#ಶ್ರದ್ಧಾಂಜಲಿಗಳು
#ನಮ್ಮ_ಹೆಮ್ಮೆಯ_ಇಂಡಿಯನ್_ಏರ್ಫೋರ್ಸ್_ತರಬೇತಿದಾರ_ಮಂಜುನಾಥ್_ಅವರಿಗೆ
#ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲೂಕಿನ_ಪಟಗುಪ್ಪ_ಸಮೀಪದ_ಸಂಕೂರಿನವರು
#ಈ_ದಂಪತಿಗಳ_ವಿವಾಹ_2019ರಲ್ಲಿ_ನಮ್ಮ_ಕಲ್ಯಾಣ_ಮಂಟಪದಲ್ಲೇ_ನೆರವೇರಿತ್ತು.
ಆನಂದಪುರಂನ ರೈಲ್ವೆ ನಿಲ್ದಾಣದ ರಸ್ತೆಯ ಮಣಿಕಂಠ ಇಂಡಸ್ಟ್ರೀಸ್ ಮಾಲಿಕ ಕೇಶವ ಅವರು ಮಂಜುನಾಥ್ ಸಹೋದರಿ ಪತಿ (ಇವರ ಬಾವ) ನಮ್ಮೂರಲ್ಲಿ ಪಿಠೋಪಕರಣ ಇತ್ಯಾದಿ ತಯಾರಿಸುವ ಇಂಡಸ್ಟಿ ಮಾಡಿಕೊಂಡು ಪ್ರಸಿದ್ಧರಾಗಿದ್ದಾರೆ.
ಇವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪಟಗುಪ್ಪೆ ಎಂಬ ಊರಿನ ಸಮೀಪದ ಸಂಕೂರು ಎಂಬ ಹಳ್ಳಿಯವರು.
#agraairforce #juniorwarrantofficer #indianairforce #shivamogga #hosanagara #manjunathgs #parachutes
ಇವರ ಪರಿಚಯ ನನಗೆ 2019ರ ಪ್ರಾರಂಭದಲ್ಲಿ ಆಯಿತು ಆಗ ಅವರು ತಮ್ಮ ಜೊತೆ ಏರ್ಪೋರ್ಸನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಅಸ್ಸಾಂ ಮೂಲದ ಕಲ್ಪಿತಾ ಎಂಬ ಯುವತಿ ಜೊತೆ ಪ್ರೇಮ ವಿವಾಹದ ತಯಾರಿ ನಡೆಸಿದ್ದರು.
ಇವರ ಪತ್ನಿ ಶ್ರೀಮತಿ ಕಲ್ಪಿತಾ ಕೂಡ ಭಾರತೀಯ ಏರ್ಪೋರ್ಸ್ ಟ್ರೈನಿಂಗ್ ಅಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಬಾವಿ ಪತ್ನಿ ತಂದೆ ತಾಯಿಯನ್ನ ಇವರ ಕುಟುಂಬದ ಪರಿಚಯ ಮಾಡಿಸಲು ಮತ್ತು ವಿವಾಹದ ಮಾತುಕಥೆಗಾಗಿ ಕರೆತಂದಿದ್ದಾಗ ಕೆಲವು ದಿನ ನಮ್ಮ ಹೊಂಬುಜ ರೆಸಿಡೆನ್ಸಿ ಲಾಡ್ಜ್ ನಲ್ಲಿ ಉಳಿಸಿದ್ದರು.
ಇವರ ಪತ್ನಿಯ ತಂದೆ ತಾಯಿ ಪಶ್ಚಿಮ ಬಂಗಾಳದ ಬೆಂಗಾಲಿ ಭಾಷೆಯ ಸಿನಿಮಾ ಮತ್ತು ನಾಟಕ ಕ್ಷೇತ್ರದಲ್ಲಿ ಹೆಸರು ಮಾಡಿದವರಂತ ನನ್ನ ಮಲ್ಲಿಕಾ ವೆಜ್ ನ ಬೆಂಗಾಲಿ ಅಡುಗೆ ಕಾರ್ಮಿಕರು ಗುರುತು ಹಿಡಿದಿದ್ದರು.
