ಭಾಗ-45, ಆನಂದಪುರಂ ಇತಿಹಾಸ, ಬೆಳೆ ನಾಶ ಮಾಡುವ ಕಳ್ಳ ಎತ್ತು, ಜಾನುವಾರಿಗೆ ಬಂದಿಖಾನೆ ಆಗಿದ್ದ ದೊಡ್ಡಿ ಆನಂದಪುರಂನಲ್ಲಿ ನೂರಾರು ವರ್ಷ ಕಾರ್ಯನಿರ್ವಹಿಸಿತ್ತು, ಈ ದೊಡ್ಡಿ ನಿರ್ವಹಣೆಗೆ ದಿ ಕ್ಯಾಟಲ್ ಟ್ರೆಸ್ ಪಾಸ್ ಆಕ್ಟ್ 1871 ಜಾರಿ ಇತ್ತು, ಆನಂದಪುರಂನಲ್ಲಿದ್ದ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಪ್ರಯಾಣಿಕರ ತಂಗುದಾಣವನ್ನೆ ದೊಡ್ಡಿ (ಕೊಂಡವಾಡೆ ) ಆಗಿ ಪರಿವರ್ತಿಸಲಾಗಿತ್ತು.
#ಆನಂದಪುರಂ_ಇತಿಹಾಸ.
#ಆನಂದಪುರಂನ_ಕಳ್ಳ_ಎತ್ತು_ಜಾನುವಾರು_ಬಂದಿಖಾನೆ_ದೊಡ್ಡಿ
#ಕೊಂಡವಾಡಿ_ಹೆಸರಿನ_ದೊಡ್ಡಿಗೆ_1871ರಿಂದ_ದಿ_ಕ್ಯಾಟಲ್_ಟ್ರೆಸ್_ಪಾಸ್_ಆಕ್ಟ್_ಜಾರಿ_ಇದೆ.
#ಇದಕ್ಕೆ_ಪ್ರತ್ಯೇಕ_ಲೆಡ್ಜರ್_ದಂಡದ_ಹಣ_ಟ್ರೆಜರಿಗೆ_ಜಮ_ಮಾಡ_ಬೇಕಿತ್ತು,
#ದಿವಾನ್_ಸರ್_ಮಿಜಾ೯_ಇಸ್ಮಾಯಿಲ್_ಹೆಸರಿನ_ತಂಗುದಾಣವೇ_ಅನಂದಪುರಂ_ದೊಡ್ಡಿ
ಕಳ್ಳ ಎತ್ತು ಮತ್ತು ಜಾನುವಾರುಗಳು ರೈತರ ಪಸಲು ತಿಂದು ರೈತರಿಗೆ ನಷ್ಟ ಮಾಡುವುದನ್ನು ತಡೆಯಲಿಕ್ಕಾಗಿ ಬ್ರಿಟೀಷ್ ಸರ್ಕಾರ 1871 ರಲ್ಲಿ ತಂದ ದಿ ಕ್ಯಾಟಲ್ ಟ್ರಿಸ್ ಪಾಸ್ ಆಕ್ಟ್ (The Cattle Trespass Act) ಕನ್ನಡದಲ್ಲಿ ಕೊಂಡವಾಡಿ / ದೊಡ್ಡಿ ಅಥವ ಇಂಗ್ಲೀಷ್ ನಲ್ಲಿ ಹೇಳುವ pound (ಪೌಂಡ್) ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಪರ್ದಿಯಲ್ಲಿ ಅನೇಕ ಕಾನೂನು ಜಾರಿಗೆ ತಂದಿದ್ದರು.
ಇಂತಹ ಕಾನೂನು ಭಾರತ ಮಾತ್ರವಲ್ಲ ಯುರೋಪ್, ಅಮೇರಿಕಾ ಮತ್ತು ಆಫ್ರಿಕಾದಲ್ಲೂ ಇತ್ತು.
ಈ ಕಾನೂನು ಕಾಲಕಾಲಕ್ಕೆ ತಿದ್ದುಪಡಿ ಆಗುತ್ತಿತ್ತು 1966ರಲ್ಲಿ ಕರ್ನಾಟಕ ಕ್ಯಾಟಲ್ ಟ್ರೆಸ್ ಪಾಸ್ ಆಕ್ಟ್ ತಿದ್ದುಪಡಿಯೊಂದಿಗೆ ಜಾರಿ ಇತ್ತು.
