ಅರಣ್ಯದಲ್ಲಿ ನಿಮಿ೯ಸಿರುವ ಇರುವಕ್ಕಿ ಕೃಷಿ ವಿದ್ಯಾಲಯ ಅನೇಕ ಪ್ರಥಮಗಳ ದಾಖಲೆಯೊಂದಿಗೆ ದಿನಾಂಕ 24- ಜುಲೈ-2021 ಶನಿವಾರ ಮುಖ್ಯಮಂತ್ರಿ ಯಡೂರಪ್ಪರಿಂದ ಉದ್ಘಾಟನೆ
#ಶಂಕುಸ್ಥಾಪನೆ_ಆಗುವಾಗ_ಯಡೂರಪ್ಪ_ಸಂಸದರು.
#ಇರುವಕ್ಕಿ
ಇರುವಕ್ಕಿ ನಮ್ಮದೇ ಯಡೇಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮ ಇದು ಒಂದು ಕಾಲದಲ್ಲಿ ಮಡಿಕೆ ತಯಾರಿಸುತ್ತಿದ್ದ ಕುಂಬಾರ ಜನಾಂಗದವರು ವಲಸೆ ಬಂದು ನೆಲೆ ನಿಂತ ದಟ್ಟ ಅರಣ್ಯ ಪ್ರದೇಶ.
#ವಿನೋಬಾ_ಬಾವೆ_ಭೂದಾನ_ಚಳವಳಿಯಲ್ಲಿ_ಭಾಗವಹಿಸಿ_ಭೂದಾನ_ಮಾಡಿದ_ಇರುವಕ್ಕಿ_ಪುಟ್ಟಶೆಟ್ಟರು
ಇಲ್ಲಿನ ಪುಟ್ಟ ಶೆಟ್ಟರೊಬ್ಬರೆ ಆ ಕಾಲದ ಕುಂಬಾರ ಸಮೂದಾಯದ ಖಾತೆ ಜಮೀನುದಾರರು ಇವರು ಆಗಿನ ವಿದ್ಯಾ ಮಂತ್ರಿ ಆಗಿದ್ದ ಬದರಿನಾರಾಯಣ ಆಯ್ಯಂಗಾರ ತಂದೆ ಜಮೀನ್ದಾರ್, ಇನಾಂದಾರ್ ಮತ್ತು ಕೊಡುಗೈ ದಾನಿ ಆಗಿದ್ದ ರಾಮಕೃಷ್ಣ ಅಯ್ಯಂಗಾರ್ ಮತ್ತು ಬದರಿನಾರಾಯಣ ಅಯ್ಯಂಗಾರರ ಅಣ್ಣ ವೆಂಕಟಾಚಲ ಆಯ್ಯಂಗಾರರ ಆಪ್ತರು ಅವರೆಲ್ಲರ ಸಲಹೆ ಮತ್ತು ಸಹಕಾರದಿಂದ ಅಡಿಕೆ ಕೃಷಿ ಮಾಡುತ್ತಾರೆ.
ವಿನೋಬಾ ಭಾವೆಯವರು ಭೂದಾನ ಚಳವಳಿಗೆ ಆನಂದಪುರಂಗೆ ಬಂದಾಗ ತಮ್ಮ ಭತ್ತ ಬೆಳೆಯುವ 5 ಎಕರೆ ತರಿ ಜಮೀನು ದಾನ ಮಾಡಿದ ಮಹಾನುಭವರು ಅವರು ಆ ಕಾಲದಲ್ಲಿ ಅತ್ಯಂತ ಹಿಂದುಳಿದ ಕುಂಬಾರ ಜನಾಂಗದ ಪುಟ್ಟ ಶೆಟ್ಟರ ಭೂದಾನವನ್ನು ಅವತ್ತಿನ ಸಭೆಯಲ್ಲಿ ಸರ್ದಾರ್ ಎಣ್ಣೆಕೊಪ್ಪದ ಮಲ್ಲಿಕಾರ್ಜುನ ಗೌಡರು ವಿನೋಬಾ ಭಾವೆ ಎದರು ಹೊಗಳಿದ್ದರಂತೆ, ಇವರ ಮಗ ಕುಂಬಾರ್ ಬಸಪ್ಪ ಕೂಡ ಪ್ರಗತಿ ಪರ ಕೃಷಿಕರು ಮತ್ತು ಯಡೇಹಳ್ಳಿ ಮಂಡಲ್ ಪಂಚಾಯ್ತಿ ಸದಸ್ಯರಾಗಿದ್ದರು.
