ಭಾಗ - 47 ಆನಂದಪುರಂ ಇತಿಹಾಸ, ಇನಾಂದಾರ್ ಅಯ್ಯಂಗಾರ್ ಕುಟುಂಬದ ಜೊತೆ ಸೌಹಾರ್ದ ಸಂಬಂದ ಹೊಂದಿದ್ದ ತ್ಯಾಗರ್ತಿ ಇನಾಂದಾರ್ ಕುಟುಂಬ, ಕೊಡುಗೈ ದಾನಿ ಆಗಿದ್ದ ಗುರುಮೂರ್ತಿ ರಾಯರು
#ಆನಂದಪುರಂ_ಇತಿಹಾಸ
#ಆನಂದಪುರಂ_ಅಯ್ಯಂಗಾರರೊಡನೆ_ತ್ಯಾಗತಿ೯_ಇನಾಂದಾರರ_ಸೌಹಾದ೯_ಸಂಬಂದ
#ಅಯ್ಯಂಗಾರರು_ನಾಲ್ಕುಸಾವಿರ_ಎಕರೆ_ಇನಾಂದಾರರು
#ತ್ಯಾಗತಿ೯_ಗುರುಮೂರ್ತಿರಾಯರದ್ದು_ಎರೆಡು_ಸಾವಿರ_ಎಕರೆ.
#ತ್ಯಾಗರ್ತಿ_ಪ್ರೌಡಶಾಲೆ_ಕಟ್ಟಿ_ಇಪ್ಪತ್ತು_ಎಕರೆ_ದಾನನೀಡಿದವರು.
#ಮೈಸೂರು_ರಾಜ್ಯದ_ವಿಶೇಷ_ಪ್ರತಿನಿದಿ,
ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ದೇಶದ ಶೇಕಡಾ 80ರಷ್ಟು ಭೂಮಿ ಜಮೀನ್ದಾರರ, ಇನಾಮು ದಾರರ ಮತ್ತು ಜೋಡಿದಾರರ ವಶದಲ್ಲಿತ್ತು ಇದರಿಂದ ಶೇಕಡಾ 75% ರಷ್ಟು ಜನ ಭೂ ಮಾಲಿಕ ಕೆಳಗೆ ಗೇಣಿದಾರರಾಗಿದ್ದರು.
1954 ರಲ್ಲಿ ಇನಾಂ ಭೂ ರದ್ದತಿ ಶಾಸನ ರಚನೆ ಆಗಿ 1961 ರಿಂದ ಅನೂಷ್ಟಾನಗೊಂಡ ನಂತರ ಇನಾಂದಾರರು ಈ ಎಲ್ಲಾ ಮಾಲಿಕತ್ವ ಕಳೆದುಕೊಂಡರು.
ಆನಂದಪುರಂನ ಭೂ ಮಾಲಿಕರಾಗಿದ್ದ ಬದರಿನಾರಾಯಣ ಆಯ್ಯಂಗಾರರ ತಂದೆ ರಾಮಕೃಷ್ಣ ಅಯ್ಯಂಗಾರರಿಗೆ ನಾಲ್ಕು ಸಾವಿರ ಎಕರೆ ಇನಾಂ ಭೂಮಿ, ಶೃಂಗೇರಿ ಮಠಕ್ಕೆ ವಾರ್ಷಿಕ 2 ಟನ್ ಶ್ರೀಗಂಧ ಪೂಜೆಗಾಗಿ ಸಂಗ್ರಹಿಸಿ ಕೊಡಲಿಕ್ಕಾಗಿ ಎರೆಡು ಸಾವಿರ ಎಕರೆ ಅರಣ್ಯ ಭೂಮಿ ಅಲ್ಲದೆ ಅವರ ಸ್ವಂತ ಖಾತೆಯಲ್ಲಿ ನೂರಾರು ಎಕರೆ ತೋಟ ಭೂಮಿ ಮತ್ತು ಇಡೀ ಆನಂದಪುರಂ ಊರು ಅವರದ್ದೇ ಆಗಿತ್ತು.
ಇದೇ ರೀತಿ ಇವರ ಪಕ್ಕದಲ್ಲಿ ತ್ಯಾಗರ್ತಿ ಗುರುಮೂರ್ತಿ ರಾಯರ ಕುಟುಂಬ ಕೂಡ ಎರೆಡು ಸಾವಿರ ಎಕರೆ ಇನಾಂ ಭೂಮಿ ಹೊಂದಿತ್ತು ಮತ್ತು ನೂರಾರು ಎಕರೆ ಸ್ವಂತ ಖಾತೆಯ ಜಮೀನು ಹೊಂದಿತ್ತು.
