2021 ರ ಪತ್ರಿಕಾ ದಿನಾಚರಣೆ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತ೦ಗಡಿಯ ಜೈ ಕನ್ನಡಮ್ಮ ವಾರಪತ್ರಿಕೆಯಲ್ಲಿ ನನ್ನ ಸ್ಥಳಿಯ ಪತ್ರಿಕೆ ಒಡನಾಟದ ಅನುಭವದ ಲೇಖನ.
#ಪತ್ರಿಕಾ_ದಿನಾಚರಣೆಯ_ವಿಶೇಷಾ೦ಕ
ದಕ್ಷಿಣ ಕನ್ನಡದ ಬೆಳ್ತ೦ಗಡಿಯ ಜೈ ಕನ್ನಡಮ್ಮ ವಾರಪತ್ರಿಕೆ ದೇವಿ ಪ್ರಸಾದರ ಸಂಪಾದಕತ್ವದಲ್ಲಿ ಸುಮಾರು ಆರುವರೆ ಸಾವಿರ ಪ್ರತಿ ಪ್ರಸಾರ ಸಂಖ್ಯೆ ಹೊಂದಿರುವ ಪತ್ರಿಕೆ, ಇದರಲ್ಲಿ ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿಯವರು ಅಂಕಣ ಬರೆಯುತ್ತಾರೆ ಅವರೇ ಸಂಪಾದಕರಿಗೆ ನನ್ನಿಂದ ಒಂದು ಲೇಖನ ಬರೆಸಲು ಹೇಳಿದ್ದರಿಂದ ದೇವಿ ಪ್ರಸಾದರು ಪತ್ರಿಕಾ ದಿನಾಚಾರಣೆಗೊಂದು ಲೇಖನ ಬರೆಯಲು ಹೇಳಿದ್ದರು.
ನಾನು ನನ್ನ ಜೀವನದಲ್ಲಿ ಪತ್ರಿಕೆಗಳೊಂದಿಗಿನ ಸಂಬಂದಗಳ ಬಗ್ಗೆಯೇ ಅನುಭವ ಬರೆಯಲು ಅನುಮತಿಸಿದರು ಹಾಗಾಗಿ ಸಾಗರದಲ್ಲಿನ ಕಾಗೋಡು ಭೂಮಿ ಹೋರಾಟದ ನೇತಾರ ಹೆಚ್.ಗಣಪತಿಯಪ್ಪರ ತೀನಾ ಶ್ರೀನಿವಾಸ್ ಸಂಪಾದಕತ್ವದ #ನ್ಯಾಯದ_ತಕ್ಕಡಿ ದಿನಪತ್ರಿಕೆ, ತೀರ್ಥಹಳ್ಳಿಯ ಎ.ಎಸ್.ಗಣಪತಿಯವರ #ಛಲಗಾರ ದಿನಪತ್ರಿಕೆ ಮತ್ತು ಶಿವಮೊಗ್ಗದ ಶೃಂಗೇಶ್ ರ #ಜನ_ಹೋರಾಟ ದಿನಪತ್ರಿಕೆ ಜೊತೆಗಿನ ನೆನಪಿನ ಲೇಖನ ದೂರದ ಬೆಳ್ತಂಗಡಿಯ #ಜೈ_ಕನ್ನಡಮ್ಮ ದಲ್ಲಿ ಪ್ರಕಟ ಮಾಡಿದ್ದಾರೆ.
Comments
Post a Comment