Skip to main content

# ಶೃ೦ಗೇರಿ ಮಠ V/S ರಾಮಚಂದ್ರಪುರಮಠ ತಾಮರ ಶಾಸನದ ಅಸಲಿಯತ್ತು#

ಇದು ಅತ್ಯ೦ತ ಬುದ್ದಿವಂತರು ಸೃಷ್ಟಿ ಮಾಡಿದ ತಾಮರ ಶಾಸನದ ನಕಲಿ ನಗೆಪಾಟಲಾದ ಪ್ರಸಂಗ.
  ರಾಮಚಂದ್ರಪುರದ ಮಠ ಶ್ರOಗೇರಿ ಮಠಕ್ಕಿ೦ತ ಪುರಾತನವಾದದ್ದು ಎಂದು ಬಿಂಬಿಸಲು ಈ ತಾಮರದ ತಗಡನ್ನ ಎಲ್ಲಾ ರೀತಿ ನಕಲು ಮಾಡಿದ್ದಾರೆ ಆದರೆ ಇಲ್ಲಿ ನಕಲು ಮಾಡಲು ಹೋದವರು ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ.
  ಹೇಗೆಂದರೆ ತಾಮರ ಶಾಸನ ದಯಪಾಲಿಸಿದವರು ಮೃತರಾಗಿ ಮೂರು ವಷ೯ದ ನಂತರ ದಿನಾ೦ಕ ಇವರ ಕೈ ತಪ್ಪಿನಿಂದ ಬರೆದು ಬಿಟ್ಟಿದ್ದಾರೆ.
   ಇದನ್ನ ಕಾಬ೯ನ್ ಡೇಟಿಂಗ್ ಮಾಡಿಸಬೇಕೆಂದು ಪರಿಣಿತರು ಒತ್ತಾಯಿಸಿದ್ದರಿಂದ ಈ ತಾಮರದ ತಗಡು ಅಡಗಿದೆ.
   ಇದನ್ನ ತಯಾರು ಮಾಡಿಸಲು ಕಾರಣ, ತಯಾರು ಮಾಡಿದ ಇತಿಹಾಸ ಸಂಶೊದಕರು, ತಯಾರು ಮಾಡಿಸಿದ ಮಠ ಒಂದರ ಸ್ವಾಮಿಗಳು ಈ ನಕಲಿಯನ್ನ ಸಮಾಜಕ್ಕೆ ಅಸಲಿ ಎಂದು ಪುಂಖಾನುಪುಂಖಾ ಮಾಡಿದ ಭಾಷಣ ಇದನ್ನ ಸಮಥಿ೯ಸುತ್ತಿರುವ ಅವರ ಪಟಾಲಂಗಳು ಇತಿಹಾಸ ತಿರುಚುವ ಈ ಶತಮಾನದ ದೊಡ್ಡ ಅಪರಾದ ಮಾಡಿದ್ದಾರೆ.

ಈ ಬಗ್ಗೆ ಅನೇಕರು ಪೇಸ್ ಬುಕ್ನಲ್ಲಿ ಬರೆದ ಬರೆಹ ಇಲ್ಲಿ ಓದುಗರಿಗಾಗಿ ಲಗತ್ತಿಸಿದೆ.

[3/3, 7:40 AM] ARUN PRASAD: ಶೃಂಗೇರೀನೇ ಜೇಷ್ಟ ಅಂತ ನೀವು ಹೇಳ್ತೀರಿ .ಆದರೆ ನಿನ್ನೆ ಅದ್ಯಾರೋ ತಾಮ್ರಶಾಸನದ ಬಗ್ಗೆ ಬರೆದು ಅದರ ಫೋಟೋಹಾಕಿ ನಮ್ಮದೇ ಪುರಾತನ ಅಂತಿದ್ರು ?

[3/3, 7:41 AM] ARUN PRASAD: ತಾಮ್ರ ಶಾಸನವನ್ನು carbon dating ಗೆ ಒಳಪಡಿಸಿದರೆ ಷಡ್ಯಂತ್ರದ ಗುಟ್ಟು ರಟ್ಟಾಗುತ್ತದೆ.