ತ್ಯಾಗರ್ತಿ ಊರೇ ಗುರುಮೂರ್ತಿ ರಾಯರು ಮತ್ತು ಅವರ ಸಹೋದರ ಹೇರಂಭ ರಾಯರ ಸುಪರ್ದಿಯಲ್ಲಿತ್ತು.
ಇವರ ಅಜ್ಜ ದ್ಯಾವಪ್ಪನವರು ಶಿಕಾರಿಪುರ ಮೂಲದವರು ಮೈಸೂರಿನ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅಬಕಾರಿ ಇಲಾಖೆಯಲ್ಲಿ ದೊಡ್ಡ ಹುದ್ದೆಯಲ್ಲಿರುತ್ತಾರೆ ಇವರ ಪತ್ನಿ ಲಕ್ಷ್ಮೀ ದೇವಮ್ಮ ಇವರ ಪುತ್ರ ರಂಗಪ್ಪ.
ಇವರು ನಿವೃತ್ತರಾದ ನಂತರ ತ್ಯಾಗರ್ತಿಗೆ ಬಂದು ನೆಲೆಸುತ್ತಾರೆ ಇವರ ಪುತ್ರ ರಂಗಪ್ಪ ಮತ್ತು ಸೊಸೆ ಸರಸ್ವತಿ ದಂಪತಿಗಳಿಗೆ ಇಬ್ಬರು ಪುತ್ರರು ಮತ್ತು ನಾಲ್ಕು ಪುತ್ರಿಯರು.
ಹಿರಿಯರಾದ ಹೇರಂಭ ರಾಯರು, ಗುರುಮೂರ್ತಿ ರಾಯರು, ಪುತ್ರಿಯರಾದ ಸುಂದರಮ್ಮ, ಭಾಗ್ಯಲಕ್ಷ್ಮಿ, ಪದ್ಮಾವತಿ ಮತ್ತು ಕುಶಲಾವತಿ.
ಹೇರಂಭ ರಾಯರಿಗೆ ಒಬ್ಬ ಪುತ್ರಿ ವತ್ಸಲಾ ಅಳಿಯ ನಾಗಭೂಷಣ ರಾವ್ ಇವರಿಗೆ ಒಬ್ಬ ಪುತ್ರ ಶ್ರೀದರ್ ತ್ಯಾಗರ್ತಿ ಯಲ್ಲಿ ಪಟೇಲ್ ಶ್ರೀಧರ್ ಅಂತಲೇ ಹೆಸರುವಾಸಿ ಈಗ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.
ಗುರುಮೂರ್ತಿರಾಯರ ಕೊನೆಯ ಸಹೋದರಿ ಕುಶಲಾವತಮ್ಮರ ಪತಿ ಗಣೇಶ ಭಟ್ಟರು ಇವರು ಆನಂದಪುರದ ಅಯ್ಯಂಗಾರರ ಸಮಸ್ತ ಕೃಷಿ ಭೂಮಿಯ ಉಸ್ತುವಾರಿ ನೋಡಿಕೊಂಡಿದ್ದರು ಇವರಾರು ಆನಂದಪುರಂ ನಲ್ಲಿಲ್ಲ ಬೆಂಗಳೂರಲ್ಲಿ ಇವರ ಮಗ ನೆಲೆಸಿದ್ದಾರೆ.
ಇವರ ಕುಟುಂಬ ತ್ಯಾಗರ್ತಿಯ ಅಗ್ರಹಾರದಲ್ಲಿ ನಿರ್ಮಿಸಿದ್ದ ಮೂರು ಅಂತಸ್ತಿನ ಬೃಹತ್ ಮನೆ ತಾಲ್ಲೂಕಿನಲ್ಲೇ ಅತ್ಯಂತ ದೊಡ್ಡ ಮನೆ ಆಗಿತ್ತಂತೆ ಈ ಮನೆಯಲ್ಲಿ ಮೈಸೂರಿನ ದರ್ಬಾರ್ ಹಾಲಿನ೦ತೆ ಸಣ್ಣ ಸಭೆ ಸಮಾರಂಭಗಳು ನಡೆಯುತ್ತಿತ್ತಂತೆ.
ತಪಸ್ವಿ ಶ್ರೀದರ ಸ್ವಾಮಿಗಳು ಅನೇಕಬಾರಿ ಈ ಮನೆಗೆ ಬೇಟಿ ನೀಡಿದ್ದರು,ತ್ಯಾಗರ್ತಿ ಪ್ರೌಡ ಶಾಲೆ ಪ್ರಾರಂಭದ ಒಂದೆರೆಡು ವರ್ಷ ಈ ಮನೆಯ ಮಹಡಿಯಲ್ಲೇ ನಡೆದಿತ್ತು.
