Blog number 1240.ಐತಿಹಾಸಿಕ ಹಿನ್ನೆಲೆಯ ದಾಮಿ೯ಕ ಆಚರಣೆಯ ಬಾರಾಪಂತ್ ಯಾತ್ರೆಯ ನೇತೃತ್ವ ವಹಿಸಿದ್ದ ನಿರ್ಮಲಾನಂದಜೀ ಸಂದರ್ಶನದ ಭಾಗ್ಯ 16- ಪೆಬ್ರುವರಿ-2016.
ಬಾರಾಪಂಥ ಯಾತ್ರೆ ನಾಸಿಕ್ ನಲ್ಲಿ ನಡೆಯುವ ಕುಂಭ ಮೇಳದ ಕೊನೆಯ ದಿನ (ಅಂದರೆ 12 ವರ್ಷಕ್ಕೊಮ್ಮೆ ಮಾತ್ರ) ನಾಸಿಕ್ ನ ತ್ರಯೊಂಬಕೇಶ್ವರದಿಂದ ಸಾದು ಸನ್ಯಾಸಿಗಳು ನೂರಾರು ಸಂಖ್ಯೆಯಲ್ಲಿ ಹೊರಡುವ ಪಾದ ಯಾತ್ರೆ.
2015ರಲ್ಲಿ ಈ ರೀತಿ ಮಹಾರಾಷ್ಟ್ರದ ನಾಸಿಕ್ ನಿಂದ ಪ್ರಾರಂಬಿಸಿ ಪಶ್ಚಿಮ ಘಟ್ಟದ ಮದ್ಯದಲ್ಲೇ ನಿರ್ದಿಷ್ಟ ಮಾರ್ಗದಲ್ಲಿ ಸಾಗಿ ಬರುವ ಮತ್ತು ನಿರ್ದಿಷ್ಟ ಸ್ಥಳದಲ್ಲೇ ತಂಗುವ ಪ್ರತಿ ಸಂಜೆ ನಡೆಯುವ ಅತ್ಯಂತ ಭಕ್ತಿಯ ಆಕರ್ಷಕ ಪೂಜೆ ಆರತಿ ನಂತರ ಆಹಾರ ಸೇವಿಸುವ ಈ ಭಾರಾ ಪಂಥ ಯಾತ್ರೆಯ ಸಂಪೂರ್ಣ ನೇತೃತ್ವವನ್ನು ಉತ್ತರ ಪ್ರದೇಶದ ನಾಥಪಂಥದ ಕೇಂದ್ರ ಗೋರಕ ಪುರದ ಮಹಾಂತರಾದ ಯೋಗಿ ಆದಿತ್ಯನಾಥರಿಂದ ಪಡೆದ ನಿರ್ಮಲಾನಂದಜೀ ವಹಿಸಿದ್ದರು.
ಪಾತ್ರ ದೇವತೆಯನ್ನು ತಲೆಯ ಮೇಲೆ ಹೊತ್ತು ಸಾಗಿ ಬರುವ ಯೋಗಿ ಅವರ ಜೊತೆ ನಾಥ ಪಂಥ ಪೂಜಿಸುವ ಎರೆಡು ಶ್ವಾನಗಳು ಅವರ ಹಿಂದೆ ನಿಮ೯ಲಾನಂದಜೀ ಅವರ ಹಿಂದೆ ಆರು ನೂರಾ ಮುವತ್ತಕ್ಕೂ ಹೆಚ್ಚಿನ ಸಾದು ಸಂತರು ಮತ್ತು ಭಕ್ತರು ನಡೆದು ಬ೦ದಿದ್ದಾರೆ.
ಈ ಭಾರಾ ಪಂಥ ಯಾತ್ರೆಗೆ 5000 ವರ್ಷದ ಇತಿಹಾಸ ಇದೆ ಅನ್ನುತ್ತಾರೆ ಮತ್ತು ಇದು ಸುಲಭವಾಗಿ ಸಾದು ಸಂತರಿಗೆ ಲಭ್ಯವಾಗುವುದಿಲ್ಲ ಸಾದು ಸಂತನಾಗಿ 85 ಜನ್ಮ ಎತ್ತಿದವರಿಗೆ ಮಾತ್ರ ಈ ಅವಕಾಶ ಸಿಗುತ್ತದೆಂಬ ನಂಬಿಕೆ ಅವರಲ್ಲಿದೆ.
