ಹೊಸ ಪೀಳಿಗೆಯ ಹೊಸ ಹೊರಾಟದ ಬೇಡಿಕೆ "ಸುಲಭ ನೆಟ್ವರ್ಕ್ - ಕೊಡಿ" ಇಲ್ಲದಿದ್ದರೆ No Network-No Vote ಅಭಿಯಾನ ಎದುರಿಸಿ ಎಂದು ಆಡಳಿತರೂಢರಿಗೆ ಸವಾಲು ಹಾಕಿರುವ ಸಿಗಂದೂರು ದೇವರ ನಾಡು ಮುಳುಗಡೆಯ ತುಮರಿ ಭಾಗದ ಕುಗ್ರಾಮದಿಂದ ಪ್ರಾರಂಭ ಆಗಿದೆ
#ನೆಟ್ವರ್ಕ_ಸಂಪರ್ಕಕ್ಕಾಗಿ_ಹೊಸರೀತಿ_ಅಭಿಯಾನ_ಇದು_ಎಲ್ಲಡೆ_ಪಸರಿಸುವ_ಸಾಧ್ಯತೆ.
#ತುಮರಿ_ಭಾಗದ_ಜನರ_ಮೊದಲ_ಹೋರಾಟ_ಸೇತುವೆ_ಸಂಪರ್ಕಕ್ಕಾಗಿ
#ತುಮರಿ_ಸೇತುವೆ_ಮತ್ತು_ಸಾಗರ_ತಾಲ್ಲೂಕ್_ಅಭಿವೃದ್ಧಿಗಾಗಿ_ಒತ್ತಾಯಿಸಿ_ಸಾಗರ_ತಾಲ್ಲೂಕಿನಲ್ಲಿ_ಪಾದಯಾತ್ರೆ_ನೆನಪು
ನನ್ನ ಒಂದು ಸಣ್ಣ ಪ್ರಯತ್ನ ತಾಲ್ಲೂಕು ಅಭಿವೃದ್ದಿಗೆ ಒತ್ತಾಯಿಸಿ 13 ದಿನದ ಪಾದಯಾತ್ರೆಯಲ್ಲಿ ನಾಲ್ಕು ಹಗಲು ಮತ್ತು ಮೂರು ರಾತ್ರಿ ಈ ಭಾಗದಲ್ಲಿತ್ತು ಮುಖ್ಯ ಬೇಡಿಕೆ ತುಮರಿ ಸೇತುವೆ ಸೇರಿ ಆದರೆ ಆ ದಿನದಲ್ಲಿ ಈ ಭಾಗದ ಜನ ಪಾದಯಾತ್ರಿಗಳಿಗೆ ಭವ್ಯ ಸ್ವಾಗತ, ಅತಿಥ್ಯ ಮತ್ತು ಆಶ್ರಯ ನೀಡುತ್ತಿದ್ದ ಕರುಣಾಮಯಿಗಳು ಆದರೆ ತುಮರಿ ಸೇತುವೆ ಶರಾವತಿ ನದಿಗೆ ಕಟ್ಟುವುದು ಸಾಧ್ಯವೇ ಇಲ್ಲ ಎಂದು ವಾದ ಮಾಡುವ ಕಾಲ ಆಗಿತ್ತು.
