#ಪ್ರಬಂದ_ಅಂಬೂತೀಥ೯
#ಮಳೆನಾಡಿನ_ಅದ್ಬುತ_ಕಥೆಗಾರ
#ಅವರ_8ನೇ_ಕಥೆ_ಓದಿ
ಎಲೆ ಮರೆಯ ಕಾಯಿಯಂತಹ ಈ ಉದಯೋನ್ಮುಖ ಕಥೆಗಾರ ಅನೇಕ ಕಥೆ ಬರೆದಿದ್ದಾರೆ, ಅವರು ಬರೆದ ಎಲ್ಲಾ ಕಥೆಗಳು ಪುಸ್ತಕವಾಗಿ ಪ್ರಕಟಿಸಲು ಯೋಗ್ಯವಾಗಿದೆ.
ಇವರು ಬರೆದ ಕಥೆಗಳಾದ ನೇಗಿಲೋಣಿ, ಸುಕುOಟು೦ಭ, ಪ್ರಥಮ ಪ್ರೀತಿ, ಶಿಕ್ಷೆ, ಹುತಾತ್ಮ, ಒಂಶಾಂತಿ, ಸ್ವರತಿ, ದಂಡಕಾರಣ್ಯ ಹೊಂ ಸ್ಟೇ, ನಾವುಡರ ಪ್ರೇಮ ಪ್ರಸಂಗ, ಸೀನು ರೆಡ್ಡಿ ಡಿಸ್ಕವರಿ, ವಕ್ಷಸ್ಥಲೆ, ಮರು, ಮೂಲ, ರುತುಮಾನ, ಭಾರತಿ ಪುರ, ಕನಕತ್ತೆ ಸ್ಟಾಟಿಸ್ಟಿಕ್, ನಾಗಮಂಡಲ, ವೇಣು ನಾಗನ, ಕೌಸಲ್ಯ ಬಾತ್, ಅನ್ನಪ್ರಸಾದ ಕೇಟರರ್ಸ್, ಅಕೇಶಿಯಾ ಕೊಪ್ಪ.... ಹೀಗೆ ಸಾಲು ಸಾಲು ಕಥೆ ಬರೆದಿದ್ದಾರೆ.
ಇದು ಅವರ 8ನೇ ಕಥೆ ನಾನು FB ಯಲ್ಲಿ ಪ್ರಕಟಿಸುತ್ತಿದ್ದೇನೆ ಓದಿ ಅಭಿಪ್ರಾಯ ತಿಳಿಸಿ
#malenadu #westernghats #westernghatsofindia #thirthahalli #sringeri #koppa #cancerawareness #cancertreatment #cancersurvivor #cancerrecovery #cancercare #Cancer #breastcancersurvivor #ಶಿವಮೊಗ್ಗ #ShivamoggaNews
ಆತ್ಮೀಯರೆ ಇದೊಂದು ಸುದೀರ್ಘ ರಾಜಕೀಯ ಆದಾರಿತ ಕಥೆ. ಯಾರನ್ನೂ ಹೋಲಿಸಿದ್ದಲ್ಲ.. ನಿಮ್ಮ ನಮ್ಮ ಅನುಭವ ಕ್ಕೆ ಬಂದ ಬರುತ್ತಿರುವ ರಾಜಕೀಯ ವಿದ್ಯಮಾನದ ದಾಖಲೀಕರಣ ಅಷ್ಟೇ...
ಸು.....ದೀರ್ಘ ಕ್ಕಾಗಿ ಕ್ಷಮೆಯಿರಲಿ...
ಪ್ರಬಂಧ ಅಂಬುತೀರ್ಥ
#ಜನಬಲ_ಅಸೋಸಿಯೇಷನ್
ಕೆ ಜಿ ರಸ್ತೆ
ಬೆಂಗಳೂರು.
ಅದು ಮುಖ್ಯ ಮಂತ್ರಿಗಳ ಕಛೇರಿ ಕೃಷ್ಣಾ...
ಅಲ್ಲಿ ನೂತನ ಮುಖ್ಯ ಮಂತ್ರಿಗಳಾದ ಕಾಡಪ್ಪಣ್ಣ ನವರು ತಮ್ಮ ಮಕ್ಕಳು ಅಳಿಯಂದಿರ "ಗೃಹ ಸಚಿವಾಲಯದ" ಜೊತೆಗೆ ಸರ್ಕಾರ ನ ಲಾಭದಾಯಕ ವಾಗಿ ವರ್ಕೌಟ್ ಮಾಡಿಕೊಂಡು ಹಾಕಿದ ಬಂಡವಾಳ ಕ್ಕೆ ಹಲವಾರು ಪಟ್ಟು ಮೊತ್ತ ಹೊರತೆಗೆಯುವ ಯೋಜನೆ ಹೇಗೆಂದು ಚಿಂತನೆ ನೆಡಿತಿದೆ.
ಈಗ ಕಾಲ ಬದಲಾಗಿದೆ.
ಜಿಎಸ್ ಟಿ ಐಟಿ ಕಠಿಣ ಕಾನೂನಿನ ಕಾರಣದಿಂದಾಗಿ ಹತ್ತು ರೂಪಾಯಿ ಕೂಡ ತೆರಿಗೆ ಮಿತಿ ಯ ಹೊರತಾಗಿ ಇಟ್ಟು ಕೊಂಡು ನಿಬಾಯಿಸುವುದು ಕಷ್ಟ..
ನಮ್ಮ ದೇಶದಲ್ಲಿ ಒಟ್ಟು ಐದು ಬಗೆ ಜನರಿದ್ದಾರೆ.
೧- ಅತಿ ಬಡವರು, ೨ ಬಡವರು, ೩-
ಮದ್ಯಮ ವರ್ಗ , ೪ - ಶ್ರೀ ಮಂತರು
ಮತ್ತು ೫- ಅತಿ ಶ್ರೀಮಂತ ರು...
ಒಂದು ಕಡೆ ಬಡವರು ದಯನೀಯ ಪರಿಸ್ಥಿತಿ ಯಲ್ಲಿ ಜೀವಿಸುತ್ತಿರುತ್ತಾರೆ.
ಮತ್ತೊಂದು ಕಡೆ ಶ್ರೀಮಂತ ರು ಅತಿ ಶ್ರೀಮಂತ ರು ತಾವು ತೆರಿಗೆ ವಂಚಿಸಿ ಗಳಿಸಿದ ಹಣವನ್ನು ಉಳಿಸಿಕೊಳ್ಳು ವುದು ಹೇಗೆಂದು ಗೋಳಾಡುತ್ತಿರು ತ್ತಾರೆ...!?
ಇದೆಲ್ಲಾ ತಾರತಮ್ಯ ಸರಿಪಡಿಸಿ ಸರ್ವ ರಿಗೂ ಸಮಬಾಳು ಕೊಡಬೇಕಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎರಡೇ ಎರಡು ಬಗೆಯ ಜನರಿದ್ದಾರೆ.
ಒಂದು - ದುಡ್ಡಿಗಾಗಿ, ತಮ್ಮ ಉದ್ಯಮ ನಡೆಸಲು ಅನುಕೂಲ ವಾಗಲೆಂದು ರಾಜಕಾರಣ ಮಾಡಿ ಅಧಿಕಾರ ಹೊಂದಬಯಸುವವರು.
ಎರಡು- ಅಹಂಗಾಗಿ... ಅಧಿಕಾರ ಮೋಹದಿಂದ ರಾಜಕೀಯ ದಲ್ಲಿ ರುವ ಮಂದಿ.
ಬಹುತೇಕರು ಜನಸಾಮಾನ್ಯರ ಕಷ್ಟ ಪರಿಹರಿಸಲು ಸಮಾಜಸೇವೆ ಮಾಡೋಕಾಗಿ ರಾಜಕಾರಣದಲ್ಲಿ ರೋದಿಲ್ಲ. ಜೊತೆಗೆ ನಮ್ಮ ಜನ ಪ್ರತಿನಿಧಿಗಳೂ ಕೂಡ ಅತಿ ಶ್ರೀಮಂತ ರೇ .ಅವರಿಗೆ ಬಡತನ ಕಷ್ಟ ಹಸಿವು ಯಾವುದರ ಅರಿವಿರೋಲ್ಲ..
ಈಗಿನ ರಾಜಕೀಯ ವ್ಯವಸ್ಥೆ ಯಲ್ಲಿ ಸಾಮಾನ್ಯ ಬಡವನೊಬ್ಬ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲು ಸಾದ್ಯವಾ...?
ಅಂತೆಯೇ ನಮ್ಮ ಮುಖ್ಯಮಂತ್ರಿ ಕಾಡಪ್ಪಣ್ಣ ಕೂಡ ಶ್ರೀ ಸಾಮಾನ್ಯ ವರ್ಗದಿಂದ ಜನಪರ ಹೋರಾಟದ ಮೂಲಕ ರಾಜಕೀಯಕ್ಕೆ ಬಂದವರು. ಮೊದಲು ನ್ಯಾಯ ನೀತಿ ಸತ್ಯ ಪ್ರಾಮಾಣಿಕತೆ ಅಂತೆಲ್ಲಾ ಫೋಸು ಕೊಟ್ಟು ... ರಾಜಕಾರಣ ಮಾಡಿ ಅಲ್ಲಿ ಇಲ್ಲಿಂದ ಹಣ ಹೊಂದಿಸಿ ತಂದು ಸಾವಿರ ಸಾವಿರ ಕೋಟಿ ಖರ್ಚು ಮಾಡಿ ಜಾತಿ ಧರ್ಮ ಬಳಸಿ ಉರಿಸಿ
ಚುನಾವಣೆಯಲ್ಲಿ ಗೆದ್ದು , ಕಡಿಮೆ ಯಾದ ಸ್ಥಾನವನ್ನು ಅಲ್ಲಿ ಇಲ್ಲಿ ಚೀಲ ಗಟ್ಟಲೇ ಹಣ ಕೊಟ್ಟು ಶಾಸಕರ ಖರೀದಿಸಿ ಸರ್ಕಾರ ಮಾಡಿ ಈಗ ಆಗ ಖರ್ಚು ಮಾಡಿದ ಹಣ + ಅದರ ಹತ್ತು ಪಟ್ಟು ಹಣ ದುಡಿಯಲು
ಹೊಸ ಯೋಜನೆ ಮಾಡಿ ಅದರಲ್ಲಿ ಭ್ರಷ್ಟಾಚಾರ ಮಾಡಿ ಹಣ ಉಳಿಸಲು
ಪ್ರಯತ್ನ ಮಾಡತೊಡಗಿದ್ದಾರೆ.
ಮುಂದೆ ಯಾವುದೇ ವಿರೋಧ ಪಕ್ಷದ ನಾಯಕರು, ಮಾಹಿತಿ ಹಕ್ಕಿ ನ ಹೋರಾಟಗಾರರು, ಐಟಿ ಇಡಿ ಗಳ ಕಾನೂನಿನ ಕುಣಿಕೆಗೆ ಬೀಳದಂತೆ "ಸಕ್ರಮ ಭ್ರಷ್ಟಾಚಾರ" ಮಾಡಲು ಕಾನೂನು ನಿಪುಣರು , ತೆರಿಗೆ ನಿಪುಣ ರ ಜೊತೆಗೆ ಚೆರ್ಚೆ ನೆಡಿತಿದೆ.
ಈಗ "ಸಕ್ರಮ ಭ್ರಷ್ಟಾಚಾರ" ಮಾಡಿ ಅಲ್ಲಿ ಇಲ್ಲಿ ಮಾವ ಅಳಿಯ , ವಿದೇಶಿ ಹೂಡಿಕೆ , ರಿಯಲ್ ಎಸ್ಟೇಟ್ , ಉದ್ಯಮ ಶೇರು ಪಾರ್ಟನರ್ ಷಿಪ್
ಆಗಿ ಬ್ರಷ್ಟಾಚಾರ ಮಾಡಿದ ಹಣ ಗೊತ್ತೇ ಆಗದಂತೆ ಜೀರ್ಣ ಆಗು ವಂತೆ ಯೋಜನೆ ರೂಪಿಸುವ ಕೆಲಸ ನೆಡಿತಿದೆ.
ನಮ್ಮ ದೇಶದಲ್ಲಿ ಆಡಳಿತ ಸರ್ಕಾರ ಎಂತದೇ ಅನಾಹುತ ಕಾರಿ ಯೋಜನೆ ಮಾಡಿದರೂ ನೆಡಿತದೆ...!.
ನೆಡಿದಿದೆ. !!!
ಎಷ್ಟೇ ಬ್ರಷ್ಟಾಚಾರ ಮಾಡಿದರೂ ನೆಡಿದಿದೆ...!!
ಏನಾಗುತ್ತದೆ ನಮ್ಮ ದೇಶದಲ್ಲಿ ಸಾವಿರ ಲಕ್ಷ ಕೋಟಿ ಬ್ರಷ್ಟಾಚಾರ ಮಾಡಿದರೆ !?