ಕಮಲಶಿಲೆ ಸಮೀಪದ ಯಡಮೊಗೆಯಲ್ಲಿರುವ ಕೊಡಚ್ಚಾದ್ರಿ ಸಿದ್ದ ಪೀಠ, ಹಲವಾರಿ ಮಠದ ಹಿಂದಿನ ಸ್ವಾಮೀಜಿಗಳಾಗಿದ್ದ ಗ್ವಾಲೀಯರ್ ಮೂಲದ ಸೋಮನಾಥ ಪೀರ್ ಜೀ ನನಗೊಂದು ಆದೇಶ ನೀಡಿದ್ದರು 2015ರಲ್ಲಿ ಹೊರಟು ಬರುವ ಭಾರಾ ಪಂಥ ಯಾತ್ರೆಗೆ ಕರ್ನಾಟಕದಲ್ಲಿ ಹೆಚ್ಚಿನ ಜನರಿಗೆ ತಿಳಿಸುವ ಕೆಲಸ ಮಾಡಬೇಕೆಂದು.
2012ರಲ್ಲೇ ಅವರು ಸ್ವರ್ಗಸ್ಥರಾದರು ಆದರೆ ನನಗೆ ಅವರ ಆದೇಶ ಪಾಲಿಸುವ ಇಚ್ಚೆ ಬಲವಾಗಿತ್ತು ಆದ್ದರಿಂದ ಬೆಳಗಾಂ ನಿಂದ ಸಾಗರದ ತನಕ ಪರಿಚಯವಿದ್ದ ಅನೇಕರಿಗೆ 2016ರ ಜನವರಿಯ ಕೊನೆಯಲ್ಲಿ ರಾಜ್ಯ ಪ್ರವೇಶಿಸಿದ ಭಾರಾ ಪಂಥ ಯಾತ್ರೆಯ ಪ್ರಮುಖರಾದ ನಿಮ೯ಲಾನಂದಜೀ ಸಂದರ್ಶನ ಮಾಡಿ ಪತ್ರಿಕೆಯಲ್ಲಿ ಪ್ರಕಟಿಸಲು, ದೂರದರ್ಶನ ಮಾಧ್ಯಮದಲ್ಲಿ ತೋರಿಸಲು ವಿನಂತಿಸಿದ್ದೆ ಆದರೆ ಅವರೆಲ್ಲ ತಿಳಿಸಿದ್ದು ನಿರ್ಮಲಾನಂದಜೀ ಯಾವುದೇ ಸಂದರ್ಶನ ಇರಲಿ ಪೋಟೋ ತೆಗೆಯಲೂ ನಿರಾಕರಿಸಿದರೆಂದಾಗ ನಿರಾಶೆ ಆಗಿತ್ತು.
12- ಫೆಬ್ರುವರಿ-2016ರಂದು ಭಾರ ಪಂತ್ ಯಾತ್ರೆ ಸಾಗರ ತಲುಪಲಿದೆ ಎಂಬ ನಾನು ಬರೆದ ಲೇಖನ ಸಂಪಾದಕರಾದ ಶೃಂಗೇಶರು ಅವರ ಶಿವಮೊಗ್ಗದ ಜನ ಹೋರಾಟ ದಿನಪತ್ರಿಕೆಯ ಮುಖಪುಟದಲ್ಲಿ ಪ್ರಕಟಿಸಿದ್ದರು.
ದಿನಾಂಕ 16- ಫೆಬ್ರುವರಿ -2016 ರ ಬೆಳಿಗ್ಗೆ ಸಾಗರದ ಗಣಪತಿ ದೇವಸ್ಥಾನದಿಂದ ಹೊರಟು ಹೆಗ್ಗೋಡು ಮಾರ್ಗದಲ್ಲಿ ಸಾಗಿ ಬಟ್ಟೆಮಲ್ಲಪ್ಪ ಸಮೀಪದ ಆಲಗೇರಿ ಮಂಡ್ರಿಯ ಅಕ್ಕಿ ಗಿರಣಿ ಹಿಂಬಾಗದಲ್ಲಿ ಸಂಜೆ ತಲುಪಿ ಸ್ನಾನ ಇತ್ಯಾದಿಗಳನ್ನು ಮುಗಿಸಿ ನಿತ್ಯದ ಸಂಜೆ ಪೂಜೆ ಮುಗಿಸಿ ಆಹಾರ ಸೇವಿಸಿರಾತ್ರಿ ತಂಗಿದ್ದು ಮರುದಿನ ಹೊಸನಗರ ಮಾರ್ಗದಲ್ಲಿ ನಗರ ತಲುಪುವುದು ಅವರ ನಿಗದಿತ ಕಾಯ೯ಕ್ರಮ ಆಗಿತ್ತು.