ಈ ಗ್ರಾಮದಲ್ಲಿ ಸುಮಾರು ಸಾವಿರ ಎಕರೆ ದಟ್ಟ ಅರಣ್ಯ ಪ್ರದೇಶ ಕಂದಾಯ ಭೂಮಿ ಆಗಿಯೇ ಉಳಿದಿದ್ದು ಆಶ್ಚಯ೯ವೇ ಇದನ್ನು ಮಂಜೂರಾತಿ ಕೇಳಿದ ನೂರಾರು ಸಂಸ್ಥೆಗಳು ಮಠಗಳಿಗೆ ಮಂಜೂರಾಗದೇ ಉಳಿಯಲು ಕಾರಣ ಇಲ್ಲಿದ್ದ ದಟ್ಟ ಅರಣ್ಯವೇ ಆಗಿತ್ತು.
#ಇರುವಕ್ಕಿ_ಜಾಗ_ಗುರುತಿಸಲು_ಕಾಗೋಡು_ತಿಮ್ಮಪ್ಪ_ಮತ್ತು_ಮಂಚಾಲೆ_ವಿಘ್ನೇಶ್_ಮುಖ್ಯಕಾರಣ
ಇಲ್ಲಿ ಕೃಷಿ ವಿಶ್ವವಿದ್ಯಾಲಯ ಮಾಡಲು ಜಾಗ ಗುರುತಿಸಿದ ಸ್ಥಳಿಯ ಶಾಸಕರು ಮಂತ್ರಿಗಳಾಗಿದ್ದ ಕಾಗೋಡು ತಿಮ್ಮಪ್ಪ ಮತ್ತು ಇದಕ್ಕೆ ಪೂರಕವಾಗಿ ಶ್ರಮಿಸಿದ ಕೃಷಿ ವಿ.ವಿಯಲ್ಲಿ ವಿಜ್ಞಾನಿಗಳಾಗಿದ್ದ ಸಾಗರ ತಾಲ್ಲೂಕಿನ ಮಂಚಾಲೆ ವಿಘ್ನೇಶ್ ಮರೆಯುವಂತಿಲ್ಲ.
#ತಂದೆ_ಬೈರೇಗೌಡರು_ಕೃಷಿಮಂತ್ರಿ_ಆಗಿ_ಇಲ್ಲಿಗೆ_ಬಂದು_ಕೃಷಿ_ಇಲಾಖೆ_ಭ್ರಷ್ಟಅಧಿಕಾರಿಗಳಿಗೆ_ಜೈಲಿಗೆ_ಕಳಿಸಿದ್ದರು
#ಮಗ_ಕೃಷ್ಣ_ಬೈರೇಗೌಡರು_ಕೃಷಿ_ಮಂತ್ರಿ_ಆಗಿ_ಶಂಕುಸ್ಥಾಪನೆ. ಸ್ಥಾಪನೆ ಆಗಿನ ಮುಖ್ಯಮಂತ್ರಿ ಆಗಿದ್ದ ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ಕೃಷಿ ಮಂತ್ರಿ ಕೃಷ್ಣ ಬೈರೇಗೌಡರು
ನೆರವೇರಿಸಿದ್ದರು, 1995-96 ರಲ್ಲಿ ಇವರ ತಂದೆ ಬೈರೇಗೌಡರು ಕೃಷಿ ಮಂತ್ರಿ ಆಗಿದ್ದಾಗ ಆನಂದಪುರಂ ಭಾಗದಲ್ಲಿ ಭೂ ಸಾರ ಸಂರಕ್ಷಣಾ ಇಲಾಖೆಯಲ್ಲಿ ನಡೆದ ಕೊಟ್ಯಾಂತರ ರೂಪಾಯಿ ಹಗರಣ ಸ್ವತಃ ಸ್ಥಳ ಪರಿಶೀಲಿಸಿ 7 ಜನ ಕೃಷಿ ಅಧಿಕಾರಿಗಳನ್ನು ಜೈಲಿಗೆ ಕಳಿಸಿ ಭೂಸಾರ ಸಂರಕ್ಷಣಾ ಇಲಾಖೆ ಕೃಷಿ ಇಲಾಖೆಯಲ್ಲಿ ವಿಲೀನಗೊಳಿಸಿದ್ದರು ಆಗ ಈ ಹಗರಣ ಬಯಲಿಗೆಳೆದ ನಾನು ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ.
ಸುಮಾರು 777 ಎಕರೆ ಕಂದಾಯ ಭೂಮಿ ಈ ಪ್ರತಿಷ್ಠಿತ ಕೃಷಿ ವಿಶ್ವ ವಿದ್ಯಾಲಯದ ಸುಪರ್ದಿಗೆ ಯಾವುದೇ ಚಳವಳಿ, ಪ್ರತಿರೋದ ಇಲ್ಲದೆ ಬಂದ ಬಗ್ಗೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಆಶ್ಚಯ೯ ವ್ಯಕ್ತಪಡಿಸಿದ್ದರು.