ನಂತರ ಈ ಭಾಗದ ವಿದ್ಯಾವಂತ ಯುವಕರು ಎಚ್ಚೆತ್ತು ಕೊಳ್ಳಲು ಪ್ರಾರಂಬಿಸಿದರು, ಮತದಾರರು ತಮ್ಮ ಭಾಗದ ಹಕ್ಕಿನ ಪಾಲಿಗಾಗಿ ಹೋರಾಡುವ ಇಂತಹ ಯುವಕರನ್ನು ಹಿಂಬಾಲಿಸಿದ ಫಲವಾಗಿ ತುಮರಿ ಸೇತುವೆ ಹಕ್ಕೊತ್ತಾಯದ ಹೋರಾಟ ಜಿಲ್ಲೆ, ರಾಜ್ಯ ದಾಟಿ ದೆಹಲಿಯಿಂದ ಮಂಜೂರಾಗಿದ್ದು ಇತಿಹಾಸ ಮತ್ತು ಈ ಭಾಗದ ಸ್ವಾತಂತ್ರ ನಂತರದ ದೀರ್ಘ ಕಾಲದ ಬಹು ಬೇಡಿಕೆ ಈಡೇರಿದ ಸಂತಸ ಮತ್ತು ಈ ಹೋರಾಟದ ರೂಪುರೇಷೆ, ಸ್ಥಳಿಯರ ಭಾಗವಹಿಸುವಿಕೆ, ಜನಪ್ರತಿನಿದಿಗಳ ಕಾಳಜಿ ಪಕ್ಷಾತೀತವಾಗಿ ಸಕಾರತ್ಮಕ ಸನ್ನಿವೇಶಕ್ಕೆ ಕೊಂಡೊಯ್ದ ಈ ಭಾಗದ ಯುವಕರ ಬುದ್ದಿವಂತಿಕೆ ನನಗೆ ತುಂಬಾ ಮೆಚುಗೆ ಆಗಿತ್ತು ಈಗ ತುಮರಿ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ ಎಂಬ ವರದಿಗಳಿದೆ.
ಕಳೆದ ವರ್ಷ ಕೋವಿಡ್ ಮೊದಲ ಅಲೆಯಿಂದ ಪ್ರಾರಂಭ ಆದ ಟೆಕ್ಕಿಗಳ ಮನೆಯಿಂದಲೇ ಕೆಲಸ (Work from Home) ನಂತರ ಶಾಲೆಗಳ ಆನ್ ಲೈನ್ ಕ್ಲಾಸುಗಳಿಂದ ಈ ಭಾಗದ ಜನರಿಗೆ ಇನ್ನೊಂದು ದೊಡ್ಡ ಕೊರತೆ ಆಗಿರುವ ಪೋನ್ ನೆಟ್ ವರ್ಕ ಸಮಸ್ಯೆ ಪರಿಹಾರ ಕಾಣುವ ಎರಡನೆ ಹೋರಾಟ " ನೊ ನೆಟ್ ವರ್ಕ - ನೋ ವೋಟ್" ಸಣ್ಣ ಧ್ವನಿಯಾಗಿ ಪ್ರಾರಂಭ ಆಗಿದ್ದು ಮಲೆನಾಡಿನ ಹೊಸನಗರ- ತೀರ್ಥಹಳ್ಳಿ ತಾಲ್ಲೂಕು ದಾಟಿ ಚಿಕ್ಕ ಮಗಳೂರು ಜಿಲ್ಲೆಯಲ್ಲೂ ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯಲ್ಲೂ ಮುಂದಿನ ದಿನದಲ್ಲಿ ಮುಂದುವರಿಯುವ ಲಕ್ಷಣ ಇದೆ.
ಈ ಹೋರಾಟಗಳು ಹಿಂದಿನ ಹೋರಾಟದಂತೆ ಸಾವಿರಾರು ಜನ ಸೇರಿಸಿ, ರಾಜಕೀಯ ನೇತಾರರ ಭಾಷಣ ಕುಟ್ಟಿಸುವ ಶ್ರಮದ್ದಲ್ಲ ನಮ್ಮ ನಮ್ಮ ಅಂಗೈಯಲ್ಲಿನ ಮೊಬೈಲ್ ಗಳ ಸಂದೇಶಗಳ ಮೂಲಕ ಪರಿಣಾಮಕಾರಿ ಆಗಿ ಪಸರುತ್ತಿದೆ, ಅಭಿವೃದ್ದಿ - ಸಂಪರ್ಕ ಅಂದರೆ ಪೇಟೆ ಮಾತ್ರ ಆದ್ಯತ ಪ್ರದೇಶ ಅಲ್ಲ ಗುಡ್ಡಗಾಡು ಹಳ್ಳಿಗಾಡಿಗೂ ಮುಟ್ಟಿದರೆ ಮಾತ್ರ ಎಂಬ ತರ್ಕ ಎಲ್ಲರ ಮೆಚ್ಚುಗೆಗೆ ಕಾರಣ ಆಗಿದೆ.
