ಆರಗ ಜ್ಞಾನೇಂದ್ರ ಮಾಜಿ ಶಾಸಕರು ತೀಥ೯ ಹಳ್ಳಿ ಇವರ ಬಗ್ಗೆ ಮಾಹಿತಿ .
ನಾನು ಆಗ ಶಿವಮೊಗ್ಗ ಜಿ.ಪಂ.ಸದಸ್ಯ ನಮ್ಮ ಊರಿನ ವಾಹನ ಒಂದು ಆರಗದಲ್ಲಿನ ಶಾಲಾ ವಿದ್ಯಾಥಿ೯ನಿಗೆ ಡಿಕ್ಕಿ ಹೊಡೆದು ಆಕೆ ತೀಥ೯ಳ್ಳಿ ಆಸ್ಪತ್ರೆ ಸೇರಿಸಲಾಗಿತ್ತು, ಆಗ ಆರಗ ಜ್ಞಾನೇ೦ದ್ರ ಶಾಸಕರು ಬಿ.ಜೆ.ಪಿ. ಪಕ್ಷದಿಂದ.
ನಮ್ಮ ಊರಿನ ವಾಹನ ಮಾಲಿಕರು ಮುಸ್ಲಿಂ, ಚಾಲಕರು ಮುಸ್ಲಿಂ ಅವರಿಗೆಲ್ಲ ಅವತ್ತು ಜೀವ ಭಯ.
ಬೆಳಿಗ್ಗೆ ನನ್ನ ಕರೆದುಕೊಂಡು ಆರಗದ ಶಾಸಕರ ಮನೆಗೆ ಕರೆದೊಯ್ದರು, ಅಲ್ಲಿ ಶಾಸಕರಾದ ಜ್ಞಾನೇಂದ್ರ ಬೆಳಿಗ್ಗಿನ ಉಪಹಾರಕ್ಕೆ ನಮ್ಮನ್ನ ಕರೆದರು.
ಮುಸ್ಲಿಂ ವಾಹನ ಮಾಲಿಕರಿಗೆ ತೊಂದರೆ ಆಗದಂತೆ ತಮ್ಮ ಊರಿನ ಬಡ ವಿದ್ಯಾಥಿ೯ನಿಗೆ ಅನುಕೂಲವನ್ನೂ ಮಾಡಿದರು, ಇವತ್ತಿಗೂ ಆ ವಾಹನ ಮಾಲಿಕರು ಮತ್ತು ಚಾಲಕರು ಇವರನ್ನ ನೆನಪಿಸಿ ಕೊಳ್ಳುತ್ತಾರೆ.
ಇದೇ ಸಂದಭ೯ದಲ್ಲಿ ಸಂದಶ೯ನವಲ್ಲದ ಆದರೆ ಸಂದಶ೯ನದಂತೆ ನಮ್ಮಿಬ್ಬರ ನಡುವೆ ನಡೆದ ಸಂಬಾಷಣೆ ಬಹಳ ವಷ೯ದ ಹಿಂದೆ, ಶಿವಮೊಗ್ಗದ ಜನ ಹೋರಾಟ ಪತ್ರಿಕೆಯ ಕಾಲಂನಲ್ಲಿ ಬರೆದದ್ದು ಇಲ್ಲಿ ಪ್ರನ: ಉಲ್ಲೇಖಿಸಿದ್ದೇನೆ.
ಇವರ ಬಾಲ್ಯದಲ್ಲಿ ಇವರ ಜೀವನ ಅತ್ಯಂತ ಬಡತನದ್ದು, 7ನೇ ತರಗತಿಯಲ್ಲಿ ಅತ್ಯುತ್ತಮ ದಜೆ೯ಯಲ್ಲಿ ಉತ್ತೀಣ೯ ರಾಗುತ್ತಾರೆ ಆದರೆ ಬಡತನ ಮುಂದಿನ ವಿದ್ಯಾಭ್ಯಾಸಕ್ಕೆ ಅನುವು ನೀಡುವುದಿಲ್ಲ, ಇವರ ತಂದೆ ಊರವರ ಗೋವುಗಳ ಕಾವಲಿಗೆ ಇವರನ್ನ ನೇಮಿಸುತ್ತಾರೆ.
ಬಾಲಕ ಜ್ಞಾನೇಂದ್ರನಿಗೆ ಒಂದು ಖಾಕಿ ಚೆಡ್ಡಿ ಮಾತ್ರ ಉಡುಗೆ. ಬರೀ ಮೈಯಲ್ಲಿ ಯ ಬಾಲಕನಿಗೆ ಗೋಣಿ ಚೀಲವೇ ಕಂಬಳಿ, ಬೆಳಿಗ್ಗೆ ಗೋವುಗಳೂಂದಿಗೆ ಹೋದರೆ ಸೂಯಾ೯ಸ್ತ ಸಮಯಕ್ಕೆ ಹಳ್ಳಿಗೆ ವಾಪಾಸು ಬರುವಾಗ ಮುಂದಿನ ಜೀವನದ ಬಗ್ಗೆ ಯೋಚಿಸಲು ಸಮಯವಾದರೂ ಎಲ್ಲಿ.
