುವ ಬಗ್ಗೆ ಮತ್ತು ದಿನಾಂಕ 1- ಮಾರ್ಚ್ -2023ರ ಬುಧವಾರ ಸಂಜೆ 6 ರಿಂದ ರಾತ್ರಿ 10 ರವರೆಗೆ ದಾಸಕೊಪ್ಪ ವೃತ್ತದಿಂದ ಯಡೇಹಳ್ಳಿ ವೃತ್ತದವರೆಗೆ ವಾಹನ ನಿಲುಗಡೆ ಕಡ್ಡಾಯವಾಗಿ ನಿಷೇದಿಸುವಂತೆ ವಿನಂತಿಸಿದೆ ಮತ್ತು ಕಳೆದ ಜಾತ್ರೆಯಲ್ಲಿ ಈ ಸಂಚಾರ ಅವ್ಯವಸ್ಥೆ ಸರಿಪಡಿಸಲು ಸಹಕರಿಸಿದ ಯಡೇಹಳ್ಳಿಯ ಸಮಾಜ ಸೇವಕ ಜೀಯಾವುಲ್ಲಾ ಅವರ ಸಹಕಾರ ಪಡೆಯಲು ತಿಳಿಸಿದ್ದೇನೆ.
ಜಾತ್ರಾ ಸಮಿತಿ ಪೋಲಿಸ್ ಇಲಾಖೆ, ಗೃಹ ರಕ್ಷಕ ದಳ ಮತ್ತು ಸ್ಥಳಿಯ ಸಂಘ ಸಂಸ್ಥೆಗಳ ಸಹಕಾರದಿಂದ ಸುಗಮ ಸಂಚಾರ ವ್ಯವಸ್ಥೆ ಮಾಡಿ ಜಾತ್ರೆ ಯಶಸ್ವೀ ಮಾಡುವ ಮಾತಾಡಿದ್ದಾರೆ ಈ ಬಗ್ಗೆ ಸಾರ್ವಜನಿಕ ಪ್ರಕಟನೆ ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ.
ಸಾಗರದ ಮಾರಿಕಾಂಬಾ ದೇವತೆಯನ್ನು ಕೆಳದಿ ರಾಜರುಗಳ ಕುಲದೇವತೆ ಆಗಿ ಕೆಳದಿ ರಾಜ ವೆಂಕಟಪ್ಪ ನಾಯಕರು ಸ್ವೀಕಾರ ಮಾಡಿದ ಕಾರಣದಿಂದ ಆನಂದಪುರಂ - ಕೆಳದಿ ಮತ್ತು ಬಿದನೂರು ನಗರದಲ್ಲಿ ಮಾರಿಕಾಂಬಾ ದೇವಿಯ ಪ್ರತಿಷ್ಟಾಪನೆ ಆಯಿತಾ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದೆ.
ಮೊದಲಿನ ಪದ್ದತಿಯಂತೆ ಪ್ರತಿ ಮೂರು ವರ್ಷಕ್ಕೊಮ್ಮೆ
ಮೊದಲು ಆನಂದಪುರಂನ ಮಾರಿ ಜಾತ್ರೆ ನಂತರ ಸಾಗರದ ಮಾರಿಜಾತ್ರೆ ನಂತರ ಸಿರ್ಸಿ ಮಾರಿಕಾಂಬಾ ಜಾತ್ರೆ ನಡೆಯುತ್ತಿತ್ತು ಈಗ ಅದೆಲ್ಲ ಬದಲಾಗಿದೆ.
ಶೂನ್ಯ ಮಾಸದಲ್ಲಿ ಮಾರಿಕಾಂಬಾ ವಿಗ್ರಹ ಕೆತ್ತುವ ಮರಕ್ಕೆ ಆನಂದಪುರಂನ ವಿಶ್ವಕರ್ಮ ಸಮಾಜದ ರಾಮಣ್ಣ ಆಚಾರರಿಂದ ಕಚ್ಚು ಹಾಕಿ ಮರು ಗುರುತಿಸುವ ಕೆಲಸ ನಡೆಯುತ್ತಿತ್ತು ನಂತರ ವಿಗ್ರಹ ಆದ ನಂತರ ಜಾತ್ರೆ ದಿನ ಅಂಕೆ ಹಾಕುವ ಶಾಸ್ತ್ರ ಮತ್ತು ದೇವಿಗೆ ದೃಷ್ಟಿ ಬೊಟ್ಟು ಹಾಕಿ ಅವರ ಪೂಜೆ ನಂತರ A.N. ಪ್ರಾಣೇಶ್ ಜೋಯಿಸ್ (ಕಂಠಿ ತಂದೆ ಹಾಗೂ ಬಳ್ಳಿಬೈಲು ಕೃಷ್ಣಮೂರ್ತಿ ಜೋಯಿಸರ ಅಣ್ಣ ) ರಿಂದ ಪೂಜೆ ನಂತರ ಮೆರವಣಿಗೆ, ಕೋಣ ಬಲಿ ಜಾತ್ರೆ ನಡೆಯುತ್ತಿತ್ತು.
