#ಇವತ್ತಿನ_ನನ್ನ_ಅತಿಥಿಗಳು
#ಶಿವಮೊಗ್ಗದ_ಸಹ್ಯಾದ್ರಿ_ಕಲಾ_ಕಾಲೇಜು_ಇಂಗ್ಲಿಷ್_ಪ್ರಾಧ್ಯಾಪಕರಾದ_ಡಾ_ಸಿರಾಜುದ್ದೀನ್_ಅಹಮದ್_ದಂಪತಿಗಳು
#ತರೀಕೆರೆ_ಪ್ರಥಮ_ದರ್ಜೆ_ಕಾಲೇಜು_ಪ್ರಾಂಶುಪಾಲರಾದ_ಡಾ_ಸಬೀತಾ_ಬನ್ನಾಡಿ
#ಶಿವಮೊಗ್ಗ_ರಂಗಾಯಣದ_ನಿರ್ದೇಶಕರಾದ_ಪ್ರಸನ್ನ_ಸಾಗರ.
#shivamogga #rangayana #prasannasagar #sabeethabannadi #sirajahamed #karnatakasahityaacademi #abhivyakthibalagatumari #hamabhatta
ಸಾಗರ ತಾಲೂಕಿನ ತುಮರಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯುತ್ತಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ತುಮರಿ ಅಭಿವ್ಯಕ್ತಿ ಬಳಗದ ಕಾರ್ಯಕ್ರಮವಾದ ಹ ಮ ಭಟ್ಟ ನೆನಪಿನ ಹಬ್ಬದಲ್ಲಿ ಭಾಗವಹಿಸಿ ಶಿವಮೊಗ್ಗಕ್ಕೆ ವಾಪಾಸಾಗುತ್ತಿದ್ದ ಮಾಗ೯ದಲ್ಲಿ ಇವತ್ತಿನ ನನ್ನ ಅತಿಥಿಗಳಾದ ಡಾ.ಸಿರಾಜ್ ಅಹಮದ್ ದಂಪತಿಗಳು, ಡಾ.ಸಬೀತಾ ಬನ್ನಾಡಿ ಮತ್ತು ಪ್ರಸನ್ನ ಸಾಗರ ನನ್ನ ಆಫೀಸಿಗೆ ಬಂದಿದ್ದರು.
ಡಾಕ್ಟರ್ ಸಿರಾಜ್ ಅಹಮದ್ ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದಾರೆ ಇದು ನನ್ನ ಅವರ ಮೂರನೆ ಬೇಟಿ.
ಡಾಕ್ಟರ್ ಸಬೀತಾ ಬನ್ನಾಡಿ ತರೀಕೆರೆ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾಗಿದ್ದಾರೆ, ಇವರು ಖ್ಯಾತ ಅಂಕಣಕಾರರು -ಕವಿತೆ -ವಿಮರ್ಶೆಯಲ್ಲಿ ದೊಡ್ಡ ಹೆಸರು, ಇವರ ಅನೇಕ ಬರಹಗಳು ಪಠ್ಯವಾಗಿದೆ,ಕನ್ನಡ ಎಂ ಎ ಯಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ಪಡೆದವರು.
ಪ್ರಸನ್ನ ಡಿ.ಸಾಗರ ಇವರು ಶಿವಮೊಗ್ಗದ ರಂಗಾಯಣದ ಹಾಲಿ ನಿರ್ದೇಶಕರಾಗಿದ್ದಾರೆ, ಮೂಲತ ಸಾಗರದವರೇ ಆದ ಪ್ರಸನ್ನ ಸಾಗರದ ಎಲ್ ಬಿ ಕಾಲೇಜಿನಲ್ಲಿ ಪದವಿ ಪಡೆದವರು, ಹೆಗ್ಗೋಡಿನ ನೀನಾಸಂನಲ್ಲಿ ರಂಗಕಲೆಯಲ್ಲಿ ಡಿಪ್ಲೋಮೋ ಮಾಡಿದ್ದಾರೆ, ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ NSDಯಲ್ಲಿ ಪದವಿ ಪಡೆದಿದ್ದಾರೆ.
ನನ್ನ ಕಚೇರಿಯಲ್ಲಿ ನಮ್ಮ #ಮಲ್ಲಿಕಾ_ವೆಜ್ ರೆಸ್ಟೋರೆಂಟ್ ನ ಬಿಸಿ ಕಾಫಿಯ ಜೊತೆ ಸುಮಾರು ಚರ್ಚೆ ಮಾಡಿದೆವು.
ನಂತರ ನಾನು ಬರೆದ #ಬೆಸ್ತರ_ರಾಣಿ_ಚಂಪಕ ಕಾದಂಬರಿ ಮತ್ತು ಸಣ್ಣ ಕಥಾ ಸಂಕಲನ #ಬಿಲಾಲಿ_ಬಿಲ್ಲಿ_ಅಭ್ಯಂಜನ ಪುಸ್ತಕ ನೀಡಿ ಅತಿಥಿಗಳನ್ನ ಬೀಳ್ಕೊಟ್ಟೆ.
Comments
Post a Comment