[3/3, 7:41 AM] ARUN PRASAD: Manjappa K L Manjappa, Seetharam Bhat, Edurkala Ishwar Bhat , Shantaram Hegdekatte ಒಂದು ವಿಷಯ ಗಮನಿಸಿ. ಕರ್ನಾಟಕದ ಚರಿತ್ರೆಯಲ್ಲಿ ವಿದ್ಯಾರಣ್ಯರು ಮಠ ಸ್ಥಾಪಿಸಿದ ಬಗ್ಗೆ ಅಥವಾ ತಗಡು ನೀಡಿದ ಬಗ್ಗೆ ಯಾವ ಉಲ್ಲೇಖವೂ ಇಲ್ಲ. ಕರ್ನಾಟಕ ಇತಿಹಾಸ ದರ್ಶನವೆಂಬ ಗ್ರಂಥದಲ್ಲೂ ಇಲ್ಲ. 

ಆಚಾರ್ಯ ಶಂಕರರು ಸ್ಥಾಪಿಸಿದ ದಕ್ಷಿಣಾಮ್ನಾಯ ಪೀಠ ಶ್ರುಂಗೇರಿಯಲ್ಲಿ ಪೀಠಾರೋಹಣ ಮಾಡಿದ ಸುರೇಶ್ವರಾಚಾರ್ಯರಿಂದ ದೀಕ್ಷೆ ಪಡೆದು ಅವರ ಶಿಷ್ಯರಾದ ಶ್ರೀ ವಿದ್ಯಾನಂದರನ್ನು ಗೋಕರ್ಣ ರಘೂತ್ತಮಮಠದ ಪೀಠಾಧಿಪತಿಯಾಗಿ ನೇಮಿಸಿದರೆಂದು ಚರಿತ್ರೆ ಹೇಳುತ್ತದೆ. ಗುರು ಮೊದಲೋ ಅಲ್ಲ ಗುರುವಿನಿಂದ ದೀಕ್ಷೆ ಪಡೆದವ ಮೊದಲೋ? 

ಹೀಗಿರುವಾಗ ಯಾವನೋ ೩೫೦- ೪೦೦ ವರ್ಷದ ನಂತರ ತಗಡು ನೀಡಿದ್ದಾನೆಂದರೆ ನಂಬುವ ಮಾತಲ್ಲ. ವಿದ್ಯಾನಂದರು ಬೇರೆ, ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರಿಗೆ ಬೆಂಬಲವಾದ ವಿದ್ಯಾರಣ್ಯರೇ ಬೇರೆ. ತಗಡಿನಲ್ಲಿದೆಯೆನ್ನುವ ರಾಜನು ಚರಿತ್ರೆಯ ಪ್ರಕಾರ ಆ ಕಾಲದಲ್ಲೇ ಇರಲಿಲ್ಲ. 

ರಾಜಕೀಯ ಸಂದಿಗ್ಧ, ಯುದ್ಧ ಇತ್ಯಾದಿ ಸಮಸ್ಯೆಗಳಿರುವಾಗ ರಾಜನಾದವನಿಗೆ ತಗಡು ನೀಡಲು ಪುರುಸೊತ್ತೆಲ್ಲಿ? 

ತಗಡು ನೀಡಿದ್ದು ಇತ್ಯಾದಿ ಕತೆಗಳೆಲ್ಲಾ ಶುದ್ಧ ಸುಳ್ಳು ಕಥೆ, ಸುಳ್ಳಿನ ಪರಂಪರೆ. 

ಕೃಷಿಯಲ್ಲಿ, ಸಾಗುವಳಿ ಇತ್ಯಾದಿ ಕೆಲಸಗಳಲ್ಲಿ ಮುಳುಗಿರುವ ನಮ್ಮವರನ್ನು ನಂಬಿಸಲು ಹೆಣೆದ ಕಟ್ಟುಕಥೆ.

