Skip to main content

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.

  ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.
    ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.
      ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ಸೀನಿಯರ್ ಗಳು ಹೇಳುತ್ತಿದ್ದರು, ಬಹುಶಃ ಆಗಿನ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದ ಉದಯ ಕುಮಾರ್ ನೋಡಿ ಜನರಿಗೆ ಭಯವಿತ್ತು ಕಾಣುತ್ತೆ.
     ನಮ್ಮಮ್ಮ ಅವರಿಗೆಲ್ಲ ಬಂದ ಮಾಹಿತಿ ಶ್ರೀದರ ಸ್ವಾಮಿಗಳು ತಪಸ್ಸಿಗೆ ಕುಳಿತುಕೊಂಡವರು ಶಿಷ್ಯರಿಗೆ ಯಾವುದೇ ಕಾರಣಕ್ಕೂ ತಮ್ಮನ್ನ ಸ್ಪಶ೯ ಮಾಡದಂತೆ ಹೇಳಿದ್ದರಂತೆ ಎರಡು ದಿನದಿಂದ ಹಾಗೇ ಕುಳಿತದ್ದು ನೋಡಿ ಶಿಷ್ಯರು ಅವರನ್ನ ಮುಟ್ಟಿದ್ದರಿಂದ ಹೀಗಾಯಿತು, ದೇಹ ತ್ಯಾಗ ಮಾಡಿದ ಮೇಲೂ ಅವರ ಕಣ್ಣಲ್ಲಿ ನಿರಂತರ ನೀರು ಬರುತ್ತಿದೆ ಇತ್ಯಾದಿ.
     ಅವರ ಶಿಷ್ಯರು ಬೇಕಂತಲೆ ಸ್ವಾಮಿಗಳನ್ನ ಸಾಯಿಸಿದರೂ ಅಂತೆಲ್ಲ ಜನ ಮಾತಾಡುತ್ತಿದ್ದರು ಅವತ್ತಿನ ಕಾಲದ ಏಕೈಕ ದಿನ ಪತ್ರಿಕೆ ಪ್ರಜಾವಾಣಿಯಲ್ಲಿ ಸ್ವಾಮಿಗಳ ಸಮಾದಿ ಮಾಡಿದ ವರದಿ, ಅಸಂಖ್ಯ ಜನ ಸೇರಿದ ಬಗ್ಗೆ ವಿವರವಾದ ವರದಿ ಬಂದಿತ್ತು.
       1978ರಲ್ಲಿ ಆನಂದಪುರದಿಂದ ನಿತ್ಯ ಸಾಗರಕ್ಕೆ ಹೆಚ್ಚಿನ ವ್ಯಾಸಂಗಕ್ಕೆ ಅನೇಕರು ರೈಲಿನಲ್ಲಿ ಹೋಗುತ್ತಿದ್ದರು, ನಾನು ಸಾಗರದ ಮುನ್ಸಿಪ್ ಹೈಸ್ಕೂಲ್ನಲ್ಲಿ ಇಂಗ್ಲೀಶ್ ಮೀಡಿಯO ಗಾಗಿ 8ನೇ ತರಗತಿ ಸೇರಿದ್ದೆ, ಆನಂದ ಪುರದ ಗಣಪತಿ ಶೇಟ್ ಅವತ್ತು ಎಲ್.ಬಿ. ಕಾಲೇಜಿನ ಖ್ಯಾತ ಬ್ಯಾಡ್ಮಿಂಟನ್ ಪ್ಲೇಯರ್, ನಾಗಜು೯ನ, ಮುರುಳಿ, ಚಂದ್ರು, ಶ್ರೀನಿವಾಸ ಹೀಗೆ ಅನೇಕರು ನಮ್ಮ ನಿತ್ಯ ಸಂಗಾತಿಗಳು,ಅವರೆಲ್ಲ ಒಂದು ದಿನ ರೈಲಲ್ಲಿ ಸಾಗರಕ್ಕೆ ಹೋಗುವಾಗ ಅವತ್ತು ಕಾಲೇಜಿಗೆ ಚಕ್ಕರ್ ಹೊಡೆದು ವರದಳ್ಳಿ ಹೋಗುವ ಕಾಯ೯ಕ್ರಮ ನಿಗದಿ ಮಾಡಿದರು, ರೈಲು ಇಳಿದವರೆ ವರದಳ್ಳಿಗೆ ಚಾರಣ ಅಲ್ಲಿ ನೀರಿನ ತೀಥ೯ದಲ್ಲಿ ತಣ್ಣನೆ ಸ್ನನಾ ಮದ್ಯಾನ ಅಲ್ಲಿ ಭಕ್ತರಿಗೆ ನೀಡುವ ದಾಸೋಹದಲ್ಲಿ ಊಟ ಮಾಡಿ ಸಂಜೆ ಒಳಗೆ ಸಾಗರದ ರೈಲು ನಿಲ್ದಾಣ ಸೇರುವುದು.