ಹೀಗಿದ್ದಾಗ ಒಂದು ದಿನ ಗೋವುಗಳ ಮೇವಿನ ನಲಿದಾಟದ ಮಧ್ಯ ಬಾಲಕ ಜ್ಞಾನೇಂದ್ರ ತನ್ನದೇ ಗೋಪಾಲಕ ವೃತ್ತಿಯ ಬಾಲ್ಯದಾಟದಲ್ಲಿ ಮೈಮರೆತಿದ್ದಾಗ, ಅವರ ಶಾಲಾ ಶಿಕ್ಷಕರು ದಿಡೀರ್ ಪ್ರತ್ಯಕ್ಷರಾದಗ ಜ್ಞಾನೇಂದ್ರ ಬೆದರುತ್ತಾರೆ. ಆದರೆ ಎಲ್ಲಾ ಸನ್ನಿವೇಶ ಅರಿತೇ ಬಂದ ಆ ದೈವ ಸ್ವರೂಪದ ಶಿಕ್ಷಕ ತಕ್ಷಣ ತನ್ನ ಜೊತೆ ಬರಲು ಆಜ್ಞಾಪಿಸುತ್ತಾರೆ.
ಉಭಯ ಸಂಕಟದಲ್ಲಿ ಬಾಲಕ ಸಿಕ್ಕಿ ಬೀಳುತ್ತಾನೆ. ತಾನು ಜವಾಬ್ದಾರಿ ವಹಿಸಿದ ಕೆಲಸ ಬಿಟ್ಟು ಹೋದರೆ? ಗೋವುಗಳ ಪಾಡೇನು? ಇದರ ಜವಾಬ್ದಾರಿ ನೀಡಿದ ತಂದೆಗೆ ಉತ್ತರ? ಈ ಎಲ್ಲಾ ಪ್ರಶ್ನೆಗೆ ಪರಿಹಾರವಾಗಿ ಶಿಕ್ಷಕರು ನಿನ್ನ ತಂದೆಗೆ ಹೇಳಿಯೇ ಬಂದಿದ್ದೇನೆ ಬಾ ಅಂತ ಸೀದಾ ಆರಗದ ಅಕ್ಕಿ ಗಿರಣಿ ಮಾಲಿಕರಾದ ದಾನಿ ಶ್ರೀ ನಾಗರಾಜ ರಾಯರ ಹತ್ತಿರ (ನನ್ನ ನೆನಪು ಸರಿ ಇದ್ದರೆ ಈ ಹೆಸರು ಸರಿ) ಕರೆದೊಯ್ಯತ್ತಾರೆ.
ಅಲ್ಲಿ ಶಿಕ್ಷಕರು ವಿನಂತಿಸುತ್ತಾರೆ ಈ ಬಾಲಕ ಪ್ರತಿಭಾವಂತ ಬಡತನದಿಂದ ಈತನ ತಂದೆ ದನ ಕಾಯಲು ಬಿಟ್ಟಿದ್ದಾರೆ ಆದರೆ ನೀವು ಈತನನ್ನ ಓದಿಸಿದರೆ ಮುಂದೆ ಈತ ಉತ್ತಮ ವ್ಯಕ್ತಿ ಆಗಿ ಸಮಾಜದ ಒಳಿತಿಗೆ ಕಾರಣನಾಗುತ್ತಾನೆ ಅಂದಾಗ, ಅವರು ಜ್ಞಾನೇಂದ್ರರನ್ನ ದತ್ತು ಪಡೆದಂತೆ ಅವರ ಮನೆಯಲ್ಲೇ ವಿದ್ಯಾಭ್ಯಾಸ ಮಾಡಿಸುತ್ತಾರೆ.
ಮುಂದೆ ವಿದ್ಯಾವಂತರಾಗಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಶಾಸಕರಾದ ಆರಗ ಜ್ಞಾನೇ೦ದ್ರರ ಮನೆಯಲ್ಲಿ ದೊಡ್ಡ ಪೋಟೋ ಒಂದು ನಿತ್ಯ ಅವರಿಂದ ಪೂಜಿಸುತ್ತಿರುವುದು, ಅವರನ್ನ ಸಾಕಿ ಸಲುಹಿದ ಆರಗದ ಅಕ್ಕಿ ಗಿರಣಿ ಮಾಲಿಕರಾದ ಬ್ರಾಹಮಣ ನಾಗರಾಜ ರಾಯರದ್ದು.
ಜೀವನದಲ್ಲಿ ಉಪಕಾರ ಮಾಡಿದವರನ್ನ ಮರೆಯದೆ ಸದಾ ಸ್ಮರಿಸುವ, ಆರಗ ಎಂಬ ಹಳ್ಳಿಯಲ್ಲಿ ವಾಸ ಆಗಿರುವ ಮಾಜಿ ಶಾಸಕ ಜ್ಞಾನೇ೦ದ್ರ ಈ ಬಾರಿ ತೀಥ೯ ಹಳ್ಳಿ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪದಿ೯ಸುತ್ತಿದ್ದಾರೆ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment