Skip to main content

ಭಾಗ - 51, ಆನಂದಪುರಂ ಇತಿಹಾಸ, ನಾನೂರು ವರ್ಷದ ಹಿಂದೆ ಕೆಳದಿ ರಾಜರ ಸು೦ಕ ಸಂಗ್ರಹಕರಾಗಿದ್ದ ಸುಂಕದವರ ಮನೆತನದವರು ಆನಂದಪುರಂನಲ್ಲಿದ್ದಾರೆ.

#ಭಾಗ_51.
#ಆನಂದಪುರಂ_ಇತಿಹಾಸ.

#ಆನಂದಪುರಂನಲ್ಲಿ_ನೆಲೆಸಿರುವ_ಷಣ್ಮುಖಶೆಟ್ಟರು_ಹಿರಿಯ_ಆರೋಗ್ಯ_ಸಹಾಯಕರಾಗಿದ್ದ_ನಾಗರಾಜ್_ಕುಟುಂಬದ_ಹಿನ್ನೆಲೆ.

#ಕೆಳದಿ_ಅರಸರ_ಕಾಲದಲ್ಲಿ_ಸು೦ಕ_ಸಂಗ್ರಹಕಾರರ_ವಂಶದವರು.

#ಸ್ವಾತಂತ್ರ್ಯ_ಪೂರ್ವದಲ್ಲಿ_ಆನಂದಪುರಂನ_ಮೊದಲ_ವಕೀಲರು.

#ಆನಂದಪುರಂನ_ಮೊದಲ_ಆಭರಣದ_ಅಂಗಡಿಯವರು.

#ಆನಂದಪುರಂನಲ್ಲಿ_ಬಂಗಾರಪೇಟೆ_ಎಂಬ_ಬೀದಿ_ಇತ್ತು_ಬಂಗಾರ_ಬೆಳ್ಳಿ_ವಜ್ರ_ವೈಡೂರ್ಯ_ಮಾರಾಟ.

