Blog number 1220.ಕಿರಿಯ ಗೆಳೆಯ ಪತ್ರಕರ್ತ ಪವನ್ ಕುಮಾರ್ ಕಠಾರೆ ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಬಗ್ಗೆ ಬರೆದದ್ದು
ಯುವಕರಿಗೆ ಉತ್ಸಾಹಿ ಮಾರ್ಗದರ್ಶಕರು ಹಾಗೂ ಸಂಕಷ್ಟದಲ್ಲಿರುವವರಿಗೆ ನೆರವನ್ನು ನೀಡುವ ಮಿತ್ರರು ಹಾಗೂ ನಮ್ಮೂರಿನ ಇತಿಹಾಸವನ್ನು ಮರಳಿ ನೆನಪಿಸಲು ಬರೆದ ಕೃತಿಯಾದ ಖ್ಯಾತ ರಾಜಾ ವೆಂಕಟಪ್ಪ ನಾಯಕ ಮತ್ತು ಚಂಪಕ ರಾಣಿ ದುರಂತ ಪ್ರೇಮಕಥೆಯ ಲೇಖಕರು ಶ್ರೀಯುತ ಕೆ ಅರುಣ್ ಪ್ರಸಾದ್.
ಶ್ರೀಯುತ *ಕೆ.ಅರುಣ್ ಪ್ರಸಾದ್* ರವರು ಆನಂದಪುರ ಭಾಗದ ಜನರಲ್ಲಿ ಎಂದು ಅಚ್ಚಳಿಯದೆ ಉಳಿಯುವ ಮಹಾನ್ ವ್ಯಕ್ತಿ.
ಇವರ ಹೆಸರು ಜಿಲ್ಲೆಯ ಸುತ್ತಮುತ್ತಲಿನ ಎಲ್ಲ ಗ್ರಾಮದ ಚಿಕ್ಕ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧಾಪ್ಯದಲ್ಲಿ ರುವಂತಹ ಎಲ್ಲಾ ವ್ಯಕ್ತಿಗಳಿಗೂ ಕೂಡ ಚಿರ ಪರಿಚಿತ.
ಇದಕ್ಕೆ ಕಾರಣ ಅವರು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರ ಜೊತೆ ನಡೆದುಕೊಳ್ಳುವ ಉತ್ತಮ ಬಾಂಧವ್ಯ.
ಇವರು ಬಡವ ಹಾಗೂ ಶ್ರೀಮಂತ ಎಂಬ ಭೇದ ಭಾವವಿಲ್ಲದೆ ತಮ್ಮ ಪಕ್ಕದಲ್ಲಿ ಎಲ್ಲಾ ವರ್ಗದ ಜನರನ್ನು ಕೂರಿಸಿಕೊಂಡು ಮಾತನಾಡುವ ಸೌಜನ್ಯಯುತ ವ್ಯಕ್ತಿ.ಇವರು ಜಿಲ್ಲಾ ಪಂಚಾಯತ್ ಸದಸ್ಯರಾದಗ ಮಾಡಿದ ಕೆಲಸ ಕಾರ್ಯಗಳು ಇನ್ನೂ ಕೂಡ ಜೀವಂತವಾಗಿದೆ.
ಹಾಗೂ ಯಡೇಹಳ್ಳಿಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯವನ್ನು ಕೂಡ ಕಟ್ಟಿಸಿದವರು ಇವರೆ, ಯಾವುದೇ ವ್ಯಕ್ತಿಗಳು ತಮಗೆ ಕಷ್ಟವಿದೆ ಎಂದು ಅವರ ಬಳಿ ಹೋದಾಗ ತಮ್ಮ ಕೈಲಾದಷ್ಟು ಸಹಾಯವನ್ನೂ ಮಾಡಿ ಕಳಿಸುವಂತಹ ಮಹಾನ್ ದಾನಿಗಳು ಕೂಡ ಹೌದು.