ವ್ಯವಸ್ಥೆಲಿ ಅವರನ್ನು ಕೇವಲ "ಆರೋಪಿ " ಯನ್ನಾಗಿ ಮಾತ್ರ ಮಾಡ ಬಹುದು....
ಎಂದೂ ಅವರು ಮಾಡಿದ ಅಪರಾಧ ಸಾಬೀತು ಮಾಡಿ ಅವರು ಮಾಡಿದ ಬ್ರಷ್ಟಾಚಾರ ದ ಹಣವನ್ನು ಕಕ್ಕಿಸುವ ಕೆಲಸ ಆಗಿಲ್ಲ....
ಮೊದಲು ಆರೋಪ, ನಂತರ ಇಡಿ ರೇಡು ...
ನಂತರ ಬಂದನ
ಕೊನೆಗೆ ಬೇಲು ಬಿಡುಗಡೆ...
ಸೇಬುಹಣ್ಣಿನ ಹಾರ..
ಮುಂದೆ
ಹತ್ತೋ ಇಪ್ಪತ್ತೋ ವರ್ಷಗಳ ನಂತರ
ಆ ರಾಜಕಾರಣಿ ಆರೋಪ ಮುಕ್ತ..
ಅವನು ಮಾಡಿದ ಹಣವೂ ಅವನಿಗೆ.
ಇದೆಲ್ಲಾ ಕಾಡಪ್ಪಣ್ಣ ನಿಗೂ ಗೊತ್ತು...
ಆದರೂ ರಾಜಕೀಯ ದಲ್ಲಿ ಅವರು ಹಾಕಿದ ಪ್ರಾಮಾಣಿಕತೆ ಯ ಪ್ಲಾಸ್ಟಿಕ್ ಸರ್ಜರಿ ಯ ನಾಜೂಕಾದ ಮುಖ
"ವಿವರ್ಣ" ವಾಗುವುದು ಅವರಿಗೆ ಇಷ್ಟ ಇಲ್ಲ...
ಅದಕ್ಕೆ ಮಾರ್ಗದರ್ಶನ ಮಾಡಲು ಕೆಲ ಸಲಹೆ ಕೋರರು ಮತ್ತು ವಾಣಿಜ್ಯ ವ್ಯವಹಾರ ಗಳ ಪರಿಣಿತರು ಕಾನೂನು ಪಂಡಿತ ರೂ ಇದ್ದಾರೆ. ಅಲ್ಲಿ ದೂರದಲ್ಲಿ
ಸರ್ಕಾರದ ಮುಖ್ಯ ಕಾರ್ಯದರ್ಶಿಯೂ ಇದ್ದಾರೆ.
ಈಗ ಕಾಲ ಬದಲಾವಣೆ ಆಗಿದೆ...
ಒಂದು ಬೃಹತ್ ಯೋಜನೆ ಜಾರಿಗೆ ಬರುವುದರೊಳಗೇ ಮೊದಲೇ ವಿರೋಧ ಪಕ್ಷದವರು , ಮಾಹಿತಿ ಹಕ್ಕಿ ನ ಹೋರಾಟದವರು ಮುಂತಾದವರ ಕಾನೂನು ಹೋರಾಟಕ್ಕೆ ಮಣ್ಣು ಮುಕ್ಕಿಸುವ ಹಣ ತಿಂದು ಜೀರ್ಣ ಮಾಡಿಕೊಳ್ಳುವ ಮಾರ್ಗದರ್ಶಕ " ಐಟಿ ಪ್ಯಾಕೇಜ್ "ಲಭ್ಯವಿದೆ.
ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಯ ಶರಾವತಿ ಕಣಿವೆಯಲ್ಲಿ ಎರಡು ಬೃಹತ್ ಯೋಜನೆ ಮಾಡಬಹುದೆಂದೂ ...
ಅದರಲ್ಲಿ
ಒಂದು ಹೂಳು ತುಂಬಿರುವ ಲಿಂಗನ ಮಕ್ಕಿಯ ಹೂಳು ತೆಗೆದು , ಹೂಳನ್ನು
ಮಲೆನಾಡಿನ ಊರಿನ ಆಳ ಕಂದಕ ಗಳನ್ನು ತುಂಬಿಸಿ "ಲೆವಲ್ " ಮಾಡುವ ಯೋಜನೆ.
ಅಂದಾಜು ವೆಚ್ಚ - ಇಪ್ಪತ್ತೈದು ಸಾವಿರ ಕೋಟಿ... ಯೋಜನೆ ಕಾರ್ಯರೂಪಕ್ಕೆ ಬಂದು ಅದರಲ್ಲಿ ಹಣ
ಉಳಿದು ಸರ್ಕಾರದ "ಪ್ರವರ್ತಕರಿಗೆ" ಬರಬಹುದಾದ ಫೀಡ್ ಬ್ಯಾಕ್ ಎಂಟು ಸಾವಿರದಿಂದ ಹತ್ತು ಸಾವಿರ ಕೋಟಿ.
ಎರಡನೇ ಯೋಜನೆ.
ಹೈಟ್ ಆಫ್ ಲಿಂಗನ ಮಕ್ಕಿ ಡ್ಯಾಮ್.
ಈಗಿನ ಲಿಂಗನಮಕ್ಕಿ ಆಣೆಕಟ್ಟನ್ನು ಇನ್ನೂ ಹತ್ತು ಅಡಿ ಎತ್ತರ ಮಾಡುವ
ಈ ಯೋಜನೆ ಅರವತ್ತು ಸಾವಿರ ಕೋಟಿ ಬಂಡವಾಳ ಬೇಡುತ್ತದೆ.
ಪರಿಹಾರ, ಟಿಂಬರ್ , ಬಿಲ್ಡಿಂಗ್ ಇತ್ಯಾದಿಗಳನ್ನು ಸೇರಿಸಿದರೆ ಅಂದಾಜು
"ನಲವತ್ತು" ಸಾವಿರ ಕೋಟಿ ಗೆಬರಿ ಕೊಳ್ಳಬಹುದು...
ಈ ಹೈಟ್ ಆಫ್ ಲಿಂಗನಮಕ್ಕಿ ಯೋಜನೆಯನ್ನೇ ಕುಡಿಯುವ ನೀರಿನ ಕಾರಣ ಕೊಟ್ಟು ಜಾರಿಗೆ ತರುವುದೆಂದು ತೀರ್ಮಾನ ಕ್ಕೆ ಬರುತ್ತಾರೆ ಮುಖ್ಯ ಮಂತ್ರಿಗಳ " ಗೃಹ ಕುಟುಂಬ"....
ಆಗ ದೂರದಲ್ಲಿ ನಿಂತಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಮುಖ್ಯ ಮಂತ್ರಿಗಳು ಕರೆದು ಈ ಯೋಜನೆ ಜಾರಿಗೆ ತರ್ತೀವೆಂದಾಗ ...
ಕ್ಷಮಿಸಿ ಸಾರ್ ಈ ಯೋಜನೆಯಲ್ಲಿ ಕನಿಷ್ಠ ಒಂದು ಲಕ್ಷ ಎಕರೆ ಅರಣ್ಯ ನಾಶವಾಗಬಹುದು... ಹೀಗಾದರೆ ಈಗಲೇ ವಾತವರಣವೇ ಕೆಟ್ಟು ಅದ್ವಾನ ವಾಗಿದೆ ಮುಂದೆ ಕಥೆ ಏನು...? ಸಾರ್ ತಮ್ಮ ಹೆಸರಲ್ಲೇ "ಕಾಡು " ಬೇರೆ ಇದೆ
ನೀವೇ ಕಾಡು ನಾಶ ಮಾಡಲು ಅಡಿಪಾಯ ಹಾಕ್ತೀರೆಂದ್ರೆ "ಆಭಾಸ " ಆಗೋಲ್ಲವ....? ಮತ್ತೆ ಈ ಹಿಂದೆಯೇ ಲಿಂಗನ ಮಕ್ಕಿಯಿಂದ ನೀರು ತರುವುದು ಸಾದ್ಯವಿಲ್ಲ ಅಂತಾಗಿದೆ
ಈ ಯೋಜನೆ ಬೇಕಾ....??? ಅಂದರು ಸೆಕ್ರೆಟರಿಗಳು.
ಆಗ ಮುಖ್ಯ ಮಂತ್ರಿ ಕಾಡಪ್ಪಣ್ಣನವರು...
ಅಲ್ರಿ ಸೆಕ್ರೆಟರಿ ಗಳೆ... ಬ್ರಹ್ಮ ವಿಷ್ಣು ಮಹೇಶ್ವರ ನ ಹೆಸರಿಟ್ಟು ಕೊಳ್ಳುವವರು, ಕುಲದೇವರ ಹೆಸರು ಇಟ್ಟುಕೊಳ್ಳುವವರು ಸುಭಗರಾಗಿಯೇ ಇದ್ದಾರೆಯಾ...?
ನೀರು ಬೆಂಗಳೂರಿಗೆ ಬರಲಿ ಅಥವಾ ತಂದೇ ತರ್ತೀವಿ ಅಂತ ನಾನೆಲ್ಲಿ ಹೇಳಿದೆ... ಪ್ರಯತ್ನ ನಂದು ನೀರು ಬಂದರೂ ಬರಬೌದು ಬಿಟ್ಟರೆ ಬಿಡ ಬೌದು... ನೀರು ಬಂದರೆ ರಾಜ್ಯದ ಜನರ ಬೆಂಗಳೂರಿಗರ ಅದೃಷ್ಟ...
ಯೋಜನೆಯ ಜಯ ಅಪಜಯ ಕ್ಕೂ ನಮ್ಮ ಸರ್ಕಾರಕ್ಕೂ ಸಂಭಂದ ಇಲ್ಲ... ಈಗ ಎಮ್ಮೆ ಹೊಳೆ ನೀರು ಬೆಂಗಳೂರಿಗೆ ಬಂತಾ...?
ಅಷ್ಟು ಅರಣ್ಯ ನಾಶ ಮಾಡಿದ ಯೋಜನೆ ಏನಾಯಿತು...? ಎಮ್ಮೆ ಹೊಳೆಯಿಂದ ಬಳ್ಳಾಪುರಕ್ಕೆ ಬರೋ ಪೈಪ್ ನಲ್ಲಿ ನೀರು ತುಂಬಲೇ "ನಾಲ್ಕು " ವರ್ಷ ಬೇಕಾಯಿತು... ಆದರೆ ಅಲ್ಲಿಂದ ನೀರು ಹರಿದುಬರಲೇ ಇಲ್ಲ....!!!
ಯಾರು ಇಂತಹ ಯೋಜನೆ ಗಳ ವೈಫಲ್ಯ ಕ್ಕೆ ಹೊಣೆ...!? ಹತ್ತಾರು ಸಾವಿರ ಕೋಟಿ ತೆರಿಗೆ ಹಣ ಇದಕ್ಕಾಗಿ ಹೂಡಿದರೂ
ಬಳ್ಳಾಪುರ ಜನಕ್ಕೆ ನೀರಿಲ್ಲ .. ಅವರು ಸಂತ್ರಸ್ತರಾದರು. ಆದರೆ ಆ ಅನಾವಶ್ಯಕ ಯೋಜನೆ ಮಾಡಿ ಎಮ್ಮೆ ಹೊಳೆ ಪರಿಸರ ನಾಶ ಮಾಡಿ , ಕರ್ಣಾವತಿ ನೀರಿಗೆ ಹರಿವು ಕಡಿಮೆ ಮಾಡಿ ಆ ಬಾಗದ ರೈತರ ಬದುಕಿನ ಮೇಲೆ ದುಷ್ಪರಿಣಾಮ ಬೀರಿ.. ಕೊನೆಗೆ ಇವತ್ತು ಒಂದಿಡಿ ಭಾಗವನ್ನು ಅತಂತ್ರ ಮಾಡಿದರು ಆಗಿನ ರಾಜಕಾರಣಿ ಗಳಾದ ಬೀರಪ್ಪ ಮತ್ತು ನಿತ್ಯಾನಂದ ಗೌಡರು... ಆದರೆ ಆ ನಾಶಕ್ಕೆ ಯಾರು ಯಾರಿಗೆ ಶಿಕ್ಷೆ ಕೊಡ್ತಾರೆ...?
ನಾವು ರಾಜಕಾರಣಿ ಗಳು. ನಮಗೆ ನೀರು ರಸ್ತೆ ವಿದ್ಯುತ್ ಆಹಾರ ಮನೆ ಎಲ್ಲಾ ರಾಜಕೀಯ ಬಂಡವಾಳ...
ಈಗ ಇಲ್ಲಿ ಕೂಡ ನಗರ ಜನರಿಗೆ ನೀರು ಮತ್ತು ವಿದ್ಯುತ್ ಪೂರೈಕೆ ಮಾಡುತ್ತೇವೆ
ಅಂತಲೇ ಯೋಜನೆ ಸಿದ್ದಪಡಿಸುತ್ತೇವೆ.