     ಸಾಗರದ ನಿಲ್ದಾಣದಲ್ಲಿ ಇಳಿದವರೇ ವರದಳ್ಳಿ ಚಾರಣ ಪ್ರಾರಂಭವಾಯಿತು, ಸುಮಾರು 15 ರಿಂದ 16 ಜನ ವಿದ್ಯಾಥಿ೯ ವಿದ್ಯಾಥಿ೯ನಿಯರು ಒಟ್ಟಾಗಿ ಹೊರಟೆವು ದಾರಿ ಮಧ್ಯದಲ್ಲೇ ನಮ್ಮ ನಿತ್ಯ ಬುತ್ತಿ ಖಾಲಿ ಮಾಡಿದೆವು ಹೇಗಿದ್ದರೂ ವರದಳ್ಳಿಯ ನಿತ್ಯ ದಾಸೋಹ ಇರುತ್ತಲ್ಲ ಅಂತ .ಜೊತೆಯಲ್ಲಿದ್ದ ಹುಟ್ಟಿನಲ್ಲಿ ಬ್ರಾಹ್ಮಣನಾಗಿದ್ದ ಮಿತ್ರ ಪಾಯಸ ಕೂಡ ಇರುತ್ತೆ ಅಂದಿದ್ದು ಕೂಡ ನಮ್ಮ ನಡುಗೆಯಲ್ಲಿ ಉತ್ಸಾಹ ಮೂಡಿಸಿತ್ತು.

  ಸರಿಯಾಗಿ ಮದ್ಯಾಹ್ನ ವರದಳ್ಳಿ ತಲುಪಿದೆವು, 13 ಕಿಮಿ ಬಿರು ಬೇಸಿಗೆಯ ನಡುಗೆ ನಮ್ಮ ಶಕ್ತಿ ನಿತ್ರಾಣ ಮಾಡಿತ್ತು, ಶ್ರೀಧರ ತೀಥ೯ದಲ್ಲಿ ನ ಮನೋಸೇ ಇಚ್ಚಯ ಅಭ್ಯOಜನ ಮತ್ತು ಅವರ ಸಮಾದಿ ಸ್ಥಳಕ್ಕೆ ಮೆಟ್ಟಲೇರಿದ ಶ್ರಮ ಅಲ್ಲಿಂದ ಮುಂದೆ ದಮ೯ ಧ್ವಜ ಸ್ಥಳ ವೀಕ್ಷಣೆ ಮಾಡಿ ಊಟದ ಮನೆ ತಲುಪುವಾಗ ನಿತ್ರಾಣರಾಗಿದ್ದೆವು.