#ಚಂಪಕ_ಸರಸ್ಸು_ಸಮೀಪ_ಬೃಹತ್_ಸಂತೆ_ಆಗುತ್ತಿತ್ತು

  ಕೆಳದಿ ರಾಜ ವೆಂಕಟಪ್ಪ ನಾಯಕರ ಕಾಲದಲ್ಲಿ ಅಂದರೆ ಸುಮಾರು ನಾನೂರು ವರ್ಷದ ಹಿಂದೆ ರಾಣಿ ಚಂಪಕಳ ಸ್ಮರಣಾರ್ಥ ನಿಮಿ೯ಸಿರುವ #ಚಂಪಕ_ಸರಸ್ಸು ಇದನ್ನು ನಿರ್ವಹಣೆ ಮಾಡಲು ಸಮೀಪದ ಮಹತ್ತಿನ ಮಠಕ್ಕೆ ವಹಿಸಿ ಮಠಕ್ಕೆ ಜಮೀನು ಉಂಬಳಿ ನೀಡಿದ್ದರಲ್ಲದೆ ಸದರಿ ಮಠಕ್ಕೆ ಅಡಿಕೆ, ಅಕ್ಕಿ ಮತ್ತು ಮೆಣಸು ಸಾಗಾಣಿಕೆಗೆ ಸುಂಕದ ರಿಯಾಯಿತಿಯೂ ನೀಡಿದ್ದರು.
  ಈಗಲೂ ಚಂಪಕ ಸರಸ್ಸು ಇದೆ ಬನ್ನಿ ಮಂಟಪ ಸಮೀಪದಲ್ಲಿದ್ದ ಮಹತ್ತಿನ ಮಠ ಇಲ್ಲ ಅದರ ಪಳಯುಳಿಕೆಗಳಿದೆ ಸ್ಥಳಿಯರು ರಾಣಿ ಚಂಪಕಳಾ ಸ್ಮರಣಾರ್ಥ ರಾಜ ವೆಂಕಟಪ್ಪ ನಾಯಕರು ನಿರ್ಮಿಸಿರುವ ಚಂಪಕ ಸರಸ್ಸು (ಕೊಳ) ವನ್ನೆ ಮಹಂತಿನ ಮಠ ಎಂತಲೂ ಕರೆಯುತ್ತಾರೆ.
  ಇದರ ಸಮೀಪದಲ್ಲೇ ಬೃಹತ್ ಸಂತೆ ನಡೆಯುತ್ತಿತ್ತು, ಆನೆ ಕುದುರೆ ಮೇಲೆ ವರ್ತಕರು ಬರುತ್ತಿದ್ದರಂತೆ,ಅಲ್ಲಿ ವಿದೇಶಿಯರು ಅವರ ದೇಶಕ್ಕೆ ವ್ಯಾಪಾರಕ್ಕಾಗಿ ಅಕ್ಕಿ ಖರೀದಿಸುತ್ತಿದ್ದರಂತೆ.
  ಇಲ್ಲಿಯೇ ಸುಂಕದ ಕಟ್ಟೆಯೂ ಇತ್ತು ಇಲ್ಲಿಯೇ ವ್ಯಾಪಾರಸ್ಥರಿಂದ ಸುಂಕ ವಸೂಲಿ ಮಾಡಿ ರಾಜರ ಆಸ್ಥಾನಕ್ಕೆ ತಲುಪಿಸುವ ಸುಂಕದವರು ರಾಜರಿಂದ ನೇಮಕ ಆಗಿರುತ್ತಿದ್ದರು.
  ಈ ಸುಂಕದ ಮನೆತನದವರು ಈಗಲೂ ಆನಂದಪುರಂನಲ್ಲಿದ್ದಾರೆ ಲಕ್ಷ್ಮಿಕಾಂತಪ್ಪನವರು, ಷಣ್ಮುಖ ಶೆಟ್ಟರು, ನಾಗರಾಜ್ ಮತ್ತು ಕೃಷ್ಣಮೂರ್ತಿ ಸಹೋದರರು.
  ಇವರ ಮನೆತನದ ಮೂಲ ಹೆಸರು ಕೆಸರೆ ಮನೆತನವಾದರೂ ಇವರ ಮನೆತನದ ವೃತ್ತಿಯಿಂದ ಸುಂಕದ ಮನೆತನದವರೆಂದೇ ಮುಂದುವರಿಯಿತು.
  ಇವರ ಅಜ್ಜ ಚಿರುಡ ಶೆಟ್ಟರು ಸ್ವಾತಂತ್ರ್ಯ ಪೂರ್ವದಲ್ಲಿ 1916 ರಿಂದ 1932ರವರೆಗೆ ವಕೀಲರಾಗಿದ್ದರು ಆಗ ಸಾಗರ ತಾಲ್ಲೂಕಿನ ನ್ಯಾಯಾಲಯ ಆನಂದಪುರಂನಲ್ಲಿತ್ತು (ಈಗಿನ ಯಡೇಹಳ್ಳಿ ಪ್ರವಾಸಿ ಮಂದಿರ) ಚಿರುಡ ಶೆಟ್ಟರು ಕುದುರೇ ಮೇಲೆ ಸಂಚರಿಸುತ್ತಿದ್ದರು.