[3/3, 7:43 AM] ARUN PRASAD: Shravan Shantanu   -- What you wrote above is right. ಈ ತಾಮ್ರ ಪಾತ್ರಾದಿಗಳ ವಿಷಯ ಹಾಗೂ ಇತರ  ಅನೇಕ ವಿಷಯಗಳೂ - ವಿವಾದಾತ್ಮಕ ಎಂಬುದನ್ನು  "ಸಂದೇಹ ಸೂಚಿ"  ಎಂಬ ಪುಸ್ತಕ ಹೇಳುತ್ತಿದೆ ||  ೧. -- ಬೇರೆ ವಿಷಯ ಬದಿಗಿಟ್ಟರೂ  -- ತಾಮ್ರ ಪತ್ರ ದಲ್ಲಿ  -- "ನಿಮ್ಮ ಪರಂಪರೆ ನಮಗಿಂತ" ಜ್ಯೇಷ್ಟ ಪರಂಪರೆ ಎಂದು ಬರೆದು ಕೊಟ್ಟಿದ್ದಾರೆ ಎನ್ನಲಾದ ದಿನಾಂಕ ದ ಮೊದಲೇ ಚಾರಿತ್ರಿಕ ದಾಖಲೆಗಳಂತೆ  "ಶ್ರೀಮಾದಾಚಾರ್ಯ ವಿದ್ಯಾರಣ್ಯರು"  - ಸಮಾಧಿಸ್ತರಾಗಿದ್ದರು ಎಂದು ಬರೆಯಲಾಗಿದೆ || --  ೨. ಹೇಗೆಯೇ ಇದ್ದರೂ "ಅದ್ವೈತ"  ಮಠಾಧೀಶರೊಬ್ಬರು - ಅಮ್ನಾಯವನ್ನು ನಿಂದಿಸಿ ತನ್ನ ಶಿಷ್ಯ ಸಮುದಾಯವನ್ನು ಮೋಹ ಗೊಳಿಸಿ ಆಮ್ನಾಯದ ವಿರುದ್ಧ ಎತ್ತಿ ಕಟ್ಟಿದರೆ -- ಅವರಲ್ಲಿ ಮಠಾನುಶಾಸ ದ ನಿಯಮದಂತೇ - ಪೀಠಾ ರೂಢನಿಗೆ ಇರಲೇ ಬೇಕಾದ ಸನ್ಯಾಸ ಲಕ್ಷಣ ಗಳು ಇವೆ ಎಂಬುದನ್ನು ಒಪ್ಪಿಕೊಳ್ಳಲು ಸಾದ್ಯವೇ ? || ಪೀಠ ದ ಮೇಲೆ ನಮಗೆಲ್ಲಾ  ಅಪಾರ ಗೌರವವಿದ್ದರೂ -- ಪೀಠಾಧಿಪತಿಗಳು ತಪ್ಪಿ ನಡೆದಲ್ಲಿ ಸುಮ್ಮನೇ ಇದ್ದು ಅವರನ್ನೇ ಓಲೈಸ ಬೇಕೆಂದು ಯಾವ ಶಾಸ್ತ್ರವೂ ಹೇಳುವುದಿಲ್ಲ || --

[3/3, 7:43 AM] ARUN PRASAD: Edurkala Ishwar Bhat ಅಣ್ಣಾ ಒಂದನೇ ದೇವರಾಯನು ಗಜ ಬೇಂಟೆಕಾರ, ವೀರಪರಮೇಶ್ವರ, ವೀರಪ್ರತಾಪ ಇತ್ಯಾದಿ ಬಿರುದಾಂಕಿತನಾಗಿದ್ದು ಹೌದಾದರೂ ಅವನ ಕಾಲ ೧೪೦೬ ನಂತರ ಬರುತ್ತದೆ. ವಿಜಯನಗರ ಸಾಮ್ರಾಜ್ಯದ ರಾಜರ ಪಟ್ಟಿ ನೋಡಿ. 


