# ಚಂದ್ರೂ ಸ್ಟುಡಿಯೋ ನಿರಂಜನ ಅಂದರೆ ಶಿವಮೊಗ್ಗದ ಕಾಂಗ್ರೇಸ್ ವಕ್೯ ಶಾಪ್ ಆಗಿತ್ತು#
ಇವರ ದೊಡ್ಡಪ್ಪ ಶ್ರೀ ರವಳಪ್ಪಾ ನವರು ಶಾಂತವೇರಿ ಗೋಪಾಲಗೌಡರ ಸಮಾಜವಾದಿ ಪಕ್ಷದ ಒಡನಾಡಿಗಳು ಆಗಿನ ಶಿವಮೊಗ್ಗದ ಪುರಸಭೆಯಲ್ಲಿ ಜನ ಪ್ರತಿನಿಧಿ ಆಗಿ, ಪದಾದಿಕಾರಿಗಳಾಗಿ ಜನಪ್ರಿಯತೆಗಳಿಸಿದವರು ಅವರ ಸಹೋದರ ಚಂದ್ರಪ್ಪ ಪ್ರಗತಿ ಪರ ರೈತರು ಎಲ್ಲಾ ರಾಜಕೀಯ ದುರೀಣರ ಒಡನಾಟ ಹೊಂದಿದ್ದವರು ಅವರ ಹೆಸರಲ್ಲಿ ಶಿವಮೊಗ್ಗದ ನೆಹರೂ ರಸ್ತೆಯ ಚಂದ್ರು ಸ್ಟುಡಿಯೋ ಕೆಲವು ದಶಮಾನ ಮಿಂಚಿದ ಉದ್ಯಮ ಈಗ ಶಿವಮೊಗ್ಗದ ಕಾಂಗ್ರೆಸ್ ಕಚೇರಿ ಪಕ್ಕದ ಮಹಲಿನ ಮಾಳಿಗೆ ಮೇಲೆ ಇದೆ.
ರವಳಪ್ಪಾರ ತಮ್ಮನ ಮಗ ನಿರOಜನ ವಿದ್ಯಾವಂತ, ದಾನಿ ಮತ್ತು ಕಾಂಗ್ರೇಸ್ನ ಕಟ್ಟಾಳು ಇವರ ಪೋಟೋ ಸ್ಟುಡಿಯೋ ಈಗಿನ ರಾಜಕೀಯ ಮುಂದಾಳುಗಳಾದ ರಮೇಶ್, ದಿನೇಶ್, ರವಿ ಮುಂತಾದವರ ಕಾಯ೯ ಸ್ಥಾನ ಆಗಿತ್ತು.
ವಿದ್ಯಾಭ್ಯಾಸ ಮಾಡಲು ತೊಂದರೆ ಆದ ಸಾವಿರಾರು ವಿದ್ಯಾಥಿ೯ಗಳಿಗೆ ನಿರಂಜನ ಆತ್ಮವಿಶ್ವಾಸ ತುಂಬಿ ಅವರ ಕನಸು ನನಸು ಮಾಡಿದ್ದನ್ನ ನಾವೆಲ್ಲ ನೋಡಿದ್ದೇವೆ.
ಆದರೆ ಕಾಂಗ್ರೇಸ್ ಪಕ್ಷ ಇಂತವರನ್ನ ಬಳಸಿ ಕೊಳ್ಳುವುದಿಲ್ಲ, ಯಾರಾರಿಗೊ ಸ್ಥಾನ ಮಾನ ನೀಡಿ ಅಹ೯ತೆ ಇರುವ ಇವರನ್ನ ಕಡೆಗಾಣಿಸಿದೆ.
ನನ್ನ ಜಿಲ್ಲಾ ಪಂಚಾಯತ ಸದಸ್ಯ ಅವದಿಯಲ್ಲಿ ನಾನು ಇವರಿಂದ ಅನೇಕ ಸಲಹೆ ಸಹಕಾರ ಪಡೆದಿದ್ದೆ, ಆಗೆಲ್ಲ ರಾಜಕಾರಣಿಗಳ ದಂಡು ಅಲ್ಲಿ ಸೇರುತ್ತಿತ್ತು, ಸಹಾಯ ಕೇಳಿ ಬರುವವರೂ ಕೂಡ ಎಲ್ಲರಿಗೂ ಅಲ್ಲಿ ಗೌರವದ ಸ್ಥಾನ ಮತ್ತು ಸಮಸ್ಯೆಗೆ ಪರಿಹಾರ ಅಲ್ಲಿತ್ತು.
ನಿನ್ನೆ ಮಾತಾಡಿದಾಗ ಅವರು ದೀಘ೯ಕಾಲದ ತಮ್ಮ ಪಕ್ಷ ಕಾಂಗ್ರೇಸ್ ತೊರೆಯುವ ಮಾತಾಡಿದರು, ಏನೇ ಆಗಲಿ ನಿರಂಜನರ ರಾಜಕೀಯ ಜೀವನದಲ್ಲಿ ಯಶಸ್ಸು ಪಡೆಯಲಿ ಎಂದು ಹಾರೈಸುತ್ತೇನೆ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment