# ಉಡುಪಿಯ ಮಟ್ಟು ಗುಳ್ಳದ ಮೂಲ ಬಲ್ಲಿರಾ#
ಉಡುಪಿ ಗುಳ್ಳ ಎಂದರೆ ದಂಡನೆಯ ಬದನೆಕಾಯಿ ಅಂತ ಎಲ್ಲರಿಗೂ ಗೊತ್ತು ಆದರೆ ಇಲ್ಲಿನ ಮಟ್ಟು ಗುಳ್ಳಕ್ಕೆ ಬೇರೆಯದೇ ಇತಿಹಾಸ, ಆಧ್ಯಾತ್ಮದ ನಂಟು, ರುಚಿ ಇದೆ.
ಹಾಗಾಗಿಯೆ ಇದಕ್ಕೆ ಜಿಯೋಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ ಇದೆ.
ಉಡುಪಿಯಲ್ಲಿ ಉಡುಪಿ ಗುಳ್ಳ ಅಂತ ಬಕೂ೯ರ್, ಕುಂದಾಪುರದಲ್ಲಿ ಬೆಳೆದ ಗುಳ್ಳಗಳ ಮಾರಾಟ ಜಾಸ್ತಿ ಆದರೆ ಮಟ್ಟು ಗುಳ್ಳ ಮಾತ್ರ ಎಲ್ಲಾ ಕಡೆ ಸಿಗುವುದಿಲ್ಲ.
ಉಡುಪಿಯಿ೦ದ ಮ೦ಗಳೂರು ರಾಷ್ಟ ಹೆದ್ದಾರಿಯಲ್ಲಿ ಕಟಪಾಡಿಯಿ೦ದ ಬಲಕ್ಕೆ ತಿರುಗಿದರೆ ಮಟ್ಟು ಎಂಬ ಹಳ್ಳಿ ಇದೆ ಇಲ್ಲಿ ಉದ್ಯಾವರ ನದಿ ಮತ್ತು ಸ್ವಣ೯ ನದಿ ಹರಿಯುವ ಪ್ರದೇಶದ ಮದ್ಯದ ಸುಮಾರು 500 ಎಕರೆ ಮರಳು ಮಿಶ್ರ ಮಣ್ಣಿನ ಭೂಮಿ ಈ ಗುಳ್ಳ ಬೆಳೆಯುವ ಪ್ರದೇಶ.
ಪ್ರತಿ ಹೆಕ್ಟರ್ ಗೆ ಅಂದಾಜು 40 ಟನ್ ಇಳುವರಿ ಬರುವ ಈ ಬೆಳೆ ಸೆಪ್ಟೆಂಬರ್/ಅಕ್ಟೋಬರ್ ನಲ್ಲಿ ಕೊಯ್ಲಗಿ ಬರುತ್ತೆ, ರಾಸಾಯನಿಕ ಬಳಸದೆ ಹೆಚ್ಚು ಮೀನು ಗೊಬ್ಬರದಲ್ಲಿ ಇದನ್ನ ಬೆಳೆಸುತ್ತಾರೆ, ಯಾವುದೇ ವಿಷದ ಕ್ರಿಮಿನಾಶಕ ಬಳಸುವುದಿಲ್ಲ ಹಾಗಾಗಿ ಈ ಮಟ್ಟು ಗುಳ್ಳ ಸಾವಯವ ತರಕಾರಿ ಮತ್ತು ಇದರ ರುಚಿ ಅತ್ಯಂತ ವಿಭಿನ್ನ .
ಈಗ ಇದನ್ನ ಬೆಳೆಸುವವರ ಸಂಖ್ಯೆ ಕಡಿಮೆ ಆಗಿದೆ, 2011ರಲ್ಲಿ ಇದರ ಪ್ರಾದೇಶಿಕ ವಿಭಿನ್ನತೆ, ಹಿನ್ನೆಲೆಗೆ ಜಿಯಾಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ ಹೊಂದಿದ್ದು ಕನಾ೯ಟಕದ ಈ ತರಕಾರಿಗೆ ಹೆಮ್ಮೆಯ ಕಿರೀಟವಾಗಿದೆ.
ಇದಕ್ಕೆ 400 ವಷ೯ದ ಇತಿಹಾಸವಿದೆ, ಇಲ್ಲಿ ಬೆಳೆದ ಮೊದಲ ಬೆಳೆ ಉಡುಪಿ ಕೃಷ್ಣ ದೇವರಿಗೆ ಸಮಪ೯ಣೆ ಮಾಡುವ ಪರಂಪರೆ ಇದಕ್ಕೆ ಕಾರಣವಾದ ಕಥೆ ಕೂಡ ಇದೆ.
