#ಜನಮನದ ಜನಪ್ರಿಯ ಕನ್ನಡ ದಿನಪತ್ರಿಕೆ ಪ್ರಜಾವಾಣಿ ಮೊದಲಿನ ಜನಪ್ರಿಯತೆ ಮತ್ತು ತನ್ನ ಪತ್ರಿಕೆಯ ಹಿಂದಿನ ಪತ್ರಿಕಾ ನೀತಿಯ ನಿಷ್ಟುರತೆ ಉಳಿಸಿಕೊಳ್ಳುವ ಕಷ್ಟ ಕಾಲದ ಕ್ಷಣಗಣನೆಯಲ್ಲಿ.#
ನಮ್ಮ ಊರಿಗೆ 1961ರಿಂದ ಬರುತ್ತಿದ್ದ ಏಕೈಕ ಪತ್ರಿಕೆ ಪ್ರಜಾವಾಣಿ ಅದರ ವಿತರಕರಾಗಿದ್ದವರು ಹುಚ್ಚಾಚಾರ್ ಎಂಬ ನಿವೃತ್ತ ಸೈನಿಕರು ಅವರು ಯುದ್ಧದಲ್ಲಿ ಭಾಗವಹಿಸಿದವರು ಒಂದು ಕಾಲು ಗುಂಡೇಟಿನಿಂದ ಕುಂಟುತ್ತಾ ನಡೆಯುತ್ತಾ ಪತ್ರಿಕೆ ವಿತರಣೆ ಬರಿಗಾಲಿನಲ್ಲಿ ಮಾಡುತ್ತಿದ್ದರು ಅಯ್oಗಾರ್ ಬ್ರಾಹಮಣರಾದ ಅವರಿಗೆ ಸಿಟ್ಟು ಜಾಸ್ತಿ ಆನಂದಪುರಕ್ಕೆ 25 ಪತ್ರಿಕೆ ಬರುತ್ತಿತ್ತು, ನಮ್ಮ ಮನೆ ಇರುವ ಯಡೇಹಳ್ಳಿಗೆ ಆನಂದಪುರದಿಂದ ಒಂದು ಕಿ.ಮೀ. ನಡೆದು ಬರುತ್ತಿದ್ದರು ಅದು ಕೇವಲ 2 ಪತ್ರಿಕೆ ವಿತರಿಸಲು ಒಂದು ನಮ್ಮ ಮನೆಗೆ ಇನ್ನೊಂದು SRS ಎಂಬ ಅಕ್ಕಿ ಗಿರಣಿಗೆ, ನಮಗೆ ಒಂದನೆ ತರಗತಿಯಿಂದಲೇ ಬೆಳಿಗ್ಗೆ ಪ್ರಜಾವಾಣಿ ಓದುವ ಅಭ್ಯಾಸ ಮಾಡಿದ್ದರು ನಮ್ಮ ತಂದೆ, ಅದರಲ್ಲಿ ಪ್ಯಾಂಟಮ್ ಮೊದ್ದು ಮಾಣಿ ನಮಗೆ ಅಪ್ಯಾಯವಾಗಿತ್ತು.
ಇನ್ನು ವಾರಪತ್ರಿಕೆ ಆಗ ಪ್ರಜಾಮತ ಬರುತ್ತಿತ್ತು ಆದರೆ ಅದರಲ್ಲಿ ಗುಪ್ತ ಸಮಾಲೋಚನೆ ಅಂತ ಒಂದು ಪುಟಇದ್ದಿದ್ದರಿ೦ದ ಮಕ್ಕಳಿಗೆ ಓದಲು ಕೊಡುತ್ತಿರಲಿಲ್ಲ .
ಪ್ರಖ್ಯಾತ ಕಾಟೂ೯ನಿಸ್ಟ ಪಂಜು ಗಂಗೂಲಿಯ ವಯವರ ಪೋಸ್ಟನಿಂದ ಇದೆಲ್ಲ ನೆನಪಾಗಿ ಬರೆದೆ, ಬಂಗಾರಪ್ಪ ಸಂಬಂದಿ ಆದರೂ ಪ್ರಜಾವಾಣಿ ಅವರನ್ನ ವೈಭವಿಕರಿಸಲಿಲ್ಲ ಇದು ಈ ಪತ್ರಿಕೆಯ ನಿಷ್ಟುರತೆಗೆ ಕನ್ನಡಿ.
ಪ್ರಜಾವಾಣಿ ಏಜೆನ್ಸಿ ಪಡೆದರೆ ಅದೊಂದು ಲಾಭದಾಯಕ ಉದ್ದಿಮೆ ಆಗಿತ್ತು ಆಕಾಲದಲ್ಲಿ, ವರದಿಗಾರರಿಗಂತೂ ಅತ್ಯಂತ ಗೌರವದ ಹುದ್ದೆ ಆಗಿತ್ತು, ಸಮೀಪದ ರಿಪ್ಪನ್ ಪೇಟೆಯಲ್ಲಿ ಪ್ರಜಾವಾಣಿ ಪತ್ರಿಕೆಗೆ ವರದಿಗಾರರಾಗಿ ರಾಮಚಂದ್ರರಾವ್ ಇದ್ದರು ಕ್ರಿಯಾಶೀಲ ವರದಿಗಾರರಾಗಿದ್ದರಿಂದ ರಿಪ್ಪನ್ ಪೇಟೆಯ ಸುದ್ದಿ ದಿನಾ ಇರುತ್ತಿತ್ತು ರಿಪ್ಪನ್ ಪೇಟೆಯ ತಾಲ್ಲೂಕ ಕೇಂದ್ರ ಹೊಸನಗರದ ಸುದ್ದಿ ಇರುತ್ತಿರಲಿಲ್ಲ, ನಮಗೆಲ್ಲ ಆಗ ನಮ್ಮ ಊರಿನ ಸುದ್ದಿ ಬರೋದಿಲ್ಲ ಅಂತ ಬೇಸರ ಆಗುತ್ತಿತ್ತು.