ವಿಜಯ ನಗರ ಸಾಮ್ರಾಜ್ಯವನ್ನಾಳಿದ ರಾಜರು:- 


ಸಂಗಮ ವಂಶ

1. 1 ನೇ ಹರಿಹರ - 1336 – 1356

2. 1 ನೇ ಬುಕ್ಕ - 1356 – 1377

3. 2ನೇ ಹರಿಹರ - 1377 – 1404

4. 1 ನೇ ವಿರುಪಾಕ್ಷಾ - 1404 – 1405

5. 2ನೇ ಬುಕ್ಕ - 1405 – 1406

6. 1 ನೇ ದೇವರಾಯ - 1406 – 1422

7. ರಾಮಚಂದ್ರ - 1422 – 1422

8. ವೀರ ವಿಜಯ - 1422 – 1424

9. 2 ನೇ ದೇವರಾಯ ( ಫ್ರೌಢ ದೇವರಾಯ ) – 1424 – 1446

10. ಮಲ್ಲಿಕಾರ್ಜುನ - 1466 – 1465

11. 2 ನೇ ವಿರೂಪಾಕ್ಷ - 1465 1485

12. ಫ್ರೌಢದೇವರಾಯ - 1485


ಸಾಳ್ವ ವಂಶ

13. ಸಾಳುವ ನರಸಿಂಹ - 1485 – 1491

14. ತಿಮ್ಮ ಭೂಪ - 1491

15. 2 ನೇ ನರಸಿಂಹ - 1491 – 1503


ತುಳುವ ವಂಶ

16. ವೀರ ನರಸಿಂಹ - 1503 – 1505

17. 2 ನೇ ನರಸಿಂಹ - 1050 – 1509

18. ಕೃಷ್ಮದೇವರಾಯ - 1509 – 1529

19. ಅಚ್ಚುತ ರಾಯ - 1529 – 1542

20. 1 ನೇ ವೆಂಕಟರಾಯ - 1542

21. ಸದಾಶಿವರಾಯ - 1542 – 1570


ಸಂಗಮ ವಂಶ(ಅರವೀಡು)

22. ತಿರುಮಲ ರಾಯ -

23. 1 ನೇ ವೆಂಕಟರಾಯ

24. ಶ್ರೀರಂಗರಾಯ

25. 2 ನೇ ವೆಂಕಟಾದ್ರಿ

26. 2 ನೇ ಶ್ರೀರಂಗ

27. ರಾಮದೇವ ( ಮಂತ್ರಿ ವಿಚ್ಚಮ ನಾಯಕ )

28. 3 ನೇ ವೆಂಕಟ ರಾಯ

29. 3 ನೇ ರಂಗರಾಯ ( ಸಾಮ್ರಾಜ್ಯ ರಹಿತ )