ಅದರ ಸಾಧಕ ಬಾದಕ ನಮಗೆ ಬೇಡ.
ಈ ಸಂಧರ್ಭದಲ್ಲಿ ಜನಸಾಮಾನ್ಯರ ಮೇಲೆ ತಕ್ಷಣಕ್ಕೆ ಬೀರುವ ಪರಿಣಾಮ ಮಾತ್ರ ಮುಖ್ಯ.
ನಮಗೆ "ಅಳಿದು " ಹೋಗುತ್ತಿರುವ
"ಮಲೆನಾಡಿಗಿಂತ " ರಾಜ್ಯದ ಮುಕ್ಕಾಲು ಪಾಲು ಜನ ವಾಸಿಸುವ ಬೆಂಗಳೂರಿನಂತಹ ನಗರದ ಜನರ ಆಕರ್ಷಣೆ ಉಳಿಸಿಕೊಳ್ಳುವುದು ಮುಖ್ಯ....!!!!
ಇನ್ನೂ ಕಾಡಿಗೂ ಮಳೆಗೂ ಇರುವ ಸಂಬಂಧವಾದರೂ ಏನು... ? ತೊಂಬತ್ತು ಭಾಗ ಅರಣ್ಯ ನಾಶವಾದರೂ ಮಳೆ ಬರುತ್ತಿಲ್ಲವಾ..?
ಬೇಕಾದಾಗ ಹಿತಮಿತವಾಗಿ ಮಳೆ ಬರದಿರಬಹುದು, ಬಂದ ಮಳೆ ಭೂಮಿಯಲ್ಲಿ ಇಂಗಿ ಅಂತರ್ಜಲ ಇರದಿರಬಹುದು... ಆದರೆ ಅನಾಹುತ ಮಾಡುವಷ್ಟು ಮಳೆ ಬರುತ್ತಿದೆಯಲ್ವಾ?ರಾಜಕೀಯ ಪಕ್ಷಗಳು ಆಣೆಕಟ್ಟು ರಸ್ತೆ ಮತ್ತು ಅರಣ್ಯ ಒತ್ತುವರಿ ಸಕ್ರಮ ನೆಪದಲ್ಲಿ ಇದುವರೆಗೂ ಮಾಡಿರುವ ಅರಣ್ಯ ನಾಶಕ್ಕೆ ಹೊಣೆಯಾರು...?
ಇದುವರೆಗಿನ ಸರ್ಕಾರ ಗಳು ಮಾಡಿರುವ ಅರಣ್ಯ ನಾಶಕ್ಕೆ ನಂದೂ ಒಂದು ಹೊಸ ಸೇರ್ಪಡೆ ಅಷ್ಟೇ...
ಜನ ಏನು ಮಾಡ್ತಾರೆ ...? ನಾಲ್ಕು ದಿನ ಹೋರಾಟ ಹಾರಾಟ ಮಾಡಬಹುದು ಅಷ್ಟೇ. ಸುಲಭವಾಗಿ ಪರಿಹಾರ ಹಣ ಸಿಕ್ಕರೆ ಜನ ಗಪ್ ಚುಪ್. ನಮ್ಮ ಜನ ಪ್ರತಿಭಟನೆ ಮಾಡಿ ಅನ್ಯಾಯ ಅಕ್ರಮ ಖಂಡಿಸುವ ಮನಃ ಸ್ಥಿತಿ ಇದ್ದಿದ್ದರೆ ರಾಜಕೀಯ ಇಷ್ಟು ವ್ಯಾಪಾರೀಕರಣವಾಗ್ತಿತ್ತಾ....?.
ಅದನ್ನೆಲ್ಲ ಅತ್ತಕಡೆ ಬದಿಗೊತ್ತಿ...
ನೀವು ಯೋಜನೆಗೆ ತಯಾರಿ ಮಾಡಿ ಅಂತ ಆಜ್ಞೆ ಮಾಡಿದರು ಮುಖ್ಯಮಂತ್ರಿ ಗಳು.
ಈ ಸುದ್ದಿ ಶರಾವತಿ ಹೋರಾಟ ಗಾರರಿಗೆ
ಸಿಕ್ಕಿ ಸಾಗರ ತೀರ್ಥಹಳ್ಳಿ ಹೊಸನಗರ ಶಿವಮೊಗ್ಗ ದಲ್ಲಿ ಪ್ರತಿಭಟನೆ ಕಿಚ್ಚು ಹೊತ್ತಿಕೊಂಡಿತು. ಸರ್ಕಾರ ಯಾವು ದಕ್ಕೂ ಸೊಪ್ಪು ಹಾಕಲಿಲ್ಲ...
ಪರಿಸರವಾದಿಗಳು ಕಾನೂನು ಹೋರಾಟಕ್ಕೂ ಮನಸು ಮಾಡಲಿಲ್ಲ.
ಜನಕ್ಕೆ ಕಸ್ತೂರಿ ರಂಗನ್ನೂ ಬೇಡ ಘಾಡ್ಗೀಳೂ ಬೇಡ... ಈಗಿರೋ ಕಾನೂನೇ ಅರಣ್ಯ ರಕ್ಷಣೆ ಗೆ ಸಾಕು ಅಂತ ಪ್ರತಿಪಾದಿಸುತ್ತಾರೆ.
ಆದರೆ ನಮ್ಮ ರಾಜಕೀಯ ವ್ಯವಸ್ಥೆ ಹೀಗೆ ಕುಡಿಯುವ ನೀರು , ಜನರ ಮೂಲಭೂತ ಅವಶ್ಯಕತೆ ಯಾದ ಮನೆ ಮುಂತಾದ ಕಾರಣಕ್ಕೆ ಒತ್ತುವರಿ ಸಕ್ರಮ, ಆಣೆಕಟ್ಟು ಮಾಡಿ ಕಾನೂನಿನ ಔದಾರ್ಯ ವನ್ನು ದುರುಪಯೋಗ ಮಾಡಿಕೊಳ್ತಿದ್ದಾರೆ.
ನಮ್ಮಲ್ಲಿ ಅತ್ಯುತ್ತಮ ಕಾನೂನು ಗಳಿದ್ದಾವೆ... ದುರಂತ ಎಂದರೆ ನಮ್ಮ ರಾಜಕೀಯ ವ್ಯವಸ್ಥೆ ಆ ಎಲ್ಲಾ ಕಾನೂನನ್ನು ತಿದ್ದುಪಡಿ ಮಾಡಿ ಮಾಡಿ ದುರ್ಬಲ ಮಾಡಿ ಹಲ್ಲು ಕಿತ್ತ ಹಾವಾಗಿ ಸಿದ್ದಾರೆ....!!!
ಈಗ ಸರ್ಕಾರ ಗಳನ್ನು ಓಲೈಸುವುದೇ ಕೊನೆಯ ದಾರಿ. ಸರ್ಕಾರದ ಮುಖ್ಯ ಮಂತ್ರಿಗಳ ಬೇಟಿ ಮಾಡಿ ಈ ಯೋಜನೆ ಯಿಂದ ಹಿಂದೆ ಸರಿಯು ವಂತೆ ಮಾಡುವ ಯೋಚನೆಯ ಚೆರ್ಚೆ ಶುರುಮಾಡಿದರು.
ನಂತರ ಪರಿಸರ ವಾದಿಗಳ ಸಂಗದಲ್ಲಿ ದ್ದ ಕಾಡಪ್ಪಣ್ಣ ನ ಆಡಳಿತ ಪಕ್ಷದ ಮುಖ್ಯ ಕಾರ್ಯಕರ್ತರು ನಾವು ಹೋಗಿ ಮುಖ್ಯಮಂತ್ರಿ ಕಾಡಪ್ಪಣ್ಣ ನವರ ಮನ ಒಲಿಸಿ ಈ ಯೋಜನೆ ಜಾರಿಗೆ ಬರದಂತೆ ತಡಿತೀವಿ ಅಂತಂದರು.
ಆ ತಂಡದ ಮುಖ್ಯ ವ್ಯಕ್ತಿ ಹಿತೇಶ್ ಹನಿ ಸರ ... ಅವರ ಜೊತೆಗೆ ಇನ್ನೂ ಹತ್ತು ಜನ ಪರಿಸರಪ್ರಿಯ ಕಾರ್ಯ ಕರ್ತ ರ ಪಡೆ ಕಟ್ಟಿ ಕೊಂಡು ಹೆಂಗೋ ಮಾಡಿ ಕೃಷ್ಣಾ ದಲ್ಲಿ ಮುಖ್ಯ ಮಂತ್ರಿ ಗಳ ಅಪಾಯ್ಮೆಂಟು ಪಡೆದ್ರು.
ಚುನಾವಣೆ ಯ ಮೊದಲು ರಾಜಕೀಯ ವ್ಯಕ್ತಿಗಳಿಗೆ ಎಲ್ಲಾ ಮತದಾರರು , ಕಾರ್ಯಕರ್ತರು ನೆಂಟರು ಸ್ಪೃಷ್ಯ ರು.
ಒಮ್ಮೆ ಗೆದ್ದ ನಂತರ ಅದೇ" ಜನಗಳು" ಅದು ಇದು ಮಾಡಿಸಿಕೊಡಿ ಎಂದು ತಲೆ ತಿನ್ನುವವರು, ಅಸ್ಪೃಷ್ಯರು....
ನಾವು ಪಕ್ಷ "ಅಧಿಕಾರ "ಕ್ಕೆ ಬರಲು ದುಡಿ ದವರು ಎಂದು ಕಾಡಪ್ಪಣ್ಣ ಬಾರೀ ಅದಾರಾತಿಥ್ಯ ಮಾಡ್ತಾರೆ , ಗೌರವ ದಿಂದ ನೆಡೆಸಿಕೊಳ್ತಾರೆ ಎಂಬ ನಿರೀಕ್ಷೆ ಯಿಂದ ಅಲ್ಲಿ ಗೆ ಹೋದವರಿಗೆ ಕಾಡಪ್ಪಣ್ಣ ನವರ ಮುಖಭಾವ ನಿರಾಸೆ ಮೂಡಿಸಿತ್ತು....
ಮುಖ್ಯ ಮಂತ್ರಿ ಗಳು... ಹೂಂ ಏನು ಬಂದದ್ದು ಅನಾಸಕ್ತಿಯಿಂದ ಕೇಳಿದರು.
ಸಾ ನೀವು ಹೈಟ್ ಆಫ್ ಲಿಂಗನ ಮಕ್ಕಿ ಯೋಜನೆ ಕೈಬಿಡಬೇಕು.ನಾವು ಪಕ್ಷದ ಕಾರ್ಯಕರ್ತರು ಜನಗಳಿಗೆ ಉತ್ತರ ಹೇಳಬಕು...ಇದು ಪರಿಸರಕ್ಕೆ ಬಾಳ ಹಾನಿ ಮಾಡುತ್ತದೆ...
ಈ ಯೋಜನೆ ಬಿಲ್ ಕುಲ್ ಜಾರಿ ಆಗಬಾರದು .... ಅದು ಇದು ಅಂತ ಒಂದೇ ಸಮನೆ ಹಿತೇಶ ಮಾತಾಡ ತೊಡಗಿದ.
ಆಗ ಮುಖ್ಯ ಮಂತ್ರಿ ಗಳು ಸಡನ್ ಆಗಿ...
ಸಾಕು ನಿಲ್ಲಸಯ್ಯ ಮಾತಾಡೋದು?
ಜನ ಕೇಳ್ತಾರಂತೆ....? ಯಾವ ಜನ?
ಓಟಾಕೋ ಜನಗಳು ನಮ್ಮ ಬಳಿ ನೋಟು ತೆಗೆದುಕೊಂಡು ಓಟು ಹಾಕಿ ರುತ್ತಾರೆ. ಅವ ನಮ್ಮ ರಾಜಕಾರಣಿ ಯ ದೃಷ್ಟಿಯಿಂದ ಕೇವಲ "ಮತ ದಾರ " ಅಲ್ಲ """ ಮತ ವ್ಯಾಪಾರಿ ""'' . ನಾವು ದುಡ್ಡು ಕೊಟ್ಟೆವು ಅವರು ದುಡ್ಡು ತಗೊಂಡು ಮತ ಹಾಕಿದರು.ಅಂಗಡಿಯಲ್ಲಿ ದುಡ್ಡು ಕೊಟ್ಟು ವಸ್ತು ಕೊಂಡಹಾಗೆ. ಅಲ್ಲಿಂದ ಆ ಮತವ್ಯಾಪಾರಿ ಗೂ ನಮಗೂ ಯಾವ ಸಂಬಂಧ ವೂ ಇಲ್ಲ...!!
