ಕರಾವಳಿ ಮೀನುಗಾರರು ತಮ್ಮ ಜಾತಿ ಮತ್ತು ಹೆಸರಿನ ನಂತರ ಮೊಗೇರ ಅಂತ ಬರೆಯುತ್ತಿದ್ದರು ಮತ್ತು ಹೆಚ್ಚು ದಂಡಿಗೆ ಹೊರುತ್ತಿದ್ದರು (ಪಲ್ಲಕ್ಕಿ ಜನ ಸಾಗಾಣಿಕೆಗಾಗಿ) ಇದನ್ನ ಬದಲಿಸಲು 1940ರಲ್ಲಿ ಮುಂಬೈಯ ಮೊಗವೀರ ಮಹಜನ ಸಂಘ ಕರ ಪತ್ರ ಮತ್ತು ಸಭೆಗಳ ಮುಖಾಂತರ ಜನ ಜಾಗೃತಿ ಮಾಡಿದರೂ ಜನ ಬದಲಾಗಲಿಲ್ಲವಂತೆ ಆಗ ಮುಂಬೈನಿ೦ದ ಲಾರಿ ತಂದು ದಂಡಿಗೆಗಳನ್ನ ವಶ ಪಡಿಸಿ ದೂರ ಪ್ರದೇಶಕ್ಕೆ ಒಯ್ದು ಸುಟ್ಟರಂತೆ ಇದರಿಂದ ದಂಡಿಗೆ ಹೊರುವ ಕಾಯಕ ಬದಲಾದರು (ವಾಹನಗಳು ಬಂದಿದ್ದು ಒಂದು ಕಾರಣ) ಮೊಗೇರ ಎಂಬ ಹೆಸರು ಬಿಡಲಿಲ್ಲ ಜನ ಆಗ ಪ್ರತಿ ವಷ೯ ಮಳೆಗಾಲದಲ್ಲಿ ಮುಂಬೈ ಪ್ರವಾಸಕ್ಕೆ ಹೋಗುವ ಯಕ್ಷಗಾನದವರಲ್ಲಿ ವಿನಂತಿಸಿದ ಕಾರಣ ಮುಂದಿನ ವಷ೯ದ ಎಲ್ಲಾ ಯಕ್ಷಗಾನ ಪ್ರದಶ೯ನದಲ್ಲಿ ಒಂದು ಪ್ರಸಂಗ ಸೇರಿದಂತೆ ಒಂದು ಪಾತ್ರ ಇನ್ನೊಂದು ಪಾತ್ರಕ್ಕೆ ''ನಿನ್ನ ಹೆಸರೇನು?" ಅಂದಾಗ ಆ ಪಾತ್ರ " ನಾನು ಪಂಜು ಮೊಗೇರ " ಅ೦ದಾಗ ಹೆಸರು ಕೇಳಿದ ಪಾತ್ರ "ಚೀ ನಾಚಿಗೆ ಆಗುವುದಿಲ್ಲವಾ ನಿನಗೆ? ನಾವು ಮೊಗ ವೀರರು, ಸಮುದ್ರದ ಅಲೆ ಏರಿ ಹೋರಾಡುವ ದೀರರು, ಮೊಗೇರ ಅನ್ನಲು ನಾಚಿಕೆ ಆಗಬೇಕು " ಅನ್ನುವುದರಿಂದ ಬದಲಾಯಿತು ಅಂತ 1994ರಲ್ಲಿ ಮುಂಬೈನ ದಾದರನಲ್ಲಿ ತುಳಸಿ ಪೈಪ್ ರೋಡಿನ ಸುಲ್ತಾನ್ ಬಿಲ್ಡಿOಗ್ನಲ್ಲಿ ಬೇಟಿ ಆದ ದತ್ತು ಮೊಗವೀರ ಎಂಬುವವರು ಹೇಳಿದ ವಿಚಾರ ಇದು.
ಕಲೆ ಮತ್ತು ಸಾಹಿತ್ಯದಿಂದ ಸಮಾಜದ ಮೂಡನಂಬಿಕೆ ಬದಲಿಸಬಹುದು ಅಥವ ಮೂಡರನ್ನಾಗಿಸ ಬಹುದು ಅನ್ನುವುದಕ್ಕೆ ಇದೊಂದು ಉದಾಹರಣೆ.
Comments
Post a Comment