   ಆಗ ಈಗ ಇರುವಷ್ಟು ಜನ ದಟ್ಟನೆ ಇರಲಿಲ್ಲ ನಾವೆಲ್ಲ ಸೇರಿ 60 ರಿಂದ 70 ಜನ ಇರಬಹುದು, ಊಟಕ್ಕೆ ಕರೆದರು ಅದೇ ವೇಗದಲ್ಲಿ ಹಸಿದ ನಾವೆಲ್ಲ ಹೋಗಿ ಕುಳಿತೆವು, ಅನ್ನ ದೇವರ ಮುಂದೆ ಅನ್ಯ ದೇವರಿಲ್ಲ ಅಂತ ಸವ೯ಜ್ಞ ವಚನ ನೆನಪಾಯಿತು, ಆಗಲೇ ಅಲ್ಲಿನ ಬ್ರಾಹ್ಮಣೋತ್ತಮರು ಒಂದು ಆದೇಶ ನೀಡಿದರು ಜನಿವಾರ ಇರುವವರು ಅಂಗಿ ತೆಗೆದು ಇಲ್ಲಿ ಕುಳಿತುಕೊಳ್ಳಿ, ಉಳಿದವರು ಹೊರಗಡೆ ಕುಳಿತುಕೊಳ್ಳಿ ಅಂತ.

   ನಮಗೆ ಹಸಿವಿನ ಘೋರವಾದ ಸಂಕ್ರಮಣ ಕಾಲದಲ್ಲಿ ಈ ಆದೇಶ ಪಾಲಿಸದೆ ವಿಧಿ ಇರಲಿಲ್ಲ ಆದರೆ ಹಸಿವಿಗಿಂತ ಶೂದ್ರರಾಗಿದ್ದಕ್ಕೆ ಅನುಭವಿಸ ಬೇಕಾದ ಈ ಅವಮಾನ ವಿರೋದಿಸಲೇ ಬೇಕೆಂಬ ಹಠದಿಂದ ಎದ್ದು ಪಂಕ್ತಿ ಬಿಟ್ಟು ಹೊರಟೆವು, ಜನಿವಾರ ಇದ್ದ ಗೆಳೆಯರು ಗೌರವ ಪಡೆದು ಊಟಕ್ಕೆ ಉಳಿದರು, ಹಸಿವು ತಡೆಯದ ಜನಿವಾರ ಇಲ್ಲದ ಶೂದ್ರ ಗೆಳೆಯರು ಅಲ್ಲೇ ಅವರಿಗೆ ಮೀಸಲಿಟ್ಟ ಪ್ರತ್ಯೇಕ ಪಂಕ್ತಿಗೆ ರಾಜಿ ಆದರು.

    ಹಠಕ್ಕೆ ಬಿದ್ದ ನನ್ನನ್ನ ಕೈ ಬೆರಳೆಣಿಕೆಯ ಗೆಳೆಯರು ಹಿಂಬಾಲಿಸಿದರು ಆದರೆ ದಾರಿಯಲ್ಲಿ ಹಸಿವೆ ತಾಳದೇ ನನ್ನ ನಿಧಾ೯ರ ಸರಿ ಅಲ್ಲ ಅಂದರು.

  ಇವತ್ತು ವರದಳ್ಳಿಯಲ್ಲಿ ಜಾತಿ ಬೇಧದ ಊಟದ ಪಂಕ್ತಿ ಇದೆ.ಈ ಬಗ್ಗೆ ಒಮ್ಮೆ ಮ೦ಚಾಲೆಯ ಕೃಷಿ ವಿಜ್ಞಾನಿ ಡಾಕ್ಟರ್ ವಿಗ್ನೇಶ್ ಮನೆಗೆ ಹೋದಾಗ ಅವರ ತಂದೆ ಶ್ರೀಧರ ಸ್ವಾಮಿಗಳ ಒಡನಾಡಿಗಳು ಸಿಕ್ಕಿದರು, ಅವರಲ್ಲಿ ಈ ಜಾತಿ ಬೇಧದ ಬಗ್ಗೆ ತಿಳಿಸಿದಾಗ ಅವರು ಶ್ರೀಧರ ಸ್ವಾಮಿಗಳೆ ಶೂದ್ರರಿಗೆ ಬೇರೆ ಪಂಕ್ತಿ ಊಟ ಹಾಕಲು ಹೇಳಿದ್ದರು ಅಂದಾಗ ನನಗೆ ನಿರಾಸೆ ಆಯಿತು ಆದರೆ ಶ್ರೀಧರ ಸ್ವಾಮಿಗಳು ಹೇಳಿದರೋ ಬಿಟ್ಟರೋ ಅನುಮಾನವಿದೆ.