[3/3, 7:51 AM] ARUN PRASAD: ಸ್ವಯಂ   ಶ್ರೀಮಾದಾಚಾರ್ಯ ಶಂಕರರಿಂದಲೇ - ಸ್ಥಾಪಿಸಲ್ಪಟ್ಟ ಪೀಠ ಗಳು ನಾಲ್ಕು -ಇವುಗಳು "ಆಮ್ನಾಯ ಪೀಠಗಳು" ಎಂದು ಜಗತ್ಪ್ರಸಿದ್ಧ || ಅವುಗಳಲ್ಲಿ - ಭಾರತ ವರ್ಷದ ದಕ್ಷಿಣ ಭಾಗಕ್ಕೆ - ಆಮ್ನಾಯ "ಶೃಂಗೇರಿ ಶಾರದಾ ಪೀಠ" -- ಈ ನಾಲ್ಕು ಆಮ್ನಾಯಗಳೂ -- ಸರ್ವಶ್ರೇಷ್ಟ ಹಾಗೂ "ಜ್ಯೇಷ್ಟ" ಪರಂಪರಾಗತ ಪೀಠಗಳು ಎಂಬುದು ಹೆಚ್ಚಿನ ಎಲ್ಲ ವಿಧ್ವಾಂಸರೂ ಒಪ್ಪುವ ಚಾರಿತ್ರಿಕ ಸತ್ಯ - || ಮುಂದೆ ಭಾರತದ ಆದ್ಯಂತ ಅನೇಕ ಪೀಠಗಳು - ಈ ಶಿಷ್ಯ ಪರಂಪರೆಯಿಂದ ಸ್ಥಾಪಿಸಲ್ಪಟ್ಟವು || -- ಆದುದರಿಂದ ಈ ಅಮ್ನಾಯಗಳನ್ನು ನಿಂದಿಸುವುದು "ಗುರು ನಿಂದೆ ಎಂದು ಹೇಳಬೇಕಾಗಿಲ್ಲ " -- ಯಾಕೆಂದರೆ ಈ ನಿಂದೆಯು ಈ ಆಮ್ನಾಯ ಪೀಠ ದ ಸ್ಥಾಪಕರನ್ನೇ ನಿಂದಿಸಿದಂತೇ ಆಗ ಬಹುದು || - ಅದೂ ಈ ಆಮ್ನಾಯವು ತನ್ನ ಸಂಪ್ರದಾಯದ ಇತರ ಯತಿಗಳ ಸಮಕ್ಷಮದಲ್ಲಿ -- ಸನಾತನ ಪರಂಪರೆಯ ಪಾವಿತ್ರ್ಯತೆಯನ್ನು - ಉಳಿಸಲೋಸುಗ - ನ್ಯಾಯ ಬಾಹಿರ ವ್ಯವಹಾರಗಳಾದ " ಅತ್ಯಾಚಾರ ಹಾಗೂ ಅನೈತಿಕ ಸಂಬಂಧ ಹೊಂದಿದ ಆರೋಪವನ್ನು ಹೊತ್ತ ಯತಿಗಳನ್ನು" - ಸನಾತನ ಸಂವರ್ಧಿನೀ ಸಭಾ ದಿಂದ ಕೈ ಬಿಡಲಾಗುವುದು - ಎಂಬ ನಿರ್ಣಯವನ್ನು "ಸರ್ವಾನುಮತದಿಂದ" ತೆಗೆದುಕೊಂಡಿದ್ದಾರೆ || -- ಈ ನಿರ್ಣಯಕ್ಕೆ ತಲೆ ಬಾಗುವುದು "ಸಂತ ರಾದವರ" ಪರಮ ಕರ್ತವ್ಯ - || ಬದಲಾಗಿ - ಈ ನಿರ್ಣಯವನ್ನೆ ಖಂಡಿಸಿ --ಈ ಧರ್ಮ ಬದ್ಧರಾದ ಯತಿ ಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಅತ್ಯಂತ ಹೀನ ಕರವಾದ - "ಗುರು ನಿಂದೆ" - ಎಂಬುದು ಸ್ಫಷ್ಟ - || ಆದುದರಿಂದ ಮುಗ್ಧ ಸುಜನರು ಈ ವಿಷಯ ಗಳನ್ನು ಅರಿತುಕೊಂಡರೆ - ಈ ಪಾತಕ ದಿಂದ ತಪ್ಪಿಸಿಕೊಂಡು ಕೃತಾರ್ಥರಾಗ ಬಹುದು || ಈ ನಿರ್ಣಯ ವಿರೋಧಿಸುವವರು - ಮೇಲೆ ಹೇಳಿದ ಪಾಪ ಕಾರ್ಯದಲ್ಲಿ ಭಾಗಿಯಾದಂತೆ ಸರಿ || -- ಈ ಸತ್ಯ ವನ್ನು ಅರಿತು ಎಲ್ಲರೂ ವಾಸ್ತವಕ್ಕೆ ಬರಬೇಕು ಎಂಬುದು ನಮ್ಮ "ಸದಾಶಯ" ||

[3/3, 7:53 AM] ARUN PRASAD: Edurkala Ishwar Bhat ಅಣ್ಣಾ , ಎಲ್ಲಾ ಷಡ್ಯಂತ್ರ ಎಂದು ವ್ಯವಸ್ತಿತವಾಗಿ ಪ್ರಚಾರ ನಡೆದಿದೆ. ಗೋಕರ್ಣ ದೇವಾಲಯ ಹಸ್ತಾಂತರದ ಕೇಸನ್ನು ನಡೆಸಬೇಕೆಂದು  ಶ್ರುಂಗೇರಿ ಜಗದ್ಗುರುಗಳೇ ವಕೀಲನಿಗೆ ಹೇಳಿದ್ದಾರಂತೆ. ಅದನ್ನು ವಕೀಲನೇ ಒಪ್ಪಿಕೊಂಡಿದ್ದಾನಂತೆ. 

ಆದ್ರೆ ಅದನ್ನು ನೋಡಿದವರಿಲ್ಲ, ಕೇಳಿದವರಂತೂ ಮೊದಲೇ ಇಲ್ಲ. ಅದಕ್ಕಾಗಿ ನಡೆದ ಷಡ್ಯಂತ್ರ ಎಂದು ಪ್ರಚಾರ ಮಾಡ್ತಿದ್ದಾನೆ. 

ಇಂತಹಾ ಅಪಪ್ರಚಾರದಿಂದಾಗಿ ನನ್ನ ಮತ್ತು ನಿಮ್ಮೆಲ್ಲರ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿದೆ. ಏನು ಮಾಡಬಹುದೆಂದು ತಿಳಿಸುವಿರಾ.