ಇನ್ನು ಚುನಾವಣೆಯಲ್ಲಿ ಮತಹಾಕದ ಐವತ್ತು ಪ್ರತಿಶತ ಜನ ನಮಗಲ್ಲ ಈ ದೇಶಕ್ಕೇ "ಸತ್ತ " ಪ್ರಜೆಗಳು... ಅವರು ಕೂಗಾಡಲಿ ಬಯ್ದಾಡಲಿ.... ಅವರು ಈ ದೇಶದ ಒಬ್ಬ ಪ್ರಜೆಯ ಪ್ರಮುಖ ಕರ್ತವ್ಯ ವಾದ " ಮತದಾನ" ವೇ ಮಾಡದಿದ್ದ ಮೇಲೆ ಅವರ ಮಾತು ಪ್ರತಿಭಟನೆ ಗೆ ಯಾವ ಬೆಲೆಯೂ ಇಲ್ಲ...
ಇನ್ನು ನೀವು ಕಾರ್ಯ ಕರ್ತರು...
ನೀವು ಬೆಳಿಗ್ಗೆ ಯಿಂದ ರಾತ್ರಿ ವರೆಗೆ ಹೊಟ್ಟೆ ತುಂಬ ಎಣ್ಣೆ, ತುಂಡು ಕೈ ತುಂಬಾ ಹಣ ತಗೊಂಡು ಕೆಲಸ ಮಾಡ್ತೀರ....
ನೀವು ಉಚಿತವಾಗಿ ನಮಗಾಗಿ ಏನು ಮಾಡಿದ್ದೀರ...? ಮಾಡ್ತೀರ...? ನಿಮ್ಮ ತ್ಯಾಗ ಏನು...? ನೀವೂ ಅಷ್ಟೇ ನಿಮ್ಮ ಲಾಭಕ್ಕೇ ಈ ಕೆಲಸ ಮಾಡ್ತೀರ...
ಅದೊಂದು ಕಾಲವಿತ್ತು... ಐವತ್ತು ವರ್ಷಗಳ ಹಿಂದೆ... ಆಗ ಪಕ್ಷ ಸಿದ್ದಾಂತ ನಿಷ್ಠೆ ಎಲ್ಲಾ ಇತ್ತು... ಈಗ ಯಾರಿಗಿದೆ..?
ಇಂದು ಯಾವ ರಾಜಕಾರಣಿಯನ್ನೂ ಐಪಿಎಲ್ ಕ್ರಿಕೆಟ್ ತಂಡಕ್ಕೆ ಆಟಗಾರ ರನ್ನು ಬಿಡ್ಡು ಮಾಡಿ ಕೊಂಡಹಾಗೆ ಕೊಳ್ಳಬಹುದು.!
ದುಡ್ಡುದ್ದವ ಸರ್ಕಾರ ಮಾಡಬಹುದು.
ಶಾಂತವೇರಿ ಗೋಪಾಲ ಗೌಡರ ಕಾಲದಲ್ಲಿ ಜನ ಹಣ ಸಂಗ್ರಹ ಮಾಡಿ ಗೌಡರ ಗೆಲುವಿಗಾಗಿ ನಿಸ್ವಾರ್ಥವಾಗಿ ಕೆಲಸ ಮಾಡ್ತಿ ದ್ದರು.
ಈಗ ಹೆಚ್ಚಿನ ಕಾರ್ಯಕರ್ತರು ಕಂಟ್ರಾಕ್ಟರ್ , ಮರಳು ದಂದೆ , ರಿಯಲ್ ಎಸ್ಟೇಟ್ ಇತ್ಯಾದಿ ಎಲ್ಲಾ ಅಕ್ರಮ ದಂದೆಯವರೇ ಹೆಚ್ಚು.....
ಯಾವ ಪಕ್ಷದ ಕಾರ್ಯಕರ್ತರನ್ನಾದರೂ ನೋಡಿ ಎಲ್ಲಾ ಪಕ್ಷದ ಕಾರ್ಯಕರ್ತರಲ್ಲಿ ಹೆಚ್ಚಿನವರು ಸ್ವಾರ್ಥಿಗಳೇ , ತಮ್ಮ ಹಿತಾಸಕ್ತಿ ಲಾಭಕ್ಕಾಗಿ ಕಾರ್ಯಕರ್ತರ ವೇಶ ತೊಟ್ಟು ಕೊಂಡಿರುತ್ತಾರೆ.
ನನಗೆ ಎಲ್ಲಾ ಗೊತ್ತು ಮುಚ್ಚಿಕೊಂಡು ಇರಯ್ಯ...
ಚುನಾವಣೆ ಸಮಯದಲ್ಲಿ ವಾರ ವಾರವೂ ಆಫೀಸ್ ಗೆ ಬಂದು ಚೀಲ ಗಟ್ಟಲೆ ಹಣ ತೆಗೆದುಕೊಂಡು ಹೋಗ್ತೀರ.....? ಆ ಚೀಲದ ಹಣ ಕ್ಕೆ ನಾನೇದರೂ "ಪ್ರಿಂಟಿಂಗ್ ಮಿಷೀನ್ " ಇಟ್ಟುಕೊಂಡಿದ್ದೀನಾ...? ಈ ಸರ್ಕಾರ ಮಾಡಿರೋದೂ ಸಾವಿರಾರು ಕೋಟಿ ಸುರಿದು...
ಇದೇನು ಧರ್ಮ ರಾಯನ ಛತ್ರ ಅಲ್ಲ, ನಾನು ದಾನಶೂರ ಕರ್ಣ ಅಲ್ಲ...
ನಾನು ಹಣ ಹಾಕಿ ಸರ್ಕಾರ ಮಾಡಿ ದ್ದೇನೆ ಹಣ ವಾಪಾಸು ತೆಗಿತೇನೆ ಅಷ್ಟೇ.
ಏ ಮುದ್ದಪ್ಪ ಇಲ್ಲಿ ಬಾ ...
ಈ ಹಿತೇಶನ ಎಲೆಕ್ಷನ್ ಹಿಸ್ಟರಿ ತೆಗೆಯಪ್ಪ..(ಮುದ್ದಪ್ಪ ಕಾಡಪ್ಪಣ್ಣ ನವರ ಎಲಕ್ಷನ್ ಐಟಿ ಸೆಲ್ ಸೆಕ್ರೆಟರಿ.. ಅವನಿಗೆ ರಾಜ್ಯದಾದ್ಯಂತ ಕಾಡಪ್ಪಣ್ಣ ನವರ ಪಕ್ಷ ಕ್ಕೆ ಬೂತ್ ಬೂತಿನಲ್ಲೂ ಎಷ್ಟು ಮತದಾನ ಆಗಿದೆ..; ಯಾವ ಕಾರ್ಯಕರ್ತ ಎಷ್ಟು "ಚೀಲ" ಹಣ ವನ್ನು ಚುನಾವಣೆ ಯಲ್ಲಿ ಹಂಚಲು ತೆಗೆದುಕೊಂಡು ಹೋಗಿದ್ದಾರೆ ಮತ್ತು ಎಷ್ಟು ಅದರಲ್ಲಿ ಹಂಚಿದ್ದಾನೆ ಮತ್ತು ಎಷ್ಟು ನುಂಗಿದ್ದಾನೆ ಎಂಬ ಫೀಡ್ ಬ್ಯಾಕ್ ತನ್ನ ಲ್ಯಾಪ್ ಟಾಪ್ ನಲ್ಲಿ ಇಟ್ಟುಕೊಂಡಿರುತ್ತಾನೆ. ಅದನ್ನು ಆದಾರವಾಗಿಟ್ಕೊಂಡು ಮುಖ್ಯಮಂತ್ರಿಗಳು ಹೀಗೆ ಏನೋ ಮಾಡಿಕೊಡಿ ಬಂದು ಅಟಕಾಯಿಸುವ ತರಲೆ ಕಾರ್ಯಕರ್ತ ರನ್ನು ಮಟ್ಟ ಹಾಕಲು ಬಳಸುತ್ತಾರೆ)
ಮುದ್ದಪ್ಪ ಬಂದು ಲಾಪ್ ಟಾಪ್ ತೆಗೆದುಕೊಂಡು ಹಿತೇಶ್ ಹನಿಸರ ಅಕೌಂಟ್ ಸರ್ಚ್ ಮಾಡಿದ.
ಸಾರ್ ಇವರು ಒಟ್ಟು ಐದು ಸಿಮೆಂಟ್ ಬ್ಯಾಗ್ ಹಣ ತಗೊಂಡೋಗಿದಾರೆ(ಈ ಒಂದು ಸಿಮೆಂಟ್ ಚೀಲ ಅಂದರೆ ಅದರಲ್ಲಿ ಇಷ್ಟು ಹಣ ಇರುತ್ತದೆ ಅಂತ ಲೆಕ್ಕ ಇರುತ್ತದೆ) . ಅಲ್ಲಿ ಆ ಹೋಬಳಿಯಲ್ಲಿ ನಮಗೆ ಮತ ಕಡಿಮೆ ಬಂದಿದೆ. ಇವರು ಮತಕ್ಕೆ ಒಂದು ಸಾವಿರ ಕೊಟ್ಟು ಖರೀದಿಸುತ್ತೇನೆ ಎಂದವರು ಕೆಲವರಿಗೆ ಐದನೂರು ಕೆಲವರಿಗೆ ಎಂಟನೂರು ಹಂಚಿದಾರೆ ಸಾರ್ . ಇಲ್ಲಿ ಫೀಡ್ ಬ್ಯಾಕ್ ರಿಪೋರ್ಟ್ ಪ್ರಕಾರ ನಮ್ಮ ಐದು ಲಕ್ಷ ಕ್ಕೂ ಹೆಚ್ಚು ಹಣ ಮತ ಖರೀದಿ ಮಾಡದೇ ತಿಂದು ಹಾಕಿದಾರೆ ಸಾರ್.
ಇದನ್ನು ಕೇಳಿ ಕಾಡಪ್ಪಣ್ಣ ಮತ್ತಷ್ಟು ಕೆಂಡ ಮಂಡಲರಾಗಿ ಎದ್ದು ನಿಂತು
ಜೋರಾಗಿ ಹಿತೇಶ್ ನ ಕೆನ್ನೆಗೆ ಬಾರಿ ಸಿದರು.
ಹಿತೇಶ ಇಲ್ಲ ಸಾರ್ ನಾನು ಸರಿಯಾಗಿ ಹಂಚಿದೀನಿ ಸಾರ್ ಇದು ಸುಳ್ಳು ಮಾಹಿತಿ ಸಾರ್...
ಮುಖ್ಯ ಮಂತ್ರಿ ಗಳು ಮತ್ತಷ್ಟು ಕುಪಿತ ರಾಗಿ "ಸುಳ್ಳು ಹೇಳ್ತಿಯ ರಾಸ್ಕಲ್ ..
ಜಾಡಿಸಿ ಒದ್ದು ಬಿಡ್ತೇನೆ...
ನೀವು ಭ್ರಷ್ಟಾಚಾರದ ಹಣ ಎಂದರೆ ಹೂವಿನ ಹಾಸಿಗೆ ಅಂದುಕೊಂಡಿದ್ದೀರ...? ಒಮ್ಮೆ ಎಡವಿದರೆ ಐಟಿ ಇಡಿಗೆ ಸಿಕ್ಕಿ ಹಾಕಿ ಕೊಂಡರೆ ಮನೆ ಮಂದಿಯಲ್ಲರನ್ನು ಹಾಕಿ ರುಬ್ಬುತ್ತದೆ... ಆಗ ನಾವು ಅನುಭವಿಸುವ ಹಿಂಸೆ ನಮಗೇ ಗೊತ್ತು.. ಮೊನ್ನೆ ಯಾವುದೋ ಒಬ್ಬ ರಾಜಕಾರಣಿ ಗೆ ಕೇವಲ ಏಳೆಂಟು ಕೋಟಿ ಹಣಕ್ಕೆ "ಇಡಿ"ಗೆ ಲೆಕ್ಕ ತೋರಿಸಲಾಗದೇ ಟೊಮ್ಯಾಟೊ ಬೆಳದೆ ದಾಳಿಂಬೆ ಬೆಳದೆ ಅಂತ ಹೆಣ ಗಾಡಿದಹಾಗಾಗುತ್ತದೆ....!!!
ಬ್ರಷ್ಟಾಚಾರದ ಹಣ ಹೂಡಿಕೆ ರಕ್ಷಣೆ ಎಲ್ಲಾ ವಕ್ಕೂ ಹೋರಾಟ ಮಾಡಬೇಕು.ಮೈಯಲ್ಲ ಕಣ್ಣಾಗಿರ ಬೇಕು... ನಮ್ಮ ಕಷ್ಟ ನಮಗೆ....
ನಿನಗೆ ಒಂದು ತಿಂಗಳು ಟೈಮ್ ಕೊಡ್ತೀನಿ... ಅಷ್ಟರಲ್ಲಿ ಐದುಲಕ್ಷ ಹಣ ಆಫೀಸ್ ಗೆ ವಾಪಾಸಾಗಬೇಕು.