     ಶ್ರೀಧರ ಸ್ವಾಮಿಗಳು ಪವಾಡ ಪುರುಷರು ಅವರು ಆಶ್ರೀ ವಾದ ಮಾಡಿದ ನರಸೀಪುರದ ಸಣ್ಣಯ್ಯ ಹೆಗ್ಗಡೆ ಈಗ ವಿಶ್ವವಿಖ್ಯಾತ ಆಯುವೆ೯ದ ಪಂಡಿತರಾಗಿ ವೈದ್ಯ ನಾರಾಯಣ ಮೂತಿ೯ ನರಸೀಪುರ ಎಂದೇ ಪ್ರಖ್ಯಾತರಾಗಿದ್ದಾರೆ.

     ವರದಳ್ಳಿ ಸಮಿಪದ ಎಡ ಜಿಗಳೆಮನೆ ಎಂಬ ಊರಿನಲ್ಲಿ ಅಣ್ಣಪಾಚಾರ್ ಎಂಬ ವೃದ್ಧರಿದ್ದಾರೆ ಅವರ ಹತ್ತಿರ ಶ್ರೀಧರ ಸ್ವಾಮಿಗಳ ಬಗ್ಗೆ ನಿಮಗೆ ನೆನಪಿನಲ್ಲಿ ಅಚ್ಚಳಿಯದೆ ಉಳಿದ ಶ್ರೀಧರ ಸ್ವಾಮಿಗಳ ನೆನಪು ಹೇಳಿ ಅಂದೆ ಅವರು ಶ್ರೀಧರ ಸ್ವಾಮಿಗಳ ಭಕ್ತರು "ಒಮ್ಮೆ ಮಳೆಗಾಲ ಗುರುಗಳು ಬೆಟ್ಟದಲ್ಲಿ ಮೌನದಿಂದ ತಪಸ್ಸಿಗೆ ಕುಳಿತಾಗ ಅವರು ಕುಳಿತಿದ್ದ ಹುಲ್ಲಿನ ಗುಡಿಸಲoತ ಸಣ್ಣ ಮನೆ ಗಾಳಿಗೆ ಮುರಿಯಿತಂತೆ, ಅವರು ಒಂದು ಚೀಟಿಯಲ್ಲಿ ಅಣ್ಣಪ ಆಚಾರಿಗೆ ತಿಳಿಸುವ೦ತೆ ಬರೆದಿದ್ದರಂತೆ, ಶಿಷ್ಯರು ಅಣ್ಣಪ ಆಚಾರಿಗೆ ಇದನ್ನ ತಿಳಿಸಿದರಂತೆ, ಇವರು ತಕ್ಷಣ ಸ್ನನಾ ಮಾಡಿ ಮಡಿ ಉಟ್ಟು ಭಕ್ತಿಯಿಂದ ಹೋಗಿ ಅವರಿಗೆ ನಮಸ್ಕಾರ ಮಾಡಿ ಮಾಡು ದುರಸ್ತಿ ಮಾಡಿ ಹೊರಟಾಗ ಗುರುಗಳು ಕೈ ಸನ್ನೆಯಿ೦ದ ಊಟ ಮಾಡಿ ಹೋಗಲು ಹೇಳಿದರಂತೆ. ಕೆಳಗೆ ಬಂದಾಗ ಎಲ್ಲರ ಊಟ ಆಗಿ ಪಾತ್ರೆ ತೊಳೆದು ಇಟ್ಟಿದ್ದರಂತೆ, ಆಚಾರರು ಗುರುಗಳು ಕೈಸನ್ನೆಯಿ೦ದ ಊಟ ಮಾಡಿ ಹೋಗಲು ಹೇಳಿದ್ದನ್ನ ಹೇಳಿದ್ದರಿಂದ ಶೀಷ್ಯರಿಗೆ ದಮ೯ ಸಂಕಟ ಉoಟಾಯಿತ೦ತೆ, ಅಷ್ಟರಲ್ಲಿ ಅಲ್ಲಿದ್ದವರು ಅರೆ ಈ ಪಾತ್ರೆಯಲ್ಲಿ ಒಬ್ಬರಿಗೆ ಆಗುವಷ್ಟು ಊಟ ಇಟ್ಟಿದ್ದಾರಲ್ಲ ಅಂದರಂತೆ, ಅದೇಗೆ ಸಾಧ್ಯ ನಾವೆಲ್ಲ ಪಾತ್ರೆ ಪೂರಾ ತೊಳೆದಿಟ್ಟಿದ್ದೇವಲ್ಲ ಅಂತ ಆಶ್ಚಯ೯ ಪಟ್ಟರಂತೆ.

