#ಆನಂದಪುರಂ_ಹೋಬಳಿ_ಬ್ರಹ್ಮಶ್ರೀ_ನಾರಾಯಣಗುರು_ಈಡಿಗ_ಸಂಘ
#ಪ್ರಜ್ಞಾವಂತ_ಯುವಕರ_ಸಂಘಟನೆ
#ಹೊಸ_ಅನುಭವ_ಹೊಸ_ತಲೆಮಾರಿನ_ವಿದ್ಯಾವಂತ_ಯುವಕರಿಂದ...
#narayanguru #anandapuram #sagara #idigasanga #janardhanpujari #kagoduthimmappa
ಈ ವಿಚಾರ ಯಾಕೆಂದರೆ ಸಾಮಾನ್ಯವಾಗಿ ನಾನು ನನ್ನ ತಂದೆ ತಾಯಿ ಹೆಸರಲ್ಲಿ ಕಟ್ಟಿಸಿದ ಕಲ್ಯಾಣ ಮಂಟಪ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ಅನೇಕ ಜನಪರ ಕಾಳಜಿಯ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡುತ್ತೇನೆ
ಇದೇ ರೀತಿ ಸ್ಥಳೀಯರಿಗೆ ಆರ್ಥಿಕ ಸಹಾಯವಾಗಲಿ ಎಂಬ ದೃಷ್ಟಿಯಿಂದ ಅವರ ವಿವಾಹ ಇತ್ಯಾದಿ ಕಾರ್ಯಕ್ರಮಗಳಿಗೆ ಕೂಡ ವಿನಾಯಿತಿ ದರದಲ್ಲಿ ಕೆಲವೊಮ್ಮೆ ಸಂಪೂರ್ಣ ಉಚಿತವಾಗಿ ನೀಡುತ್ತೇನೆ
ಆದರೆ ಕಾರ್ಯಕ್ರಮದ ನಂತರ ಅವರ್ಯಾರು ಕೃತಜ್ಞತೆ ಬಂದು ಹೇಳುವ ವ್ಯವಧಾನದಲ್ಲಿ ಇರುವುದಿಲ್ಲ, ಸ್ವಲ್ಪ ದಿನದಲ್ಲಿ ಮರೆತುಬಿಡುತ್ತಾರೆ ಇನ್ನು ಕೆಲವರು ಉಚಿತ ರಿಯಾಯಿತಿ ಪಡೆದು ಅಲ್ಲಿ ಬಹಳ ದುಡ್ಡು ಕೇಳುತ್ತಾರೆ ಅಂತ ಅಪವಾದ ಕೂಡ ಮಾಡುತ್ತಾರೆ ಮತ್ತೆ ಕೆಲವರು ಹಣ ಬಾಕಿ ಕೊಡದೆಯೂ ಹೆಚ್ಚು ಹಣ ಪಾವತಿ ಮಾಡಿದ್ದೆವೆಂದು ಅಪಪ್ರಚಾರ ಮಾಡುತ್ತಾರೆ ಇಂತದ್ದೆಲ್ಲ ಬೇಸರ ಮೂಡಿಸದೇ ಇರುವುದಿಲ್ಲ.
ಇಡೀ ಜಿಲ್ಲೆಯಲ್ಲೇ ನನ್ನಷ್ಟು ಕಡಿಮೆ ಹಣ ಪಡೆಯುವ ಕಲ್ಯಾಣ ಮಂಟಪ ಬೇರಾವುದೂ ಇಲ್ಲ ಅನ್ನುವವರೂ ಇದ್ದಾರೆ.
ಕಳೆದ ಬುಧವಾರ ದಿನಾಂಕ 25 ಸೆಪ್ಟೆಂಬರ್ 2024 ನಮ್ಮ ಕಲ್ಯಾಣ ಮಂಟಪಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತ್ಯೋತ್ಸವವನ್ನು ಆನಂದಪುರಂ ಹೋಬಳಿಯ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ಸಂಘದಿಂದ ಹಮ್ಮಿಕೊಂಡಿದ್ದರು.
ಇದಕ್ಕೆ ನಾನು ಸಂಘಟನೆಯವರಿಗೆ ಕೇವಲ ಸ್ವಚ್ಛತೆಯ ಮತ್ತು ವಿದ್ಯುತ್ ಬಿಲ್ ಮಾತ್ರ ಪಾವತಿ ಮಾಡಲು ತಿಳಿಸಿದ್ದೆ.
ಕಾರ್ಯಕ್ರಮದ ನಂತರ ನನ್ನ ಕಚೇರಿಗೆ ಬಂದ ಈ ಸಂಘಟನೆಯ ಯುವಕರು ಕಾರ್ಮಿಕರ ಸಂಬಳ ಪಾವತಿ ಮಾಡಿ ಕಲ್ಯಾಣ ಮಂಟಪದ ವಿದ್ಯುತ್ ಬಿಲ್ ರೂ 500 ನೀಡಲು ಬಂದಿದ್ದರು.
