#ಯೆನೆಪೋಯ_ವಿಶ್ವವಿದ್ಯಾಲಯ
#ಮಂಗಳೂರಿನ_ಯೆನೆಪೋಯ_ಆಸ್ಪತ್ರೆ
#ನಮ್ಮ_ರಾಜ್ಯ_ಮಾತ್ರವಲ್ಲ_ಕೇರಳ_ರಾಜ್ಯದಲ್ಲೂ_ಪ್ರಸಿದ್ಧಿ_ಪಡೆದಿದೆ.
ಇದನ್ನು 2008 ರಲ್ಲಿ ಯೆನೆಪೋಯ ವಿಶ್ವವಿದ್ಯಾಲಯವಾಗಿ ಸ್ಥಾಪಿಸಲಾಯಿತು.
1992 ರಲ್ಲಿ ಯೆನೆಪೋಯ ದಂತ ಕಾಲೇಜು ಪ್ರಾರಂಭವಾದಾಗಿನಿಂದ ಅನೇಕ ಕಾಲೇಜುಗಳು ಸರಣಿಯಲ್ಲಿ ಪ್ರಾರಂಭವಾದವು.
ವಿಶ್ವವಿದ್ಯಾನಿಲಯವು ವೈದ್ಯಕೀಯ, ದಂತ, ಸಂಬಂಧಿತ ಆರೋಗ್ಯ ವಿಜ್ಞಾನಗಳು, ಭೌತಚಿಕಿತ್ಸೆ, ಫಾರ್ಮಸಿ, ನರ್ಸಿಂಗ್ , ಆಯುರ್ವೇದ, ಹೋಮಿಯೋಪತಿ, ಪ್ರಕೃತಿ ಚಿಕಿತ್ಸೆ, ಎಂಜಿನಿಯರಿಂಗ್ ಮತ್ತು ಕಲೆ, ವಿಜ್ಞಾನ, ವಾಣಿಜ್ಯ ಮತ್ತು ನಿರ್ವಹಣೆಗಾಗಿ ವಿವಿಧ ಘಟಕ ಕಾಲೇಜುಗಳನ್ನು ಹೊಂದಿದೆ.
ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ತಲುಪಲು ರೋಗಿಗಳಿಗೋಸ್ಕರ ರಾಜ್ಯ ಸಾರಿಗೆ ಬಸ್ಸುಗಳನ್ನು ಕೂಡ ಬಿಡಲಾಗಿದೆ ಅಂದರೆ ಈ ಯೆನೆಪೋಯ ಆಸ್ಪತ್ರೆ ಎಷ್ಟು ಪ್ರಸಿದ್ಧಿ ಪಡೆದಿದೆ ಎಂದು ಅರ್ಥವಾದೀತು.
#yenepoyauniversity #yenepoyahospital #Mangalore #medicaleducation #nursingschool
ಯೆನೆಪೋಯ ಆಸ್ಪತ್ರೆಯ ಹಾಲಿ ಚೇರ್ಮನ್ ಶ್ರೀಯೆನೆಪೋಯ ಅಬ್ದುಲ್ ಕುಂಜ್ಞ ಇವರು ಜನಿಸಿದ್ದು 1947 ರಲ್ಲಿ.
ಇವರ ವಿದ್ಯಾಭ್ಯಾಸ ಮೈಸೂರು ಯುನಿವರ್ಸಿಟಿಯಲ್ಲಿ ಬಿಎ, 1992 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.
ಇವರ ತಂದೆ ಯೆನೆಪೋಯ ಮೊಯಿದ್ದೀನ್ ಕುಂಜಿ 1940ರಲ್ಲಿ ಪ್ರಾರಂಭಿಸಿದ ಈ ಸಂಸ್ಥೆಗಳು 85 ವರ್ಷದಲ್ಲಿ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ.