ಈಗ ಬರಲಿರುವ ಸ್ಥಳಿಯ ಚುನಾವಣೆ, ನಂತರ ಶಾಸಕರ ಅದರ ನಂತರದ ಪಾರ್ಲಿಮೆಂಟ್ ಚುನಾವಣೆಯ ಪಲಿತಾಂಶದಲ್ಲಿ ಈ ಹೋರಾಟದಿಂದ ಕೆಲ ಅಂಶ ಮತಗಳ ಏರುಪೇರು ಅನಿರಿಕ್ಷಿತ ಪಲಿತಾಂಶದ ಏಟು ರಾಜಕೀಯ ಪಕ್ಷಗಳಿಗೆ ಬೀಳುವ ಭಯ ಉಂಟಾಗಿದ್ದರಿಂದ ಹೋರಾಟಕ್ಕೆ ಅವರುಗಳಿಂದ ಸಕಾರಣ ಬೆಂಬಲ ಸಿಗಲು ಪ್ರಾರಂಭ ಆಗಿದೆ ಯಥಾ ಪ್ರಕಾರ ಈ ಹೋರಾಟವನ್ನು ತಮ್ಮ ರಾಜಕೀಯ ಲಾಭಕ್ಕೆ ಪರಿವರ್ತಿಸುವ ರಾಜಕೀಯ ಪಕ್ಷಗಳ ಮೇಲಾಟವೂ ಪ್ರಾರಂಭ ಆಗಿದೆ.
2016ರಲ್ಲಿ ಪ್ರತಿ ಗ್ರಾಮ ಪಂಚಾಯತ್ ಕೇಂದ್ರದಲ್ಲಿ ಉಚಿತ ವೈ-ಫೈ ಸೇವೆಗಾಗಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ 16 ಸಾವಿರ ಕೋಟಿ ಹಣದಲ್ಲಿ ಎಲ್ಲಾ ಗ್ರಾ.ಪಂ. ಕೇಂದ್ರದಲ್ಲಿ ಚಿಕ್ಕ ಸೋಲಾರ್ ಶಕ್ತಿ ಆದಾರಿತ ಅದ೯೦ಬರ್ದ ಕೆಲಸ ಮಾಡಿದ ಹಾಗೆ ಮಾಡಿ ಪೂರ್ತಿ ಹಣ ವಿನಿಯೋಗಿಸಿ ಯಾವುದೇ ವೈ-ಫೈ ಸಂಪರ್ಕ ನೀಡದ (ಕರ್ನಾಟಕದಲ್ಲಿ 16 ಸಾವಿರ ಇಡೀ ದೇಶದಲ್ಲಿ ಸೇರಿದರೆ ಕೆಲ ಲಕ್ಷ ಕೋಟಿ) ದೊಡ್ಡ ಹಗರಣ ತನಿಖೆಯೂ ಆಗದೆ ಜನರಿಂದ ವಿರೋದವೂ ವ್ಯಕ್ತವಾಗದೆ ಮುಚ್ಚಿ ಹೋಯಿತು.
ಈ ಅಭಿಯಾನ ಹೊಸ ತಲೆಮಾರಿನ ಯುವಕರಿಂದ ಹೊಸ ರೀತಿ - ನೀತಿಯಿಂದ ಪ್ರಾರಂಭ ಆಗಿದೆ ನಾವೆಲ್ಲರೂ ಇದರಲ್ಲಿ ಪಕ್ಷ - ಪಾರ್ಟಿ-ಜಾತಿ- ಪ್ರದೇಶ ನೋಡದೆ ನಮ್ಮ ನಿಮ್ಮ ಮನೆಯ ಮಕ್ಕಳ ವಿದ್ಯಾಬ್ಯಾಸ ಮತ್ತು ಉದ್ಯೋಗದ ಅನಿವಾಯ೯ತೆಗಾಗಿ ಬೆಂಬಲಿಸೋಣ.
👍 👍#No_Network-#No_Vote 🙏 🙏
Comments
Post a Comment