#ಶ೦ಕುಸ್ಥಾಪನೆಗೆ_ಕಾರಣರಾದ_ಕುಲಪತಿ_ಚಿಂಡಿವಾಸುದೇವಪ್ಪ_ಈಸೂರಿನವರು
ಶಂಕು ಸ್ಥಾಪನೆಗೆ ಹೆಚ್ಚು ಶ್ರಮ ಹಾಕಿದವರು ಆಗಿನ ವಿ.ವಿ. ಕುಲಪತಿ ಚಿಂಡಿವಾಸುದೇವಪ್ಪ ಅವರು ಮೂಲತಃ ಶಿಕಾರಿಪುರ ತಾಲ್ಲೂಕಿನ ಈಸೂರಿನವರು ಅವರಿಗೆ ತಮ್ಮ ತವರು ಜಿಲ್ಲೆಯಲ್ಲೆ ವಿಶ್ವ ವಿದ್ಯಾಲಯ ಆಗಲೇ ಬೇಕೆಂಬ ಆಸೆ ಕೂಡ.
ಕಳೆದ ವರ್ಷವೇ 60 ವಿದ್ಯಾರ್ಥಿಗಳ ನೊಂದಾವಣೆ ಆಗಿತ್ತು ಆದರೆ ಕೋವಿಡ್- 19 ಕಾರಣದಿಂದ ಈ ಕ್ಯಾಂಪಸ್ ತಡವಾಗಿ ಉದ್ಫಾಟನೆ ಅಗುತ್ತಿದೆ.
ಈ ಕೃಷಿ ವಿಶ್ವವಿದ್ಯಾಲಯ ದೇಶದ ಮೊದಲ ಅರಣ್ಯದ ನಡುವೆ ತಲೆ ಎತ್ತಿರುವ ವಿದ್ಯಾಲಯ ಎಂಬ ಮಾನ್ಯತೆ ಪಡೆದಿದೆ.
#ಮೊದಲ_ಪಾರಂ_ಇನ್ಚಾರ್ಜ್_ಡಾಕ್ಟರ್_ಗಣಪತಿ_ಸ್ಥಳಿಯ_ಪ್ರತಿಭಾವಂತರು
ಈ ಕುಗ್ರಾಮದ ಅರಣ್ಯದ ನಡುವಿನ ಕೃಷಿ ವಿಶ್ವವಿದ್ಯಾಲಯಕ್ಕೆ ಮೊದಲ ಪಾರಂ ಇನ್ ಚಾರ್ಜ್ ಆಗಿ ಬಂದವರು ಡಾ. ಗಣಪತಿ, ಇವರನ್ನು ಕರೆತಂದವರು ಆಗಿನ ಕುಲಪತಿ ವಾಸುದೇವರು, ವಿಶ್ವವಿದ್ಯಾಲಯ ಕಟ್ಟುವ ಪ್ರಾರಂಭದ ಸವಾಲುಗಳು ನೂರಾರು ಅರಣ್ಯ ಉಳಿಸಿಕೊಂಡೇ ಇವರು ಇಲ್ಲಿ ಅನೇಕ ಪ್ರಯೋಗ ಮಾಡಿದ್ದಾರೆ, ಈ ಭಾಗದಲ್ಲೇ ಅವರ ಸಂಬಂದಿಕರು ಹೆಚ್ಚು ಇರುವುದರಿಂದ ಸಮೀಪದಲ್ಲೇ ಕೃಷಿ ಜಮೀನು ಖರೀದಿಸಿದ್ದಾರೆ ಮತ್ತು ನಿವೃತ್ತಿ ನಂತರ ಇಲ್ಲೇ ನೆಲೆಸುವ ತೀರ್ಮಾನ ಕೂಡ.
ಡಾ.ಗಣಪತಿ ರಿಪ್ಪನ್ ಪೇಟೆ ಸಮೀಪದವರು, ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದ ಇವರು ಆಗ ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಶಿವಮೊಗ್ಗದಲ್ಲಿ ಪ್ರಾರಂಬಿಸಿದ್ದ ಕೃಷಿ ಕಾಲೇಜಿನಲ್ಲಿ ಮೊದಲ ಬ್ಯಾಚಿನ ವಿಧ್ಯಾರ್ಥಿ ಆಗಿ ಬಂಗಾರದ ಪದಕ ಪಡೆದ ಮೆರಿಟ್ ವಿದ್ಯಾರ್ಥಿ ಈಗ ಇಲ್ಲಿ ಪಾರಂ ಇನ್ ಚಾರ್ಜ ಹುದ್ದೆಯ ವಿಜ್ಞಾನಿ ಆಗಿದ್ದಾರೆ.