ಅದೇ ದಿನ ಭೀಮನಕೋಣೆಯ ಪಿ.ಎಲ್.ಡಿ. ಬ್ಯಾಂಕಿನಲ್ಲಿ ನನ್ನದೊಂದು ಕೆಲಸ ಇತ್ತು ಅದನ್ನು ಮುಗಿಸಿಕೊಂಡು ಈ ಮಾರ್ಗದಲ್ಲಿ ಸಾಗಿ ಬರುವ ಭಾರಾ ಪಂಥ ಯಾತ್ರೆ ನೋಡುವ ಉಧ್ಧೇಶದಿಂದ ನಾನು ನನ್ನ ಇಬ್ಬರು ಮಕ್ಕಳು ಮತ್ತು ನನ್ನ ಅಣ್ಣ ಮತ್ತು ಅವರಿಬ್ಬರ ಮಕ್ಕಳು ಬೀಮನಕೋಣೆಗೆ ಹೋಗಿ ಅಲ್ಲಿನ ಪಿ.ಎಲ್.ಡಿ. ಬ್ಯಾಂಕ್ ಕೆಲಸ ಮುಗಿಸಿ ಈ ಬಾರಾಪಂಥ್ ಯಾತ್ರೆ ಸಾಗಿ ಹೋದ ಬಗ್ಗೆ ಮಾಹಿತಿ ಕೇಳಿದರೆ ಅಲ್ಲಿನ ಸ್ಥಳಿಯರಿಗೆ ಯಾವುದೇ ಮಾಹಿತಿ ಇರಲಿಲ್ಲ.
ಯಾತ್ರೆ ಸಾಗಿ ಹೋದ ಕುರುಹುಗಳಾಗಿ ಅಲ್ಲಲ್ಲಿ ಖಾಲಿ ನೀರಿನ ಬಾಟಲಿಗಳನ್ನು ನೋಡಿ ನಾವು ಆಲಗೇರಿ ಮಂಡ್ರಿ ಮಾಗ೯ದಲ್ಲಿ ಸಾಗುವಾಗ ಈ ಯಾತ್ರೆಗಾಗಿ ದೊಡ್ಡ ಲಾರಿಯಲ್ಲಿ ನೀರಿನ ಬಾಟಲಿಗಳು ಸರಬರಾಜು ಮಾಡುವ ಭಕ್ತರೋರ್ವರ ವಾಹನ ಮತ್ತು ಅಲ್ಲಲ್ಲಿ ಮದ್ಯಾಹ್ನದ ಬಿಸಿಲಲ್ಲಿ ರಸ್ತೆಯ ಇಕ್ಕೆಲದ ಮರ ಗಿಡಗಳ ನೆರಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಾದು ಸಂತರ ನೋಡಿದಾಗಲೇ ಗೊತ್ತಾಗಿದ್ದು ಭಾರಾ ಪಂಥ ಯಾತ್ರೆ ಹೆಗ್ಗೋಡು - ಪುರಪ್ಪೆಮನೆ ದಾಟಿ ಆಲಗೇರಿ ಮಂಡ್ರಿ ಸಮೀಪದ ರಸ್ತೆ ಬಲ ಭಾಗದ ಸಣ್ಣ ಸ್ಥಳಿಯ ದೇವಸ್ಥಾನದ ಆವರಣದಲ್ಲಿ ಪಾತ್ರ ದೇವತೆ ಮತ್ತು ಎರೆಡು ಶ್ವಾನಗಳ ಮದ್ಯೆ ಭಾರಾ ಪಂಥ ಯಾತ್ರೆ ಪ್ರಮುಖ ನಿರ್ಮಲಾನಂದಜೀ ಕುಳಿತಿದ್ದರು.
ಅಲ್ಲಿ ಇನ್ನೊಂದು ಆಶ್ಚಯ೯ ಅಂದರೆ ಆ ಭಾಗದ ಗ್ರಾಮ ಲೆಕ್ಕಾಧಿಕಾರಿ ನಾಥ ಪಂಥದ ಭಕ್ತರಾದ ನನ್ನ ಗೆಳೆಯರಾದ ಮೋಹನ್ ಅಲ್ಲಿದ್ದರು, ಪಾತ್ರ ದೇವತೆ ಮತ್ತು ಅಲ್ಲಿದ್ದ ಸಾದು ಸಂತರಿಗೆ ನಮಸ್ಕರಿಸಿ, ನಿರ್ಮಲಾನಂದಜೀ ಆಶ್ರೀವಾದ ಪಡೆದು ಅವರ ಎದುರು ಕುಳಿತೆವು.
ನಂತರ ಸ್ಥಳಿಯ ಜಿಲ್ಲಾ ಪತ್ರಿಕೆ ಶೃಂಗೇಶ್ ಸಂಪಾದಕೀಯದ ಜನ ಹೋರಾಟ ದಿನಪತ್ರಿಕೆಗೆ ಸಂದರ್ಶನ ಮಾಡಲು ಅನುಮಾನದಿಂದಲೇ ಅನುಮತಿ ಕೇಳಿದೆ ಏನಾಶ್ಚಯ೯ ಯಾವುದೇ ದೊಡ್ಡ ದೊಡ್ಡ ಪತ್ರಕರ್ತರಿಗೂ ಸಿಗದ ಅವಕಾಶ ನನ್ನದಾಯಿತು ಆ ಸಂದರ್ಶನ ಪೋಟೋ ಶೃಂಗೇಶ್ ಗೆ ವಾಟ್ಸಪ್ ಮಾಡಿದೆ.