ಇದೆಲ್ಲಾ ನನಗೆ ಗೊತ್ತಾಗಿದ್ದು ಅವಾಗ ನನ್ನ ಮಲಿಕಾವೆಜ್ ನಲ್ಲಿ ಪಶ್ಚಿಮ ಬಂಗಾಳದ ಕಲ್ಕತ್ತಾದ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದರು ಅವರಿಂದ ಇವರ ಪರಿಚಯ ಆಯಿತು.
ಇವರ ಕೋರಿಕೆ ಮೇರೆಗೆ ನಮ್ಮಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಲ್ಕತ್ತಾದ ಚಂಚಲ್ ಚಟರ್ಜಿ ಎಂಬ ಯುವಕನನ್ನ ಇವರಿಗೆ ಸಹಕರಿಸಲು ವ್ಯವಸ್ಥೆ ಮಾಡಿದ್ದೆ.
ಮಂಜುನಾಥ್ ತನ್ನ ಬಾವಿ ಪತ್ನಿ, ಮಾವ ಮತ್ತು ಅತ್ತೆ ಇವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಇವರ ಪರಿಚಯಗಳನ್ನ ಮಾಡಿಸಿ 2019 ರಲ್ಲಿ ವಿವಾಹ ದಿನಾಂಕ ನಿಗದಿ ಮಾಡಿಸಿದ್ದರು.
ಆಗಲೇ ಮಂಜುನಾಥ ಜೊತೆ ನನಗೆ ಹೆಚ್ಚು ಸಂಪರ್ಕ ಸಾಧ್ಯವಾಯಿತು ಅವರ ನಿತ್ಯದ ವಿಮಾನದಲ್ಲಿನ ತರಬೇತಿ ಕೆಲಸ ಇತ್ಯಾದಿ ತಿಳಿಸಿದ್ದರು.
ಇವರ ಸಹೋದರಿ ಮತ್ತು ಭಾವ ನಮ್ಮ ಆನಂದಪುರಂ ನಿವಾಸಿಗಳಾಗಿದ್ದಾರೆ.
ಆನಂದಪುರಂನ ರೈಲ್ವೆ ನಿಲ್ದಾಣದ ರಸ್ತೆಯ ಮಣಿಕಂಠ ಇಂಡಸ್ಟ್ರೀಸ್ ಮಾಲಿಕ ಕೇಶವ ಅವರು ಮಂಜುನಾಥ್ ಸಹೋದರಿ ಪತಿ (ಇವರ ಬಾವ) ನಮ್ಮೂರಲ್ಲಿ ಪಿಠೋಪಕರಣ ಇತ್ಯಾದಿ ತಯಾರಿಸುವ ಇಂಡಸ್ಟಿ ಮಾಡಿಕೊಂಡು ಪ್ರಸಿದ್ಧರಾಗಿದ್ದಾರೆ.
ನಂತರ ಕೆಲ ತಿಂಗಳಲ್ಲೇ ಇವರ ವಿವಾಹ ಕಾರ್ಯಕ್ರಮ ನಮ್ಮ #ಕೃಷ್ಣಸರಸ_ಕಲ್ಯಾಣ_ಮಂಟಪದಲ್ಲಿ ಜರುಗಿತು ನೂತನ ದಂಪತಿಗಳು ರೈಲಿನಲ್ಲಿ ಬೆಂಗಳೂರಿಗೆ ಹೋಗುವಾಗ ಅವರನ್ನ ಬೀಳ್ಕೊಡಲು ನಮ್ಮ ಕಲ್ಕತ್ತಾ ಸಿಬ್ಬಂದಿಗಳು ಕೂಡ ಹೋಗಿದ್ದರು.