ಉಡುಪಿ ಅಷ್ಟಮಠದ ವಾದಿರಾಜ ಸ್ವಾಮಿಗಳು ಪ್ರತಿ ದಿನ ದೇವರಿಗೆ ಹಯಗ್ರೀವ ನೈವೇದ್ಯ ಮಾಡುತ್ತಿದ್ದರಂತೆ ಇವರನ್ನ ನೋಡಿ ಸಹಿಸದ ದೇವಾಲಯದ ಪುರೋಹಿತರು ಒಂದು ವದಂತಿ ಹರಡಿದ್ದರಂತೆ ಅತ್ಯಂತ ರುಚಿಯಾದ ಹಯಗ್ರೀವ ವಾದಿರಾಜರೇ ನೈವೇದ್ಯದ ಹೆಸರಲ್ಲಿ ಬಾಗಿಲು ಹಾಕಿ ತಿನ್ನುತ್ತಾರೆ ಅಂತ.
ಆದರೆ ಪ್ರತಿ ದಿನ ವಾದಿರಾಜರು ಹಯಗ್ರೀವ ನೈವೇದ್ಯ ಮಾಡಿದಾಗ ದೇವರೇ ಸ್ವೀಕರಿಸಿ ಖಾಲಿ ತಟ್ಟೆ ಇರುತ್ತಿತ್ತಂತೆ ಆದರೆ ಇದನ್ನ ತಪ್ಪಾಗಿ ಅಥ್ತೈ೯ಯಿಸಿದ ಮತ್ತು ಸಹಿಸದ ಪುರೋಹಿತ ವಗ೯ ಹಯಗ್ರೀವದಲ್ಲಿ ವಿಷ ಬೆರೆಸಿದ್ದರಂತೆ, ಇದನ್ನ ತಿಳಿಯದೆ ವಾದಿರಾಜರು ನೈವೇದ್ಯ ಮಾಡಿದ್ದರು ಇದನ್ನ ಸೇವಿಸಿದ ಕೃಷ್ಣ ದಿನದಿಂದ ದಿನಕ್ಕೆ ನೀಲಿ ಆಗಲು ಪ್ರಾರಂಭಿಸಿದನಂತೆ ನಂತರ ಇದಕ್ಕೆ ಕಾರಣ ತಿಳಿದ ವಾದಿರಾಜರು ಶ್ರೀ ಕೃಷ್ಣನಿಂದ ಪರಿಹಾರವಾಗಿ ಈ ವಿಶಿಷ್ಟ ಗುಳ್ಳದ ಬೀಜ ಪಡೆದು ಈ ಮಟ್ಟು ಎಂಬ ಹಳ್ಳಿಯ ಜನಕ್ಕೆ ನೀಡಿ ಬೆಳೆ ಬೆಳೆಸಿ ನಂತರ ಇದನ್ನ ಕೃಷ್ಣನಿಗೆ ಸಮಪ೯ಣೆ ಮಾಡಿದಾಗ ನೀಲಿ ಬಣ್ಣದ ವಿಷ ಹೋಯಿತು ಎಂದು ಇದಕ್ಕೆ ಆಧ್ಯಾತ್ಮದ ಸ್ಥಳ ಪುರಾಣ ಹೇಳುತ್ತಾರೆ.
ಉಡುಪಿ ಅಷ್ಟ ಮಠದಲ್ಲಿ ಈಗಲೂ ಒಳ ಜಗಳ ಇದೆ ಅದೇ ರೀತಿ ಕನಕನ ಕಿಂಡಿ, ಮಟ್ಟುಗುಳ್ಳಗಳ ಪವಾಡದ ಕಥೆಗಳು ಕೂಡ.
ಮೊನ್ನೆ ಉಡುಪಿಯಲ್ಲಿ ಸಿಕ್ಕಿದ ಮಟ್ಟುಗುಳ್ಳ ತ೦ದು ತಿಂದದ್ದಲ್ಲದೆ ಗೆಳೆಯರಿಗೆಲ್ಲ ಕೊಟ್ಟಿದ್ದೆ ಅವರೆಲ್ಲ ಇದರ ರುಚಿಗೆ ಮನ ಸೋತಿದ್ದಾರೆ ಹಾಗೆ ಅವರು ಪ್ರಶ್ನೆ ಹಾಕುತ್ತಾರೆ ಸೇಬು ಹಣ್ಣಿಗೆ ಹಾಕಿದOಗೆ ಇದಕ್ಕೂ ಸೀಲ್ ಹಾಕಿದ್ದು ಏಕೆ? ಅಂತ. ( ಇದು ಜಿಯೋಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್)
MATTU GULLA
THIS IS RARE AND SPECIAL VERITY OF GREEN BRINJAL HAVING GEOGROPHICAL INDICATION TAG CALLED AS MATTU GULLA ONLY CULTIVATING IN SMALL VILLAGE OF UDUPI KARNATAKA STATE.
SEEDS GIVEN BY LORD KRISHNA WHEN HE POISENED IN HAYAGRIVA AND CURED BY THIS VEG NOW ALSO THESE FARMERS OFFER FIRST CROP TO LORD KRISHNA OF UDUPI.
Comments
Post a Comment