ಭಾಗ - 50, ಆನಂದಪುರಂ ಇತಿಹಾಸ, ಸುಭಾಷ್ ಯುವಕ ಸಂಘದ ಸುಭಾಷ್ ಕಬ್ಬಡಿ ತಂಡ, ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ ಆನಂದಪುರಂನ ಸ್ಟಾರ್ ಕಬ್ಬಡಿ ಆಟಗಾರರು.
#ಭಾಗ_50
#ಆನಂದಪುರಂ_ಇತಿಹಾಸ.
#ಆನಂದಪುರಂ_ಸುಭಾಷ್_ಯುವಕ_ಸಂಘ.
#ರಾಜ್ಯಮಟ್ಟದಲ್ಲಿ_ಹೆಸರು_ಮಾಡಿದ_ಕಬ್ಬಡಿ_ತಂಡ
#ಯುವಜನೋತ್ಸವದಲ್ಲಿ_ಸತತ_ಗೆಲುವಿನ_ದಾಖಲೆ.
#ನಾಮಕರಣ_ಮಾಡಿದವರು_SRK.
#ಆಗ_ಸಾಗರದ_ಗಣಪತಿಶೆಟ್ಟರು_ಜಾಲಿ_ರುದ್ರಪ್ಪಗೌಡ_ಸಾಗರದ_ಪ್ರಖ್ಯಾತ_ಕಬ್ಬಡಿ_ಆಟಗಾರರು
ಆನಂದಪುರಂನ ಪ್ರೌಡ ಶಾಲೆಯಲಿ ಆಗಿನ ಪ್ರಖ್ಯಾತ ದೈಹಿಕ ಶಿಕ್ಷಕರು, ಶಿಸ್ತಿನ ಸಿಪಾಯಿ ಮತ್ತು ಆನಂದಪುರಂನ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದ SRK ಮಾಸ್ತರು ಶಾಲೆಯಲ್ಲಿ ಕಬ್ಬಡಿ ಮತ್ತು ವಾಲೀ ಬಾಲ್ ತಂಡಗಳನ್ನು ಕಟ್ಟಿ ತರಬೇತಿ ನೀಡಿ ತಯಾರು ಮಾಡುತ್ತಾರೆ.
ಅದರಲ್ಲಿ ಕಬ್ಬಡಿ ತಂಡ ಯಶಸ್ವಿ ಆಗುತ್ತದೆ ಆದರೆ 10 ನೇ ತರಗತಿ ನಂತರವೂ ಈ ಕಬ್ಬಡಿ ತಂಡ ಕೈ ತಪ್ಪದಂತೆ ಮುಂದುವರಿಯ ಬೇಕೆಂಬ ಇಚ್ಚೆ SRK ಅವರದ್ದು ಆದ್ದರಿಂದ ಅವರು ಆಗಿನ ಗ್ರಾಮ ಸೇವಕರಾಗಿದ್ದ (ಕಲಾವಿದರೂ ಕೂಡ) ರುದ್ರಪ್ಪ ಸೇರಿ ಯುವಕ ಸಂಘ ಸ್ಥಾಪಿಸುತ್ತಾರೆ ಆ ಯುವಕ ಸಂಘಕ್ಕೆ ಸುಭಾಷ್ ಚಂದ್ರ ಬೋಸ್ ರ ಸ್ಮರಣೆಗಾಗಿ #ಸುಬಾಷ್_ಯುವಕ_ಸಂಘ ಎಂದು ನಾಮಕರಣ ಮಾಡಿ ನೊಂದಾಯಿಸುತ್ತಾರೆ.
ಆಗಿನ ಯುವ ಮುಂದಾಳುಗಳಾಗಿದ್ದ ಆನಂದರಾಜ್, ನರಸಿಂಹಮೂರ್ತಿ, ಕೃಷ್ಣಪ್ರಸಾದ್ ಮುಂತಾದವರು ಮುಂದಾಳತ್ವ ವಹಿಸುತ್ತಾರೆ.
ಕೆಲ ಕಾಲ ನಲ್ಲಪ್ಪನವರ ಕಟ್ಟಡದಲ್ಲಿನ ಮಹಡಿ ಮೇಲಿನ ಕೋಣೆ ಒಂದು ಸುಭಾಷ್ ಯುವಕ ಸಂಘದ ಕಾರ್ಯಾಲಯ ಆಗಿತ್ತು ಆಗ ಯಡೇಹಳ್ಳಿಯ ಎಂ.ಎಸ್. ದೇವರಾಜ್ ಅಧ್ಯಕ್ಷರು, ಕೆ.ವಿ.ಸುರೇಶ್ (ರಂಗನಾಥ ಭಟ್ಟರ ಸಹೋದರ) ಕಾರ್ಯದರ್ಶಿ ಆಗಿರುತ್ತಾರೆ ನಂತರದಲ್ಲಿ ಕೆ.ವಿ.ಸುರೇಶ್ ಅಧ್ಯಕ್ಷರು, ಕಾಯ೯ದರ್ಶಿ ಆಗಿ ಕೆ.ನಾಗರಾಜ್ ಯಡೇಹಳ್ಳಿ, ಖಜಾಂಚಿ ಆಗಿ ಕೆ.ಟಿ.ತಿಮ್ಮೇಶ್ ಕಣ್ಣೂರು ಕಾಯ೯ನಿರ್ವಹಿಸುತ್ತಾರೆ.
ಕಾಲಾಂತರದಲ್ಲಿ ಸುಭಾಷ್ ಯುವಕವೇ ಡಾ.ರಾಜ್ ಕನ್ನಡ ಯುವಕ ಸಂಘವಾಗಿ ನಂತರ ಕನ್ನಡ ಸಂಘವಾಗಿ ಪ್ರಸಿದ್ದಿಯಾಯಿತು.
ಆಗಿನ ಮುಖ್ಯಮಂತ್ರಿ ದೇವರಾಜ್ ಅರಸರು ಆನಂದಪುರಂನ ಬದರಿನಾರಾಯಣ ಅಯ್ಯಂಗಾರರ ಬೇಟಿಗೆ ಬಂದಾಗ ಈ ಯುವಕ ಸಂಘದ ಗಣಪತಿ ಇಟ್ಟಿದ್ದ ಪೆಂಡಾಲ್ ಸಂದರ್ಶಿಸಿ ಆ ಕಾಲದಲ್ಲಿ ರೂ 25 ಸಾವಿರ ಹಣ ಸರ್ಕಾರದಿಂದ ಯುವಕ ಸಂಘದ ಕಟ್ಟಡಕ್ಕೆ ಮoಜೂರು ಮಾಡುತ್ತಾರೆ.
ಸುಭಾಷ್ ಯುವಕ ಸಂಘದ ಕಬ್ಬಡಿ ಟೀಂ ನ ಸರ್ವಕಾಲಿಕ ಕ್ಯಾಪ್ಟನ್ ಆಗಿ ಕ್ಲೈಮೆಂಟ್ ರೆಬೆಲೋ(ಈಗ ಯಡೇಹಳ್ಳಿಯಲ್ಲಿ ನೆಲೆಸಿದ್ದಾರೆ) ಮುನ್ನಡೆಸುತ್ತಾರೆ ಈ ಕಬ್ಬಡಿ ಟೀಂ ನಲ್ಲಿ ಕುಸ್ತಿ ಪೈಲ್ವಾನರಾಗಿದ್ದ ಗೊಲ್ಲರ ಕೃಷ್ಣಮೂರ್ತಿ, ಸೀತಾರಾಂ (ಭದ್ರಾವತಿ VSIL),ಪ್ರಹ್ಲಾದ್ (ಈಗಿನ ಶುಂಠಿ ವ್ಯಾಪಾರಿಗಳು), ಆನಂದ್ (ನಲ್ಲಪ್ಪರ ಪುತ್ರ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ),ನಾಗರಾಜ್ (ಷಣ್ಮುಖ ಶೆಟ್ಟರ ಸಹೋದರ, ಈಗ ನಿವೃತ್ತ ಹೆಲ್ತ್ ಇನ್ಸ್ಪೆಕ್ಟರ್), ಸುಬ್ರಮಣ್ಯ (ಸಾಗರದ ವಿಠಲ ಶೆಟ್ಟರ ಬಸ್ಸಿನ ಡ್ರೈವರ್ ಆಗಿದ್ದರು), ಗೊಲ್ಲರ ರಮೇಶ್ (KPC ಚಕ್ರಾ ನಗರ), ಸುಬ್ರಾಯ (ಶಿವಮೊಗ್ಗದಲ್ಲಿ ನೆಲೆಸಿದ್ದಾರೆ), ಸುರೇಶ್ (ಬಸ್ ಏಜೆಂಟರಾಗಿದ್ದರು ಈಗ ಹಳೇ ಪೋಲಿಸ್ ಠಾಣೆ ಎದರು ಮನೆ) ಆಗ ಈ ಟೀಂ ನ ಸ್ಟಾರ್ ಆಟಗಾರರು.
ದೋಭಿ ಸೋಮಣ್ಣ (ಆನಂದಪುರಂನ ವಕೀಲರಾದ ಕಿರಣ್ ತಂದೆ) ಈ ಯುವಕರಿಗೆ ಮಾರ್ಗದರ್ಶಕರು ಮತ್ತು ತರಬೇತಿದಾರರಾಗಿ ಪ್ರೋತ್ಸಾಹ ನೀಡುತ್ತಿದ್ದರು.
ಆಗ ಕಬಡ್ಡಿ ಪಂದ್ಯಾವಳಿಗಳಿಗೆ ವೀಕ್ಷಿಸಲು ಸಾವಿರಾರು ಜನ ಸೇರುತ್ತಿದ್ದರು, ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ಪಂದ್ಯಾವಳಿಗಳು ನಿರಂತರವಾಗಿ ನಡೆಯುತ್ತಿತ್ತು.
ಆನಂದಪುರಂನ ಸುಬಾಷ್ ಯುವಕ ಸಂಘದ ಸುಭಾಷ್ ಕಬ್ಬಡಿ ತಂಡ ಹೊಸನಗರದಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಗಳಿಸಿತ್ತು, ಸಾಗರ, ಹೆಗ್ಗೋಡು, ಯಡ ಜಿಗಳೆ ಮನೆ, ಶಿವಮೊಗ್ಗ ಭದ್ರಾವತಿ ಹೀಗೆ ಎಲ್ಲೆಡೆ ಭಾಗವಹಿಸಿ ಪ್ರಶಸ್ತಿ ತನ್ನದಾಗಿಸಿಕೊಳ್ಳುತ್ತಿದ್ದರಿಂದ ಇದು ಜಿಲ್ಲೆಯ ಪ್ರತಿಷ್ಟಿತ ತಂಡವಾಗಿತ್ತು.
ಆಗ ನಡೆಯುತ್ತಿದ್ದ ಯುವಜನೋತ್ಸವದಲ್ಲಿ ತಾಲ್ಲೂಕ ಮತ್ತು ಜಿಲ್ಲಾ ಮಟ್ಟದಲ್ಲೂ ಸುಭಾಷ್ ಕಬ್ಬಡಿ ತಂಡ ಸೋಲಿಸುವವರಿಲ್ಲ ಎಂಬ ಪ್ರತೀತಿ ಇತ್ತು.
ಆಗ ಸಾಗರದಲ್ಲಿ ಗಣಪತಿ ಶೆಟ್ಟರು ಮತ್ತು ಅವರ ಸಹೋದರರು, ಜಾಲಿ ಮತ್ತಿತರದ್ದು ಅಂತದ್ದೇ ಸುಪ್ರಸಿದ್ಧ ಕಬ್ಬಡಿ ತಂಡ ಇತ್ತು ಈ ತಂಡ ಮತ್ತು ಆನಂದಪುರಂನ ಸುಭಾಷ್ ಕಬ್ಬಡಿ ತಂಡದ ಆಟ ನೋಡಲು ಹೆಚ್ಚು ಜನ ಸೇರುತ್ತಿದ್ದರು.
ಸಾಗರದಲ್ಲಿ ಕಬ್ಬಡಿ ಪಂದ್ಯಾವಳಿಯಲ್ಲಿ ನಡೆದ ಜಗಳ ಕೊಲೆಯೊಂದಿಗೆ ಮುಕ್ತಾಯವಾದದ್ದು ದುರಾದೃಷ್ಟ ಈ ಘಟನೆ ನಂತರ ಕಬ್ಬಡಿ ಪಂದ್ಯಾವಳಿ ಆಯೋಜಿಸಲು ಅನೇಕ ಪೋಲಿಸ್ ನಿರ್ಬಂದ ಕಾನೂನು ಸುವ್ಯವಸ್ಥೆಗಾಗಿ ಜಾರಿ ಆಯಿತು ಪ್ರಾಯೋಜಕರೂ ಹಿಂದೆ ಸರಿದರು ಮತ್ತು ಕಬ್ಬಡಿ ಆಟಗಾರರು ಹಿಂದೆ ಸರಿದರು ಇದರಿಂದ ಆನಂದಪುರಂನ ಪ್ರಖ್ಯಾತ ಸುಬಾಷ್ ಕಬ್ಬಡಿ ತಂಡವೂ ಹಿಂದೆ ಸರಿಯಿತು.
ಸುಭಾಷ್ ಯುವಕ ಸಂಘದ ಸಾಧನೆ ಆನಂದಪುರಂನ ಹೆಸರನ್ನು ಎತ್ತರಕ್ಕೆ ಒಯ್ದ ಬಂಗಾರದ ದಿನಗಳು ಅದು.
ಈಗ ಹೊಸ ತಲೆಮಾರಿನ Pro-Kabbadi ಪ್ರಸಿದ್ಧಿಗೆ ಬರುತ್ತಿದೆ.
ನಾಳೆ ಭಾಗ-51
Comments
Post a Comment