#ಭೂಗೋಳಿಕ_ಹಿನ್ನೆಲೆ
ಯಡೇಹಳ್ಳಿಯ ನನ್ನ ಮನೆಯಿಂದ ಎರೆಡು ಕಿ.ಮಿ. ನಿಂದ ಈ ವಿದ್ಯಾಲಯದ ಸರಹದ್ದು ಪ್ರಾರಂಭ ಆಗುತ್ತದೆ ಇಲ್ಲಿ ಕೆಳದಿ ರಾಜರ ಕಾಲದ ಜಂಬಿಟ್ಟಿಗೆ ಕಲ್ಲಿನಿಂದ ನಿರ್ಮಿಸಿದ ದೊಡ್ಡ ಕೊಳ ಇದೆ ಎದುರಿನಲ್ಲಿ ಭಂಗಿ ಬೂತಪ್ಪ ಎಂಬ ಪುರಾತನ ಕಾಲದ ನಂಬಿಕೆಯ ದೈವದ ಗುಡಿ ಇದೆ ಇಲ್ಲಿನ ವಿಶೇಷ ಭಂಗಿ ಬೂತಪ್ಪನಿಗೆ ಸಿಗರೇಟು, ಬೀಡಿ, ಭಂಗಿಯನ್ನು ದಾರಿ ಹೋಕರು ಸಮರ್ಪಿಸುತ್ತಿದ್ದರಂತೆ.
ಅಡಿಕೆ ಬೆಳೆ ಮತ್ತು ಅದರ ರೋಗಗಳು, ಶುಂಠಿ ಬೆಳೆ ಮತ್ತು ಅದರ ಸಂಸ್ಕರಣದ ಕೇಂದ್ರವಾಗಿರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಔಷದಿ ಕಂಡು ಹಿಡಿಯದ ಹಂದಿಗೋಡು ಕಾಯಿಲೆ, ವರ್ಷ ವರ್ಷ ವಿಪರೀತವಾಗಿ ಕಾಡುವ ಮಂಗನ ಕಾಯಿಲೆಯೂ ಇಲ್ಲಿದೆ.
ಒಂದು ಕಾಲದಲ್ಲಿ ತಾಲ್ಲೂಕು ಕೇಂದ್ರವಾಗಿದ್ದ, ತಾಲ್ಲೂಕಿನ ಪ್ರಥಮ ನ್ಯಾಯಾಲಯ ಪ್ರಾರಂಭ ಆಗಿದ್ದ ಆನಂದಪುರಂಗೆ ನಾಮಕರಣ ಮಾಡಿದ್ದು ಕೆಳದಿ ಸಂಸ್ಥಾನದ ದೀರ್ಘ ರಾಜ್ಯಭಾರ ಮಾಡಿ ರಾಜ್ಯ ವಿಸ್ತರಿಸಿದ ಮತ್ತು ಸಾಗರ ಪಟ್ಟಣ (ಸದಾಶಿವ ಸಾಗರ) ನಿರ್ಮಿಸಿದ ರಾಜ ವೆಂಕಟಪ್ಪ ನಾಯಕರು ಇವರು ಮೂರನೇ ವಿವಾಹ ಆಗಿದ್ದು ಆನಂದಪುರಂನ ರಂಗೋಲಿ ಪ್ರವೀಣೆ ಬೆಸ್ತರ ಕನ್ಯೆ ಚಂಪಕಾಳನ್ನು, ಆನಂದಪುರಂ ಕೋಟಿಯ ಅರಮನೆಯಲ್ಲಿ ಹೆಚ್ಚು ಕಾಲ ಕಳೆದದ್ದು ಮತ್ತು ಜಾತಿ ಕಾರಣದಿಂದ ಪಟ್ಟದ ರಾಣಿ ಭದ್ರಮ್ಮಾಜಿ ಆಸಹನೆಗೆ ಕಾರಣವಾಯಿತು ಇದರಿಂದಲೇ ಅವರು ಮರಣ ಹೊಂದಿದ್ದು,ರಾಜ್ಯದಲ್ಲಿ ತಾನು ಮಾಡದೇ ಇದ್ದ ತಪ್ಪಿಗೆ ತನ್ನನ್ನೆ ಅಪರಾದಿ ಎಂದು ಬಿಂಬಿಸಿದ್ದು ಮತ್ತು ಇದರಿಂದ ರಾಜ ವೆಂಕಟಪ್ಪ ನಾಯಕರಿಗೆ ಕೆಟ್ಟ ಹೆಸರು ಬಂದಿತೆಂದು ಚಂಪಕ ಹಾಲಿನೊಂದಿಗೆ ವಜ್ರದ ಪುಡಿ ಬೆರೆಸಿ ಜೀವ ತ್ಯಾಗ ಮಾಡುತ್ತಾಳೆ ಅವಳ ಸ್ಮರಣೆಗಾಗಿ ಆನಂದಪುರಂನಿಂದ ಶಿಕಾರಿಪುರ ರಸ್ತೆಯಲ್ಲಿ (2 km) ಮಲಂದೂರು ಎಂಬಲ್ಲಿ #ಚಂಪಕ_ಸರಸ್ಸು ಎಂಬ ಸುಂದರ ಕೊಳ, ಕೊಳದ ಮಧ್ಯೆ ಗುಡಿ ಅಲ್ಲಿಗೆ ಹೋಗಲು ಸುಂದರವಾದ ಸಂಕ, ಜೋಡಿ ಕಲ್ಲಿನ ಆನೆ ಎಲ್ಲಾ ಅಲ್ಲಿದೆ.
ಆನಂದಪುರಂನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206 ಮತ್ತು ಇಲ್ಲಿ ಇರುವ ರೈಲು ಮಾರ್ಗ ಮತ್ತು ರೈಲು ನಿಲ್ದಾಣಗಳು ಮುಂದಿನ ದಿನದಲ್ಲಿ #ಇರುವಕ್ಕಿ_ಕೃಷಿ_ವಿದ್ಯಾಲಯಕ್ಕೆ ಪೂರಕವಾಗಲಿದೆ.
ಬೆಂಗಳೂರಿನಿಂದಲೇ ವರ್ಚುಯಲ್ ಸಮಾರಂಭದಲ್ಲಿ ಉದ್ಘಾಟನೆ ಮಾಡುತ್ತಿರುವ ನಮ್ಮ ಜಿಲ್ಲೆಯವರೇ ಆದ ಮುಖ್ಯಮಂತ್ರಿ ಯಡೂರಪ್ಪರೂ ಈ ಕೃಷಿ ವಿಶ್ವವಿದ್ಯಾಲಯ ಇಲ್ಲಿಗೆ ಬರಲು ಮತ್ತು ಪ್ರಾರಂಬಿಸಲು ಕಾರಣಕರ್ತರು, ಅವರೇ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಕಾಮಗಾರಿ ಮುಗಿಸಿ ರೈಲು ಓಡಾಟಕ್ಕೆ ಕಾರಣ ಆದವರು, ಮುಂದಿನ ದಿನದಲ್ಲಿ ಪ್ರಾರಂಭ ಆಗಲಿರುವ ವಿಮಾನ ನಿಲ್ದಾಣ ಕೂಡ ಇಲ್ಲಿಗೆ ದೇಶ ವಿದೇಶದಿಂದ ಬರುವ ಸಂಶೋದಕರಿಗೆ ಸರಾಗ ಸಂಪರ್ಕಕ್ಕೆ ಕಾರಣ ಆಗಲಿದೆ.
ನಾನು ಇರುವಕ್ಕಿ ಕೃಷಿ ವಿಶ್ವವಿದ್ಯಾಲಯದ ಊರಿನವನು, ಇಲ್ಲಿನ ಯಡೇಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ, ಉಪಾದ್ಯಕ್ಷನಾಗಿದ್ದೆ, ಈ ಭಾಗದ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ ಎನ್ನುವ ನೆನಪಿನ ಜೊತೆ ಕೃಷಿ ವಿಶ್ವವಿದ್ಯಾಲಯ ಉದ್ಘಾಟನಾ ಸಮಾರಂಭಕ್ಕೆ ಶುಭ ಹಾರೈಸುತ್ತೇನೆ ಮತ್ತು ಕೃಷಿ ವಿಶ್ವವಿದ್ಯಾಲಯ ಇಲ್ಲಿಗೆ ಬರಲು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣರಾದ ಎಲ್ಲರಿಗೂ ಅಭಿನಂದಿಸುತ್ತೇನೆ.
ಕೆ.ಅರುಣ್ ಪ್ರಸಾದ್
ಮಾಜಿ ಜಿ.ಪಂ.ಸದಸ್ಯ
ಯಡೇಹಳ್ಳಿ - ಆನಂದಪುರ೦ .
Comments
Post a Comment