# ಹೆರಿಗೆ ಮಾಡಿಸಲು ಮಹೂತ೯ ಇಡಿಸುವ ಕೆಟ್ಟ ಪದ್ದತಿ#
# ಶಿವಮೊಗ್ಗ ಮಹಿಳಾ ಸಮಾವೇಶ 2008ರಲ್ಲಿ ಈ ವಿಷಯ ಚಚೆ೯ ಆಗಲಿ#
"ಜಾಗತಿಕ ತಾಯ್ತನದತ್ತ ನಮ್ಮೆಲ್ಲರ ಪಯಣ"ಎ0ಬ ನುಡಿ ಸೂಕ್ತಿಯೋoದಿಗೆ ದಿನಾ0ಕ 8 ಮಾಚ್೯ರಂದು ಶಿವಮೊಗ್ಗದಲ್ಲಿ ಮಹಿಳಾ ದಿನಾಚಾರಣೆಯನ್ನ ವಿಶಿಷ್ಟವಾಗಿ ಮಹಿಳಾ ಸಮಾವೇಶವಾಗಿ ಆಚರಿಸಲಾಗುತ್ತಿದ್ದು ಇದಕ್ಕೆ ಅನೇಕ ಜಾಗೃತ ಮಹಿಳೆಯರು ಮುಂದಾಗಿದ್ದಾರೆ.
ಅಲ್ಲಿ ಅನೇಕ ಮಹಿಳಾ ಸಮಸ್ಯೆಗಳು, ನಂಬಿಕೆ ಮತ್ತು ಮೂಡನಂಬಿಕೆಯ ಚೌಕಟ್ಟಿನಲ್ಲಿ ಆಚರಣೆಯ ಅನಾಗರೀಕ ಪದ್ದತಿ, ಸರಳ ವಿವಾಹ, ವರದಕ್ಷಿಣೆ, ಮಹಿಳಾ ಮೀಸಲಾತಿ ಬಗ್ಗೆ ಚಚೆ೯ ತೀಮಾ೯ನ ನಡೆಯಲಿದೆ ಎಂದು ಅವರ ಪ್ರಕಟನೆಯಲ್ಲಿ ಓದಿದೆ.
ಇಲ್ಲಿ ನನ್ನದೊಂದು ನಿವೇದನೆ ಇದೆ ಇದು ಇತ್ತೀಚಿನ ದಿನದಲ್ಲಿ ಪ್ರಾರಂಭವಾಗಿದ್ದು ಮುಂದೆ ಇದೊಂದು ಗೀಳಾಗಿ ಸವ೯ ಸಾದಾರಣ ಎಂಬಂತೆ ಒಂದು ಪದ್ದತಿ ಆಗುವ ಸಾಧ್ಯತೆ ಇದೆ.
ಇದು ಹೆರಿಗೆ ಮಾಡಿಸಲು ಮಹೂತ೯ ಇಡುವ ಕೆಟ್ಟ ಪದ್ದತಿ ಬಗ್ಗೆ.
ಪುರೋಹಿತರೊಬ್ಬರು ನನ್ನ ಹತ್ತಿರ ಎನೋ ಚಚಿ೯ಸಲು ಬಂದಿದ್ದರು ಅವರಿಗೆ ನಿರಂತರವಾಗಿ ಒಂದು ಕುಟುಂಬದಿಂದ ಕಾಲ್ ಗಳು ಬರುತ್ತಿತ್ತು, ಅವರಿಬ್ಬರ ಸಂಬಾಷಣೆಯಿ೦ದ ತಿಳಿದಿದ್ದು ಆ ಕುಟುಂಬದ ಮಹಿಳೆ ಶಿವಮೊಗ್ಗದ ಪ್ರತಿಷ್ಟಿತ ನಸಿ೯೦ಗ್ ಹೊಂ ಒಂದರಲ್ಲಿ ಹೆರಿಗೆಗಾಗಿ ಸೇರಿಸಿದ್ದಾರೆ ಅವರ ಕುಟುoಬದವರಿಗೆ ಹುಟ್ಟುವ ಮಗು ಒಳ್ಳೆ ಜಾತಕವ೦ತನಾ (ಳ)ಗಬೇಕು ಹಾಗಾಗಿ ಯಾವ ಸಮಯದಲ್ಲಿ ಹೆರಿಗೆ ಮಾಡಿಸ ಬೇಕೆಂಬ ಕಾಲ ನಿಗದಿಯ ಚಚೆ೯ ಅಂತಿಮವಾಗಿ ವೈದ್ಯರು ಪುರೋಹಿತರ ಹತ್ತಿರ ಚಚಿ೯ಸಿ ಡನ್ ಎಂದರು.
ಮುಂದಿನದ್ದು ಪುರೋಹಿತರ ನಿಗದಿತ ಸಮಯದಲ್ಲಿ ಸಿಜೆರಿಯನ್ನ ಶಸ್ತ್ರ ಚಿಕಿತ್ಸೆ, ಜಾತಕ ಬರೆಸುವುದು.
ಪುರೋಹಿತರಿಗೆ ಕೇಳಿದೆ ನೀವು ನೀಡಿದ ಸಲಹೆ ನಿಮಗೆ ಶಾಸ್ತ್ರ ಸಮ್ಮತಿ ಇದೆಯಾ? ಅಂತ ಅವರಿಗೆ ನನ್ನ ಎದುರು ಸಂಬಾಷಣೆ ಮಾಡಿದ್ದು ಅಪಾಯ ಅನ್ನಿಸಿರಬೇಕು " ಏನು ಮಾಡೋದು ಇದು ಈಗ ಕಾಮನ್ ಆಗಿದೆ, ಮಕ್ಕಳ ಜಾತಕ ಸರಿ ಇದ್ದರೆ ಮುಂದೆ ಒಳ್ಳೆದು ಎನ್ನೋ ನಂಬಿಕೆ ಹಾಗಾಗಿ ಮತ್ತೆ ಈ ನಸಿ೯೦ಗ್ ಹೊಂನವರು ಈಗೆಲ್ಲಿ ಹಾಗೆ ಹೆರಿಗೆ ಮಾಡಲು ಬಿಡುತ್ತಾರೆ, ಸಿಜರಿಯನ್ ಮಾಡಿಸದೆ ಬಿಡೊಲ್ಲ " ಅಂತ ವೈದ್ಯರ ಮೇಲೆ ಆಪಾದಿಸಿದರು.
ಇದು ಒಳ್ಳೆಯದಲ್ಲ ಇಂತಹ ಸಲಹೆ ಕೊಡಬೇಡಿ ಅಂದೆ ನಾನು ಕೊಡದಿದ್ದರೆ ನನ್ನಂತ ಬೇರೆ ಪುರೋಹಿತರ ಹತ್ತಿರ ಹೊಗುತ್ತಾರೆ ಸಿಗೋ ಒಂದು ಸಾವಿರ ಯಾಕೆ ಬಿಡಬೇಕ೦ತ ಸಮಥಿ೯ಸಿ ಕೊಂಡರು.
ಇದೊಂದು ಪಿಡುಗಾಗುತ್ತಿದೆ ಇದೆಲ್ಲ ಮಹಿಳಾ ಮುಖಂಡರಿಗೂ ಗೊತ್ತಿದೆ ಇದರ ಬಗ್ಗೆ ಈ ಸಮಾವೇಶದಲ್ಲಿ ಚಚಿ೯ಸಲು ಯೋಗ್ಯ ವಿಷಯ ಆಗುತ್ತಾ? ಗೊತ್ತಿಲ್ಲ ಕಾದು ನೋಡೊಣ.
Comments
Post a Comment