ಮೊನ್ನೆ ಬರಸಿಡಿಲಿನಂತ ಈ ಸುದ್ದಿ ಕೇಳಿ ಇದು ಇವರಾಗದಿರಲಿ ಎಂದು ಒಳ ಮನಸ್ಸು ಹೇಳುತ್ತಿತ್ತು ಆದರೆ ನಂತರ ಬಂದ ಸುದ್ದಿ ಹೊಸನಗರ ತಾಲೂಕು ಪಟಗುಪ್ಪ ಊರ ಹತ್ತಿರದ ಸಂಕೂರು ಗ್ರಾಮದವರು, 2019ರಲ್ಲಿ ಅಸ್ಸಾಂ ಮೂಲದ ಯುವತಿ ಜೊತೆ ವಿವಾಹ ಆಗಿತು ಅನ್ನುವ ಮಾಹಿತಿಯಿಂದ ನನಗೆ ಇದೇ ಮಂಜುನಾಥ್ ಎಂಬುದು ಖಾತ್ರಿ ಆಯ್ತು.
ದಂಪತಿಗಳು ತಮ್ಮ ಮಗುವಿನ ನಿರೀಕ್ಷೆಯಲ್ಲಿದ್ದಾಗಲೇ ಮಂಜುನಾಥ್ ಉತ್ತರಪ್ರದೇಶ ರಾಜ್ಯದ ಆಗ್ರಾದ ಭಾರತೀಯ ಸೇನೆಯ ವೈಮಾನಿಕ ತರಬೇತಿಯ ಪ್ಯಾರಾಶ್ಯೂಟ್ ಜಂಪಿಂಗ್ ತರಬೇತಿ ನೀಡುವಾಗ ತರಬೇತಿ ಪಡೆಯುತ್ತಿದ್ದ 11 ಯೋದರು ಯಶಸ್ವಿ ಆಗಿ ಪ್ಯಾರಾಶ್ಯೂಟ್ ನಲ್ಲಿ ಲ್ಯಾಂಡಿಂಗ್ ಆದರು ಆದರೆ ಇಂಡಿಯಿನ್ ಏರ್ ಫೋರ್ಸ್ ನ ತರಬೇತುದಾರ ಜ್ಯೂನಿಯರ್ ವಾರೆಂಟ್ ಆಫೀಸರ್ ಮಂಜುನಾಥರ ಪ್ಯಾರಾಶ್ಯೂಟ್ ತೆರೆದುಕೊಳ್ಳದೇ ಅವರು ನೇರವಾಗಿ ಭೂಮಿಗೆ 1800 ಅಡಿಯಿಂದ ಅಪ್ಪಳಿಸಿ ಇಹ ಲೋಕ ತ್ಯಜಿಸಿದ್ದಾರೆ.
ಇದೊಂದು ದುರಂತ ವಿಷಯವಾಯಿತು ಇವತ್ತು ಇವರ ಹುಟ್ಟೂರಿನಲ್ಲಿ ಅವರ ಅಂತ್ಯಸಂಸ್ಕಾರ ನಡೆದಿದೆ, ಜಿಲ್ಲಾ ಆಡಳಿತ ಅಂತಿಮ ಗೌರವಗಳನ್ನು ಸಮರ್ಪಿಸಿದೆ.
ಜಿಲ್ಲೆಯ ಜನ ಕಂಬನಿ ಮಿಡಿದಿದ್ದಾರೆ,ಮಂಜುನಾಥ್ ಆತ್ಮಕ್ಕೆ ಶಾಂತಿ ಲಭಿಸಲಿ, ಸ್ವರ್ಗ ಪ್ರಾಪ್ತಿಯಾಗಲಿ ಈ ಕುಟುಂಬಕ್ಕೆ ಇವರ ಅಕಾಲಿಕ ಅಗಲಿಕೆ ತಡೆಯುವ ಶಕ್ತಿ ನೀಡಲಿ ಎಂದು ನಮ್ಮ ಪುರ ದೈವ ಶ್ರೀವರಸಿದ್ದಿ ವಿನಾಯಕ ಸ್ವಾಮಿ ದೇವರಲ್ಲಿ ಪ್ರಾರ್ಥಿಸಿದ್ದೇನೆ.
Comments
Post a Comment