ಸಭೆ ಸಮಾರ೦ಭಗಳು ಆ ಕಾಲದಲ್ಲಿ ಇರುತ್ತಿರಲಿಲ್ಲ, ಪ್ರತಿ ಜಾತ್ರೆಯಲ್ಲಿ ಒಂದು ದಿನ ಕುಸ್ತಿ ಪಂದ್ಯಾ ಬಾರೀ ಆಕರ್ಷಣೆ ಆಗಿರುತ್ತಿತ್ತಂತೆ ಆಗ ಸ್ಥಳಿಯ ಮುಖಂಡರಾದ ಮಸಾಲ್ತಿ ಸೋಮಣ್ಣ, ಬಾಬು ಹುಚ್ಚಣ್ಣ, ಪೇಂಟ್ ಸಾಬ್ಜನ್ ಸಾಹೇಬರ ಸಹೋದರ,ಹೊಟೆಲ್ ಕೃಷ್ಣಣ್ಣ ಮುಂತಾದವರೆಲ್ಲ ಕುಸ್ತಿ ಪಂದ್ಯಾವಳಿ ನಡೆಸುವ ಪ್ರಮುಖರು.
ಇಂತಹ ಮಾರಿಜಾತ್ರಾ ಕುಸ್ತಿಯಲ್ಲಿ ಹೊರ ಜಿಲ್ಲೆಯ ದೊಡ್ಡ ಪೈಲ್ವಾನ್ ಜೊತೆ ಯಾರೂ ಕುಸ್ತಿ ಆಡಲು ದೈರ್ಯ ಮಾಡದೇ ಇದ್ದಾಗ ಯಡೇಹಳ್ಳಿಯ ಗನ್ನಿಸಾಹೇಬರು (ಜಿಯಾವುಲ್ಲಾ ತಂದೆ) ಕುಸ್ತಿ ಆಡಲು ಕೈ ನೀಡಿದಾಗ ನೆರೆದ ಪ್ರೇಕ್ಷಕರು ಗೇಲಿ ಮಾಡುತ್ತಾರೆ ಆದರೆ ಕುಸ್ತಿಯಲ್ಲಿ ಗನ್ನಿಸಾಬರು ಗೆದ್ದಾಗ ಆನಂದಪುರದಲ್ಲಿ ಅವರನ್ನು ಎತ್ತಿ ಮೆರವಣಿಗೆ ಮಾಡಿದ್ದರಂತೆ.
ಊರಿನ ಕೊಡುಗೈ ದಾನಿಗಳಾಗಿದ್ದ ಇನಾಂದಾರ್ ರಾಮಕೃಷ್ಣ ಅಯ್ಯಂಗಾರರು ಮಾರಿಕಾಂಬಾ ಜಾತ್ರೆಗೆ ಬಂದು ದೇವಿಗೆ ಹಣ್ಣು ಕಾಯಿ ಸಮರ್ಪಿಸುವುದು ಅವರ ಪುತ್ರರಾದ ನಂತರ ರಾಜ್ಯದ ವಿದ್ಯಾಮಂತ್ರಿ ಸಂಸದರಾದ ಬದರೀನಾರಾಯಣ ಅಯ್ಯಂಗಾರ್ ಮತ್ತು ಆನಂದಪುರ೦ ವಿಲೇಜ್ ಪಂಚಾಯತ್ ಅಧ್ಯಕ್ಷರಾದ ವೆಂಕಟಾಚಲ ಅಯ್ಯಂಗಾರ್ ಕಾಲದವರೆಗೆ ನಡೆದು ಬಂದಿತ್ತು.
ಬಸವನಕೊಪ್ಪದ ಕಲಾವಿದ ಕುಸ್ತಿ ಪೈಲ್ವಾನ್ ಆಗಿದ್ದ ದಲಿತ ಮುಖಂಡ ಹೊಳೆ ಬಸಪ್ಪ ಆನಂದಪುರಂನ ಮಾರಿಕಾಂಬಾ ಜಾತ್ರೆಯ ಎಲ್ಲಾ ಕಾರ್ಯಕ್ರಮದಲ್ಲಿ ಮುಂದಾಳತ್ವ ವಹಿಸುತ್ತಿದ್ದರಂತೆ ಈ ಜಾತ್ರೆ ನಂತರ ಸಾಗರ ಮಾರಿಕಾಂಭಾ ಜಾತ್ರೆ ಸಿರ್ಸಿ ಮಾರಿಕಾಂಭ ಜಾತ್ರೆ ಮುಗಿಸಿ ಮನೆ ಸೇರುವ ಪದ್ದತಿ ಅವರದ್ದು.
ಆಗೆಲ್ಲ ಆನಂದಪುರಂ ಮಾರಿಕಾಂಭ ಜಾತ್ರೆಯಲ್ಲಿ ಎರೆಡು ದಿನ ಅಮೃತೇಶ್ವರಿ ಮತ್ತು ಪೆರ್ಡೂರು ಯಕ್ಷಗಾನದ ಟೆಂಟು, ಉತ್ತರ ಕರ್ನಾಟಕದ ನಾಟಕ ಮತ್ತು ಟೆಂಟು ಸಿನಿಮಾಗಳು ಜನರ ಆಕರ್ಷಣೆ ಆಗಿತ್ತಂತೆ.
Comments
Post a Comment