ತಕ್ಷಣ ಅವರು ವಾಪಾಸ್ ಕರೆ ಮಾಡಿದರು ಸಾಗರದಲ್ಲಿ ಅವರು ಅವರ ಪತ್ರಕರ್ತ ಮಿತ್ರರಿಗೆ ಸಂದರ್ಶನ ಮಾಡಲು ವಿನಂತಿಸಿದ್ದರಂತೆ ಆದರೆ ಅವಕಾಶ ಕೊಡಲಿಲ್ಲ ನಿಮಗೆ ಅವಕಾಶ ಸಿಕ್ಕಿದ್ದು ಆಶ್ವರ್ಯ ಅಂದರು ಇದೇ ಸಂದರ್ಭದಲ್ಲಿ ಅವರಿಗೆ ವಿನಂತಿಸಿದೆ ಸಂಜೆ ಆಲಗೇರಿಮಂಡ್ರಿ ಎಂಬ ಹಳ್ಳಿಯಲ್ಲಿ ಅವರು ತಂಗುತ್ತಾರೆ ನೀವು ಬನ್ನಿ ರವಿಬೆಳೆಗೆರೆ ಅವರ ಹಾಯ್ ಬೆಂಗಳೂರ್ ನಲ್ಲಿ ಒಂದು ಸುದ್ದಿ ಮಾಡಿ ಅಂದೆ ಅವರು ಒಪ್ಪಿದರು ಮತ್ತು ಬಂದರು.
ಮರುದಿನವೇ ಮುದ್ರಣವಾದ ಹಾಯ್ ಬೆಂಗಳೂರು ಮುಖಪುಟ ಸುದ್ದಿಯಾಗಿ ಭಾರಾ ಪಂಥ ಯಾತ್ರೆ ಸುದ್ದಿ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿತು ಅದರ ಹಿಂದೆಯೇ ರಾಜ್ಯದ ಎಲ್ಲಾ ಟೀವಿ ಚಾನಲ್ ಗಳು ಭಾರ
ಪಂಥಯಾತ್ರೆ ಮಂಗಳೂರಿನ ಕದ್ರಿ ದೇವಸ್ಥಾನ ತಲುಪುವ ತನಕ ನಂತರ ಅಲ್ಲಿನ ಸಮಾಪ್ತಿ ಪೂಜೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ (ಗೋರಕ ಪುರದ ಮಹಾಂತರೂ ಕೂಡ) ಉಪಸ್ಥಿತಿಯ ತನಕ ರಾಜ್ಯದಾದ್ಯಂತ ಸುದ್ದಿಯಾಯಿತು.
ಇದೇ ಮಠದ ಈಗಿನ ಸ್ವಾಮೀಜಿ ಜಗದೀಶ್ ಜೀ ಕೆಲ ದಿನದ ಮೊದಲು(19- ಜನವರಿ -2022) ಯೋಗಿ ಆದಿತ್ಯನಾಥರ ಸಂದೇಶ ಒಂದನ್ನು ಮಾಜಿ ಮುಖ್ಯಮಂತ್ರಿ ಯಡೂರಪ್ಪರಿಗೆ ತಲುಪಿಸಲು ಬಂದವರು ನಮ್ಮ ಲಾಡ್ಜ್ ನಲ್ಲಿ ತಂಗಿದ್ದರು ಮುಂದಿನ ಭಾರಾ ಪಂಥ ಯಾತ್ರೆ 2027ರಲ್ಲಿ ನಾಸಿಕ್ ಕುಂಬಮೇಳ ಯಾತ್ರೆಯ ಅಂತಿಮ ದಿನ ಪ್ರಾರಂಭ ಆಗಲಿದ್ದು 2028ರ ಪೆಬ್ರುವರಿಯಲ್ಲಿ ಮಂಗಳೂರಿನ ಕದ್ರಿ ಮಠ ತಲುಪುವ ಬಗ್ಗೆ ಜಗದೀಶ್ ಜೀ ತಿಳಿಸಿದರು ನನಗೆ ಅವರ ಮಠದ ಭಕ್ತ ಮತ್ತು ನಾಥ ಪಂಥದ ಆರಾದಕನಾದ ನನಗೆ ಶಾಲು - ಹಾರದ ಸನ್ಮಾನ ಅವರಿಂದ ನಿರಾಕರಿಸಲಾಗದೇ ಆಶ್ರೀವಾದ ಎಂದು ಸ್ವೀಕರಿಸಿದೆ.
Comments
Post a Comment