  ಶೂದ್ರವಗ೯ದವರ ಶ್ರೀಧರ ಸ್ವಾಮಿಗಳವರ ಸಂಬಂದವೇ ಬೇರೆ, ಅವರ ಅನುಭವ ಯಾರೂ ದಾಖಲೆ ಮಾಡಿಲ್ಲ, ಅನೇಕರು ಸಂತಾನ ಭಾಗ್ಯ ಇಲ್ಲದವರು ಶ್ರೀಧರ ಸ್ವಾಮಿಗಳ ವರದಿಂದ ಸಂತಾನ ಪಡೆದು ಶ್ರೀಧರ ಅಂತ ಹೆಸರಿಡುವ ಪರಂಪರೆ ಇದೆ.

  ಶ್ರೀಧರ ಸ್ವಾಮಿಗಳು ಜಾತಿಯತೆ ಮಾಡಿದವರಲ್ಲ ಅವರು ಮಹಾನ್ ಯೋಗಿಗಳು ಆದರೆ ಅವರ ಸುತ್ತ ಮುತ್ತ ಸೇರಿಕೊಂಡ ಒಂದಿಷ್ಟು ದುಷ್ಟಬುದ್ಧಿಯವರು ಜಾತಿಯತೆ ಪೋಷಿಸಿಕೊಂಡು ಬಂದಿದ್ದಾರೆ ಅನ್ನುತ್ತಾರೆ.

