#ಶ್ರೀವರಸಿದ್ಧಿ_ವಿನಾಯಕ_ಸ್ವಾಮಿ_ದೇವಾಲಯದ_ಟ್ರಸ್ಟಿ
#ಜಾತ್ರಾ_ಸಮಿತಿ_ಖಜಾಂಚಿ
#ಜ್ಯೋತಿಷಿ_ಕಲ್ಮಕ್ಕಿ_ಬೂಧ್ಯಪ್ಪ_ಗೌಡರು
#ನಮ್ಮೂರ_ಜಾತ್ರೆ_ಮುಗಿದರೂ
#ಬೂದ್ಯಪ್ಪ_ಗೌಡರ_ಕೆಲಸ_ಮುಗಿಯುವುದಿಲ್ಲ
ನಮ್ಮೂರ ಶ್ರೀವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷ 19ನೇ ವರ್ಷದ ಬ್ರಹ್ಮರಥೋತ್ಸವ ಮತ್ತು ಪುನರಷ್ಟಬಂಧ ಕಾರ್ಯಕ್ರಮಗಳು ಭಕ್ತಿಪೂರ್ವಕವಾಗಿ ನೆರವೇರಿತು.
ಈ ದೇವಾಲಯದಲ್ಲಿ ಎಲೆ ಮರಿಯ ಕಾಯಿಯಂತೆ ಭಕ್ತಿಯಿಂದ ಶ್ರಮ ಪಡುವವರಲ್ಲಿ ಆಚಾಪುರ ಗ್ರಾಮ ಪಂಚಾಯಿತಿಯ ಕೆರೆಹಿತ್ತಲು ಗ್ರಾಮದ ಜ್ಯೋತಿಷಿ ಕಲ್ಮಕ್ಕಿ ಬೂದ್ಯಪ್ಪ ಗೌಡರು ಪ್ರಮುಖರು.
ಕಳೆದ 19 ವರ್ಷದಿಂದ ಇವರ ಸೇವೆ ಶ್ಲಾಘನೀಯವಾಗಿದೆ ಜಾತ್ರಾ ಸಮಿತಿಯ ಖಜಾಂಚಿ ಆಗಿ ಈವರೆಗೂ ಮುಂದುವರಿದಿದ್ದಾರೆ ಇವರ ಭಕ್ತಿ ಮತ್ತು ನಿಷ್ಟೆಯ ನಿರಂತರ ಸೇವೆಗಾಗಿ ದೇವಾಲಯದ ಗೌರವಾದ್ಯಕ್ಷರಾದ ಡಾ. N.S.ವಿಶ್ವಪತಿ ಶಾಸ್ತ್ರೀಗಳು ಇವರನ್ನು ಧರ್ಮದರ್ಶಿಗಳಾಗಿ ನೇಮಿಸಿದ್ದಾರೆ.
ಭಕ್ತರು ನೀಡುವ ಪ್ರತಿ ಪೈಸೆಯ ಲೆಖ್ಖ ಮಾಡಿ ಅಂತಿಮ ಜಾತ್ರಾ ಖರ್ಚು ವೆಚ್ಚಗಳ ಪಟ್ಟಿ ಸಮಿತಿಯಲ್ಲಿ ಅನುಮೋದನೆ ಪಡೆದು ದೇವಾಲಯದ ನೋಟೀಸು ಬೋರ್ಡಿಗೆ ಹಾಕುವ ತನಕ ಬೂಧ್ಯಪ್ಪ ಗೌಡರ ಕೆಲಸ ಇರುತ್ತದೆ ಆದ್ದರಿಂದಲೇ ಜಾತ್ರೆ ಮುಗಿದರೂ ಬೂಧ್ಯಪ್ಪ ಗೌಡರ ಕೆಲಸ ಜಾತ್ರೆ ನಂತರದ
ಕೆಲ ದಿನಗಳ ತನಕ ಇರುತ್ತದೆ.
Comments
Post a Comment