Blog number 1235.ಸಾಗರದಲ್ಲಿ ಅನೇಕ ಕೈಗಾರಿಕೆಗಳಿಗೆ ಹುಟ್ಟು ಹಾಕಿದ್ದ SRS ಗ್ರೂಪ್ ನ ಆ ಕಾಲದ ಸಾಹಸ ಸಣ್ಣದಲ್ಲ, SRS ಸಹೋದರರಲ್ಲಿ ಒಬ್ಬರಾದ ತ್ಯಾಗರ್ತಿಯ ರುದ್ರಾರಾಧ್ಯರ ಪುಣ್ಯ ತಿಥಿ ಸಂದರ್ಭದಲ್ಲಿ ಅವರ ಸ್ಮರಣೆ.
#60ರ_ದಶಕದ_ಯಶಸ್ವಿ_ಕೈಗಾರಿಕೋದ್ಯಮಿ
#ತ್ಯಾಗತಿ೯_ರುದ್ರಾರಾಧ್ಯ_ಒಂದು_ನೆನಪು
#ಪ್ರತಿಷ್ಟಿತ_SRS_ಗ್ರೂಪ್
1970 ರಿಂದ 1975ರಲ್ಲಿ ನಾವೆಲ್ಲ 5 ರಿಂದ 10 ವಷ೯ದ ಬಾಲಕರು, ಆಗ ಆನಂದಪುರಂನಲ್ಲಿ ಇದ್ದದ್ದು ಬದರಿನಾರಾಯಣ್ ಅಯ್ಯOಗಾರ್ ಕುಟುಂಬದ ಒಂದೇ ಒಂದು ಅಕ್ಕಿ ಗಿರಣಿ ಮಾತ್ರ.
ಆಗ ಸಾಗರದ ಆರಾಧ್ಯ ಸಹೋದರರು ಹೊಸ ಸಾಹಸಿ ಉದ್ದಿಮೆದಾರರಾಗಿ ಹೊರ ಹೊಮ್ಮುತ್ತಿದ್ದ ಕಾಲವದು ಅವರ ನಮ್ಮ ಯಡೇಹಳ್ಳಿಯಲ್ಲಿ ಒಂದು ಅಕ್ಕಿ ಗಿರಣಿ ಪ್ರಾರಂಭಿಸಿದರು, ಆದರ ಮೇಲ್ಚಾವಣಿಗೆ ಲಿಂಗನಮಕ್ಕಿ ಡ್ಯಾ೦ ಮುಳುಗಡೆಯಲ್ಲಿ ಕಡಿತಲೆ ಮಾಡಲಾದ ನಾಟ ಹರಾಜಿನಲ್ಲಿ ಹಿಡಿದು ತಂದಿದ್ದರಂತೆ.
ಈ ಸಹೋದರರು ಸಾಗರ, ಆನಂದಪುರಂನ ಯಡೇಹಳ್ಳಿ, ತ್ಯಾಗತಿ೯, ಪಕ್ಕದ ಹೊಸoತೆಯಲ್ಲಿ ರೈಸ್ ಮಿಲ್ ಪ್ರಾರಂಬಿಸಿದರು, ತ್ಯಾಗತಿ೯ ಮಿಲ್ ಅಲ್ಲಿನ ಜನಪ್ರಿಯ ಇನಾ೦ದಾರರಾದ ಗುರುಮೂತಿ೯ ರಾಯರದ್ದಾಗಿತ್ತು ಅದನ್ನ ಈ ಸಹೋದರರು ಖರೀದಿಸಿದರು.
ಸಾಗರದಲ್ಲಿ ಸಂಗಮೇಶ್ವರ ಹಂಚಿನ ಕಾಖಾ೯ನೆ ಕೂಡ ಸ್ಥಾಪಿಸಿದ ಕೀತಿ೯ ಈ ಸಹೋದರರದ್ದು.
ಇವರ ಉದ್ಯೋಗದ ಯಶಸ್ಸಿನಲ್ಲಿ ಇವರ ದೊಡ್ಡಣ್ಣ ಗುರು ಬಸಯ್ಯರ ಶ್ರಮ ದೊಡ್ಡದು, ಈ ಸಹೋದರರಲ್ಲಿ ಒಬ್ಬರು ಆನಂದಪುರಂ ಯಡೇಹಳ್ಳಿಯಲ್ಲಿ ಅಲ್ಯೂಮಿನಿಯಂ ಪಾತ್ರೆ ತಯಾರಿಸುವ ದೊಡ್ಡ ಘಟಕ ತಯಾರಿಸಿದ್ದರು.
ಇವತ್ತು (13 - ಪೆಬ್ರವರಿ -2019) ಸದಾ ಹಸನ್ಮುಖಿ 60 ರ ದಶಕದ ಯಶಸ್ವಿ ಕೈಗಾರಿಕೋದ್ಯಮಿ ರುದ್ರಾರಾದ್ಯರು ಇಹಲೋಕ ತ್ಯಜಿಸಿದರೆಂದಾಗ ಈ ನೆನಪಾಯಿತು.
ಒಂದು ಕಾಲದಲ್ಲಿ ಕಾಗೋಡು ತಿಮ್ಮಪ್ಪರ ರಾಜಕಾರಣದ ಪ್ರಾರ೦ಭದಲ್ಲಿ ಅವರಿಗೆ ಆಥಿ೯ಕ ಸಹಾಯ ನೀಡುತ್ತಿದ್ದ ಕುಟುಂಬ ಈ SRS ಗ್ರೂಪ್.
ಈಗ ಈ ಸಹೋದರರಲ್ಲಿ ಮಹೇಶ್ ಮೂತಿ೯ ಮತ್ತು ಚಂದ್ರ ಶೇಖರ ಆರಾಧ್ಯರು ಉಳಿದಿದ್ದಾರೆ.
ಈಗಿನ ಸಕಾ೯ರಗಳ ಕೈಗಾರಿಕಾ ನೀತಿ, ಬ್ಯಾಂಕ್ಗಳ ಆಥಿ೯ಕ ಸಹಾಯ ಇಲ್ಲದಿದ್ದ ಸ್ವಾತಂತ್ರ ನಂತರದ ದಿನಗಳಲ್ಲಿ ಸಾಗರ ತಾಲ್ಲೂಕಿನಲ್ಲಿ ಈ ಸಹೋದರರ ಕೈಗಾರಿಕೆಗಳ ಸ್ಥಾಪನೆ ನಿಜಕ್ಕೂ ಆಶ್ಚಯ೯ ಅದರಲ್ಲೂ ಆ ಕಾಲದಲ್ಲಿ ಇವರು ಯಶಸ್ವಿ ಕೈಗಾರಿಕೋದ್ಯಮಿಗಳಾಗಿದ್ದರೆಂದು ನೆನಪಿಸಿ ಕೊಳ್ಳಲು ಹೆಮ್ಮೆ ಕೂಡ.
ಶ್ರೀ ರುದ್ರಾರಾಧ್ಯರ ಆತ್ಮಕ್ಕೆ ಚಿರ ಶಾಂತಿ ದೊರೆಯಲಿ ಎಂದು ಹಾರೈಸುತ್ತೇನೆ.
ನೆನಪು / ಬರಹ.
ಕೆ.ಅರುಣ್ ಪ್ರಸಾದ್
ಮಾಜಿ ಜಿ.ಪಂ.ಸದಸ್ಯ
ಆನಂದಪುರಂ.
Comments
Post a Comment