3000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ, ಯೆನೆಪೋಯಾ ಮೊಯಿದೀನ್ ಕುಂಜಿ ವಿದ್ಯಾವಂತರಲ್ಲ ಆದರೆ ಅವರ ದೂರ ದೃಷ್ಟಿ ಯಾವ ವಿದ್ಯಾವಂತರೂ ಸಾದಿಸಲು ಸಾಧ್ಯವಿಲ್ಲದಂತೆ ಸಾದಿಸಿ ತೋರಿಸಿದ್ದಾರೆ.
ಸಣ್ಣ ಮರದ ವಹಿವಾಟಿನಿಂದ 1940ರಲ್ಲಿ ಯೆನೆಪೋಯ ಸಂಸ್ಥೆ ಕಾರ್ಯಾರಂಭ ಮಾಡಲು ಪ್ರಾರಂಭಿಸಿತು.
ನಂತರ ಟ್ರಾನ್ಸ್ಪೋರ್ಟ್, ಆಸ್ಪತ್ರೆ, ಗಣಿಗಾರಿಕೆ, ವಿದ್ಯಾ ಕ್ಷೇತ್ರ,ರಿಯಲ್ ಎಸ್ಟೇಟ್ ಮತ್ತು ವ್ಯಾಪಾರ ಇತ್ಯಾದಿಗಳಲ್ಲಿ ತೊಡಗಿಸಿ ಕೊಂಡಿತು.
ಕೆನರಾ ವುಡ್ಸ್ ಅಂಡ್ ಪ್ಲೇವುಡ್, ಯೆನೆಪೋಯ ಸಾಮಿಲ್, ಯೆನೆಪೋಯ ಮಿನರಲ್ಸ್ ಅಂಡ್ ಗ್ರಾನೈಟ್, ಯೆನೆಪೋಯ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಪ್ರೈವೇಟ್ ಲಿಮಿಟೆಡ್, ಯೆನೆಪೋಯ ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್,
ಯೆನೆಪೋಯ ನರ್ಸಿಂಗ್ ಕಾಲೇಜು,
ಯೆನೆಪೋಯ ಮೊಯಿದ್ದೀನ್ ಕುನ್ನಿ ಮೆಮೋರಿಯಲ್ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಬಡ ಮಕ್ಕಳ ವಿದ್ಯಾಭ್ಯಾಸ, ಅನಾಥಾಶ್ರಮಗಳು, ಸಾಮೂಹಿಕ ವಿವಾಹಗಳನ್ನ ಮತ್ತು 200 ಹಾಸಿಗೆ ಆಸ್ಪತ್ರೆ ನಡೆಸುತ್ತಿದೆ.
ಪ್ರಚಾರಗಳಿಂದ,ಸನ್ಮಾನ ಮತ್ತು ಪ್ರಶಸ್ತಿಗಳಿಂದ ಸದಾ ಅಂತರ ಕಾಪಾಡಿಕೊಂಡು ಈ ದೊಡ್ಡ ಸಾಧನೆ ಮಾಡಿದ ಈ ಸಂಸ್ಥೆ ಸಮಾಜದ ಬಡವರ ಸೇವೆಯಲ್ಲಿ ಕೂಡ ಮಹತ್ತರ ಸಾಧನೆ ಮಾಡಿರುವುದು ಅತ್ಯಂತ ಪ್ರಶಂಸನೀಯ ಕೆಲಸವಾಗಿದೆ.
ಆದ್ದರಿಂದಲೇ ಮಂಗಳೂರಿನ ಯೆನೆಪೋಯ ಸಂಸ್ಥೆ ರಾಜ್ಯದ ಪ್ರತಿಷ್ಟಿತ ಸಂಸ್ಥೆ ಆಗಿದೆ.
ಯೆನೆಪೋಯ ವಿಶ್ವವಿದ್ಯಾಲಯವು ಭಾರತದ ಕರ್ನಾಟಕದ ಮಂಗಳೂರಿನ ದೇರಳಕಟ್ಟೆಯಲ್ಲಿರುವ ಪೂರ್ಣ ಪ್ರಮಾಣದ ಖಾಸಗಿ ಉನ್ನತ ಶಿಕ್ಷಣ ವಿಶ್ವವಿದ್ಯಾಲಯವಾಗಿದೆ.
Comments
Post a Comment