ಆಗ ಅಲ್ಲೇ ಇದ್ದ ರೌಡಿಯೊಬ್ಬನನ್ನು ಕರೆದು " ಏ ಸೈಲೆಂಟ್ ಸೀನ... ಇವನ ದುಡ್ಡು ವಸೂಲಿ ನಿನ್ನ ಜವಬ್ದಾರಿ " ಅಂದರು. ಹಿತೇಶ ಬೆವರಿ ಉಚ್ಚೇ ಹೋಯ್ದುಕೊಳ್ಳುವುದೊಂದೇ ಬಾಕಿ!.
ಹಿಂದೆ ತಿರುಗಿದರೆ ಜೊತೆಗೆ ಬಂದ ಇತರೆ ಪರಿಸರ ಪ್ರೇಮಿ ಕಾರ್ಯಕರ್ತರೇ ಮಾಯ....!!!
ಲಿಂಗನಮಕ್ಕಿ ಡ್ಯಾಮ್ ಹತ್ತಲ್ಲ ನೂರು ಅಡಿ ಏರಿಸಿ ಇಡಿ ಮಲೆನಾಡೇ ಮುಳು ಗಿಸಲಿ... ನನಗ್ಯಾಕೆ ಬೇಕಿತ್ತು.. ತಾನು ಬೆಟ್ಟಿಂಗ್ ಅಂದರ್ ಬಾಹರ್ ಆಡಿ ಕಳೆದ ಐದುಲಕ್ಷ ಹಣ ಮರಳಿಸು ವುದು ಹೇಗೆಂದು ತೋಚದೇ ಒಮ್ಮೆ ರೌಡಿ ಸೈಲೆಂಟ್ ಸೀನನ ಕ್ರೂರ ಮುಖ ನೋಡಿ ತಲೆ ತಗ್ಗಿಸಿ ನಿಧಾನವಾಗಿ ಅಲ್ಲಿಂದ ಜಾಗ ಕಾಲಿ ಮಾಡಿದ.
ಈ ವಿದ್ಯಮಾನ ಪರಿಸರ ವೇದಿ ವೇದಿಕೆ ಯಲ್ಲಿ ಎಲ್ರ ಗಮನಕ್ಕೆ ಬಂತು. ಮತ್ತೆ ಯಾವತ್ತೂ ಹಿತೇಶ ಹನಿಸರ ಎಲ್ಲೂ ಕಾಣಿಸಿಕೊಳ್ಳಲಿಲ್ಲ....!
ಪರಿಸರ ಪ್ರಿಯರು ಈ ರಾಜಕಾರಣಿ/ ಪಕ್ಷದ ಸಹವಾಸದ ಹೋರಾಟವೇ ಬೇಡವೆಂದು ತೀರ್ಮಾನ ಮಾಡಿದರು. ಕೊನೆಗೆ
ಬೇರೆ ದಾರಿ ಕಾಣದೇ ಶರಾವತಿ ಕೊಳ್ಳ ದ ಜನರು ಮತ್ತು ಪರಿಸರ ಪರರು ಬೆಂಗಳೂರಿನ ಫ್ರಿಡಂ ಪಾರ್ಕ್ ಗೆ ಸರದಿ ಪ್ರತಿಭಟನೆ ಗೆ ಬಂದು ಕೂತರು.
ಅದರಲ್ಲಿ ಒಂದು ದಿನ ನಾನೂ ಶೃಂಗೇರಿ ಶ್ರೀನಿವಾಸ ಮೂರ್ತಿ ಗಳು ಹೋಗಿ ಕೂ ತೆವು.
ಸಂಜೆಯಾಗುತ್ತಿದ್ದಂತೆ ಒಬ್ಬ ಯುವಕ ನಮ್ಮ ಪ್ರತಿಭಟನೆಯ ಪೆಂಡಾಲ್ ಬಳಿ ಬಂದು ನಮಗೆ ಒಂದು ಕಾರ್ಡ್ ಕೊಟ್ಟು ಕೆಜಿ ರಸ್ತೆಯ ತಮ್ಮ ಕಛೇರಿ ಗೆ ಬಂದು ತಮ್ಮ ಬಾಸ್ ನ್ನು ಬೇಟಿ ಮಾಡಿಹೋಗಿ ಅಂದ.
ನಾವು ಅಂದೇ ಊರಿಗೆ ಮರಳಲೇ ಬೇಕಿತ್ತು. ಹಾಗೆ ಹೋಗುವ ಮುನ್ನ
ಏನಿದು " ಜನ ಭಲಅಸೋಷಿಯನ್" ಎಂದು ನೋಡಿಬರುವ ಕುತೂಹಲ ಕ್ಕಾಗಿ ಹೋಗಿ ನೋಡಿ ಊರಿಗೆ ಮರಳುವ ಆಲೋಚನೆ ಮಾಡಿದೆವು.
ಅಲ್ಲಿ ಒಂದು ದೊಡ್ಡ ಐಷಾರಾಮಿ ಕಛೇರಿ ಇತ್ತು. ರೆಸೆಪ್ಷನಿಷ್ಟ್ ನಮ್ಮ ವಿಚಾರಿಸಿ ಕಾರ್ಡ್ ನೋಡಿ ಒಳಗೆ ಬಿಟ್ಟ. ಏಸಿ ಕಛೇರಿಯದು. ನೂರಾರು ಜನ ಕೆಲಸ ಮಾಡುತ್ತಿದ್ದ ಜಾಗವದು.
ರಾತ್ರಿ ಯಾದ್ದರಿಂದ ನೌಕರ ವರ್ಗ ಮನೆಗೆ ತೆರಳಿತ್ತು. ನಾವು ಕೊನೆಯಲ್ಲಿ ರುವ ಸಂಸ್ಥೆ ಯ ಸಿಇಓ ಕೆಂಪೇಗೌಡ ಯವರ ಚೇಂಬರ್ ನೊಳಗೆ ಹೋದೆವು.
ನಮಸ್ಕಾರ ಹೇಳಿ ನಮ್ಮ ಕೂರಿಸಿ ಮಾತಿಗಿಳಿ ದರು ಕೆಂಪೇಗೌಡ ರು.
"ನೋಡಿ ಸಾರ್ ಈಗಿನ ಸರ್ಕಾರ ಕ್ಕೆ ನಿಮ್ಮ ಹೀಗಿನ ಹತ್ತಿಪ್ಪತ್ತು ಜನ ಉಪವಾಸ ಸತ್ಯಾಗ್ರಹವನ್ನು ಮಾಡಿ ಸತ್ತರೂ ಸರ್ಕಾರ ನಿಮ್ಮ ಪ್ರತಿಭಟನೆ ಗಮನಿಸಿ ಮಹತ್ವ ಕೊಡೋಲ್ಲ....
ನಮ್ಮ ದೇಶದ ಪ್ರಜೆಗಳು " ವ್ಯವಸ್ಥೆ " ಸರಿಪಡಿಸಲು ಇರುವ ಏಕೈಕ ಮಾರ್ಗ ಎಂದರೆ "ಮತದಾನ" ಮಾತ್ರ. ಒಮ್ಮೆ ಮತದಾನ ದ ವಿಷಯದಲ್ಲಿ ಬೇಜವಬ್ದಾರಿಯಿಂದ ನಡೆದುಕೊಂಡರೆ ಜನಸಾಮಾನ್ಯರಿಗೆ ಇದೇ ಗತಿ. ನಮ್ಮ ರಾಜಕೀಯ ವ್ಯವಸ್ಥೆ ಚುನಾವಣೆಯ ಸಂಧರ್ಭದಲ್ಲಿ ಮಾತ್ರ ಜನರಿಗೆ ಬೆಲೆ ಕೊಡುತ್ತಿದೆ. ಒಮ್ಮೆ ಚುನಾವಣೆ ಫಲಿತಾಂಶ ಬಂದ ಮೇಲೆ ಅಧಿಕಾರ ಕ್ಕಾಗಿ ಎಲ್ಲ ನೀತಿ ನಿಯಮ ಸಿದ್ದಾಂತ ವನ್ನು ಮೆಟ್ಟಿ ತುಳಿಯುತ್ತಾರೆ. ಮತ್ತೆ ಮುಂದಿನ ಚುನಾವಣೆ ಬರುವವರೆಗೂ ಅವರದ್ದೇ mono politics ನೆಡೆಸುತ್ತಾರೆ. ನೀವು ಜನಸಾಮಾನ್ಯರು ಚಳುವಳಿ ಬಿಟ್ಟು ಸಾಮೂಹಿಕ ವಾಗಿ ಸತ್ತು ಪ್ರತಿಭಟನೆ ಮಾಡಿದರೂ ನಿಮ್ಮ ಕಡೆ ತಿರುಗಿಯೂ ನೋಡೋಲ್ಲ....!!!
ನಿಮ್ಮ ಸಮಸ್ಯೆ ಗೆ ಪರಿಹಾರ ನಮ್ಮ ಬಳಿ ಇದೆ.
ನೋಡಿ ಸಾರ್ ನಮ್ಮದು ಈ ರೀತಿಯ ಪ್ರತಿಭಟನೆ ಚಳುವಳಿ ಹೋರಾಟ ಕ್ಕೆ
"ಪೇಮೆಂಟ್ ಸೀಟ್ " ಕಳಿಸೋ ಸಂಸ್ಥೆ.
ನೋಡಿ ನಿಮ್ಮ ಹೋರಾಟ ಗಾರರಿಗೆ ಹಣ ಸಂಗ್ರಹಿಸಿ ಕೊಡಲು ಹೇಳಿ.. ನೀವ್ಯಾರು ಬೆಂಗಳೂರಿಗೆ ಬರೋದೇ ಬೇಡ ನಾವು ಹೇಗೆ ನಿಮ್ಮ ಪರವಾಗಿ ಚಳುವಳಿ ಮಾಡ್ತೀವಿ ನೋಡಿ..
ಸಾರ್ ಈ ಮೆನು ಕಾರ್ಡ್ ನೋಡಿ..
ಇಲ್ಲಿ ಯಾವ ಯಾವ ಚಳುವಳಿ ಗೆ ಎಷ್ಟು ಹಣ ಎಂದು ನಮೂದಾಗಿದೆ... ಅಂತ ಒಂದು ದೊಡ್ಡ ಮೆನು ಕಾರ್ಡ್ ಕೊಟ್ಟರು.
ಚಳುವಳಿಗಳು..
ಉಪವಾಸ ಸತ್ಯಾಗ್ರಹ.
ಸರ್ಕಾರಿ ಕಛೇರಿ ಮುತ್ತಿಗೆ
ಮಸಿಬಳಿಯುವುದು
ರಸ್ತೆ ತಡೆ....
ರಾಷ್ಟ್ರೀಯ ಹೆದ್ದಾರಿ ಗೆ =
ರಾಜ್ಯ ಹೆದ್ದಾರಿ ಗೆ =
ಜಿಲ್ಲಾ ರಸ್ತೆ ಗೆ=
ರಾಜಕಾರಣಿ ಗಳಿಗೆ ಘೇರಾವ್
ಮುಖ್ಯ ಮಂತ್ರಿಗಳಿಗೆ=
ಉಪ ಮುಖ್ಯ ಮಂತ್ರಿಗಳಿಗೆ=
ಸಂಪುಟ ದರ್ಜೆ ಸಚೀವರಿಗೆ =
ಕೇಂದ್ರ ಸಚೀವರಿಗೆ=
ಕಪ್ಪುಭಾವುಟ ಪ್ರದರ್ಶನ.
ಮುಖ್ಯ ಮಂತ್ರಿ =
ಕೇಂದ್ರ ಸಚೀವರು =
ಟಯರ್ ಸುಡುವುದು
ಬಸ್ ಗೆ ಬೆಂಕಿ ಕೊಡುವುದು
ಸಾರ್ವಜನಿಕ ವಾಹನ ಹಾಳು ಮಾಡುವುದು ...
ಕಲ್ಲು ಹೊಡೆಯುವುದು ...
ಆತ್ಮಹುತಿ ದಾಳಿಗೆ....
ರಾಲಿಗಳಿಗೆ ಸಮಾವೇಶ ಗಳಿಗೆ ಜನ ರ supply ...
ಜೈಲಿನಿಂದ ಬಿಡುಗಡೆ ಆಗುವ ಬ್ರಷ್ಟ ರ ಬ್ರಷ್ಟತೆ "ಮರೆಸುವ" ಹಾಗಿನ ಮೆರವಣಿಗೆ ಇತ್ಯಾದಿಗಳಿಗೆ ಜನ ಒದಗಿಸುವುದು....
ನಾವು ಈ ಮೆನು ಕಾರ್ಡ್ ನೋಡಿ ತಲೆ ತಿರುಗಿ ಬೀಳುವುದೊಂದೇ ಬಾಕಿ...
ಕೆಂಪೇಗೌಡ ರು ...