[3/3, 4:12 PM] ARUN PRASAD: Chidanand Shastri

ಹೊಸಗುಂದದ ಟ್ರಸ್ಟ್ ನ ಅಕ್ರಮವಾಗಿ ಬದಲಾಯಿಸಿ ಅದರಲ್ಲಿ ತಾವು ತೂರಿಕೊಂಡು ಕೃಷ್ಣಶಾಸ್ತ್ರಿ & ಟೀಮಿನ ಮೂಲಕ ಹುಸಿ ಅತ್ಯಾಚಾರದ ಕತೆ ಹಣೆದವರು ಯಾರು?

ಗೋಕರ್ಣದ ನಕಲೀ ಸಿಡಿ ಪ್ರಕರಣದ ಆಪಾದಿತರ ಮೇಲೆ ಬಂಧನದ ವಾರೆಂಟ್ ಇರುವಾಗ ಅವರನ್ನು ಯಾವ ಮಠದ ಪಡಸಾಲೆಯಲ್ಲಿ ಅಡಗಿಸಿಡಲಾಗಿತ್ತು?

ಶ್ರೀರಾಮಚಂದ್ರಾಪುರ ಮಠದ ವಿರುದ್ಧ ಹಿಂದಿನಿಂದ ಇಂದಿನವರೆಗೆ ವಿವಿಧ ನ್ಯಾಯಾಲಯದಲ್ಲಿ ನೆಡೆಯುತ್ತಿರುವ ವಿಭಿನ್ನ ಕೇಸ್ ಗಳಿಗೆಲ್ಲಾ ವಿರೋಧಿ ವಕೀಲನಾಗಿ ಹಾಜರಾಗುತ್ತಿರುವ ಆ ವಕೀಲ ಆ ಮಠದ ಪರಮನಿಷ್ಟ ಹಾಗೂ ಆ ಮಠದ ಕಾನೂನು ಸಲಹೆಗಾರ ಎಂಬುದು ಸುಳ್ಳೇ?

ಗೋಕರ್ಣ ಹಿತರಕ್ಷಣಾ ಸಮಿತಿಯ ಚಂದನ್ ನ ಬೆದರಿಕೆ ಪಿ.ಐ.ಎಲ್ ಕೇಸ್ ನ ತೀರ್ಪು ಬಂದಾಗ ತೆರೆದ ನ್ಯಾಯಾಲಯದಲ್ಲಿ ರಾಮಚಂದ್ರಾಪುರ ಮಠದ ಸ್ವಾಮಿಗಳನ್ನು ಜೈಲಿಗೆ ಕಳಿಸುತ್ತೇನೆಂದು ಚೀರಾಡಿದ ವಕೀಲ ಸುಬ್ರಹ್ಮಣ್ಯಶಾಸ್ತ್ರಿಗೆ ಹಿನ್ನಲೆಯಾಗಿರುವ ಆತನ ಅತ್ಯಾಪ್ತ ಮಠ ಯಾವುದು?

ಸಾಗರ ಸಿದ್ದಾಪುರದಲ್ಲಿ ಮಠದ ಶಿಷ್ಯರನ್ನು ಎತ್ತಿಕಟ್ಟಿ ಒಡೆದು ಅವರನ್ನೇ ಧರ್ಮದರ್ಶಿ ಮಾಡಿ ಮಠವನ್ನು ಕಟ್ಟಿದವರು ಯಾರು?

ಪರಂಪರಾಗತವಾಗಿ ನೆಡೆದು ಬರುತ್ತಿರುಲ ಕೊಲ್ಲೂರಿನ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಶ್ರೀರಾಮಚಂದ್ರಾಪುರ ಮಠದ ಪೀಠಸ್ಥರಿಗೆ ಭಾಗವಹಿಸಲು ಅವಕಾಶ ನೀಡಬಾರದೆಂದು ಮುಜರಾಯಿ ಇಲಾಖೆಯಲ್ಲಿ ಬೇಡಿಕೆ ಇಟ್ಟ ಮಠ ಯಾವುದು?

ಗೋಕರ್ಣ ಹಸ್ತಾಂತರದ ನಂತರ ಯಾವ ಮಠದಲ್ಲಿ ಸ್ಥಾಪಿತ ಹಿತಾಸಕ್ತಿಗಳ ಸರಣಿ ಸಭೆ ನೆಡೆಯಿತು?