ದೊಡ್ಡಿ ನಿರ್ವಹಿಸುವ (pound Keeper) ಪ್ರಾಣಿ ಯಾವುದು, ತಂದವರ ಹೆಸರು, ವಿಳಾಸ, ಪ್ರಾಣಿಯ ಮಾಲಿಕರು ಗೊತ್ತಿದ್ದರೆ ಅವರ ವಿಳಾಸ ನಮೂದಿಸಿಕೊಂಡು ಸದರಿ ಪ್ರಾಣಿಯ ಹುಲ್ಲು ನೀರಿನ ಸರಬರಾಜು ಬಾಬ್ತು ಹಣ ಪಡೆದು ರಶೀದಿ ನೀಡಬೇಕು.
7 ದಿನದ ಒಳಗೆ ಪ್ರಾಣಿಯ ಮಾಲಿಕ ಬಂದು ಬೆಳೆ ನಾಶದ ಪರಿಹಾರದ ಹಣ ರೈತನಿಗೆ ನೀಡಿ, ದೊಡ್ಡಿಯ ನಿರ್ವಹಣಾ ವೆಚ್ಚ ಪಾವತಿಸಿ ಬಿಡಿಸಿಕೊಂಡು ಹೋಗದಿದ್ದರೆ ಹರಾಜು ಮಾಡಿ ಪ್ರಾಣಿ ಮಾರಾಟ ಮಾಡಬಹುದಾಗಿತ್ತು.
ಈ ದೊಡ್ಡಿಯ ಬಾಬ್ತು ಹಣ ತಾಲ್ಲೂಕ್ ಕೇಂದ್ರದ ಟ್ರೆಜರಿಯಲ್ಲಿನ ನಿರ್ಧಿಷ್ಟ ಖಾತೆಗೆ ಜಮ ಮಾಡಬೇಕಿತ್ತು ಮತ್ತು ಪ್ರತಿ ತಿಂಗಳು ಈ ಲಿಖಿತ ಮಾಹಿತಿ ಮೇಲಿನವರಿಗೆ ಕಳಿಸಬೇಕಿತ್ತು.
ದೊಡ್ಡಿಗೆ ಸೇರಿಸಲು ಬಂದ ಪ್ರಾಣಿಗಳಿಗೆ ಗಾಯ ಇತ್ಯಾದಿ ಆಗಿದ್ದರೆ ದೊಡ್ಡಿಗೆ ಹಾಕುವ ಹಾಗಿಲ್ಲ, ದುರುದ್ದೇಶದಿಂದ ಸುಳ್ಳು ಕಾರಣದಿಂದ ಜಾನುವಾರು ದೊಡ್ಡಿಗೆ ಹಾಕಿದ್ದು ಗೊತ್ತಾದರೆ ಅಪರಾದ ಮಾಡಿದವನಿಗೆ ಶಿಕ್ಷೆ ಇತ್ತು.
ಆ ಕಾಲದಲ್ಲಿ ಆನಂದಪುರಂ ತಾಲ್ಲೂಕು ಕೇಂದ್ರವಾಗಿದ್ದರಿಂದ ಆನಂದಪುರಂನಲ್ಲಿ ದೊಡ್ಡಿ ಪ್ರಾರಂಬಿಸಲೇ ಬೇಕಿತ್ತು ಹಾಗಾಗಿ ಆ ಕಾಲದಲ್ಲಿ ಪ್ರಾರಂಭವಾಗಿದ್ದ ದೊಡ್ಡಿ ಇತ್ತೀಚೆಗೆ 1990 ರ ತನಕ ಅಸ್ತಿತ್ವದಲ್ಲಿತ್ತು ಆಗ ಗೌತಮಪುರ, ಹೊಸೂರು, ಬಟ್ಟೆಮಲ್ಲಪ್ಪ, ರಿಪ್ಪನ್ಪೇಟೆ ಮತ್ತು ಚೊರಡಿಗಳಿಂದಲೂ ಬೆಳೆ ನಾಶ ಮಾಡುತ್ತಿದ್ದ ತುಡುಗಿನ ಜಾನುವಾರುಗಳು ಆನಂದಪುರಂನ ದೊಡ್ಡಿಗೆ ಬರುತ್ತಿತ್ತು.