ತಮ್ಮ ಆತ್ಮೀಯರಿಗೆ ಏನಾದರೂ ಸಂಕಷ್ಟ ಒದಗಿದಾಗ ಇವರಷ್ಟು ಮರಗುವವರು ಮತ್ತೊಬ್ಬರಿಲ್ಲ.
ಆನಂದಪುರಂನ ಶ್ರೀಮಂತ ಉದ್ಯಮಿಗಳಲ್ಲಿ ಇವರು ಕೂಡ ಒಬ್ಬರಾಗಿದ್ದರೂ ಸ್ವಲ್ಪವೂ ಅಹಂಕಾರವಿಲ್ಲದ ನೇರ ನುಡಿಯ ಸೃಜನಶೀಲತೆಯ ವ್ಯಕ್ತಿ.
ಇವರ ಸಲಹೆ ಸಹಕಾರ ಹಾಗೂ ಸಹಾಯದಿಂದ ಅದೆಷ್ಟೋ ಜನ ಇಂದು ಬದುಕನ್ನು ಕಟ್ಟಿಕೊಂಡಿದ್ದಾರೆ.
ನಾಡಿಗೆ ಹೇಗೆ ಡಾ।। ರಾಜ್ ಕುಮಾರ್ ಅಣ್ಣಾವ್ರು ಎಂಬ ಹೆಸರನ್ನು ಪಡೆದಿದ್ದಾರೋ ಹಾಗೆ ಇಲ್ಲಿನ ಭಾಗದ ಜನರಿಗೆ ಇವರು ಅಣ್ಣಾವ್ರು,
ನಾನು ಗಮನಿಸಿದ ಹಾಗೆ ಯಾರೇ ಇವರನ್ನು ಮಾತನಾಡಿಸಲು ಹೋದಾಗ ಇವರ ಕುಟುಂಬದ ಹತ್ತಿರ ಅಣ್ಣಾವ್ರು ಇದಾರ ಅಂತ ಕೇಳುತ್ತಿದ್ದುದು ನಿಜಕ್ಕೂ ನನಗೆ ಸಂತಸವೆನಿಸುತ್ತಿತ್ತು.
ಇವರ ಮಗ *ವರುಣ್ ಕೃಷ್ಣ* ನನ್ನ ಸಹಪಾಠಿ ಹಾಗೂ ಆತ್ಮೀಯ ಮಿತ್ರ ನಾನು ಇಂದು ಈ ಮಟ್ಟಕ್ಕೆ ಬೆಳೆಯಲು ಇವನು ಪ್ರತ್ಯಕ್ಷ ಕಾರಣನೂ ಹೌದು ಯಾಕೆಂದರೆ ನಾನು ಬಿ ಕಾಂ ಓದುತ್ತಿದ್ದಾಗ ಜೊತೆಯಲ್ಲಿ ಇದ್ದು ಗುರುವಾಗಿ ಮಿತ್ರನಾಗಿ ನನಗೆ ಹೇಳಿಕೊಟ್ಟಿದ್ದು ಅದೆಷ್ಟೋ ನಿಜಕ್ಕೂ ಕೂಡ ಈತನನ್ನು ಯಾವತ್ತೂ ಕೂಡ ಮರೆಯುವ ಹಾಗಿಲ್ಲ.
ಇಂದು ಇವರು ನಮ್ಮೂರಿನ ಇತಿಹಾಸವನ್ನು ಮರಳಿ ನೆನಪಿಸುವಂತೆ ಬರೆದ ಲೇಖನವೂ ಜಗತ್ಪ್ರಸಿದ್ಧಿ ಆಗಲೆಂದು ಹಾರೈಸುತ್ತಾ ಇನ್ನಷ್ಟು ಲೇಖನಗಳನ್ನು ನಮಗೆ ನೀಡಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತೇನೆ.
BY:
*PAVAN KUMAR*
*PUBLIC 7 TV REPORTER*
*ANANDAPURA*
*SAGARA*
Comments
Post a Comment