ಆ ಸಂದರ್ಭದಲ್ಲಿ ನನ್ನ ಸಹೋದರ ನಾಗರಾಜಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು ಮತ್ತು ನನಗೆ ಶಿವಗಿರಿ ದರ್ಶನ ಎಂಬ ಶ್ರೀ ನೆಕ್ಕಿದಪುಣಿ ಗೋಪಾಲಕೃಷ್ಣ ಬರೆದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಬದುಕು ಮತ್ತು ಸಾಧನೆಗಳ ಸಂಕ್ಷಿಪ್ತ ಬರಹದ ಪುಸ್ತಕ ನೀಡಿದ್ದಾರೆ.
ಈ ಯುವಕರ ಕೃತಜ್ಞತೆ ಸಮರ್ಪಣೆ ನೋಡಿ ನನಗೆ ಅತ್ಯಂತ ಖುಷಿಯಾಯಿತು, ಹಿಂದಿನ ಎಷ್ಟೋ ಸಂದರ್ಭದಲ್ಲಿ ನಮ್ಮ ಕಲ್ಯಾಣಮಂಟಪದ ವಿಚಾರದಲ್ಲಿ ಇಂತಹ ನೆನಪಿಟ್ಟುಕೊಳ್ಳುವಂತಹ ಘಟನೆ ನಡೆದೇ ಇರಲಿಲ್ಲ.
ಜೊತೆಗೆ ಯುವಕರು ನಿಮ್ಮ ಸಹಾಯ ನಮ್ಮ ಕಾರ್ಯಕ್ರಮಕ್ಕೆ ದೊಡ್ಡ ಉಪಕಾರ ಆಯ್ತು ಅನ್ನುವ ಮಾತುಗಳು ಕೂಡ ಹೇಳಿದರು.
ಇವರೆಲ್ಲರೂ ನಿತ್ಯ ನನ್ನ ಪೇಸ್ ಬುಕ್ ಓದುಗರು ಮತ್ತು ನನ್ನ ಬರವಣಿಗೆಯಿಂದ ದಿನಕ್ಕೊಂದು ಹೊಸ ವಿಷಯ ತಿಳಿಯುತ್ತದೆ ಎಂದು ಆತ್ಮೀಯವಾಗಿ ತಿಳಿಸಿದರು ಇವರೆಲ್ಲರಿಗೂ ನಮ್ಮ ಮಲ್ಲಿಕಾ ವೆಜ್ ಚಹಾದ ಆತಿಥ್ಯದ ನಂತರ ಬಿಳ್ಕೊಟ್ಟೆ.
ನಮ್ಮ ಆನಂದಪುರಂ ಹೋಬಳಿಯ ಈ ಎಲ್ಲಾ ಯುವಕರ ತಂದೆಯಂದಿರು ನನಗೆ ಚಿರಪರಿಚಿತರು ಇದಕ್ಕೆ ಕಾರಣ ನಾನು ಈ ಭಾಗದ ರೈಸ್ ಮಿಲ್ ಮಾಲಿಕನಾಗಿದ್ದು ಮತ್ತು 1995 ರಿಂದ 2000 ಇಸವಿ ತನಕ ನಾನು ಈ ಆನಂದಪುರಂ ಹೋಬಳಿಯ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ.
ಆ ಸಮಯದಲ್ಲಿ ಇವರೆಲ್ಲ ಐದಾರು ವರ್ಷದ ಚಿಕ್ಕ ಬಾಲಕರು ಇರಬಹುದು, ಈಗ ದೊಡ್ಡವರಾಗಿರುವ ಈ ಯುವಕರು ವಿದ್ಯಾವಂತರಾಗಿದ್ದಾರೆ,ಬುದ್ದಿವಂತರಾಗಿದ್ದಾರೆ ಮತ್ತು ಕೃಷಿ- ವ್ಯವಹಾರ ಕೂಡ ಅತ್ಯುತ್ತಮವಾಗಿ ಮಾಡಿ ತಮ್ಮ ತಮ್ಮ ಕುಟುಂಬವನ್ನು ಎತ್ತರಕ್ಕೆ ಒಯ್ಯುತ್ತಿದ್ದಾರೆ ಹಾಗೂ ಸಮಾಜದಲ್ಲಿ ತಮ್ಮ ಕುಟುಂಬದ ಅಂತಸ್ತಿನ ಗೌರವ ಕಾಪಾಡಿಕೊಂಡು ಬರುತ್ತಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕು ಸಾದನೆಯ ಅವರು ನೀಡಿದ ಪುಸ್ತಕ ಓದುತ್ತಿದ್ದೇನೆ.
Comments
Post a Comment