ಸಾರ್ ಇದಕ್ಕೇ ನೀವು ಇಷ್ಟು ಅಚ್ಚರಿ ಆಗ್ತೀರಲ್ಲ ಮೊನ್ನೆ ಒಂದು ಪುಸ್ತಕ ಬಿಡುಗಡೆ ಕಾರ್ಯ ಕ್ರಮಕ್ಕೆ ಐದು ಸಾವಿರ ಜನರ ಪೇಮೆಂಟ್ ಸೀಟ್ ಕಳಿಸಿದ್ದೆ . ಯಾರೋ ಪೋಲಿಸ್ ಅಧಿಕಾರಿಯದ್ದು... "ಪೋ" ಲಿ" ಸು ಕವ ನ ಅಂತ ಕವನ ಸಂಕಲನ. ಊಟ ತಿಂಡಿ ಕೊಟ್ಟು ಪ್ರತಿಯೊಬ್ಬರಿಗೂ ಒಂದೊಂದು ಉಚಿತ ಕವನ ಸಂಕಲನ ದ ಪುಸ್ತಕ ಕೊಟ್ಟಿದ್ದರು. ಜನ ಪೇಮೆಂಟ್ ಗೆ ಬಂದವರು ಪುಸ್ತಕ ನಮ್ಮ ಆಫೀಸ್ ನಲ್ಲೇ ಬಿಟ್ಟು ಹೋಗಿದ್ದರು. ನಾನು ಕೂಡಲೇ ಆ ಪುಸ್ತಕ ವನ್ನು ಕೂಡಲೇ ಗುಜರಿಗೆ ಹಾಕಿ ಇಪ್ಪತ್ತು ಸಾವಿರ ಹಣ ಪಡೆದುಕೊಂಡೆ....!!!
ಈ ಕಾಲದಲ್ಲಿ ಈ ತಲೆ ಬುಡವಿಲ್ಲದ ಕವಿತೆ ಯಾರು ಓದ್ತಾರೆ...
ಆದರೂ ಜನ ರನ್ನು ಇಂಪ್ರೆಸ್ ಮಾಡಲು ನಮಗೆ ಜನ ಕಳಿಸಿ ಅಂತಾರೆ ಸಾರ್.ನಮಗೆ ಆ ದಿವಸದ ಪೇಮೆಂಟ್ ಬಂದರೆ ಸಾಕು... ಮದುವೆ ಮನೆಯಾದರೇನು ಬೊಜ್ಜದ ಮನೆಯಾದರೇನು....!?
ಈಗ ಎಲ್ಲಾ ಕಡೆಯೂ ಆರ್ಟಿಫಿಷಿಯಲ್ ಜನಗಳೇ... ದೊಡ್ಡ ವರ ಬಳಿ ಹಣ ಇದೆ. ಆದರೆ ವಿಶಾಲವಾದ ಹೃದಯ ಇರೋಲ್ಲ...
ದಾನ ಮಾಡೋಲ್ಲ..ಆದರೆ ಕಾಸು ಬಿಚ್ಚದೇ ಜನಪ್ರಿಯತೆ ಎಲ್ಲಿಂದ ನ...!?
ಮೊನ್ನೆ ಒಬ್ಬ ಬ್ರಷ್ಟ ರಾಜಕಾರಣಿ ಸತ್ತ.
ಅವರ ಅಂತಿಮ ದರ್ಶನಕ್ಕೆ ನಾವು ಎಂಟು ಸಾವಿರ ಜನರನ್ನು ಕಳಿಸಿದ್ದೆವು.
ಮಾರನೇ ದಿನ ಆ ರಾಜಕಾರಣಿ ಬಗ್ಗೆ ಪೇಪರ್ ನಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಮೃತ ರಾಜಕಾರಣಿ ಯನ್ನು ನೋಡಲು ಬಂದ ಜನರು ಅಂತ ಬಂದಿತ್ತು..!!. ಆದರೆ ಬಂದಿದ್ದು
ನಮ್ಮ ಕಂಪನಿಯ "ಪೇಮೆಂಟ್ ಸೀಟು ..."
ಹೀಗಿದೆ ವಾಸ್ತವ...
ನಾನು ಕುತೂಹಲದಿಂದ ಗೌಡರ ಬಳಿ ಈ ತರಹದ ಉದ್ಯಮ ಮಾಡಲು ನಿಮಗೆ ಹೇಗೆ ಐಡಿಯಾ ಬಂತು ಅಂತಂದೆ....
ಆಗ ಗೌಡ್ರು...
ನೋಡಿ ಸಾರ್... ನಾನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬೀರ್ನಳ್ಳಿ ಊರಿನವನು. ಒಬ್ಬ ಬಡ ರೈತನ ಮಗ.
ಅಪ್ಪ ಅಮ್ಮ ತಂಗಿ ನಾನು ಸೇರಿದ ನಾಲ್ಕು ಜನರ ರೈತಾಪಿ ಕುಟುಂಬ.
ಐದು ಎಕರೆ ಮಳೆ ಬಂದರೆ ಬೆಳೆ ಬೆಳೆಯಬಹುದಾದ ಕೃಷಿ ಭೂಮಿ.
ಅಪ್ಪ ಒಳ್ಳೆಯ ಪ್ರಯೋಗ ಶೀಲ ಕೃಷಿಕ.
ಒಮ್ಮೆ ಟೊಮ್ಯಾಟೊ ಬೆಳೆಯಲು ಹೋಗಿ ಬೆಲೆ ನಲಕಚ್ಚಿ ಸಾಲವಾಗಿ ಸಾಲಗಾರರ ಕಾಟದಿಂದ ಆತ್ಮಹತ್ಯೆ ಮಾಡಿಕೊಂಡ. ನಾವು ಮೂವರೇ ಉಳಿದೆವು.. ನಾನಾಗ ಎಸ್ ಎಲ್ ಸಿ
ಮನೆಯಲ್ಲೂ ಉಣ್ಣಲು ಅನ್ನವಿಲ್ಲ.
ಸರ್ಕಾರದ ಪರಿಹಾರ ಸಾಲಗಾರರ ಪಾಲಾಯಿತು. ಜೊತೆಗೆ ನಾವು ಬೆಳೆ ಬೆಳೆಯಲಾಗದ ಭೂಮಿ ಇರುವ ಜಮೀನ್ದಾರ ಜನರಲ್ ಕ್ಯಾಟಗರಿಯ ಯಾವ ಸಹಾಯ ಧನ ಲಭ್ಯತೆಯಿಲ್ಲ ದಿರುವ ನತದೃಷ್ಟರು....
ನಾನು ಮನೆಯವರ ಹೊಟ್ಟೆ ಹೊರೆಯಲು ಬೆಂಗಳೂರಿನ ಪೀಣ್ಯ ಸೇರಿ ಒಂದು ಕೈಗಾರಿಕೆ ಗೆ ಸೇರಿ ಕೊಂಡೆ. ಅಲ್ಲಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದೆ . ಕೊನೆಗೆ ಕಾರ್ಖಾನೆ ಯನ್ನು ಬೇರೆ ಕಂಪನಿಗೆ ಮಾರಿದರು.
ಅಲ್ಲಿ ನಾನು ಕೆಲಸ ಬಲ್ಲವನಾಗಿಯೂ
ನನ್ನ ಬಳಿ ತಾಂತ್ರಿಕ ಶಿಕ್ಷಣ ದ ಸರ್ಟಿಫಿಕೇಟ್ ಇಲ್ಲದೆ ಕೆಲಸ ಕಳೆದುಕೊಂಡೆ. ದುರಂತ ನೋಡಿ..
ನಮ್ಮ ದೇಶದಲ್ಲಿ ಕೌಶಲ್ಯ ಪರಿಣಿತಿ ಯೋಗ್ಯತೆ ಗಿಂತ "ಸರ್ಟಿಫಿಕೇಟ್" ಹೆಚ್ಚು ಮಹತ್ವ ಪಡೆದಿದೆ.
ಅಲ್ಲಿಂದ ಮತ್ತೊಬ್ಬ ಆಂದ್ರ ಮೂಲದ ರೆಡ್ಡಿ ಯ ಕಾರ್ಖಾನೆ ಸೇರಿದೆ. ಅವ ನಮ್ಮಂಥ ಅಸಾಹಯಕ ಕೆಲಸಗಾರರ ಶೋಷಣೆ ಮಾಡಿ ಲಾಭ ಮಾಡಿಕೊಳ್ಳುವವ....
ಅವನ ಕಾರ್ಖಾನೆ ಗೆ ನಾಲ್ಕು ಬಾಗಿಲು ನಿರ್ಮಿಸಿ ಅವನದೇ ಕುಟುಂಬ ವರ್ಗದ ನಾಲ್ಕು ಜನರ ಹೆಸರಿನಲ್ಲಿ ಒಂದೇ ಯಂತ್ರೋಪಕರಣಗಳ ಮೇಲೆ ಸಾಲ ಮಾಡಿ ಸಹಾಯ ಧನ ತೆಗೆದುಕೊಂಡು, ನೀರು ವಿದ್ಯುತ್ ಕಳ್ಳ ತನ ಮಾಡಿ ಯಶಸ್ವಿಯಾಗಿ ಜೀವನ ನೆಡೆಸುತ್ತಿದ್ದ.
ಅವನು ಜಾತಿಯನ್ನು ಸದುಪಯೋಗ ಮಾಡಿಕೊಂಡು ಅದರಲ್ಲೂ ಲಾಭ ಮಾಡಿಕೊಂಡಿದ್ದ.
ಬೆಂಗಳೂರು ತುಂಬಾ ಆಸ್ತಿ ಮಾಡಿ ಐಷಾರಾಮಿ ಜೀವನ ಮಾಡಿ ಕೊಂಡಿದ್ದ....
ಅವನ ಕುಟುಂಬದ ಮೂರು ಜನರಿಗೆ ಅರವತ್ತು ಚದುರದ ಮನೆ. ಅವನ ಕಾರ್ಖಾನೆ ಯ ನಾವು ಹತ್ತು ಮಂದಿ ನೌಕರರು ಬೊಮ್ಮಸಂದ್ರ ದಲ್ಲಿ ಇಟ್ಟಿಗೆ ಗೂಡಿನಂತಹ ಎರಡು ಚದುರ ಮನೆಯಲ್ಲಿ ಜಾಗ ಸಾಕಾಗದೇ ಒಬ್ಬರ ಮೇಲೆ ಒಬ್ಬರು ಮೂಟೆಯಂತೆ ಮಲಗುತ್ತಿದ್ದೆವು.
ಆ ರೆಡ್ಡಿ ನಮ್ಮ ಸದಾ ಅಸಾಹಯಕ ವಾಗಿ ಬಡವರಾಗಿಯೇ ಇರುವಂತೆ ಬಯಸುತ್ತಿದ್ದ. ಅದೇ ಅವನ ಬಂಡವಾಳ ಆಗಿತ್ತು....
ನಮ್ಮಂಥವರು ಜೀವನ ಪರ್ಯಂತ ಸಾಲ ಅಭದ್ರತೆಯಲ್ಲಿ ಜೀವನ ಮಾಡಿ ಕೊಂಡು ಎಲ್ಲಾ ಆಶಾವಾದ ಕಳೆದು ಕೊಳ್ತೀವಿ...ದುಡ್ಡಿದ್ದವ ದುಡ್ಡನ್ನು ಬೇರೆಯವರಿಗೆ ಕಣ್ಣು ಕುಕ್ಕುವಂತೆ ತೋರಿಸಿ ಜೀವಿಸುತ್ತಾನೆ.
ನಾನು ಇವೆಲ್ಲ ನೋಡಿ ರೋಸಿ ಹೋಗಿ ಬೆಂಗಳೂರು ಬಿಟ್ಟು ಬೀರ್ನಳ್ಳಿಗೆ ಬಂದೆ. ಇಲ್ಲಿ ಒಂದು ವೆಡ್ಡಿಂಗ್ ವರ್ಕ್ ಷಾಪ್ ಮಾಡೋಣ ಅಂತ ಸಾಲಕ್ಕಾಗಿ ಬ್ಯಾಂಕ್ ಗೆ ಹೋದೆ...
ಆಗ ವ್ಯವಸ್ಥೆ ಯ ಇನ್ನೊಂದು ಮುಖ ನೋಡಿದೆ. ಬ್ಯಾಂಕ್ ನಮ್ಮಂಥ ಬಡವರಿಗಲ್ಲ ಎಂಬುದು ಸಾಬೀತು ಮಾಡಿತು.
ಹತಾಶನಾಗಿ ಹೋಗಿದ್ದೆ...
ಸುಮ್ಮನೆ ಊರ ಕಟ್ಟೆಯಲ್ಲಿ ಕೂತು ಕುಗುರುವಾಗ ಒಂದು ಲಾರಿ ಬಂತು.
ಅವರು ಬೆಂಗಳೂರಿಗೆ ಪ್ರತಿಭಟನೆ ಗೆ ಕರೆದುಕೊಂಡು ಹೋಗಿ ಊಟ ಕೊಟ್ಟು ಐನೂರು ರೂಪಾಯಿ ಕೊಟ್ಟರು.
