ಭಾಗ -49, ಆನಂದಪುರಂ ಇತಿಹಾಸ, ಭಾಂಗ್ಲಾ ವಿಮೋಚನಕ್ಕಾಗಿ ಭಾ೦ಗ್ಲಾ ಪಾಕಿಸ್ಥಾನ ಯುದ್ಧದಲ್ಲಿ ಭಾಗವಹಿಸಿದ್ದ ಭಾರತೀಯ ಸೈನಿಕರಾಗಿ ಗುಂಡೇಟು ತಿಂದು ನಿವೃತ್ತರಾಗಿ ಆನಂದಪುರಂನಲ್ಲಿ ನೆಲೆಸಿ ಆನಂದಪುರಂನ ಮೊದಲ ಪತ್ರಿಕಾ ವಿತರಕರಾಗಿದ್ದ ಹುಚ್ಚಾಚಾರ್.
#ಆನಂದಪುರಂ_ಇತಿಹಾಸ.
#ಆನಂದಪುರಂನ_ಮೊದಲ_ಪತ್ರಿಕಾ_ವಿತರಕರು_ನಿವೃತ್ತ_ಸೈನಿಕರು.
#ಬಾಂಗ್ಲಾ_ಪಾಕಿಸ್ತಾನ_ಯುದ್ಧದಲ್ಲಿ_ಕಾಲಿಗೆ_ಗುಂಡೇಟು_ತಿಂದವರು.
#ಆನಂದಪುರಂನಲ್ಲಿ_ನೆಲೆಸಿ_ಮಕ್ಕಳನ್ನು_ವಿದ್ಯಾವಂತರಾಗಿಸಿ_ಆನಂದಪುರಂನಲ್ಲೇ_ಜೀವಾಂತ್ಯ_ಆದವರು.
1950ರ ದಶಕದಲ್ಲಿ ಆನಂದಪುರಂಗೆ ಬಂದವರು ನಿವೃತ್ತ ಯೋದ ಹುಚ್ಚಾಚಾರರು, ಬಂದವರಿಗೆ ನೆಲೆ ಕಾಣಲು ಸಹಕರಿಸಿದವರು ವೆಂಕಟಾಚಲಯ್ಯಂಗಾರರು ಅಗ್ರಹಾರದ ಅವರದ್ದೇ ಮನೆ ಬಾಡಿಗೆ ಪಡೆದು ಆನಂದಪುರಂನಲ್ಲಿ ಕುಟುಂಬದೊಂದಿಗೆ ನೆಲೆಸುತ್ತಾರೆ.
ಬಾಂಗ್ಲಾ ವಿಮೋಚನ ಯುದ್ದ ಬಾಂಗ್ಲಾ ಮತ್ತು ಪಾಕಿಸ್ತಾನದ ಜೊತೆ ನಡೆದಾಗ ಭಾರತೀಯ ಸೈನ್ಯ ಬಾಂಗ್ಲಾ ಪರವಹಿಸಿತ್ತು ಆಗ ಯುದ್ಧದಲ್ಲಿ ಕಾಲಿಗೆ ಗುಂಡು ಬಿದ್ದು ನಿವೃತ್ತರಾಗಿ ಬಂದವರು ಹುಚ್ಚಾಚಾರ್.
ಚಳಿ ಇರಲಿ ಮಳೆ ಇರಲಿ ಎಡ ಮುಂಗೈಯಲ್ಲಿ ಪತ್ರಿಕೆಗಳನ್ನು ಹಿಡಿದು ಕೊಂಡು ಗುಂಡು ಬಿದ್ದು ಊನ ಆಗಿದ್ದ ಕಾಲು ಎಳೆದುಕೊಂಡು ಶುಭ್ರ ಪಂಚೆ ಶರ್ಟ ಧರಿಸಿ ಯಾವತ್ತೂ ಶೇವ್ ಆಗಿರುವ ಮುಖದಲ್ಲಿ ಇಡೀ ಆನಂದಪುರಂಗೆ ಪತ್ರಿಕೆಯನ್ನು ನಡೆದುಕೊಂಡೇ ಹೋಗಿ ವಿತರಿಸುತ್ತಿದ್ದರು.
ಆಗ ಪತ್ರಿಕೆ ಓದುವವರೂ ಕಡಿಮೆ, ಹುಚ್ಚಾಚಾರರು ತಮ್ಮ ನಿವೃತ್ತಿ ವೇತನದಿಂದ ಜೀವನ ಮಾಡುತ್ತಿದ್ದರು, ಪತ್ರಿಕಾ ವಿತರಣೆಯ ಈ ಅತ್ಯಂತ ಕಡಿಮೆ ಆದಾಯದ ಕೆಲಸ ಸೈನಿಕ ಜೀವನ ಶೈಲಿ ಅಭ್ಯಾಸ ಆಗಿದ್ದ ಅವರಿಗೆ ನಿತ್ಯ ಒಂದು ರೀತಿಯ ತಾಲೀಮಿಗಾಗಿ ಆಯ್ಕೆ ಮಾಡಿಕೊಂಡಿರಬೇಕು ಮತ್ತು ವಹಿಸಿದ ಕೆಲಸ ಪೂರ್ಣ ಮಾಡಲೇ ಬೇಕೆಂಬ ಶಿಸ್ತಿನ ಜೀವನ ಅವರದ್ದಾಗಿತ್ತು.