   ಸಾಗರ ತಾಲ್ಲೂಕ ಮತ್ತು ಹೊಸ ನಗರ ತಾಲ್ಲಕನಾದ್ಯಂತ ನಾನು ಮಾಹಿತಿ ಹಕ್ಕು ಮತ್ತು ಲೋಕಾಯುಕ್ತ ಕಾನೂನು ಪ್ರಚಾರಕ್ಕಾಗಿ ಎತ್ತಿನ ಗಾಡಿ ಯಾತ್ರೆ ಮಾಡಿದಾಗ (2011ರಲ್ಲಿ) ವರದಳ್ಳಿ ಶ್ರೀಧರ ಆಶ್ರಮದಲ್ಲಿ ಒಂದು ರಾತ್ರಿ ನಮ್ಮ ಯಾತ್ರೆ ತಂಗುವುದಿತ್ತು, ಸಾಗರ ಪಟ್ಟಣದಲ್ಲಿ ಸಭೆ ಮುಗಿಸಿ ವರದಳ್ಳಿ ತಲುಪುವಾಗ ರಾತ್ರಿ ಆಗಿತ್ತು, ಅಲ್ಲಿ ನನಗೆ ಆಶ್ಚಯ೯ ಆಗಿದ್ದು ನನ್ನ ಜೊತೆ 1995-2000 ಇಸವಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಎಂ.ಜಿ.ಕೃಷ್ಣಮೂತಿ೯ ಮತ್ತು ಸಂಗಡಿಗರು ನಮ್ಮನ್ನ ಸ್ವಾಗತಿಸಿದ್ದು, ಆಗ ಅವರು ವರದಳ್ಳಿ ಆಶ್ರಮದ ಅಧ್ಯಕ್ಷರಾಗಿದ್ದರು ಸಣ್ಣ ಸಭೆ, ಸನ್ಮಾನದ ನಂತರ ಅವರೆಲ್ಲ ಊಟಕ್ಕೆ ಕರೆದರು, ಆಯಿತು ಲೇಟಾಗಿದೆ ನೀವು ಹೊರಡಿ ನಂತರ ನಾವು ಊಟ ಮಾಡುತ್ತೇವೆ ಅಂದೆ, ಅಧ್ಯಕ್ಷರಾಗಿದ್ದ ಮಾಜಿ ಜಿಲ್ಲಾ ಪಂಚಾಯತ ಸದಸ್ಯ, ಬೆಂಗಳೂರಿನ ಮಹಾರಾಜ ಕಾಲೇಜಲ್ಲಿ ಉನ್ನತ ವ್ಯಾಸಂಗ ಮಾಡಿದ ಸಜ್ಜನ ಬ್ರಾಹ್ಮಣ ಎಂ.ಜಿ. ಕೆ. ಎಲ್ಲರೂ ಒಟ್ಟಾಗಿ ಊಟ ಮಾಡೋಣ ಅಂದರು, ನಾನು ಅವರಿಗೆ ನಮ್ಮ ಯಾತ್ರೆಯಲ್ಲಿ ಶೂದ್ರಾತಿ ಶೂದ್ರರಲ್ಲದೆ, ದಲಿತರು, ಮುಸ್ಲಿಂ ಕ್ರಿಷ್ಚಿಯನ್ನರಿದ್ದಾರೆ ನೀವೆಲ್ಲ ಅವರ ಜೊತೆ ಬೋಜನ ಮಾಡಲು ಸಾಧ್ಯವಿಲ್ಲವಲ್ಲ ಅಂದೆ, ಅದಕ್ಕೆ ಅವರು ಜಾತಿ ಇಲ್ಲ ಶ್ರೀಧರ ಸ್ವಾಮಿ ಇಂತದ್ದೆಲ್ಲ ಬೆಂಬಲಿಸಿಲ್ಲ ಬನ್ನಿ ಎಲ್ಲರೂ ಊಟ ಮಾಡೋಣ ಅಂತ ಎಲ್ಲರನ್ನ ಕರೆದೊಯ್ದ ಒಂದೇ ಪಂಕ್ತಿಯಲ್ಲಿ ನಮ್ಮ ಜೊತೆ ಕುಳಿತು ಊಟ ಮಾಡಿದ್ದು ಆಶ್ಚ೯ ಯವೇ ಸರಿ; 33 ವಷ೯ದ ಹಿಂದೆ ಪಂಕ್ತಿಬೇದ ಮಾಡಿದ ಇಲ್ಲಿನ ಸಿಬ್ಬ೦ದಿ ವಗ೯ವನ್ನ ವಿರೋದಿಸಿ ಊಟ ಬಿಟ್ಟು ಬಂದಿದ್ದ ನನಗೆ 33 ವಷ೯ದ ನಂತರ ಆಶ್ರಮದ ಅಧ್ಯಕ್ಷರಾದಿಯಾಗಿ ಅನೇಕ ಬ್ರಾಹಮಣ ಮುಖಂಡರು ಜಾತಿ ಭೇದ ಮರೆತು ಸಹ ಪಂಕ್ತಿ ಬೋಜನ ಮಾಡಿದ್ದು ಒಂದು ಪವಾಡ ಅನ್ನಿಸಿತು.

   ಆದರೆ ಈಗಲೂ ಇಲ್ಲಿ ಸಹ ಪಂಕ್ತಿ ಇಲ್ಲ, ಶೂದ್ರರಿಗೆ ಪ್ರತ್ಯೇಕ ಊಟ ಹಾಕುತ್ತಾರೆ, ಸಕಾ೯ರದ ಎಲ್ಲಾ ಸಹಾಯ ಪಡೆಯುತ್ತಾರೆ.



    
   

Comments

Post a Comment

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...