  ಕೆಳದಿ ರಾಜರ ಕಾಲದಲ್ಲಿ ಈಗಿನ ಆಸ್ಪತ್ರೆ ಹಿಂಬಾಗದಿಂದ ಅಡೂರು ರಸ್ತೆಗೆ ಸೇರುವ ಮಾರ್ಗ ಆನಂದಪುರಂನ ಪ್ರಮುಖ ವಾಣಿಜ್ಯ ಬೀದಿ ಆಗಿತ್ತು ಇಲ್ಲಿ ಅನೇಕ ಬೆಳ್ಳಿ, ಬಂಗಾರ, ವಜ್ರ ಮತ್ತು ವೈಡೂಯ೯ ಮಾರಾಟದ ಅಂಗಡಿಗಳಿದ್ದರಿಂದ ಈ ಬೀದಿಗೆ ಬಂಗಾರ ಪೇಟೆ ಮಾರ್ಗ ಎಂಬ ಹೆಸರಿತ್ತು ಈ ಬೀದಿಯಲ್ಲೇ ವಕೀಲ್ ಚಿರುಡ ಶೆಟ್ಟರ ಆಸ್ತಿ ಮನೆ ಇತ್ತು.
   80ಕ್ಕೂ ಹೆಚ್ಚು ಜನರಿದ್ದ ಈ ಕುಟುಂಬದಲ್ಲಿ ಆಗ ಬಂದ ಪ್ಲೇಗ್ ಕಾಯಿಲೆ ಅನೇಕರನ್ನು ಬಲಿ ಪಡಿಯಿತಂತೆ ಆಗ ಒಂದೊಂದು ಗುದ್ದಿನಲ್ಲಿ ನಾಕಾರು ಜನರನ್ನು ಶವ ಸಂಸ್ಕಾರ ಮಾಡಿದ್ದರಂತೆ.
  ಈಗ ಈ ಜಾಗದಲ್ಲಿ ಇವರ ಮನೆತನದವರೇ ಆದ ಧರ್ಮಯ್ಯ ಶೆಟ್ಟರು ಅವರ ಮಗ ಪಾರೆಸ್ಟರ್‌ ರುಕ್ಮಯ್ಯ ಶೆಟ್ಟರು ಈಗ ಅವರ ಮಕ್ಕಳಾದ ಪತ್ರಕರ್ತರಾದ ಮಾಜಿ ಗ್ರಾ.ಪಂ.ಸದಸ್ಯ ಜಗನ್ನಾಥರ ಸಹೋದರರು ಇದ್ದಾರೆ.
  ವಕೀಲ್ ಚಿರುಡ ಶೆಟ್ಟರು ಮತ್ತು ಭಾಗಿರಥಮ್ಮ ದಂಪತಿಗಳ ಪುತ್ರ ಬಂಗಾರದ ಆಭರಣ ತಯಾರಿಕೆ ವೃತ್ತಿಯವರಾಗಿ ಆನಂದಪುರಂನಲ್ಲಿ ಪ್ರಥಮ ಆಭರಣದ ಅಂಗಡಿ ಮಾಡಿದ್ದ ನಾರಾಯಣ ಶೆಟ್ಟರು ಮತ್ತು ಇವರ ಪತ್ನಿ ಪಾವ೯ತಮ್ಮನವರಿಗೆ ನಾಲ್ಕು ಪುತ್ರರು ಮತ್ತು ಮೂವರು ಪುತ್ರಿಯರು.
 ಮೊದಲನೆಯವರು ಪುತ್ರಿ ರಾದಮ್ಮ, ಎರಡನೇ ಲಕ್ಷ್ಮಿಕಾಂತಪ್ಪ ಶಿರಸ್ತೇದಾರರಾಗಿ ನಿವೃತ್ತರಾದರು, ಮೂರನೆಯವರು ನಾಗರಾಜ್ ನಿವೃತ್ತ ಹಿರಿಯ ಆರೋಗ್ಯ ಸಹಾಯಕರು, ನಾಲ್ಕನೆಯವರು ಷಣ್ಮುಖ ಶೆಟ್ಟರು ಆನಂದಪುರಂನ ವರ್ತಕರು, ಐದನೆಯವರು ಲಕ್ಷ್ಮಿ ಆರನೆಯವರು ಕನಕ (ಶಿವಮೊಗ್ಗದ ಖ್ಯಾತ ವಕೀಲರಾದ ಜನಕ ಶೆಟ್ಟರ ಪತ್ನಿ) ಕೊನೆಯವರು ಕೃಷ್ಣಮೂರ್ತಿ ಶಿವಮೊಗ್ಗದಲ್ಲಿ ಡಿವಿಎಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.