ಪ್ರಜಾವಾಣಿ, ಸುದಾ ಪ್ರಜಾಮತ ಮತ್ತು ಮಯೂರ ಪತ್ರಿಕೆಗಳು 1965 ರಿಂದ ಕೆ.ಎನ್. ಗುರುಸ್ವಾಮಿ ಅವರು ಮೈಸೂರು ಪಬ್ಲಿಕೇಶನ್ ನಿಂದ ಪ್ರಾರಂಬಿಸುತ್ತಾರೆ, 1948 ರಿಂದ ಇವರೇ ಪ್ರಾರಂಬಿಸಿದ ಡೆಕ್ಕನ್ ಹೆರಾಲ್ಡ್ ಇಂಗ್ಲೀಷ್ ಪತ್ರಿಕೆ ಯಶಸ್ಸು ಅವರಿಗೆ ಪ್ರಜಾವಾಣಿ ಪ್ರಾರಂಬಿಸುವ ಹುಮ್ಮಸ್ಸು ತರುತ್ತದೆ.
ಶೇಕಡಾ 75% ಬಂಡವಾಳ ಅಬಕಾರಿ ಗುತ್ತಿಗೆದಾರ ಕೆ.ಎನ್.ಗುರುಸ್ವಾಮಿಯವರದ್ದು ಉಳಿದದ್ದು ಶಿವಮೊಗ್ಗದ ಮೂಲ ರಂಗಪ್ಪ, ಕೆ.ವೆಂಕಟಸ್ವಾಮಿ, ಎಂ.ಕೆ.ಸ್ವಾಮಿ ಮತ್ತು ದೊಂಡುಸಾ ಅವರದ್ದು.
ಶಿವಮೊಗ್ಗದ ಅಬಕಾರಿ ಗುತ್ತಿಗೆದಾರ ಮೂಲ ರಂಗಪ್ಪ (ಮೊನ್ನೆ ಇದೇ 2021ರಜೂನ್ ತಿಂಗಳಲ್ಲಿ ಶಿವಮೊಗ್ಗದಲ್ಲಿ ಮೃತರಾದರು) ಶಿವಮೊಗ್ಗಜಿಲ್ಲೆಯಾದ್ಯಂತ ಪ್ರಜಾವಾಣಿ ಪತ್ರಿಕೆ ಪ್ರಸಾರಕ್ಕೆ ಹೆಚ್ಚಿನ ಗಮನ ಹರಿಸಿರುತ್ತಾರೆ ಅವರಿಗೆ ಹುಚ್ಚಾಚಾರ್ ರ ಕಾರ್ಯಕ್ಷಮತೆ ಅರಿತು ಪ್ರಜಾವಾಣಿ ವಿತರಕರಾಗಿ ಮಾಡುತ್ತಾರೆ.
ಹುಚ್ಚಾಚಾರ್ ಮತ್ತು ಸುಲೋಚನಮ್ಮ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ದೊಡ್ಡವರು ನಾಗರಾಜ್ ಆಚಾರ್ ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆಯಲ್ಲಿ ಇಂಜಿನಿಯರ್ ಆಗಿದ್ದರು ಈಗ ನಿವೃತ್ತರಾಗಿ ಬೆಂಗಳೂರಲ್ಲಿ ನೆಲೆಸಿದ್ದಾರೆ.
ಒಂದು ಊರಿನ ಅಭಿವೃದ್ದಿಯಲ್ಲಿ ಮತ್ತು ಊರವರ ಜ್ಞಾನಾರ್ಜನೆಗೆ ಆ ಕಾಲದಲ್ಲಿ ಪತ್ರಿಕೆ ತುಂಬಾ ಮುಖ್ಯ ಸಾದನವಾಗಿತ್ತು ಅದನ್ನು ಆನಂದಪುರಂ ಜನರಿಗೆ ಸಕಾಲಕ್ಕೆ ಮುಟ್ಟಿಸುವ ಕೆಲಸ ಮಾಡಿದವರು ದೇಶದ ಗೌರವಾನ್ವಿತ ನಿವೃತ ಯೋದರಾದ ಹಾಗೂ ಬಾಂಗ್ಲಾ ಯುದ್ದದಲ್ಲಿ ಭಾಗವಹಿಸಿದ್ದ ದೀರರಾದ ಗೌರವಾನ್ವಿತ #ಹುಚ್ಚಾಚಾರ್.
Comments
Post a Comment