ನಮ್ಮ ಊರಿಗೆ ಕಳೆದ ವಷ೯ ವರದಿಗಾರರನ್ನ ನೇಮಿಸಿರುವುದಾಗಿ ಜಿಲ್ಲಾ ವರದಿಗಾರರಾದ ಚಂದ್ರಹಾಸರು ಹೇಳಿದರು ಆದರೂ ನಮ್ಮ ಊರ ವರದಿ ಇಲ್ಲದಿದ್ದರು ಪ್ರಜಾವಾಣಿ ಇನ್ನೂ ನಂಬರ್ ಒಂದು ಚಂದಾದಾರರ ಸಂಖ್ಯೆಯಲ್ಲಿ.
ಬೆಂಗಳೂರಿನ MG ರಸ್ತೆಯ ಪ್ರಜಾವಾಣಿ ಕಚೇರಿ ಬೆಂಗಳೂರಿಗೆ ಹೋಗಿ ಈ ರಸ್ತೆಯಲ್ಲಿ ನಡೆದಾಡುವಾಗ ನಮಗೆಲ್ಲ ಒಂದು ಅಚ್ಚರಿಯ, ಗೌರವದ ಸ್ಥಳವಾಗಿತ್ತು. ಅಲ್ಲಿ ಪ್ರತಿ ದಿನದ ಮುಖ್ಯ ಸುದ್ದಿಯನ್ನ ದೊಡ್ಡ ಅಕ್ಷರದಲ್ಲಿ ದೊಡ್ಡ ಪುಟದಲ್ಲಿ ಅಚ್ಚಿಸಿ ಅಂಟಿಸುತ್ತಿದ್ದನ್ನ ಅಲ್ಲಿ ನಿಂತು ಓದುವುದು ನಮ್ಮoತವರಿಗೆ ಒಂದು ಸಂತೋಷದ ಹವ್ಯಾಸವಾಗಿತ್ತು .
ರಾಜಶೇಖರ ರOತ ಅತ್ಯುತ್ತಮ ವರದಿಗಾರರಿದ್ದರು, ಶಿವಮೊಗ್ಗದಲ್ಲಿ ಜನಪರ ಹೋರಾಟಗಳಾದ ರೈತ ಸಂಘ, ದಲಿತ ಸಂಘಷ೯ ಸಮಿತಿಗಳು ರಾಜ್ಯಕ್ಕೆ ಕೊಡುಗೆಯಾಗಿ ಹುಟ್ಟಿ ಬಂದಾಗ ಪ್ರಜಾವಾಣಿಯೇ ಸುದ್ದಿ ಮಾಡಿದ ಮುಖವಾಣಿ ಆಗ ಬೇರೆ ಪತ್ರಿಕೆ ಇರಲಿಲ್ಲ, ಲೈಸೆನ್ಸ್ ಪಡೆದು ರೇಡಿಯೋ ತರಬೇಕಾದ ಕಾಲವದು.
ದಲಿತ ಸಂಘಷ೯ ಸಮಿತಿಯ ಬಿ.ಕೃಷ್ಪನವರು ಪ್ರಗತಿಪರರ ಜೊತೆ ಸೇರಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಲ್ಲಿನ ಚಂದ್ರಗತ್ತಿಯಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆ ರದ್ದು ಮಾಡಲು ನಡೆಸಿದ ಹೋರಾಟಕ್ಕೆ ಪ್ರಜಾವಾಣಿ ಪತ್ರಿಕೆ ನೀಡಿದ ಬೆಂಬಲ ಅತ್ಯಂತ ದೊಡ್ಡ ಸಹಾಯವಾಯಿತು.
ಇವತ್ತಿನ ಸ್ಪದಾ೯ತ್ಮ ಕ ಪತ್ರಿಕ ಪ್ರಸರಣ ಕಾಲದಲ್ಲಿ ತನ್ನ ಅಸ್ತಿತ್ವಕ್ಕಾಗಿ ಪ್ರಜಾವಾಣಿ ಮುಖ ಪುಟವೂ ಜಾಹೀರಾತಾಗಿದೆ, ರಾಜಕಾರಣಿಗಳನ್ನ ಓಲೈಸುವ ವರದಿಗಳು ಬರಲಾರಂಭಿಸಿದೆ, ವರದಿಗಾರರೂ ಸಾಚಾತನ ಅಲ್ಲಲ್ಲಿ ಕಳೆದು ಕೊಂಡಿದ್ದಾರೆ, ಪತ್ರಿಕೆ ಮಾಲಿಕರು ಪತ್ರಿಕೆ ಮೇಲಿನ ಹಿಡಿತದ ಬಿಗಿ ಕಡಿಮೆ ಮಾಡಿದ್ದಾರೆ ಎನ್ನುವ ವದಂತಿ ಇದೆ ಆದರೂ ಪ್ರಜಾವಾಣಿ ಮಲೆನಾಡಿನಲ್ಲಿ ಇನ್ನು ಜನಪ್ರಿಯ ದಿನಪತ್ರಿಕೆ ಆಗಿ ಪ್ರತಿ ದಿನ ಮುಂಜಾನೆ ಚಂದಾದಾರರ ಮನೆ ಮನ ತಲುಪುತ್ತೆ.
Comments
Post a Comment