ಆ ಕಾಲದಲಿ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಹೆಸರಲ್ಲಿ ಆನಂದಪುರಂ ಸಂತೆ ಮಾರ್ಕೆಟ್ ತಿರುವಿನಲ್ಲಿದ್ದ ರಾಜರ ಕಾಲದ ಪ್ರಯಾಣಿಕರ ತಂಗುದಾಣವನ್ನೆ ದೊಡ್ಡಿಯಾಗಿ ಪರಿವರ್ತಿಸಿದ್ದರು ಇದರಲ್ಲಿ ಗರಿಷ್ಟ 30 ಜಾನುವಾರು ಇಡಬಹುದಿತ್ತು ಕೆಲ ಸಮಯ ಗರಿಷ್ಟ ನೂರು ಜಾನುವಾರು ಬಂದ ಉದಾಹರಣೆ ಇತ್ತು ಆ ಸಂದಭ೯ದಲ್ಲಿ ಗ್ರಾಮ ಪಂಚಾಯತ್ ಆವರಣದಲ್ಲಿ ಒಳಗೆ ಹಾಕಿ ಗೇಟಿಗೆ ಬೀಗ ಹಾಕುತ್ತಿದ್ದೆವೆಂದು ಆಗಿನ ವಿಲೇಜ್ ಪಂಚಾಯತ್ ನಲ್ಲಿ ನೌಕರರಾಗಿದ್ದ ಪ್ರತಾಪ್ ಸಿಂಗ್ ನೆನಪಿಸಿಕೊಳ್ಳುತ್ತಾರೆ.
ದಿನಕ್ಕೆ ಒ0ದು ದನಕ್ಕೆ ರೂ ಎರೆಡು ಮತ್ತು ಹುಲ್ಲು ನೀರಿನ ಸರಬರಾಜು ವೆಚ್ಚ ರೂ ಒಂದು ಇತ್ತಂತೆ, ಬಿಡಿಸಿಕೊಂಡು ಹೋಗದ ಜಾನುವಾರು ಹರಾಜಿನಲ್ಲಿ ಗರಿಷ್ಟ 25 ರೂಪಾಯಿಗೆ ಹೋಗಿದ್ದು ದಾಖಲೆ ಅಂತೆ.
ದೊಡ್ಡಿಗೆ ಹಾಕಿದ್ದ ಜಾನುವಾರಿಗೆ ಹುಲ್ಲು ಮತ್ತು ನೀರಿನ ನಿರ್ವಹಣೆ ಆ ಕಾಲದ ವಿಲೇಜ್ ಪಂಚಾಯತ್ ನೌಕರ ಕುಪ್ಪಣ್ಣ ನಿರ್ವಹಿಸುತ್ತಿದ್ದರಂತೆ, ಗೊಲ್ಲರ ಪರಮೇಶರ ಸಹೋದರ ಶೇಖರ ನಂತರ ವಾಟರ್ ಮನ್ ಸತ್ಯಣ್ಣ ನಂತರ ಪ್ರತಾಪ್ ಸಿಂಗ್ ದೊಡ್ಡಿ ನಿರ್ವಹಣೆ ಮಾಡುತ್ತಿದ್ದರು.
ಕೊಂಡವಾಡಿ ದೊಡ್ಡಿ ಈಗಿನ ಪಂಚಾಯತ್ ರಾಜ್ ಕಾಯ್ದೆಯಲ್ಲಿ ಕಡ್ಡಾಯ ಇದ್ದ ಹಾಗಿಲ್ಲ, ದೊಡ್ಡಿಗಳು ಇಲ್ಲ, ದಿ ಕ್ಯಾಟಲ್ ಟ್ರೆಸ್ ಪಾಸ್ ಆಕ್ಟ್ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ 2016ರಲ್ಲಿ ಸಿರ್ಸಿ ಪುರಸಭೆ 16 ಲಕ್ಷ ವೆಚ್ಚದಲ್ಲಿ ದೊಡ್ಡಿ ನಿಮಿ೯ಸಿದ ಸುದ್ದಿ ಇತ್ತೀಚಿಗನದ್ದು.
ಈ ರೀತಿ ರೈತರ ಬೆಳೆ ನಾಶ ಮಾಡುತ್ತಿದ್ದ ಕಳ್ಳ ಎತ್ತು ಮತ್ತು ಜಾನುವಾರ ಬಂದಿಖಾನೆ ಇತ್ತು ಎಂಬುದು ಇದಕ್ಕಾಗಿ ಕಾನೂನು ನಿಯಮ ಇತ್ತು ಅನ್ನುವುದು ಈಗಿನ ಕಾಲಕ್ಕೆ ಹಾಸ್ಯಸ್ಪದ ಅನ್ನಿಸಿದ್ದರೂ ಆ ಕಾಲಕ್ಕೆ ಇದು ಅನಿವಾರ್ಯ ಆಗಿತ್ತು ಮತ್ತು ಆನಂದಪುರಂನಲ್ಲಿ ಅಂತಹ ದೊಡ್ಡಿ ನೂರು ವರ್ಷಕ್ಕೂ ಹೆಚ್ಚು ಕಾಲ ನಿರ್ವಹಣೆ ಮಾಡಿತ್ತು ಎಂಬುದು ಇತಿಹಾಸ.
(ನಾಳೆ ಭಾಗ-46)
Comments
Post a Comment