ಇಂತಾ ಇನ್ನೂ ಹತ್ತಾರು ಪ್ರಶ್ನೆಗಳಿಗೆ ನೀವೇ ಉತ್ತರ ಕಂಡುಕೊಳ್ಳಿ, ಆಗ ಯಾರು ಯಾರ್ಯಾರು ಯಾಕಾಗಿ ಶ್ರೀರಾಮಚಂದ್ರಾಪುರ ಮಠದ ವಿರುಧ್ಧ ತಮ್ಮ ಯಾವ ಹಿತಾಸಕ್ತಿಯ ಅನುಷ್ಟಾನಕ್ಕಾಗಿ ಹೇಗೆಲ್ಲಾ ನಿಂತಿದ್ದಾರೆಂಬುದಕ್ಕೆ ಉತ್ತರ ತಮಗೇ ತಿಳಿಯುವುದು.


ಈ ಪ್ರಶ್ನೆಗಳಿಗೆ ಸೂಕ್ತ ಉತ್ತರ, ಅದಕ್ಕೆ ಸಂಬಂಧಿಸಿದ ಸಾಕ್ಷ್ಯ-ದಾಖಲೆ ಎರಡೂ ಇದೆ.

[3/4, 8:57 PM] ARUN PRASAD: 2016ರ ಆಕ್ಟೋಬರ್ 3ನೇ ವಾರದ ಎಡ ಬಲ ತಾಮ್ರಶಾಸನದ ಬಗ್ಗೆ ಚರ್ಚಿತವಾಗಿತ್ತು.ಆಗ ತಾಮ್ರಶಾಸನದಲ್ಲಿ ನಮೂದಿಸಿದ ಇಸವಿಗಿಂತ ಮೂರು ವರ್ಷ ಮೊದಲೇ ಶ್ರೀ ವಿದ್ಯಾರಣ್ಯ ಗುರುಗಳು ದೇಹತ್ಯಾಗ ಮಾಡಿದ್ದರು ಎಂದು ವಾದಿಸಲಾಗಿತ್ತು.ಹಾಗಾಗಿ ವಿದ್ಯಾರಣ್ಯರು ತಾಮ್ರಶಾಸನ ಕೊಟ್ಟಿದ್ದು ಸುಳ್ಳು,ಅದನ್ನು ಇತ್ತಿಚೆಗೆ ತಯಾರು ಮಾಡಿದ್ದು ಎಂದು ನಿಷ್ಕರ್ಷೆಗೆ ಬರಲಾಗಿತ್ತು.


ನನಗೀಗ ಅದೆಲ್ಲಾ ಹೇಗೆ ಏನು ಎಂಬುದು ಮರೆತು ಹೋಗಿದೆ. ಈ ಕೆಳಗೆ ಕಾಣಿಸಿದ ದಾಖಲೆಗಳಿದ್ದಾವೆ.ಗೋಪಾಲ ಗಾಯತ್ರಿಯವರು ಕಾಮೆಂಟ್ ಮಾಡಿದ ಸಂಸ್ಕೃತ ಲಿಪಿಯಲ್ಲಿರುವ ತಾಮ್ರಶಾಸನ ಎಂಬ ಎಂಬ ಎರಡು ಪುಟದ ದಾಖಲೆ ಇದಲ್ಲದೆ ಪ್ರತ್ಯೇಕವಾಗಿದ್ದು ಅದು ಈ ತಾಮ್ರಶಾಸನಕ್ಕೆ ಸಂಬಂಧಪಟ್ಟಂತೆ ಕಾಣುವುದಿಲ್ಲ,


ಈ ವಿಚಾರದಲ್ಲಿ ಅಪಾರ ಮಾಹಿತಿ ಇರುವ ತಜ್ಞರೊಬ್ಬರ ಪ್ರಕಾರ ಮಠದವರು ಹೇಳುವಂತಹ ತಾಮ್ರಶಾಸನ ಎಲ್ಲೂ ಇದ್ದ ಬಗ್ಗೆ ಯಾವ ಧಾಖಲೆಯು ಇಲ್ಲ. ಮತ್ತು ಈ ಪ್ರಕಟಿತ ಶಾಸನದಲ್ಲಿ ಇಸವಿ ಮತ್ತು ಸಂವತ್ಸರ ಒಂದಕ್ಕೊಂದು ಕೂಡುವುದಿಲ್ಲ ಎನ್ನುತ್ತಿದ್ದಾರೆ