ಗುರುಮೂರ್ತಿ ರಾಯರು ತ್ಯಾಗರ್ತಿಯಲ್ಲಿ ಪ್ರೌಡ ಶಾಲೆ ನಿಮಿ೯ಸಿ 20 ಎಕರೆ ಭೂಮಿ ಈ ಶಾಲೆಗೆ ದಾನ ನೀಡಿದ ದಾನಿ, ತ್ಯಾಗರ್ತಿಯಲ್ಲಿ ಶ್ರೀಧರ ಸ್ವಾಮಿಗಳ ಹೆಸರಲ್ಲಿ ಮೊದಲ ರೈಸ್ ಮಿಲ್ ಸ್ಥಾಪಿಸಿ 35 ವಷ೯ ನಡೆಸಿ ನಂತರ ಸಾಗರದ ಪ್ರಸಿದ್ಧ ಉದ್ಯಮಿ ರುದ್ರಾರಾಧ್ಯರಿಗೆ ಮಾರಾಟ ಮಾಡಿದರು.
ಒಮ್ಮೆ ಮಲೆನಾಡು ಭಾಗದಲಿ ಕೆಲವರ್ಷ ಬೀಕರ ಬರಗಾಲ ಬಂದಾಗ ಜನತೆ ತತ್ತರಿಸಿದಾಗ ತಮ್ಮ ಪಣತಗಳಲ್ಲಿ ಸಂಗ್ರಹದಲ್ಲಿದ್ದ ಸಾವಿರಾರು ಚೀಲ ಬತ್ತ ತೆಗೆದು ತಮ್ಮ ಗೇಣಿದಾರ ರೈತರಿಗೆ ಹಂಚಿದ್ದು ಆ ಕಾಲದಲ್ಲಿ ದೊಡ್ಡ ಸುದ್ದಿ ಇದು ಮೈಸೂರು ರಾಜರಿಗೆ ತಿಳಿದು ಇವರಿಗೆ ವಿಶೇಷ ಗೌರವ ನೀಡುತ್ತಾರೆ ಮತ್ತು ಮೈಸೂರು ರಾಜರ ವಿಶೇಷ ಪ್ರತಿನಿದಿ ಸ್ಥಾನ ಕಲ್ಪಿಸುತ್ತಾರೆ ಅದೇ ವರ್ಷ ಆಕಾಶ ಭೂಮಿಯ ಮೇಲೆ ಕೃಪೆ ತೋರಿ ಒಳ್ಳೆಯ ಮಳೆ ಆಗಿ ಬರಗಾಲ ಮುಕ್ತಾಯ ಆಗುತ್ತದೆ.
ಮೈಸೂರು ಅರಸರ ಆಸ್ಥಾನದ ಜೋತಿಷಿಗಳು ಗುರುಮೂರ್ತಿರಾಯರ ಕಿರಿಯ ಪುತ್ರಿ ಸುದಾಮಣಿಯವರನ್ನು ತಮ್ಮ ಪುತ್ರ ಡಾ.ಎನ್.ಎಸ್.ವಿಶ್ವಪತಿ ಶಾಸ್ತ್ರೀಗಳಿಗೆ ವಿವಾಹ ಮಾಡಿ ಸೊಸೆಯಾಗಿ ಮಾಡಿಕೊಳ್ಳುತ್ತಾರೆ.
ಡಾ.ಎನ್.ಎಸ್.ವಿಶ್ವಪತಿ ಶಾಸ್ತ್ರೀಗಳು ದೇವೇಗೌಡರಿಗೆ ಪ್ರದಾನ ಮಂತ್ರಿ ಆಗುವುದಾಗಿ ಜೋತಿಷ್ಯ ಹೇಳಿದ್ದ ಪ್ರಸಿದ್ದರು.
ತ್ಯಾಗರ್ತಿ ಇನಾಂದಾರರು ಮತ್ತು ಆನಂದಪುರಂ ಇನಾಂದಾರರು ಉತ್ತಮ ಸಂಬಂದ ಹೊಂದಿದ್ದರು ಇಬ್ಬರೂ ದಾನ ದಮ೯ದಲ್ಲಿ ಎತ್ತಿದ ಕೈನವರಾಗಿದ್ದರೆಂದು ಜನ ಇವರನ್ನು ಆಧರಿಸುತ್ತಿದ್ದರು ಹಾಗೂ ಗೌರವಿಸುತ್ತಿದ್ದರು.
(ನಾಳೆ ಭಾಗ-48)
Comments
Post a Comment