ಮತ್ತೆ ಮತ್ತೆ ಹೀಗಿನ ಚಳುವಳಿ ಪ್ರತಿಭಟನೆ ರಾಲಿ ಸಮಾವೇಶ ಗಳಿಗೆ ಪೇಮೆಂಟ್ ಸೀಟಾಗಿ ಹೋಗುವ ಅವಕಾಶ ಬಂತು.
ಇದರ ಜೊತೆಗೆ ನನ್ನ ಹಾಗೆ ಕಾಲಿ ಕೂತ ನತದೃಷ್ಟರನ್ನು ಜೊತೆಗೆ ಸೇರಿಸಿಕೊಂಡು ಅಂತಹ ಸಮಾವೇಶ ಕ್ಕೆ ಹೋಗುತ್ತಿದ್ದೆ .ಅವರ ತಲೆ ಮೇಲೆ ಕಮಿಷನ್ ತೆಗೆದುಕೊಳ್ತಿದ್ದೆ. ನಿಧಾನವಾಗಿ ನನ್ನದೊಂದು ಗುಂಪು ಮಾಡಿಕೊಂಡೆ. ರಾಜಕೀಯ ಪಕ್ಷಗಳ ಮುಖ್ಯ ಸ್ಥರ ಸಂಪರ್ಕ ಕ್ಕೆ ಬಂದು ಜನ ನಾನೇ ನೇರವಾಗಿ ಪೇಮೆಂಟ್ ಜನಗಳನ್ನು ಒದಗಿಸತೊಡಿಗಿದೆ.
ನಿಧಾನವಾಗಿ ಇದನ್ನೇ ನಾನು ಉದ್ಯಮ ವಾಗಿ ಪರಿವರ್ತನೆ ಮಾಡಿದೆ.
ನಮ್ಮ ಸಂಸ್ಥೆ ಈಗ ಕೋಟ್ಯಾಂತರ ಹಣ ವಹಿವಾಟು ಮಾಡುತ್ತಿದೆ. ನಾವು ನಮ್ಮ "ಜನ ಭಲ" ಕಂಪನಿ ಗೆ ನೊಂದಾಯಿತ ಸದಸ್ಯ ರಿಗೆ ಇಂತಹ ಕಾರ್ಯಕ್ರಮ ದಲ್ಲಿ ಬಾಗವಹಿಸಿ ಮನೆಗೆ ತಲುಪುವ ತನಕ ಇನ್ಸೂರೆನ್ಸ್ ಕೊಡ್ತೀವಿ. ಪೋಲಿಸ್ ಲಾಠಿ ಚಾರ್ಜು , ಗುಂಡು , ಅಶ್ರುವಾಯು, ಬಂದನ ಜೈಲು ...
ಎಲ್ಲಾ ವಿಷಯಕ್ಕೂ ನಾವೇ ಜವಬ್ದಾರಿ. ಆರೋಗ್ಯ ಭದ್ರತೆ ಕೊಡ್ತೀವಿ. ಎಲ್ಲಿ ಪ್ರತಿಭಟನೆ ಮಾಡ್ತೀವೋ ಅಲ್ಲಿನ ಪೋಲೀಸ್ ಇಲಾಖೆಯೊಂದಿಗೂ ಉತ್ತಮ ಸಂಪರ್ಕ ದಲ್ಲಿರ್ತೆವೆ...
ಅವರಿಗೆ ನಮ್ಮ ಕಾಯೋದು "ಅನ್ನ"
ವಾದರೆ ನಮಗೆ ಪ್ರತಿಭಟನೆ ಚಳುವಳಿ ಮಾಡೋದು ಅನ್ನ....!!! ಏನು ಮಾಡೋದು ಈ ಸುತ್ತ ಮುತ್ತಲಿನ ಜನಕ್ಕೆ ನ್ಯಾಯವಾದ ಉದ್ಯೋಗ ಇಲ್ಲ.
ನಮ್ಮ ಉದ್ಯಮ ಅವರಿಗೆ ಅನ್ನದ ದಾರಿಯಾಗಿದೆ.
ರಾಜಕೀಯ ಪಕ್ಷಗಳಿಗೆ ಸಂಘ ಸಂಸ್ಥೆಗಳಿಗೆ ವಿವಿಧ ಸಂಘಟನೆ ಗಳಿಗೆ ನಮ್ಮ ಸಂಸ್ಥೆಯು ದೊಡ್ಡ ವರದಾನ ವಾಗಿದೆ....ಎಷ್ಟು ಜನರು ಪ್ರತಿಭಟನೆ ಮಾಡಬೇಕೋ ಅಷ್ಟು ಜನರ ಲೆಕ್ಕ ದಲ್ಲಿ ನಮ್ಮ ಸಂಸ್ಥೆ ಗೆ ಹಣ ಕಟ್ಟಿ ದರೆ ಮುಗೀತು... ಪ್ರತಿಭಟನೆ ಸಲೀಸಾಗಿ ನೆಡೆದುಹೋಗುತ್ತದೆ. ಯಾವ ಪಕ್ಷದ ರಾಲಿಗೋ, ಚಳುವಳಿ ಪ್ರತಿಭಟನೆ ಗೋ ಜನ ಈಗ ದುಡ್ಡು ಕೊಡದೇ ಹೋಗೋಲ್ಲ...
ಅದೊಂದು ಕಾರ್ಯಕರ್ತರಿಗೆ ಹಣ ಮಾಡಿಕೊಳ್ಳುವ "ಅವಕಾಶ" ಆಗಿತ್ತು.
ಆದರೆ ಕಾರ್ಯಕರ್ತರೂ ಈಗೀಗ ರಾಜಕಾರಣಿ ಗಳಷ್ಟೇ ಬ್ರಷ್ಟ ರಾಗ ತೊಡಗಿದ ಮೇಲೆ ರಾಜಕೀಯ ಪಕ್ಷಗಳು ನಮ್ಮಂಥ "ಪಬ್ಲಿಕ್ ಸಪ್ಲೆ ಸರ್ವೀಸ್ " ಗಳ ನೆಚ್ಚಿಕೊಂಡಿವೆ.
ಊಟ ತಿಂಡಿ ವಾಹನ ವ್ಯವಸ್ಥೆ ಎಲ್ಲಾ ಹೊರ ಗುತ್ತಿಗೆ ಮಾಡಿಸುತ್ತೇವೆ. ಅವರಿಗೂ ನಮ್ಮಿಂದ ಉದ್ಯೋಗ ಸಿಗುತ್ತದೆ. ನಮ್ಮ ಸದಸ್ಯ ರಿಗೆ ಸಭೆ ಸಮಾರಂಭದಲ್ಲಿ ಬಾಗವಹಿಸಿ ಮನೆಗೆ ಮರಳುವುದರಲ್ಲಿ ಅವರ ಅಕೌಂಟ್ ಗೆ ಹಣ ಸಂದಾಯ ವಾಗಿರುತ್ತದೆ...
ಎಲ್ಲಾ ಡಿಜಿಟಲಿಕರಣ ಮಾಡಿದ್ದೇವೆ...
ಬಸ್ ಗೆ ಕಲ್ಲು ಹೊಡೆಯೋದು ಬೆಂಕಿ ಹಚ್ಚುವ ಮುಂತಾದ ವಿದ್ವಂಸಕ ಕೃತ್ಯ ಮಾಡುವ ಪ್ರತಿಭಟನಾಕಾರರಿಗೆ ವಿಶೇಷ ಭತ್ಯೆ ಮತ್ತು ನ್ಯಾಯವಾದಿ ಮತ್ತು ಕಾನೂನು ಹೋರಾಟ
ದ ಜವಬ್ದಾರಿ ನಮ್ಮ ಸಂಸ್ಥೆ ಯದ್ದೇ ಆಗಿರುತ್ತದೆ.
ಕೆಲವು ರಾಜಕೀಯ ಪಕ್ಷಗಳು ಇಂತಹ ಕೆಲಸವನ್ನು ಪಾಪದ ಅಮಾಯಕ ರಿಂದ ಮಾಡಿಸಿ ಪ್ರತಿಭಟನೆ ಯ ಲಾಭ ಪಡೆದು ನಂತರ ಪ್ರತಿಭಟನೆಕಾರರ ಕೈ ಬಿಟ್ಟ ಸಾವಿರಾರು ಘಟನೆ ಸಮಾಜ ದಲ್ಲಿ ನೆಡೆದಿದೆ..!!! ಈ ವ್ಯವಸ್ಥೆ ಯಲ್ಲಿ ಯಾರದೋ ಸಮಾಧಿಯ ಮೇಲೆ ಇನ್ಯಾರೋ ಹತ್ತಿ "ಗಾದಿ" ಅಲಂಕರಿಸು ತ್ತಾರೆ. ಅಮಾಯಕರು ಭಾವೋದ್ರೇಕ ಗೊಂಡು ಸತ್ತದಷ್ಟೆ ದೌರ್ಬಾಗ್ಯ.
ಪಾಪದ ಪ್ರತಿಭಟನಾಕಾರರು ಇಂತಹ ಸಂದರ್ಭದಲ್ಲಿ ಸಿಕ್ಕಿ ಒದ್ದಾಡುತ್ತಾರೆ.
ನಮ್ಮದು ಹಾಗಲ್ಲ.... ನಿಯತ್ತಾಗಿ ನಿರ್ವಹಣೆ ಮಾಡ್ತೀವಿ.ಆದ ಕಾರಣ ನಮ್ಮ ಸಂಸ್ಥೆಯಲ್ಲಿ ಈಗ ಲಕ್ಷಾಂತರ ಜನ ತಮ್ಮ ಹೆಸರನ್ನು ನೊಂದಾಯಿಸಿ ಕೊಂಡಿದ್ದಾರೆ.
ಈಗ ಕೆಲವು ಪಕ್ಷಗಳು ಕಾರ್ಯಕರ್ತರ ಬದಲಿಗೆ ನಮ್ಮ ಕಂಪನಿಗೇ ಮತ ದಾರರಿಗೆ (ಮತ ವ್ಯಾಪಾರಿ) ಹಣ ಹಂಚಲು ವಹಿಸಿಕೊಡ್ತಿದ್ದಾರೆ. ನಾವು ಪ್ರತಿಯೊಬ್ಬ ಮತದಾರರಿಗೂ ಹಣ ಹಂಚಿದ ಸಾಕ್ಷಿ ಕೊಡ್ತೀವಿ...
ನಾವು ಆ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡ್ತೇವೆ. ರಾಜಕೀಯ ಪಕ್ಷಗಳಿಗೆ ಕಾರ್ಯಕರ್ತರ ನ್ನು ಸಾಕುವುದಕ್ಕಿಂತ ನಮ್ಮ ಕಂಪನಿ ಗೇ ಈ ಕೆಲಸ ವಹಿಸಿಕೊಡುವುದು ಲಾಭದಾಯಕ ಎನಿಸಿದೆ.
ಇದೀಗ ನಾವೇ ಒಂದು ರಾಜಕೀಯ ಪಕ್ಷ ಅಲ್ಲಲ್ಲ.. ರಾಜಕೀಯ ಕಂಪನಿ ಆರಂಭಿಸಬೇಕೆಂಬ ಯೋಜನೆ ಇದೆ ಸಾರ್...
ನಮ್ಮ ದೇಶದಲ್ಲಿ ಪ್ರತಿಶತ ನಲವತ್ತೈದು ಬಾಗ ಜಾತಿ ಮತ್ತು ಹಣ ಆಧಾರದಲ್ಲಿ ಮತದಾನ ಮಾಡ್ತಾರೆ. ಐದು ಬಾಗ ಜನ ರಾಷ್ಟ್ರದ ಅಭಿಮಾನದಿಂದ ವಿವೇಚನೆಯಿಂದ ಮತದಾನ ಮಾಡ್ತರಷ್ಟೇ. ಉಳಿದ ಐವತ್ತು ಪ್ರತಿಶತ ಮತದಾರರು ನೂರೆಂಟು ಕಾರಣ ಕೊಟ್ಟು ಮತದಾನವನ್ನೇ ಮಾಡದೆ ಈ ದೇಶವನ್ನು ಅಭದ್ರ ರಾಜಕೀಯ ಪರಿಸ್ಥಿತಿ ಗೆ ದೂಡುತ್ತಾರೆ.
ನಿಜಕ್ಕೂ ಈ ಮತದಾನ ಮಾಡದೇ ಇರೋರೇ ಈ ದೇಶಕ್ಕೆ ದೊಡ್ಡ ಶತೃ.
ಒಳ್ಳೆಯವರ ಆಯ್ಕೆಯಾಗಲು ಈ ಮತದಾನ ಮಾಡದ ಐವತ್ತು ಪ್ರತಿಶತ ಜನ ಮತದಾನ ಮಾಡುವ ಮನಸು ಮಾಡಿದರೆ ಶಿಷ್ಠರು ಆಯ್ಕೆ ಯಾಗ್ತಾರೆ.