ಇವಿಷ್ಟು ವಿಷಯದೊಂದಿಗೆ ಈ ಬಗ್ಗೆ ನಮ್ಮವರಿಗೆ ಯಾವ ಯಾವ ಮಾಹಿತಿ ಗೋತ್ತಿದೆ ಅದನ್ನು ಚರ್ಚಿಸಿ ಸತ್ಯವನ್ನು ಸರಿಯಾಗಿ ಶೋಧಿಸಲು ಸಹಾಕಾರ ಕೊಡಬೇಕು.ಕೆಲವು ಜವಾಭ್ಧಾರಿಯುತ ಜನರಿಗೆ ಉತ್ತರಿಸ ಬೇಕಾಗಿದೆ.


ದಯವಿಟ್ಟು ವಿಷಯದ ಬಗ್ಗೆ ಗೋತ್ತಿದ್ದವರು ಗಂಭೀರವಾಗಿ ಪರಿಗಣಿಸ ಬೇಕಾಗಿ ವಿನಂತಿ

[3/4, 8:58 PM] ARUN PRASAD: ತಾಮ್ರಶಾಸನದಲ್ಲಿ ಇವರದ್ದು ಹೀರೇ ಶಿಷ್ಯರ ಮಠಮತ್ತು ಶೃಂಗೇರಿ ಕಿರಿಯ ಶಿಷ್ಯರ ಮಠ ಎಂದು ಹೇಳಿದೆ ಎಂಬುದಾಗಿ ರಾಘವೇಶ್ವರರು ತಮ್ಮ ಪ್ರವಚನದಲ್ಲಿ ತಿಳಿಸಿದ್ದಾರೆ.ಇದೇಲ್ಲಾ ಇತಿಹಾಸಕ್ಕೆ ಸಂಬಂಧಪಟ್ಟ ವಿಷಯಗಳು.ಈ ವಿಷಯದ ಇತಿಹಾಸದ ಗಹನ ಆಧ್ಯಯನ ಮಾಡದ ನಾವು ಈ ವರೆಗೆ ತಿಳಿದುಕೊಂಡಿದ್ದು ಎಂದರೆ ಶಂಕರಾಚಾರ್ಯರು ದೇಶದ ನಾಲ್ಕು ಕಡೆ ನಾಲ್ಕು ಮಠ ಸ್ಥಾಪಿಸಿದ್ದು ಅದರಲ್ಲಿ ಶೃಂಗೇರಿಯು ಒಂದು. ಈ ನಮ್ಮ ತಿಳವಳಿಕೆಯನ್ನು ಉಲ್ಟಾ ಹೊಡೆಸುವ ಈ ತಾಮ್ರಶಾಸನ ಶೃಂಗೇರಿಯವರಿಗೂ,ಹಾಗೂ ಇತಿಹಾಸಜ್ಞರಿಗು ಸವಾಲು ಹಾಕುವಂತಾದ್ದು.      ಈ ವಿಷಯದಿಂದ ಕಳ್ಳಕೂಡಿಕೆದಾರರೇನೂ ಸಂಪನ್ನರಾಗುವುದಿಲ್ಲ ಎಂಬುದು ಬೇರೆ ಪ್ರಶ್ನೆ.

[3/4, 9:02 PM] ARUN PRASAD: There is no such copper plate. Inscription reg. the matha.Just a history written by keladi Gunda Jois. That book also doesn’t refer any substantial evidence.

[3/4, 9:03 PM] ARUN PRASAD: Yes this should be investigated and the culprits should be exposed.

[3/4, 9:03 PM] ARUN PRASAD: Keladi Gunda JOIS avoided our cross questionnaire and ultimately said he is full of agony and not to disturb about this copper plate. But his letter says under the instructions and funding of pontiff he is trying to search. That search could have taken a different course. But EPIGRAPHY OF INDIA has not recorded such copper plate. In the British system there was series of enquiry commission and circulars, have recorded place where such plate or stones are found

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...