  ಶಿರಸ್ತೆದಾರರಾಗಿದ್ದ ಲಕ್ಷ್ಮೀಕಾಂತಪ್ಪ ಮತ್ತು ನೇತ್ರಾವತಿ ದಂಪತಿಗಳಿಗೆ ಒಬ್ಬ ಪುತ್ರಿ ವಾಣಿಶ್ರೀ ಮತ್ತು ವಿನಯ ಪ್ರಸಾದ್, ವಿಜಯ ಪ್ರಸನ್ನ (ವಿಪ್ರೋದಲ್ಲಿ ಇಂಜಿನಿಯರ್), ಗುರುರಾಜ ಮತ್ತು ಪ್ರಶಾ೦ತ ಎ೦ಬ ನಾಲ್ವರು ಪುತ್ರರು ಶಿವಮೊಗ್ಗದಲ್ಲಿ ದುರ್ಗಿಗುಡಿಯ ಶನೀಶ್ವರ ದೇವಸ್ಥಾನದ ಹತ್ತಿರ ಸ್ವರ್ಣಾ ಜ್ಯುವೆಲ್ಲರಿ ಎಂಬ ಅಭರಣದ ಅಂಗಡಿ ಇದೆ.
  ಹಿರಿಯ ಆರೋಗ್ಯ ಸಹಾಯಕರಾಗಿದ್ದ ಹಾಡುಗಾರರು, ಕಬ್ಬಡಿ ಆಟಗಾರರೂ ಆಗಿದ್ದ ನಾಗರಾಜ್ ಮತ್ತು ಯಶೋದ ದಂಪತಿಗಳಿಗೆ  ಇಬ್ಬರು ಪುತ್ರರು ಸಿಂದೂರ ಮತ್ತು ಸಂದೀಪ್ ಇಬ್ಬರೂ ಅಡಿಕೆ ಕೃಷಿ ಮಾಡುತ್ತಿದ್ದಾರೆ.
  ಹಿರಿಯ ವರ್ತಕರಾಗಿರುವ ಷಣ್ಮುಖ ಶೆಟ್ಟರು ಮತ್ತು ಪುಷ್ಪಾ ದಂಪತಿಗಳಿಗೆ ಮೂವರು ಪುತ್ರರು ಮೊದಲನೆಯ ಸತೀಶ್ ಇಂಜಿನಿಯರ್ ಆಗಿ ಬೆಂಗಳೂರಲ್ಲಿ ನೆಲೆಸಿದ್ದಾರೆ, ದ್ವಿತಿಯ ಪುತ್ರ ಸಂತೋಷ್ ಸಾಗರದ ಗಣಪತಿ ಅರ್ಬನ್ ಬ್ಯಾಂಕ್ ಉದ್ಯೋಗಿ ಆಗಿದ್ದಾರೆ ಕೊನೆಯ ಪುತ್ರ ನೀಲೇಶ್ ತಂದೆಯ ವ್ಯವಹಾರ ಮುಂದುವರಿಸಿದ್ದಾರೆ.
  ಶಿವಮೊಗ್ಗದ ಪ್ರತಿಷ್ಟಿತ ಡಿವಿಎಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಕೃಷ್ಣಮೂರ್ತಿ ಮತ್ತು ಗೀತಾ ದಂಪತಿಗಳಿಗೆ ಇಬ್ಬರು ಪುತ್ರಿಯರು ಮೊದಲ ಪುತ್ರಿ ಸೌಜನ್ಯ KPC ಯ ಇಂಜಿನಿಯರ್ ಪೃಥ್ವಿರಾಜ್ ಜೊತೆ ವಿವಾಹ ಆಗಿ ರಾಯಚೂರಲ್ಲಿ ನೆಲೆಸಿದ್ದಾರೆ ಕೊನೆಯ ಪುತ್ರಿ ಅನನ್ಯ ಇಂಜಿನಿಯರ್ ವೃತ್ತಿ ಮಾಡುತ್ತಿದ್ದಾರೆ.
  ರಾಜರ ಕಾಲದಲ್ಲಿ ಸುಂಕ ವಸೂಲಿ ವೃತ್ತಿಯಿಂದ ಸುಂಕದ ಮನೆ ಎಂಬ ಅನ್ವರ್ಥಕ ಕುಟುಂಬ ನಾಮದ ನಾನೂರು ವರ್ಷದ ಇತಿಹಾಸದ ಈ ಮನೆತನ ಆನಂದಪುರಂನ ಮೂಲ ನಿವಾಸಿಗಳೂ ಕೂಡ ಆಗಿದ್ದಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...