ಇದೆಲ್ಲಾ ಒಂದೇ ಚುನಾವಣೆಯಲ್ಲಿ ಆಗದಿರಬಹುದು. ಒಂದೆರೆಡು ಪ್ರಯತ್ನ ದಲ್ಲಿ ಖಂಡಿತವಾಗಿಯೂ ರಾಜಕೀಯ ವ್ಯವಸ್ಥೆ ಶುದ್ದೀಕರಣ ಆಗುತ್ತದೆ. ಇದರಲ್ಲಿ ವಿದ್ಯಾವಂತ ರು , ಸಮಾಜದಲ್ಲಿ ಉತ್ತಮ ಸ್ಥಾನಮಾನ ಹೊಂದಿರುವವರೂ ಸೇರಿದ್ದಾರೆ. ಇಂತಹವರಿಗೇ ವಿವೇಚನಾ ಶಕ್ತಿ ಇಲ್ಲ ದಿರುವುದು ವಿಪರ್ಯಾಸ ಅಲ್ವಾ?
ಇವರೆಲ್ಲರಿಗೂ ಜವಬ್ದಾರಿ ಬರುತ್ತದಾ ?
ಇವರೆಲ್ಲ ನಿದ್ದೆಯಿಂದ ಎದ್ದು ವ್ಯವಸ್ಥೆ ಬದಲಿಗೆ ಮನಸು ಮಾಡ್ತಾರಾ...!? ಬದಲಾಗುತ್ತಾರೆ ಎನ್ನುವುದು
ಕನಸೇ ಸರಿ ಅಲ್ವಾ ಸಾರ್...!??
ಅದಕ್ಕೆ ನಾವೇ "ಜನಬಲ ರಾಜಕೀಯ ಕಂಪನಿ" ಆರಂಭಿಸಿ ಈ ರಾಜ್ಯದ ನಲವತ್ತರಿಂದ ಐವತ್ತು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿ ನಲವತ್ತು ಕ್ಷೇತ್ರದಲ್ಲಿ ಗೆದ್ದು , ಯಾವುದೇ ರಾಜಕೀಯ ಪಕ್ಷಕ್ಕೆ ಬಹುಮತ ಸಿಗದಂತೆ ಪ್ರಯತ್ನ ಮಾಡಿ ಸಮ್ಮಿಶ್ರ ಸರ್ಕಾರ ಆಗುವ ಅನಿವಾರ್ಯ ಸೃಷ್ಟಿ ಸಿ ಆ ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರರಾಗುವ ಯೋಜನೆ ಇದೆ. ನಾವು ಕೇವಲ ಐವತ್ತು ಕ್ಷೇತ್ರದಲ್ಲಿ ಗೆಲ್ಲುವ ಬಗ್ಗೆ ಮಾತ್ರ ಕೇಂದ್ರಿತ ಮಾಡಿಕೊಂಡು. ಜನ ಸಾಮಾನ್ಯ ರಿಂದ ಚುನಾವಣಾ ಫಂಡ್ ನ್ನು "ಷೇರು" ರೂಪದಲ್ಲಿ ಪಡಿತೀವಿ...
ಐವತ್ತು ವಿಧಾನ ಸಭಾ ಕ್ಷೇತ್ರ ಕ್ಕೆ ತಲಾ ಹತ್ತು ಕೋಟಿಯಂತೆ ಒಟ್ಟು ಐದುನೂರು ಕೋಟಿ ಹಣ ಬಂಡವಾಳ ಹೂಡಿ ....
ಈ ಐದು ವರ್ಷಗಳ ಲ್ಲಿ ಸರ್ಕಾರ ಮಾಡಿದ ಬಜೆಟ್ ಯೋಜನೆ ಯಲ್ಲಿ
ಕನಿಷ್ಟ ಮೂರು ಲಕ್ಷ ಹೂಡಿಕೆಯಾದರೆ
ಆ ಹೂಡಿಕೆಯಲ್ಲಿ ಒಂದೂವರೆ ಲಕ್ಷ ಹಣ ಉಳಿಸಿ ಅದರಲ್ಲಿ ನಮ್ಮ ಪಾಲು ಐವತ್ತು ಸಾವಿರ ಕೋಟಿ ಹಣ ಪಡೆದು ನಮ್ಮ ರಾಜಕೀಯ ಕಂಪನಿಯ ಷೇರುದಾರರಿಗೆ ಲಾಭಾಂಶ ವನ್ನು ಹಂಚುವುದು ನಮ್ಮ ಯೋಜನೆ.
ಸಾರ್ ಯಾವುದೇ ರಾಜಕೀಯ ಪಕ್ಷ ಅವರಿಗೆ ಕೋಟ್ಯಾಂತರ ರೂಗಳ ಅಕ್ರಮ ಹಣ ಮಾಡಿಸಿಕೊಳ್ಳಲು ಅವಕಾಶ ಮಾಡಿ ಕೊಟ್ಟಿದ್ದಕ್ಕೆ ಚುನಾವಣೆ ಯ ಮುನ್ನಾ "ಮತವ್ಯಾಪಾರಿ" ಗಳಿಗೆ ... ಐನೂರು , ಸಾವಿರ, ಎರಡು ಸಾವಿರ ...ಪೊಕ್ಕು ಮಿಕ್ಸಿ ಕುಕ್ಕರ್ ಟಿವಿ ಕೊಟ್ಟು ತಾವು ಮಾತ್ರ ಕೋಟಿ ಕೋಟಿ ಹಣ ಮಾಡಿಕೊಳ್ತಾವೆ....
ಇವತ್ತು ರಾಜಕೀಯ ಇರೋದೇ ಹೀಗೆ..
mono politics... ಅಂದರೆ ಒಂದಷ್ಟು ಕ್ಷೇತ್ರ ವನ್ನು ಜಾತಿ ಮತ್ತು ಹಣ ಆಧಾರದಲ್ಲಿ ಬೇರೆ ಸ್ಪರ್ಧಿಗಳಿಗೆ ಆ ಕ್ಷೇತ್ರ ಪರಭಾರೆ ಯಾಗದಂತೆ ತಾವು ತಮ್ಮ ಮಕ್ಕಳು ಪಾಳೆಗಾರಿಕೆ ಮಾಡಿ ನಿರ್ವಹಣೆ ಮಾಡಿ ಉಳಿಸಿಕೊಳ್ಳೋದು. ಈಗ ಬಹುಮತ ಬರುವಷ್ಟು ಕ್ಷೇತ್ರ ಗೆಲ್ಲಬೇಕಾದ ಅವಶ್ಯಕತೆ ಇಲ್ಲ... ನಮ್ಮ ಹಾಗೆ ಒಂದಷ್ಟು ಕ್ಷೇತ್ರ ಕ್ಕೆ ಹೆಚ್ಚು ಬಂಡವಾಳ ಹೂಡಿ ಗೆದ್ದುಕೊಂಡರೆ "ಸರ್ಕಾರ " ನಮ್ಮ ಕೈಯಲ್ಲಿ...
ಸಾರ್ ನೀವೂ ನಮ್ಮ ಸಂಸ್ಥೆಯ ಪಾಲು ದಾರರಾಗಿ. ತೀರ್ಥಹಳ್ಳಿ ಮತ್ತು ಶೃಂಗೇರಿಯಲ್ಲಿ ನಮ್ಮ ಸಂಸ್ಥೆಯ ಕಛೇರಿ ತೆರೆದು ಜನರಿಂದ ಷೇರು ಫಂಡಿಂಗ್ ಕಲೆಕ್ಟ್ ಮಾಡಿ ಕಮಿಷನ್ ಪಡೆಯಿರಿ...
ಈ ಪರಿಸರ ಕಾಡು ಬೆಟ್ಟ ನೀರು ಮಳೆ ಅಂತ ಅವುಗಳ ಜೊತೆಗೇ ನೀವೂ ನಾಶವಾಗ ಬೇಡಿ...
ಈ ಕಾಲಕ್ಕೆ ತಕ್ಕಂತೆ ಬದುಕಲು ಕಲಿಯಿರಿ .... ಅಂದರು ಗೌಡರು.
ನಾನೂ ಶ್ರೀ ನಿವಾಸ ಮೂರ್ತಿಗಳು ಅವರಿಗೆ ಕೈ ಮುಗಿದು ಹೊರಗೆ ಬಂದು ಬೆಂಗಳೂರಿನ ಮೆಜೆಸ್ಟಿಕ್ ಗೆ ಬಂದೆವು.
ಅತಿಯಾದ ವಾಹನ ದಟ್ಟಣೆ ,ಪರಿಸರ ನಾಶದಿಂದ ಈಗ ಬೆಂಗಳೂರೂ ದೆಹಲಿ ಯಂತಾಗಿ
ಇಂಗಾಲದ ಡೈಆಕ್ಸೈಡ್ ನ ದಟ್ಟವಾದ ಹೊಗೆಯ ಮೋಡದಿಂದ ಕೂಡಿ ಹತ್ತು ಹತ್ತು ಅಡಿಗಳಷ್ಟೇ ಕಾಣಿಸತ್ತಿತ್ತು...
ಚಿಕ್ಕ ಮಗಳೂರಿನ ಫ್ಲಾಟ್ ಫಾರ್ಮ ನ ತ್ತ ಮೂರ್ತಿಗಳೂ ಶಿವಮೊಗ್ಗ ದ ಫ್ಲಾಟ್ ಫಾರ್ಮ ನ ಕಡೆ ನಾನೂ ಆ ಮಬ್ಬುಗತ್ತಲಲ್ಲಿ ತಡವುತ್ತಾ ಸಾಗ ತೊಡಗಿದೆವು...
ಅಲ್ಲಿ ದೊಡ್ಡ ದೊಡ್ಡ ಗುಳ್ಳೆ ಪುಗ್ಗದಲ್ಲಿ
ಶುದ್ದ ಆಮ್ಲಜನಕ ಮಾರಾಟ ಮಾಡುವ ಜನಗಳು ಕಂಡು ಬಂದರು.
ಆಯಾ ಜಿಲ್ಲೆಯ ಫ್ಲಾಟ್ ಫಾರ್ಮ್ ಬಳಿ ಆಯಾ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳದ ವಾತಾವರಣ ದ ಶುದ್ಧ ಗಾಳಿ ಅಂತ "ಮಾರಾಟ " ಮಾಡ್ತಿದ್ರು.
ಚಿಕ್ಕ ಮಗಳೂರು ಫ್ಲಾಟ್ ಫಾರ್ಮ ಬಳಿ "ಹಿಡ್ಲು ಮನೆ ಫಾಲ್ಸ್ ಶುದ್ದ ಗಾಳಿ"
ಅಂತ ಹೇಳಿಕೊಂಡು ಚೀನಾ ಕಂಪನಿಯಾದ "ಒಪ್ಪೋ " ಗಾಳಿ ಮಾರುತ್ತಿತ್ತು...!!?
ನಮ್ಮ ಶಿವಮೊಗ್ಗ ಜಿಲ್ಲೆಯ ಪ್ಲಾಟ್ ಫಾರ್ಮ್ ಬಳಿ "ಜೋಗ ಜಲಪಾತ ಶುದ್ದ ಗಾಳಿ " ಮಾರುತ್ತಿದ್ದರು...
ನಾವು ಬದುಕಿ ಊರು ತಲುಪಲೇ ಬೇಕೆಂದರೆ ಅದನ್ನು ಕೊಂಡು ಅದರ ಗಾಳಿ ಕೊಳವೆಯನ್ನು ಮೂಗಿಗೆ ಸಿಕ್ಕಿ ಸಿ ಕೊಳ್ಳಲೇ ಬೇಕಿತ್ತು....
ಬಸ್ ಏರಿದರೆ ಬಸ್ ತುಂಬಾ ತೀರ್ಥಹಳ್ಳಿ ಯ ಎಳ್ಯಮಾಸ್ಯೆ ಜಾತ್ರೆ ಗೆ ಹೋದ ಎಳೆ ಮಕ್ಕಳಂತೆ ಎಲ್ರೂ ಆಮ್ಲಜನಕ ದ ಪುಗ್ಗ ಪಡೆದು "ಶುದ್ದ" ಗಾಳಿ ಹೀರಿ ನಿರಾಳವಾಗುತ್ತಿದ್ದರು...
ಬಸ್ ನಿಧಾನವಾಗಿ ಮೆಜೆಸ್ಟಿಕ್ ಬಿಟ್ಟು ತುಮಕೂರು ಮಾರ್ಗದತ್ತ ಮಬ್ಬು ಬೆಳಕಿನಲ್ಲಿ ತೆವಳತೊಡಗಿತು....
ವಂದನೆಗಳು..
#ಪ್ರಬಂಧ_ಅಂಬುತೀರ್ಥ.
Comments
Post a Comment